The Kerala Story: ಮತಾಂತರದ ರೋಲ್​ ಒಪ್ಪಿದ್ದೇಕೆ ಎಂಬ ಗುಟ್ಟು ಬಿಚ್ಚಿಟ್ಟ 'ಆಸಿಫಾ'

By Suvarna News  |  First Published May 10, 2023, 4:30 PM IST

ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಆಸೀಫಾ ಎಂಬ ನೆಗೆಟಿವ್​ ರೋಲ್ ಮಾಡಿದ ಹಿಂದೂ ಯುವತಿ, ಈ ಪಾತ್ರಕ್ಕೆ ಒಪ್ಪಿದ್ದೇಕೆ?
 


ಆಸೀಫಾ  ಎಂಬ ಯುವತಿ ರೂಮ್​ಮೇಟ್ಸ್​ ನರ್ಸಿಂಗ್​ ಕಲಿಯಲು ಪ್ರತಿಷ್ಠಿತ ಕಾಲೇಜಿಗೆ ಸೇರಿಕೊಂಡಿರೋ  ಶಾಲಿನಿ ಉನ್ನಿಕೃಷ್ಣನ್ (Shalini Unnikrishnan), ಗೀತಾಂಜಲಿ, ನಿಮ್ಹಾ ಮ್ಯಾಥ್ಯುಸ್. ಆಸೀಫಾ  ಈ  ಮೂವರು ಹುಡುಗಿಯರ ಬ್ರೇನ್ ವಾಷ್ ಮಾಡುತ್ತಾಳೆ.  ಈ ಮೂವರೂ ಆಕೆಯ ರೂಮ್ ​ಮೇಟ್ಸ್​. ಇಸ್ಲಾಂ ಬಗ್ಗೆ ಬ್ರೇನ್​ ವಾಷ್​ ಮಾಡಿ ಕೊನೆಗೆ ಅವಳದ್ದೇ ಧರ್ಮಕ್ಕೆ ಸೇರಿಸ್ತಾಳೆ. ಅವರ ಬದುಕನ್ನು  ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ನಾಶ ಮಾಡುತ್ತಾಳೆ, ಐಸಿಸ್​ ಉಗ್ರ ಸಂಘಟನೆಗೆ ಸೇರಿಸುತ್ತಾಳೆ... ಹೌದು. ಇದು ಬಹು ವಿವಾದ ಸೃಷ್ಟಿಸಿರುವ ದಿ ಕೇರಳ ಸ್ಟೋರಿಯ ಕಥೆ. ಈ ನೈಜ ಘಟನೆಯನ್ನು ನೋಡಿ ಸಹಿಸಿಕೊಳ್ಳಲು ಆಗದ ಒಂದು ವರ್ಗ ಭಾರಿ ಪ್ರತಿರೋಧ ಮಾಡುತ್ತಿರುವ ನಡುವೆಯೇ ಚಿತ್ರ ಇದಾಗಲೇ ಬ್ಲಾಕ್​ಬಸ್ಟರ್​ ಎನಿಸಿಕೊಂಡಿದೆ. ಕಾಂಗ್ರೆಸ್​, ತೃಣಮೂಲ ಕಾಂಗ್ರೆಸ್​, ಕಮ್ಯೂನಿಸ್ಟ್​ ಪಕ್ಷಗಳು ಈ ಭಯಾನಕ ಸತ್ಯ ಘಟನೆಯ ಚಿತ್ರವನ್ನು ಸಹಿಸಿಕೊಳ್ಳದೇ ತಮ್ಮ ರಾಜ್ಯಗಳಲ್ಲಿ ಚಿತ್ರಗಳನ್ನು ಬ್ಯಾನ್​ ಮಾಡಿದ್ದರೂ, ದಿ ಕೇರಳ ಸ್ಟೋರಿ  ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
 
ದಿ ಕೇರಳ ಸ್ಟೋರಿ (The Kerala Story) ಮೊದಲ ದಿನದಲ್ಲಿ ವಿಶ್ವದಾದ್ಯಂತ ರೂ. 8 ಕೋಟಿ ಸಂಗ್ರಹಿಸಿದೆ. ಎರಡನೇ ದಿನ ರೂ. 11.22 ಕೋಟಿ, ಮೂರನೇ ದಿನ ರೂ. 16.40 ಕೋಟಿ, ನಾಲ್ಕನೇ ದಿನ ರೂ. 10.07 ಕೋಟಿ ಗಳಿಸಿದೆ. ಒಟ್ಟಾರೆ ಈ ಸಿನಿಮಾ ರೂ. 45.72 ಕೋಟಿ ಕಲೆಕ್ಷನ್ ಮಾಡಿದೆ ಎಂದು ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಬಹಿರಂಗಪಡಿಸಿದ್ದಾರೆ.

The Kerala Story: ನಾಲ್ಕು ರಾಜ್ಯಗಳಿಂದ ಬ್ಯಾನ್​ ಬಿಸಿ! 4ನೇ ದಿನ ಕಲೆಕ್ಷನ್​ ಎಷ್ಟು?

ಇದರಲ್ಲಿಯುವ  ಮುಖ್ಯ ನಾಯಕಿ ಅದಾ ಶರ್ಮಾ(Adah Sharma)ರ ಅದ್ಭುತ ನಟನೆಯ ಬಗ್ಗೆ ಇದಾಗಲೇ ನೀವು ಕೇಳಿರಬಹುದು. ಪರಕಾಯ ಪ್ರವೇಶ ಮಾಡಿದವರಂತೆ ಅತ್ಯದ್ಭುತವಾಗಿ ನಟಿಸಿರುವ ಬಗ್ಗೆ ಚಿತ್ರ ವಿಮರ್ಶಕರು ಇದಾಗಲೇ ಬಣ್ಣಿಸಿದ್ದಾರೆ. ಮತಾಂತರಗೊಂಡ ಮೇಲೆ ಒಬ್ಬ ಹೆಣ್ಣು ಅನುಭವಿಸುವ ನರಕಯಾತನೆಯ ದೃಶ್ಯಗಳನ್ನು ​ನಟನೆಯೆನ್ನದೇ ಸಹಜ ರೀತಿಯಲ್ಲಿ ನಟಿಸಿ ಭೇಷ್​ ಅನ್ನಿಸಿಕೊಂಡಿದ್ದಾರೆ ಅದಾ ಶರ್ಮಾ. ಇದೇ ರೀತಿ ಈ ಚಿತ್ರದ ಮತ್ತೋರ್ವ ಹೈಲೈಟ್​ ಆಗಿರುವ ನಟಿ ಎಲ್ಲ ಹಿಂದೂ ಹುಡುಗಿಯರ ಬ್ರೇನ್​ವಾಷ್​ ಮಾಡುವ ಆಸೀಫಾ ಪಾತ್ರಧಾರಿ.

Tap to resize

Latest Videos

ಹೌದು. ದಿ ಕೇರಳ ಸ್ಟೋರಿಯಲ್ಲಿ ಆಸೀಫಾ (Aseefa) ಎಂಬ ನೆಗೆಟಿವ್​ ರೋಲ್​ ಮಾಡಿದ ನಟಿಯ ಹೆಸರು ಸೋನಿಯಾ ಬಾಲಾನಿ (Somali Balani) ಓರ್ವ ಹಿಂದೂ ಯುವತಿಯಾಗಿ ಮುಸ್ಲಿಂ ಯುವತಿಯ ಅದೂ ನೆಗೆಟಿವ್​ ರೋಲ್​ನಲ್ಲಿ ಜನಮನ ಗೆದ್ದಿರುವ ಸೋನಿಯಾ ಈಗ ಈ ಚಿತ್ರದ ಕುರಿತು ಮಾತನಾಡಿದ್ದಾರೆ. ನೆಗೆಟಿವ್​ ರೋಲ್​ನಲ್ಲಿ ತಾವು ನಟಿಸಲು ಒಪ್ಪಿಕೊಂಡದ್ದು ಏಕೆ ಎಂಬ ಬಗ್ಗೆ ಮನಸು ಬಿಚ್ಚಿ ಮಾತನಾಡಿದ್ದಾರೆ.  ಅಂದಹಾಗೆ ಸೋನಿಯಾ ಬಾಲಾನಿ ಆಗ್ರಾ ನಿವಾಸಿ. ಇದಾಗಲೇ ಕಿರುತೆರೆಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಜನಪ್ರಿಯ ಧಾರಾವಾಹಿ ಬಡೇ ಅಚ್ಚೆ ಲಗ್ತೆ ಹೈನಲ್ಲಿ ನಟಿಸಿ ಭೇಷ್​ ಎನ್ನಿಸಿಕೊಂಡವರು. ನಂತರ  ತುಮ್ ಬಿನ್ -2, ಬಜಾರ್ ಚಿತ್ರಗಳಲ್ಲಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. 

The Kerala Story ಬ್ಯಾನ್​ ವಿಷ್ಯಕ್ಕೆ ನಟಿ ಶಬನಾ ಅಜ್ಮಿ ಹೇಳಿದ್ದೇನು?

ಆಸೀಫಾ ಪಾತ್ರದ ಕುರಿತು ಹೇಳಿದ ಅವರು,  'ಇಂದು ಜನರು ನನ್ನ ಅಭಿನಯವನ್ನು ಮೆಚ್ಚುತ್ತಿದ್ದಾರೆ. ಇದರ ಸಂಪೂರ್ಣ ಕ್ರೆಡಿಟ್ ನನ್ನ ದಿವಂಗತ ತಾಯಿ ಶಾಂತಾ ಮತ್ತು ತಂದೆ ರಮೇಶ್ ಬಾಲಾನಿಗೆ ಸಲ್ಲುತ್ತದೆ. ಜನರು ನನ್ನ ನಟನೆಯನ್ನು ಇಷ್ಟಪಡುತ್ತಾರೆ ಎಂದು ಹೇಳಿದಾಗ ನನಗೆ ತುಂಬಾ ಸಂತೋಷವಾಗುತ್ತದೆ ಎಂದಿದ್ದಾರೆ. 'ಸಿನಿಮಾದಲ್ಲಿ ನಾಯಕಿ ಮತ್ತು ನೆಗೆಟಿವ್ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರುವುದರಿಂದ ನಾನೇ ಆಸೀಫಾ ಪಾತ್ರವನ್ನು ಆಯ್ಕೆ ಮಾಡಿಕೊಂಡೆ. ಈ ಪಾತ್ರಕ್ಕಾಗಿ ಹಲವು ನಟಿಯರು ಆಡಿಷನ್ ಮಾಡಿದ್ದಾರೆ. ನಾನು ಗೆದ್ದೆ. ಅದರ ಖುಷಿ ನನಗಿದೆ' ಎಂದು ನಟಿ ತಿಳಿಸಿದ್ದಾರೆ.  

'ನನ್ನ ಇಡೀ ಕುಟುಂಬ ಜೈಪುರ ಹೌಸ್‌ನಲ್ಲಿ ವಾಸಿಸುತ್ತಿದೆ. ಬಾಲ್ಯದಲ್ಲಿ ನಾನು ನನ್ನ ತಾಯಿಗೆ ಶಾಲೆಯ ಶಿಕ್ಷಕರನ್ನು ಫಾಲೋ ಮಾಡುತ್ತಿದ್ದೆ. ನಾನು ಶಾಲೆಯಲ್ಲಿ ನೃತ್ಯ, ನಟನೆಯನ್ನು ಇಷ್ಟಪಟ್ಟೆ. ಸೇಂಟ್ ಜಾನ್ಸ್ ಕಾಲೇಜಿನಲ್ಲಿ ಬಿಕಾಂ ಮಾಡಿದ ನಂತರ ನಾನು ಮುಂಬೈನಲ್ಲಿ ನಟನೆಯನ್ನು ಕಲಿತೆ' ಎಂದು ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ. 
 

click me!