
ಖ್ಯಾತ ನಟ ಕಝಾನ್ ಖಾನ್ ಸೋಮವಾರ (ಜೂನ್ 12) ನಿಧನರಾಗಿದ್ದಾರೆ. ತೀವ್ರ ಹೃದಯಾಘಾತದಿಂದ ಕಝಾನ್ ಇಹಲೋಕ ತ್ಯಜಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡುವ ಮೂಲಕ ಕಝಾನ್ ಖಾನ್ ತುಂಬಾ ಫೇಮಸ್ ಆಗಿದ್ದರು. ಮಲಯಾಳಂ, ತಮಿಳು ಸಿನಿಮಾಗಳಲ್ಲಿ ಅವರು ಹೆಚ್ಚಾಗಿ ನಟಿಸಿದ್ದರು, ಜೊತೆಗೆ ಕನ್ನಡದ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಕನ್ನಡದ ‘ಹಬ್ಬ’, ‘ನಾಗದೇವತೆ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿಅಭಿನಯಿಸಿದ್ದರು. ಕಝಾನ್ ಖಾನ್ ನಿಧನಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.
ಕಝಾನ್ ಖಾನ್ ನಿಧನದ ಸುದ್ದಿಯನ್ನು ನಿರ್ಮಾಪಕ ಎನ್ಬಿ ಬದುಶ ಸಾಮಾಜಿಕ ಜಾಲತಾಣದ ಮೂಲಕ ಖಚಿತಪಡಿಸಿದ್ದಾರೆ. ಕಝಾನ್ ಖಾನ್ ಫೋಟೋ ಶೇರ್ ಮಾಡಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ. ಇನ್ನೂ ಕಝಾನ್ ಖಾನ್ ಅವರ ಸಿನಿಮಾಗಳ ಬಗ್ಗೆ ಹೇಳುವುದಾದರೆ ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಗಂಧರ್ವಂ’, ‘ಸಿಐಡಿ ಮೂಸಾ’, ‘ದಿ ಕಿಂಗ್’, ‘ಡ್ರೀಮ್ಸ್’, ‘ಸೇತುಪತಿ ಐಪಿಎಸ್’, ‘ವಾನತೈಪೋಲ’, ‘ಮೆಟ್ಟುಕುಡಿ’, ‘ವಲ್ಲರಸು’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಝಾನ್ ಖಾನ್ ನಟಿಸಿದ್ದರು.
ರ್ಯಾಂಪ್ ವಾಕ್ ವೇಳೆ ನಡೆದ ದುರಂತಕ್ಕೆ ಮಾಡೆಲ್ ಸಾವು
ಖಡಕ್ ವಿಲನ್ ಆಗಿ ಮಿಂಚಿದ ಕಝಾನ್ ಖಾನ್ ಇನ್ನು ನೆನಪು ಮಾತ್ರ. ಅವರ ಗಮನಾರ್ಹ ಪಾತ್ರಗಳ ಮೂಲಕ ಸದಾ ನನೆಪಿನಲ್ಲಿ ಇರುತ್ತಾರೆ. ಕಝಾನ್ ನಿಧನಕ್ಕೆ ಅಭಿಮಾನಿಗಳು, ಸಿನಿಮಾರಂಗದ ಗಣ್ಯರು ಹಾಗೂ ಆಪ್ತರು ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಕಝಾನ್ ಖಾನ್ 1992ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ತಮಿಳು ಸಿನಿಮಾರಂಗಿಂದ ಬಣ್ಣದ ಬದುಕು ಆರಂಭಿಸಿದ ಕಝಾನ್ ಖಾನ್ ಬಳಿಕ ಬೇರೆ ಬೇರೆ ಭಾಷೆಯ ಸಿನಿಮಾರಂಗದಲ್ಲಿ ಮಿಂಚಿದರು. ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಟಿಸಿದ್ದಾರೆ.
ರಸ್ತೆ ಅಪಘಾತ: ಖ್ಯಾತ ಕಿರುತೆರೆ ನಟ ಕೊಲ್ಲಂ ಸುಧಿ ನಿಧನ
ತಮಿಳು ಸಿನಿಮಾರಂಗದಿಂದ ಪ್ರಾರಂಭವಾದ ಜರ್ನಿ ಆರಂಭಿಸಿದ ಕಝಾನ್ ಖಾನ್ 1995ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 50ಕ್ಕೂ ಅಧಿಕ ಸಿನಿಮಾಗಳಲ್ಲಿ ಕಝಾನ್ ಖಾನ್ ನಟಿಸಿದ್ದರು. ಅನೇಕ ಸ್ಟಾರ್ ನಟರ ಜೊತೆಯೂ ಕಝಾನ್ ಖಾನ್ ನಟಿಸಿ ಸೈ ಎನಿಸಿಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.