Puneeth Rajkumar Death: ಅಶ್ವಿನಿ ಅವರನ್ನು ಭೇಟಿಯಾಗಿ ಅಪ್ಪು ಅಗಲಿಕೆಗೆ ಸಾಂತ್ವನ ಹೇಳಿದ ನಟ ಶಿವ ಕಾರ್ತಿಕೇಯನ್

By Suvarna NewsFirst Published Nov 2, 2021, 6:44 PM IST
Highlights
  • ಪುನೀತ್ ರಾಜ್ ಕುಮಾರ್(Puneeth Rajkumar) ಅಗಲಿಕೆ ಸಿನಿ ಗಣ್ಯರ ಸಂತಾಪ
  • ಅಪ್ಪು ಪತ್ನಿ ಅಶ್ವಿನಿ ಅವರನ್ನು ಭೇಟಿಯಾದ ನಟ ಶಿವಕಾರ್ತಿಕೇಯನ್(Shiva karthikeyan)

ಕನ್ನಡದ ಸೂಪರ್‌ಸ್ಟಾರ್ ನಟ ಪುನೀತ್ ರಾಜ್‌ಕುಮಾರ್(Puneeth Rajkumar) ಅವರು ಅಕ್ಟೋಬರ್ 29 ರಂದು ಹೃದಯಾಘಾತದಿಂದ (Heart Attack)ಹಠಾತ್ ನಿಧನರಾದ ನಂತರ ಭಾರತೀಯ ಚಲನಚಿತ್ರೋದ್ಯಮದಲ್ಲಿ ಒಂದು ದೊಡ್ಡ ಶೂನ್ಯವನ್ನೇ ಎಲ್ಲರೂ ಕಾಣುತ್ತಿದ್ದಾರೆ. ಮುಖ್ಯವಾಗಿ ದಕ್ಷಿಣ ಸಿನಿ ರಂಗದಲ್ಲಿ ನಟನಿಗಿದ್ದ ಒಡನಾಟ ಭಾರೀ ಆತ್ಮೀಯದ್ದಾಗಿತ್ತು.

ಅಮೇರಿಕಾದಲ್ಲಿ ಓದುತ್ತಿರುವ ಮಗಳು ಮನೆಗೆ ಮರಳಬೇಕಾಗಿದ್ದರಿಂದ 31ರ ಭಾನುವಾರದಂದು ಅವರ ಅಂತ್ಯಕ್ರಿಯೆ ನಡೆಯಿತು. ಚಿರಂಜೀವಿ, ಎನ್‌ಟಿಆರ್ ಬಾಲಕೃಷ್ಣ ಸೇರಿದಂತೆ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಅನೇಕ ದಿಗ್ಗಜರು ಅತ್ಯಂತ ಪ್ರೀತಿಯ ಅಪ್ಪುಗೆ ವೈಯಕ್ತಿಕವಾಗಿ ಅಂತಿಮ ನಮನ ಸಲ್ಲಿಸಿದರು.

Puneeth Rajkumar Death ನಿಧನಕ್ಕೆ ಕಂಬನಿ ಮಿಡಿದ ಸೆಹ್ವಾಗ್, ಕುಂಬ್ಳೆ, ಉತ್ತಪ್ಪ ..!

ತಮಿಳಿನ ಖ್ಯಾತ ನಾಯಕ ಶಿವಕಾರ್ತಿಕೇಯನ್ ಪುನೀತ್ ರಾಜ್ ಕುಮಾರ್ ಮನೆಗೆ ಭೇಟಿ ನೀಡಿ ಅವರ ಪತ್ನಿ ಅಶ್ವಿನಿ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುರದೃಷ್ಟಕರ ಘಟನೆಯಿಂದ ನಾನು ಇನ್ನೂ ಆಘಾತಕ್ಕೊಳಗಾಗಿದ್ದೇನೆ. ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಲವು ವರ್ಷಗಳ ಹಿಂದೆ ಪ್ರಶಸ್ತಿ ಪ್ರದಾನ ಸಮಾರಂಭವೊಂದರ ಸಂದರ್ಭದಲ್ಲಿ ಪುನೀತ್ ತಮ್ಮೊಂದಿಗೆ ಮಾತನಾಡಿ ಪ್ರೋತ್ಸಾಹಿಸಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ.

ಅಪ್ಪು ಶಿವ ಕಾರ್ತಿಕೇಯನ್ ಅವರ ಇತ್ತೀಚಿನ ಸಿನಿಮಾ 'ಡಾಕ್ಟರ್' ವೀಕ್ಷಿಸಿ ತುಂಬಾ ಎಂಜಾಯ್ ಮಾಡಿದ್ದಾರೆ. ಅದನ್ನು ಹೊಗಳಿದ್ದಾರೆ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೇಳಿದ್ದರು ಎಂದು ಶಿವ ಬಹಿರಂಗಪಡಿಸಿದ್ದಾರೆ. ಒಂದು ತಿಂಗಳ ಹಿಂದೆ ಅವರು ಪುನೀತ್ ಅವರೊಂದಿಗೆ ಕಾಲ್ ಮೂಲಕ ಹೆಚ್ಚು ಸಮಯ ಮಾತನಾಡಿದ್ದಾರೆ. ಆ ನೆನಪು ಎಂದಿಗೂ ಹಾಗೆಯೇ ಇರುತ್ತದೆ ಎಂದು ನಟ ಹೇಳಿದ್ದಾರೆ.

ಕಾಲಿವುಡ್(Kollywood) ನಟಿ ಹನ್ಸಿಕಾ ಮೋಟ್ವಾನಿ(Hansika Motwani) ಅವರು ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಬಿಂದಾಸ್ (2008) ಸಿನಿಮಾದಲ್ಲಿ ನಟಿಸಿದ್ದರು. ಇದು ಅವರ ಮೊದಲ ಕನ್ನಡ ಸಿನಿಮಾ. ಸೂಪರ್‌ಸ್ಟಾರ್‌ನ ಅಕಾಲಿಕ ಮರಣದಿಂದ ಆಘಾತಕ್ಕೊಳಗಾದ ಹನ್ಸಿಕಾ ಅಪ್ಪು ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

'ಯುವರತ್ನ'ನಾಗಿಯೇ ಅಗಲಿದ ಅಪ್ಪು, 'ಜೇಮ್ಸ್‌'ಗೆ ವಿಧಿ ಕೊಟ್ಟಿಲ್ಲ ಚಾನ್ಸ್

ಪುನೀತ್ ಇನ್ನಿಲ್ಲ ಎಂದು ನಂಬುವುದಕ್ಕೆ ನನಗೆ ಇನ್ನೂ ಸಾಧ್ಯವಾಗುತ್ತುಲ್ಲ. ಇದು ಉದ್ಯಮಕ್ಕೆ ಮತ್ತು ವೈಯಕ್ತಿಕವಾಗಿ ನನಗೆ ದೊಡ್ಡ ನಷ್ಟ. ಏಕೆಂದರೆ ಅವರು ನನ್ ಸ್ನೇಹಿತರಾಗಿದ್ದರು. ಅವರು ಕೇವಲ 46 ವರ್ಷ ವಯಸ್ಸಿನವರಾಗಿದ್ದರು ಎನ್ನುವುದು ಇನ್ನೂ ದೊಡ್ಡ ದುರಂತ ಎಂದಿದ್ದಾರೆ ನಟಿ.

ಸುಮಾರು 25  ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಸಿನಿಮಾ ಲೋಕದ ಸ್ನೇಹಿತರು ಗೆಳೆಯನ ಸ್ಮರಿಸಿದ್ದಾರೆ.

ಪುನೀತ್ ಅಕಾಲಿಕ ಮರಣದ ನೋವನ್ನು ಅನಿವಾರ್ಯವಾಗಿ ಅರಗಿಸಿಕೊಳ್ಳಬೇಕಾಗಿದೆ. ಪುನೀತ್  ರಾಜ್ ಕುಮಾರ್ ಸುಮಾರು 1800  ಮಕ್ಕಳ (Children)ವಿದ್ಯಾಭ್ಯಾಸದ (Education)ಹೊಣೆ ಹೊತ್ತಿದ್ದರು.

ಪುನೀತ್ ಅವರಿಗೆ ನಮನ ಸಲ್ಲಿಸುತ್ತ ಮಾತನಾಡಿದ ವಿಶಾಲ್ (Actor Vishal) ಈ ಮಕ್ಕಳ ವಿದ್ಯಾಭ್ಯಾಸದ ಹೊಣೆ ನನ್ನದು ಎಂದು ತಿಳಿಸಿದ್ದಾರೆ.   ಇಂಥದ್ದೊಂದು ಕಾರ್ಯಕ್ರಮದಲ್ಲಿ ಮಾತನಾಡಬೇಕಾಗುತ್ತದೆ ಎನ್ನುವ ಯಾವ ಅಂದಾಜು ಇರಲಿಲ್ಲ. ಪುನೀತ್ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ ಎಂದು ವಿಶಾಲ್ ಹೇಳಿದರು. ಸೋಶಿಯಲ್ ಮೀಡಿಯಾದಲ್ಲಿಯೂ ಸಹ ವಿಶಾಲ್ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಸ್ಯಾಂಡಲ್‌ವುಡ್(Sandalwood) ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ (Heart attack) ಅ.29ರಂದು ನಿಧನರಾಗಿದ್ದಾರೆ(Death). 46 ವರ್ಷದ ನಟ ತಮ್ಮ ಮನೆಯಲ್ಲಿ ಜಿಮ್(Gym) ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದರು. ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ(Vikram Hospital) ದಾಖಲಿಸಿ ಚಿಕಿತ್ಸೆ(Treatment) ನೀಡಲಾಗುತ್ತಿತ್ತು.

click me!