ಪ್ರಭಾಸ್ ಪ್ರಭು ರಾಮನ ಹಾಗೆ; 'ಆದಿಪುರುಷ್' ಸ್ಟಾರ್‌ನನ್ನು ಹಾಡಿಹೊಗಳಿದ ಕೃತಿ ಸನೊನ್

Published : May 10, 2023, 05:41 PM IST
ಪ್ರಭಾಸ್ ಪ್ರಭು ರಾಮನ ಹಾಗೆ; 'ಆದಿಪುರುಷ್' ಸ್ಟಾರ್‌ನನ್ನು ಹಾಡಿಹೊಗಳಿದ ಕೃತಿ ಸನೊನ್

ಸಾರಾಂಶ

ಪ್ರಭಾಸ್ ಪ್ರಭು ರಾಮನ ಹಾಗೆ ಎಂದು 'ಆದಿಪುರುಷ್' ಸ್ಟಾರ್‌ನನ್ನು ನಟಿ ಕೃತಿ ಸನೊನ್ ಹಾಡಿಹೊಗಳಿದ್ದಾರೆ.  

ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷೆಯ ಆದಿಪುರುಷ್ ಸಿನಿಮಾದ ಟ್ರೈಲರ್ ಅದ್ದೂರಿಯಾಗಿ ತೆರೆಗೆ ಬಂದಿದೆ. ಆದಿಪುರುಷ್‌ನಲ್ಲಿ ರಾಮನಾಗಿ ಕಾಣಿಸಿಕೊಂಡಿರುವ ಪ್ರಭಾಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಟೀಸರ್ ಮೂಲಕ ನಿರಾಸೆ ಮೂಡಿಸಿದ್ದ ಆದಿಪುರುಷ್ ತಂಡ ಇದೀಗ ಟ್ರೈಲರ್ ಮೂಲಕ ಅಭಿಮಾನಿಗಳಿಗೆ ಸಂತಸ ನೀಡಿದೆ. ಜೊತೆಗೆ ಸಿನಿಮಾದ ಮೇಲಿನ ನಿರೀಕ್ಷೆ ಕೂಡ ಹೆಚ್ಚಿಸಿದೆ. ಆದಿಪುರುಷ್ ಟ್ರೈಲರ್ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿತ್ತು. ನಟಿ ಕೃತಿ ಸನೊನ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸಿನಿಮಾದಲ್ಲಿ ಸೀತೆಯಾಗಿ ಮಿಂಚಿರುವ ನಟಿ ಕೃತಿ ಕಾರ್ಯಕ್ರಮದಲ್ಲಿ ಸೀರೆ ಧರಿಸಿ ಮಿಂಚಿದ್ದರು. ಕೃತಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

ಕೃತಿ ಮತ್ತು ಪ್ರಭಾಸ್ ಇಬ್ಬರನ್ನೂ ಒಟ್ಟಿಗೆ ನೋಡಲು ಅಭಿಮಾನಿಗಳು ಸಹ ಕಾಯುತ್ತಿರುತ್ತಾರೆ. ಈ ಸಿನಿಮಾ ಬಳಿಕ ಇಬ್ಬರೂ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇಬ್ಬರೂ ಡೇಟಿಂಗ್ನಲ್ಲಿದ್ದಾರೆ, ಮದ್ವೆ ಆಗುತ್ತಾರೆ ಎನ್ನುವ ಸುದ್ದಿ ಕೂಡ ಇದೆ. ಆದರೆ ಈ ಬಗ್ಗೆ ಈಗಾಗಲೇ ಇಬ್ಬರೂ ಸ್ಪಷ್ಟನೆ ನೀಡಿದ್ದಾರೆ. ಆದರೂ ಸಹ ಪ್ರಭಾಸ್ ಮತ್ತು ಕೃತಿ ನಡುವೆ ಡೇಟಿಂಗ್ ವದಂತಿ ಜೀವಂತವಾಗಿದೆ. ಈ ನಡುವೆ ಕಾರ್ಯಕ್ರಮದಲ್ಲಿ ಕೃಕಿ, ಪ್ರಭಾಸ್ ಅವರನ್ನು ಹಾಡಿಹೊಗಳಿದ್ದಾರೆ. 

ಸಿನಿಮಾದ ಬಗ್ಗೆ ಮಾತನಾಡಿದ ಕೃತಿ ಬಳಿಕ ಪ್ರಭಾಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ಪ್ರಭಾಸ್ ತುಂಬಾ ಸಿಂಪಲ್ ವ್ಯಕ್ತಿ ಎಂದು ಹೇಳಿದ್ದಾರೆ. 'ಪ್ರಭಾಸ್ ಪ್ರಭು ರಾಮನ ಹಾಗೆ ತುಂಬಾ ಸಿಂಪಲ್. ಹೃದಯದಿಂದ ತುಂಬಾ ಸಿಂಪಲ್' ಎಂದು ಹೇಳಿದ್ದಾರೆ. 

ಅಬ್ಬಾ..! 'ಆದಿಪುರುಷ್' ಟ್ರೈಲರ್ ಲಾಂಚ್‌ಗೆ 24 ಕ್ಯಾರೆಟ್ ಗೋಲ್ಡ್ ಸೀರೆಯಲ್ಲಿ ಮಿಂಚಿದ ನಟಿ ಕೃತಿ

ಇನ್ನು ಪ್ರಭಾಸ್ ಮಾತನಾಡಿ, 'ನಾವು ಈ ಚಿತ್ರವನ್ನು ತುಂಬಾ ಪ್ರೀತಿ ಮತ್ತು ಗೌರವದಿಂದ ಮಾಡಿದ್ದೇವೆ, ನಿಮಗೆ ಇಷ್ಟವಾಗುತ್ತದೆ ಎಂದು ಭಾವಿಸುತ್ತೇವೆ. ಧನ್ಯವಾದಗಳು, ನಿನ್ನನ್ನು ಪ್ರೀತಿಸುತ್ತೇನೆ' ಎಂದು ಹೇಳಿದರು. ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿರೆ ಸೀತೆಯಾಗಿ ಮಿಂಚಿದ್ದಾರೆ. ಇಬ್ಬರನ್ನೂ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

ನಿರ್ದೇಶಕ ಓಂ ರಾವತ್​ ಸಾರಥ್ಯದಲ್ಲಿ ಆದಿಪುರುಷ್ ಮೂಡಿಬಂದಿದೆ. ಈ ಸಿನಿಮಾದಲ್ಲಿ ರಾವಣನಾಗಿ ಸೈಫ್​ ಅಲಿ ಖಾನ್​, ಆಂಜನೇಯನಾಗಿ ದೇವದತ್ತ​, ಲಕ್ಷ್ಮಣನಾಗಿ ಸನ್ನಿ ಸಿಂಗ್​ ನಟಿಸಿದ್ದಾರೆ. ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣ ಆಗಿದೆ. ಸದ್ಯ ಬಿಡುಗಡೆ ಆಗಿರುವ ಟ್ರೇಲರ್​ ಸಿಕ್ಕಾಪಟ್ಟೆ ರಿಚ್ ಆಗಿ ಮೂಡಿಬಂದಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮೂಡಿ ಬರುತ್ತಿದ್ದು ಟ್ರೈಲರ್ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗಿದೆ. 

Adipurush Trailer: ರಾಮನಾಗಿ ಎಂಟ್ರಿ ಕೊಟ್ಟ ಪ್ರಭಾಸ್ ನೋಡಿ ಫ್ಯಾನ್ಸ್ ಫುಲ್ ಖುಷ್

ದೊಡ್ಡ ಪರದೆಯಲ್ಲಿ ‘ಆದಿಪುರುಷ್​’ ಚಿತ್ರವನ್ನು ನೋಡಲು ಫ್ಯಾನ್ಸ್​ ಕಾದಿದ್ದಾರೆ. 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಪ್ರದರ್ಶನ ಆಗಲಿರುವುದು ವಿಶೇಷ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಬಹುನಿರೀಕ್ಷೆಯ ಸಿನಿಮಾ ಜೂನ್ ತಿಂಗಳಲ್ಲಿ ತೆರೆಗೆ ಬರುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2026ರ ಆರಂಭದಲ್ಲೇ ಖ್ಯಾತ ನಟಿ ಬದುಕಲ್ಲಿ ಬಿರುಗಾಳಿ, ಮದ್ವೆಯಾದ ಎರಡೇ ವರ್ಷಕ್ಕೆ ಡಿವೋರ್ಸ್
ತನ್ನ ಮಾತನ್ನೇ ಮುರಿದ ಸಾಯಿ ಪಲ್ಲವಿ.. ಬಾಲಿವುಡ್‌ನಲ್ಲಿ ಇನ್ನೂ ಮಾಡದೇ ಇರುವುದನ್ನು ಮಾಡಿಬಿಟ್ರು!