ಅವರು ನನ್ನ ಖುಷಿಯ ಖಜಾನೆ ಎಂದು ನಟಿ ತಮನ್ನಾ, ವಿಜಯ್ ವರ್ಮಾ ಜೊತೆಗಿನ ಪ್ರೀತಿ ಒಪ್ಪಿಕೊಂಡು ಅವರನ್ನು ಹಾಡಿಹೊಗಳಿದ್ದಾರೆ.
ನಟಿ ತಮನ್ನಾ ಇತ್ತೀಚೆಗೆ ಪ್ರೀತಿ, ಪ್ರೇಮದ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದು ಮಾಡುತ್ತಿದ್ದಾರೆ. ಮಿಲ್ಕಿ ಬ್ಯೂಟಿ ನಟ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ತಿಂಗಳಿಂದ ವೈರಲ್ ಆಗಿದೆ. ಆದರೆ ಈ ಬಗ್ಗೆ ತಮನ್ನಾ ಆಗಲಿ ಅಥವಾ ವಿಜಯ್ ವರ್ಮಾ ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ಆದರೀಗ ಕೊನೆಗೂ ತಮನ್ನಾ ಪ್ರೀತಿ ವಿಚಾರ ಬಹಿರಂಗ ಪಡಿಸಿದ್ದಾರೆ. ವಿಜಯ್ ಮತ್ತು ತಮನ್ನಾ ಇಬ್ಬರೂ ಆಗಾಗ ಕ್ಯಾಮರಾ ಕಣ್ಣಿಗೆ ಸೆರೆಯಾಗುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ರೊಮ್ಯಾಂಟಿಕ್ ಫೋಟೋಗಳನ್ನು ಶೇರ್ ಮಾಡುತ್ತಿದ್ದರು. ಇದೀಗ ತಮನ್ನಾ ಪ್ರೀತಿಯಲ್ಲಿರುವುದಾಗಿ ಹೇಳಿದ್ದಾರೆ. ಅಷ್ಟೆಯಲ್ಲದೇ ವಿಜಯ್ ವರ್ಮಾ ತನ್ನ ಪ್ರೀತಿಯ ಖಜಾನೆ ಎಂದು ಹಾಡಿಹೊಗಳಿದ್ದಾರೆ.
ಫಿಲ್ಮ್ ಕಂಪ್ಯಾನಿಯನ್ ಜೊತೆ ಮಾತನಾಡಿದ ನಟಿ ತಮನ್ನಾ ಭಾಟಿಯಾ ವಿಜಯ್ ವರ್ಮಾ ಬಗ್ಗೆ ಬಹಿರಂಗ ಪಡಿಸಿದ್ದಾರೆ. 'ಅವರು (ವಿಜಯ್ ವರ್ಮಾ) ನಾನು ತುಂಬಾ ಬಾಂಧವ್ಯ ಹೊಂದಿದ ವ್ಯಕ್ತಿ. ಯಾರೋ ಒಬ್ಬರು ನಿಮ್ಮ ಸಹನಟರಾಗಿದ್ದ ಮಾತ್ರಕ್ಕೆ ಅವರೊಡನೆ ಆಕರ್ಷಿತರಾಗಲು ಸಾಧ್ಯವಿಲ್ಲ. ಏಕೆಂದರೆ ನಾನು ಈಗಾಗಲೇ ಹಲವಾರು ನಟರೊಡನೆ ನಟಿಸಿದ್ದೇನೆ. ಯಾರ ಕಡೆಗೂ ನಾನು ಆಕರ್ಷಿತಳಾಗಿಲ್ಲ. ಯಾರ ಬಗ್ಗೆಯಾದರೂ ನೀವು ನಿಜಕ್ಕೂ ಮನಸೋತಿರೆಂದರೆ, ಭಾವನೆಗಳು ಹುಟ್ಟಿದವೆಂದರೆ ಅದು ಬಹಳ ವೈಯಕ್ತಿಕವಾಗಿದೆ. ಆ ವ್ಯಕ್ತಿ ಹೇಗಿದ್ದಾನೆ, ಏನು ಮಾಡುತ್ತಿದ್ದಾನೆ, ಯಶಸ್ವಿ ವ್ಯಕ್ತಿಯೋ ಎಂಬುದೆಲ್ಲವೂ ಗಣನೆಗೆ ಬರುವುದೇ ಇಲ್ಲ' ಎಂದಿದ್ದಾರೆ.
ಬಾಯ್‌ಫ್ರೆಂಡ್ ವಿಜಯ್ ವರ್ಮಾ ಜೊತೆ ತಮನ್ನಾ ಡಿನ್ನರ್; ವಿಡಿಯೋ ವೈರಲ್
ಲಸ್ಟ್ ಸ್ಟೋರೀಸ್ 2 ಸೆಟ್‌ಗಳಲ್ಲಿ ವಿಜಯ್ ವರ್ಮಾ ಜೊತೆ ಪ್ರೀತಿ ಶುರುವಾಯಿತಾ ಎಂದು ಕೇಳಿದ ಪ್ರಶ್ನೆಗೆ ತಮನ್ನಾ, 'ಹೌದು' ಎಂದು ಹೇಳಿದರು. ಬಳಿಕ ವಿಜಯ್ ವರ್ಮರನ್ನು ವಿವರಿಸಿದರು. ವಿಜಯ್ ವರ್ಮಾ ನನ್ನ ಖುಷಿಯ ಖಜಾನೆ ಎಂದು ಹೇಳಿದರು. 'ನಮ್ಮ ಸಂಬಂಧ ಬಹಳ ನೈಸರ್ಗಿಕ ರೀತಿಯಲ್ಲಿ ಯಾವುದೇ ಒತ್ತಡಗಳಿಲ್ಲದೆ ಶುರುವಾಯ್ತು' ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ತಮನ್ನಾ ಸಂದರ್ಶನವೊಂದರಲ್ಲಿ ಡೇಟಿಂಗ್ ವಿಚಾರ ತಳ್ಳಿ ಹಾಕಿದ್ದರು. ಅವೆಲ್ಲ ಗಾಳಿಸುದ್ದಿ ಆ ಬಗ್ಗೆ ನಾನು ಸ್ಪಷ್ಟನೆ ನೀಡಬೇಕಿಲ್ಲ ಎಂದಿದ್ದರು. ಆದರೆ ಈಗ ತಮ್ಮ ಹಾಗೂ ವಿಜಯ್ ನಡುವಿನ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ.
ಶಾರ್ಟ್ ಟಾಪ್-ಡೆನಿಮ್‌ನಲ್ಲಿ ಪೋಸ್ ನೀಡಿದ ತಮನ್ನಾ
ಬಹುಬೇಡಿಕೆಯ ನಟಿಯಾಗಿರುವ ತಮನ್ನಾ ತಮಿಳು, ತೆಲುಗು ಜೊತೆಗೆ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಬೋಲ ಶಂಕರ್, ಗುರ್ತುಂದ ಸೀತಕಲಂ, ರಜನಿಕಾಂತ್ ಜೊತೆ ಜೈಲರ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.