ಮೆಟ್ಟಿಲುಗಳಿಂದ ಕೆಳಗೆ ಬಿದ್ದು ಖ್ಯಾತ ನಟಿ ನಿಧನ: ಅಂಗಾಂಗ ದಾನ ಮಾಡಿದ ಕುಟುಂಬ

By Shruthi Krishna  |  First Published Jun 13, 2023, 2:42 PM IST

ಮೆಟ್ಟಿಲುಗಳಿಂದ ಕೆಳಗೆ ಬಿದ್ದು ಕೊರಿಯಾದ ಖ್ಯಾತ ನಟಿ ಪಾರ್ಕ್ ಸೂ ಯನ್ ನಿಧನ ಹೊಂದಿದ್ದಾರೆ. ಕುಟುಂಬದವರು ಆಕೆಯ ಅಂಗಾಂಗ ದಾನ ಮಾಡಿದ್ದಾರೆ. 


ಜನಪ್ರಿಯ ಕೊರಿಯನ್ ನಟಿ ಪಾರ್ಕ್ ಸೂ ಯನ್ ಮೆಟ್ಟಿಗಳಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಖ್ಯಾತ ನಟಿಯ ಸಾವಿನ ಬಗ್ಗೆ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ. 29 ವರ್ಷದ ನಟಿ ಜೆಜು ದ್ವೀಪದಲ್ಲಿ ಪ್ರದರ್ಶನ ನೀಡಲು ಸಜ್ಜಾಗಿದ್ದರು. ಆದರೆ ಕಾರ್ಯಕ್ರಮಕ್ಕೂ ಮೊದಲು ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಮನೆಗೆ ವಾಪಾಸ್ ಆಗುತ್ತಿರುವಾಗ ಮೆಟ್ಟಿಲುಗಳಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ತಕ್ಷಣ ಪಾರ್ಕ್ ಸೂ ಅವರನ್ನು ಆಸ್ಪತ್ರೆಗೆ ಕರೆದೊಯ್ದು  ಬದುಕಿಸಲು ಪ್ರಯತ್ನಿಸಲಾಯಿತು. ಆದರೆ ಆಕೆಯ ಬ್ರೈನ್ ಡೆಡ್ ಎಂದು ವೈದ್ಯರು ಘೋಷಿಸಿದರು. ಬಳಿಕ ನಿಧನ ಸುದ್ದಿ ಬಹಿರಂಗ ಪಡಿಸಿದರು. 

ಪಾರ್ಕ್ ಸ್ಮರಣಾರ್ಥ ಆಕೆಯ ಅಂಗಾಂಗಗಳನ್ನು ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಪಾರ್ಕ್ ಸೂ ಯನ್ ತಾಯಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, 'ಆಕೆಯ ಬ್ರೈನ್ ಡೆಡ್ ಆಗಿದೆ. ಆದರೆ ಆಕೆಯ ಹೃದಯ ಬಡಿತ ಇನ್ನೂ ಇದೆ. ಅಂಗಗಳ ಅಗತ್ಯ ಇರುವವರು ಯಾರಾದರೂ ಇರಬೇಕು. ಅವಳ ತಾಯಿ ಮತ್ತು ತಂದೆಯಾಗಿ ಅವಳ ಹೃದಯವು ಯಾರಿಗಾದರೂ ದಾನ ಮಾಡಿದರೆ ಮಿಡಿಯುತ್ತಿರುತ್ತದೆ ಎಂಬ ಆಲೋಚನೆಯಿಂದ ಸಮಾಧಾನವಾಗಿ ಬದುಕಲು ಸಾಧ್ಯವಾಗುತ್ತದೆ' ಎಂದು ಹೇಳಿದ್ದಾರೆ. 

Tap to resize

Latest Videos

ರ್ಯಾಂಪ್ ವಾಕ್ ವೇಳೆ ನಡೆದ ದುರಂತಕ್ಕೆ ಮಾಡೆಲ್ ಸಾವು

ಸೋಮವಾರ ಆಕೆಯ ಅಂತಿಮ ಸಂಸ್ಕಾರ ನಡೆದಿದ್ದು, ಜೂನ್ 13ರಂದು ಆಕೆಯ ಗೌರವಾರ್ಥ ಮೆರವಣಿಗೆ ನಡೆದಿದೆ. ನಟಿ ಪಾರ್ಕ್ ಸೂ 1994ರಲ್ಲಿ ಜನಿಸಿದರು. 2018 ರಲ್ಲಿ ಇಲ್ ಟೆನೋರ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ಫೈಂಡಿಂಗ್ ಮಿಸ್ಟರ್ ಡೆಸ್ಟಿನಿ, ದಿ ಡೇಸ್ ವಿ ಲವ್ಡ್, ಸಿದ್ಧಾರ್ಥ, ದಿ ಸೆಲ್ಲರ್ ಹಲವಾರು ಸಂಗೀತಗಳಲ್ಲಿ ಕಾಣಿಸಿಕೊಂಡರು.

ಖ್ಯಾತ ವಿಲನ್ ಕಝಾನ್​ ಖಾನ್​ ಹೃದಯಾಘಾತದಿಂದ ನಿಧನ

ಪಾರ್ಕ್ ಸೂ JTBCಯ ಐತಿಹಾಸಿಕ ಸಿನಿಮಾ ಸ್ನೋಡ್ರಾಪ್‌ನಲ್ಲಿ ಬ್ಲ್ಯಾಕ್‌ಪಿಂಕ್‌ನ ಜಿಸೂ ಮತ್ತು ಜಂಗ್ ಹೇ ಇನ್ ಜೊತೆಗೆ ಕಾಣಿಸಿಕೊಂಡಿದ್ದರು. ಸರಣಿಯಲ್ಲಿ, ಅವರು ಬಂಧಿತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯ ಪಾತ್ರವನ್ನು ನಿರ್ವಹಿಸಿದರು. ನಂತರ ಅವರನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದರು. ಆ ಪಾತ್ರದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು.  

click me!