ಶಾಕಿಂಗ್​ ಬೆಲೆಯ ಇನ್ನೊಂದು ಐಷಾರಾಮಿ ಬಂಗ್ಲೆ ಖರೀದಿಸಿದ Samantha Ruth Prabhu

Published : May 10, 2023, 03:49 PM IST
ಶಾಕಿಂಗ್​ ಬೆಲೆಯ ಇನ್ನೊಂದು ಐಷಾರಾಮಿ ಬಂಗ್ಲೆ ಖರೀದಿಸಿದ  Samantha Ruth Prabhu

ಸಾರಾಂಶ

ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಲ್ಲಿರುವ ನಟಿ ಸಮಂತಾ, ಈಗ ಹೊಸ ಬಂಗ್ಲೆಯೊಂದನ್ನು ಖರೀದಿಸಿ ಸುದ್ದಿಯಲ್ಲಿದ್ದಾರೆ. ಏಕಿದು?  

ತಾರಾ ಜೋಡಿಗಳು ಸಂಬಂಧದಲ್ಲಿದ್ದ ಎಷ್ಟು ಸುದ್ದಿಯಾಗುತ್ತದೆಯೋ, ಅವರ ವಿಚ್ಛೇದನ ಪಡೆದರೆ ಅವರ ಮೇಲೆ ಇನ್ನೂ ಹೆಚ್ಚಿಗೆ ಕಣ್ಣು ನೆಟ್ಟಿರುತ್ತದೆ. ಅಂಥ ಜೋಡಿಗಳಲ್ಲಿ ಒಂದು ನಾಗ ಚೈತನ್ಯ (Naga Chaitanya) ಹಾಗೂ ಸಮಂತಾ ರುತ್​ ಪ್ರಭು ಜೋಡಿ.  ಯೇ ಮಾಯಾ ಚೇಸಾವೆ ಸಿನಿಮಾ ಮೂಲಕ ಆತ್ಮೀಯರಾದ ನಾಗ ಚೈತನ್ಯ ಹಾಗೂ ನಟಿ ಸಮಂತಾ, ಸ್ನೇಹವನ್ನು ಪ್ರೇಮವಾಗಿ ಬದಲಾಯಿಸಿ ನಂತರ ಅದ್ಧೂರಿಯಾಗಿ ಮದುವೆಯಾದರು. ಇಬ್ಬರೂ ಕುಟುಂಬ ಸದಸ್ಯರ ಮನವೊಲಿಸಿ ಸಾಂಪ್ರದಾಯಿಕ ಹಿಂದೂ ಮತ್ತು ಕ್ರೈಸ್ತ ರೀತಿಯಲ್ಲಿ ವಿವಾಹವಾಗಿದ್ದರು.  ಮದುವೆಯ ಬಳಿಕ ಈ ಜೋಡಿ  ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಲೇ ಇದ್ದರು. ಆದರೆ ಅದೇನಾಯಿತೋ ಗೊತ್ತಿಲ್ಲ, ಸಾಮಾಜಿಕ ಜಾಲತಾಣದ (Social Media) ಮೂಲಕವೇ  ವಿಚ್ಛೇದನ ಘೋಷಿಸಿದ್ದರು.   ಮದುವೆಯಾಗಿ ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನ ಕೊನೆಗೊಳಿಸಿದ್ದರು. ಇದಾಗಿ  ಮೂರು ವರ್ಷ ಗತಿಸಿದರೂ ಜೋಡಿಯ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ.

ಅದಾದ ಬಳಿಕ ಅನಾರೋಗ್ಯದ ಕಾರಣದಿಂದ ನಟಿ ಸಮಂತಾ (Samantha) ಸುದ್ದಿಯಾಗಿದ್ದರೆ, ಸದ್ಯ ಶಾಕುಂತಲಂ ಚಿತ್ರದ ಮೂಲಕ ಸುದ್ದಿಯಾಗಿದ್ದಾರೆ. ‘ಶಾಕುಂತಲಂ’ ಗಲ್ಲಾಪೆಟ್ಟಿಗೆಯಲ್ಲಿ ಫ್ಲಾಪ್ ಆಗಿದೆ. ಇದರ ನಡುವೆಯೇ,  ಈ ನಟಿ   ಮತ್ತೊಂದು ವಿಷಯಕ್ಕೆ ಸಮಂತಾ ಸುದ್ದಿಯಾಗುತ್ತಿದ್ದಾರೆ. ಅದೇನೆಂದರೆ, ದುಬಾರಿ ಬಂಗಲೆ ಖರೀದಿ ವಿಷಯದಲ್ಲಿ. ನಟಿ ಇದಾಗಲೇ  ಒಂದು ಕೋಟಿ ರೂಪಾಯಿಯ ಬಂಗಲೆ ಖರೀದಿಸಿದ್ದು ಅದರಲ್ಲಿಯೇ ವಾಸ ಮಾಡುತ್ತಿದ್ದಾರೆ. ಸಮಂತಾ, ನಟನೆಯ ಜೊತೆಗೆ, ತನ್ನ ಸ್ನೇಹಿತರ ಜೊತೆಗೆ ಎರಡು ಮೂರು ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಅವರು ಏಕಮ್ ಅರ್ಲಿ ಲರ್ನಿಂಗ್ ಸೆಂಟರ್ ಎಂಬ ಪ್ಲೇ ಸ್ಕೂಲ್ ಅನ್ನು ಹೊಂದಿದ್ದಾರೆ. ಬಟ್ಟೆ ಬ್ರ್ಯಾಂಡ್ 'ಸಾಕಿ' ನಡೆಸುತ್ತಿದ್ದಾರೆ. ಇವರು ಫ್ಯಾಷನ್ ಟ್ರೆಂಡ್ ಸೆಟ್ಟರ್ ಆಗಿದ್ದು ಸಾಕಿಗೆ ಸಾಕಷ್ಟು ಇನ್ಪುಟ್ ನೀಡುತ್ತಾರೆ. ಅವರು ಚಾರಿಟಿ ಫೌಂಡೇಶನ್ ಅನ್ನು ಹೊಂದಿದ್ದಾರೆ. ಅಲ್ಲಿ ಅವರು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಂದ ಬರುವ ಮಕ್ಕಳ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳಿಗೆ ಹಣವನ್ನು ಸಹಾಯ ಮಾಡುತ್ತಾರೆ.

Naga Chaitanya: ಸೀಕ್ರೆಟ್ ಕ್ರಶ್​ ಬಗ್ಗೆ ಕೊನೆಗೂ ಬಾಯ್ಬಿಟ್ಟ ನಟಿ ಸಮಂತಾ ಮಾಜಿ ಪತಿ!

ಆದ್ದರಿಂದ ಇದೀಗ ಅವರು ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇದರ ನಡುವೆಯೂ, ನಟಿ ಹೈದರಾಬಾದ್​ನಲ್ಲಿ ಹೊಸದಾಗಿ  ಐಷಾರಾಮಿ ಡ್ಯೂಪ್ಲೆಕ್ಸ್ ಅಪಾರ್ಟ್​ಮೆಂಟ್​ ಖರೀದಿಸಿದ್ದು, ಸುದ್ದಿಯಲ್ಲಿದ್ದಾರೆ.  ಜಯಭೇರಿ ಆರೆಂಜ್ ಕೌಂಟಿಯಲ್ಲಿ ಐಷಾರಾಮಿ 3 ಬಿಎಚ್‌ಕೆ ಡ್ಯೂಪ್ಲೆಕ್ಸ್ ಅಪಾರ್ಟ್​ಮೆಂಟ್​  ಖರೀದಿಸಿದ್ದಾರೆ. ಇದರ ಬೆಲೆ  ಬರೋಬ್ಬರಿ 7.8 ಕೋಟಿ ರೂಪಾಯಿ! ರಿಯಲ್ ಎಸ್ಟೇಟ್ ಡೇಟಾ ಅನಾಲಿಟಿಕ್ಸ್ ಸಂಸ್ಥೆಯಾದ ಸಿಆರ್‌ಇ ಮ್ಯಾಟ್ರಿಕ್ಸ್ ನ ವರದಿಯು ಸಮಂತಾ ರುತ್ ಪ್ರಭು ಅವರ ಐಷಾರಾಮಿ ಹೊಸ ಆಸ್ತಿಯ ಬಗ್ಗೆ ಬಹಿರಂಗಪಡಿಸಿದೆ. ಹೈದರಾಬಾದ್ ನ ಜಯಭೇರಿ ಆರೆಂಜ್ ಕೌಂಟಿಯಲ್ಲಿ ನಟಿ ತನ್ನ ಈ ಐಷಾರಾಮಿ ಮನೆಯನ್ನು 7.8 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. 13ನೇ ಮಹಡಿಯಲ್ಲಿ 3,920 ಚದರ ಅಡಿ ಮತ್ತು 14ನೇ ಮಹಡಿಯಲ್ಲಿ 4,024 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಈ ಡ್ಯೂಪ್ಲೆಕ್ಸ್ ಅಪಾರ್ಟ್​ಮೆಂಟ್​ (Apartment) ಒಟ್ಟು 7,944 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.

ಈ ಆಸ್ತಿಯು ಹೈದರಾಬಾದ್ ನ ನಾನಕ್‌ರಾಮ್ ಎಂಬ ಐಷಾರಾಮಿ ಸೊಸೈಟಿಯ (Society) ಅಡಿಯಲ್ಲಿ ಬರುತ್ತದೆ ಮತ್ತು ಅವರು ಈಗಾಗಲೇ ಜೂಬ್ಲಿ ಹಿಲ್ಸ್ ನಲ್ಲಿ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಇದಲ್ಲದೆ, ಸಮಂತಾ ಮುಂಬೈನಲ್ಲಿ ಸಹ 15 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಹೊಂದಿದ್ದಾರಂತೆ.

ಚುನಾವಣಾ ಪ್ರಚಾರ ಮುಗೀತಿದ್ದಂತೆಯೇ ಕುತೂಹಲದ ಟ್ವೀಟ್ ಮಾಡಿದ ಸುದೀಪ್​

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾವು ಊಟಕ್ಕಾಗೇ ಮದುವೆಗೆ ಹೋಗ್ತೇವೆ, ಕರಣ್ ಜೋಹರ್ ಮದುವೆಗೆ ಹೋದ್ರೂ ಊಟ ಮಾಡಲ್ಲ, ಕಾರಣ ?!
ಉಸಿರು ಬಿಗಿದಿಟ್ಟುಕೊಂಡು ನೋಡುವಂತಹ Serial Killer ಚಿತ್ರಗಳು Don't Miss It