ಪುನೀತ್‌ ಸ್ಮರಣೆ;  ವಿಶಾಲ್ ನಂತರ ಪ್ರಣೀತಾ  ಮಾದರಿ ಹೆಜ್ಜೆ

Published : Nov 02, 2021, 06:34 PM IST
ಪುನೀತ್‌ ಸ್ಮರಣೆ;  ವಿಶಾಲ್ ನಂತರ ಪ್ರಣೀತಾ  ಮಾದರಿ ಹೆಜ್ಜೆ

ಸಾರಾಂಶ

* ಅಗಲಿದ ಪುನೀತ್ ರಾಜ್ ಕುಮಾರ್ ಗೆ ಎಲ್ಲಡೆಯಿಂದ ನಮನ * ವಿಶಾಲ್ ನಂತರ ಇದೀಗ ಸಾಮಾಜಿಕ ಕೆಲಸದ ಹೊಣೆ ಹೊತ್ತ ಪ್ರಣೀತಾ * ಬೆಂಗಳೂರಿನಲ್ಲಿ ಒಂದು ದಿನದ ಮೆಡಿಕಲ್ ಕ್ಯಾಂಪ್ * ನಟಿ ಪ್ರಣೀತಾ ಮಾದರಿ ಹೆಜ್ಜೆ  

ಹೈದರಾಬಾದ್​/ ಬೆಂಗಳೂರು (ನ. 02) ಪುನೀತ್ ಅಕಾಲಿಕ  ಅಗಲಿಕೆ ನೋವು ದೊಡ್ಡ ಶೂನ್ಯವೊಂದನ್ನು ಆವರಿಸಿದೆ.  ಪುನೀತ್ ಬನೆನೆದು ಮಾತನಾಡುತ್ತ  ತಮಿಳು ನಟ ವಿಶಾಲ್​ ಅವರು ಪುನೀತ್​ ನೋಡಿಕೊಳ್ಳುತ್ತಿದ್ದ 1800 ಮಕ್ಕಳ ಶಿಕ್ಷಣವನ್ನು ಒಂದು ವರ್ಷಗಳ ಕಾಲ ತಮ್ಮ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ. ವಿಶಾಲ್​ ನಿರ್ಧಾರವನ್ನು ಇಡೀ ಚಿತ್ರರಂಗ ಸ್ವಾಗತಿಸಿದೆ. ಇದೀಗ ಅಪ್ಪು ನೆನಪಲ್ಲಿ ನಟಿ ಪ್ರಣೀತಾ  ದೊಡ್ಡದೊಂದು ಕೆಲಸ ಮಾಡಲು ಮುಂದಾಗಿದ್ದಾರೆ.

ತಮ್ಮ ಪ್ರಣೀತಾ ಫೌಂಡೇಶನ್​ ಮೂಲಕ ಪುನೀತ್ ಹೆಸರಿನಲ್ಲಿ ಕೆಲಸ ಮಾಡಲು ಮುಂದಾಗಿದ್ದಾರೆ. ಅಪ್ಪು ಗೌರವ ಪೂರ್ವಕವಾಗಿ ಬೆಂಗಳೂರಿನಲ್ಲಿ ಒಂದು ದಿನ ಮೆಡಿಕಲ್ ಚೆಕ್ ಅಪ್ ​ ಕ್ಯಾಂಪ್​  ಆಯೋಜನೆ ಮಾಡುತ್ತೇನೆ ಎಂದು ನಟಿ ಪ್ರಣೀತಾ ತಿಳಿಸಿದ್ದಾರೆ.  ಈ ಮೆಡಿಕಲ್​ ಕ್ಯಾಂಪ್​ ನವೆಂಬರ್​ 3ರಂದು ಅಬೇಂಡ್ಕರ್​ ಭವನದಲ್ಲಿ ನಡೆಯಲಿದೆ.

ಪುನೀತ್ ರಾಜ್‍ಕುಮಾರ್ 26 ಅನಾಥಾಶ್ರಮಗಳು, 25 ವೃದ್ಧಾಶ್ರಮಗಳು, 1,800 ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸುತ್ತಿದ್ದರು. ಅಕ್ಟೋಬರ್ 29ರಂದು ಪುನೀತ್ ರಾಜ್​ಕುಮಾರ್ ಹೃದಯಾಘಾತದಿಂದ ನಮ್ಮನ್ನು ಅಗಲಿದ ನಂತರ ಸಾಮಾಜಿಕ  ಕಾರ್ಯಗಳ  ಹೊಣೆಯನ್ನು ಬೆರೆಯವರು ಹೊತ್ತುಕೊಳ್ಳುತ್ತಿದ್ದಾರೆ.

ಪುನೀತ್ ಇಲ್ಲದಿದ್ದರೆ ನಾವೇ ಇರುತ್ತಿರಲಿಲ್ಲ ಎಂದ ಕೆಲಸಗಾರರು

ಇನ್ನೂ ನಿಂತಿಲ್ಲ ಅಭಿಮಾನಿಗಳ ಸಾಲು;  ಸುಮಾರು 25  ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಅಂತಿಮ ದರ್ಶನ ಪಡೆದುಕೊಂಡಿದ್ದರು. ಸವಾಲುಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ ಕರ್ನಾಟಕ ಪೊಲೀಸ್ (Karnataka Police) ಇಲಾಖೆಗೆ ಧನ್ಯವಾದ ಹೇಳಲೇಬೇಕು. ಸಿಎಂ ಬಸವರಾಜ ಬೊಮ್ಮಾಯಿ, (Basavaraj Bommai) ಗೃಹ ಸಚಿವ ಆರಗ ಜ್ಞಾನೇಂದ್ರ, (Araga Jnanendra) ಡಿಜಿ/ಐಜಿಪಿ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಗಳನ್ನು  ಈ ಹಿಂದೆಯೂ ಅಭಿನಂದಿಸಿದ್ದರು.

ನಿರಂತರ 48 ಗಂಟೆ ಭದ್ರತೆ ನೀಡಿದ ಸಿಬ್ಬಂದಿ ಕಾರ್ಯಕ್ಕೆ  ಜನರಿಂದಲೂ ಮೆಚ್ಚುಗೆ ವ್ಯಕ್ಯವಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಿದ ಬೆಂಗಳೂರು ನಗರದ ಅಧಿಕಾರಿಗಳು ಹಾಗೂ ಸಿಬ್ಬಂದಿ, ಕೆಎಸ್ಆರ್ ಪಿ(KSRP), ಸಿಎಆರ್ ಸಿಬ್ಬಂದಿ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿತ್ತು. 

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದರು. ನಿಧನದ ಸುದ್ದಿ ತಿಳಿದ ನಂತರ ಅಭಿಮಾನಿಗಳು ಸಮರೋಪಾದಿಯಲ್ಲಿ ದರ್ಶನಕ್ಕೆ ಆಗಮಿಸಿದ್ದರು.  ದಕ್ಷಿಣ ಭಾರತದ ಚಿತ್ರೋದ್ಯಮದ ಎಲ್ಲ ಮಂದಿ ಕಂಬನಿ  ಮಿಡಿದಿದ್ದರು.

ಸಾವಿನಲ್ಲೂ ಸಾರ್ಥಕತೆ; ನಟ ಪುನೀತ್ ರಾಜ್‌ಕುಮಾರ್ ಎರಡೂ ಕಣ್ಣುಗಳನ್ನೂ ನಾಲ್ವರಿಗೆ ಅಳವಡಿಸಲಾಗಿದೆ ಎಂದು ನಾರಾಯಣ ನೇತ್ರಾಲಯ ವೈದ್ಯ ಡಾ.ಭುಜಂಗ ಶೆಟ್ಟಿಯವರು ವಿವರಿಸಿದ್ದಾರೆ. ಇದೇ ಮೊದಲ ಬಾರಿ ಹೊಸ ಟೆಕ್ನಾಲಜಿ ಬಳಸಿ ಒಂದು ಕಣ್ಣನ್ನು ಎರಡು ಭಾಗ ಮಾಡಿ ಹಾಕಲಾಗಿದೆ. ಇಡೀ ರಾಜ್ ಕುಮಾರ್ ಕುಟುಂಬಕ್ಕೆ ವೈದ್ಯರು ಧನ್ಯವಾದಗಳನ್ನು ತಿಳಿಸಿದ್ದರು.

ಕಿಡಿಗೇಡಿ ಬಂಧನ;  ಪುನೀತ್ ರಾಜ್ ಕುಮಾರ್ ಸಾವಿನ ಸಂದರ್ಭ ಯಾವುದೇ ಅಹಿತಕರ ಘಟನೆಗೆ ಆಸ್ಪದ ಸಿಗಬಾರದು  ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ಮದ್ಯ ನಿಷೇಧ ಮಾಡಲಾಗಿತ್ತು. ಆದರೆ ಕಿಡಿಗೇಡಿಗಳು ನೋವಿನ ಸಂದರ್ಭದಲ್ಲಿಯೂ ನೀಚ ಮನಸ್ಥಿತಿ  ಪ್ರದರ್ಶನ ಮಾಡಿದ್ದರು.

ಸೋಶಿಯಲ್ ಮೀಡಿಯಾ ಕೈಗೆ ಸಿಕ್ಕಿದೆ ಎಂದು ಮನಸಿಗೆ ಬಂದಂತೆ ಬರೆದು ಪೋಸ್ಟ್ ಮಾಡಿದರೆ ಶಿಕ್ಷೆ  ಅನುಭವಿಸಲೇಬೇಕಾಗುತ್ತದೆ.  ವ್ಯಕ್ತಿ ಗೌರವಕ್ಕೆ ಧಕ್ಕೆ ತರುವಂತಹ ನೀಚರ ವಿರುದ್ಧ ಕ್ರಮ ಅನಿವಾರ್ಯ. 

ಮದ್ಯದ ಬಾಟಲಿಯನ್ನು ಖರೀದಿ ಮಾಡಿದ್ದ ಕಿರಾತಕ ಅವಹೇಳನಕಾರಿಯಾಗಿ ಬರೆದುಕೊಂಡಿದ್ದ. ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅವರನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಿ.. ಹಾಗೆ ಹೀಗೆ ಎಂದು ಬರೆದಿದ್ದ.

ಇದನ್ನು ಕಂಡ ಅಭಿಮಾನಿಗಳು ಕೆಂಡವಾಗಿದ್ದರು. ಸುದೀಪ್ ಪುತ್ರಿ ಸಹ ಆಕ್ರೋಶ ಹೊರಹಾಕಿದ್ದರು. ಆರೋಪಿಯನ್ನು ಕೂಡಲೇ ಬಂಧಿಸಿ ಎಂದು ಪೊಲೀಸರಿಗೆ ಒತ್ತಾಯ ಬಂದಿತ್ತು. ಜನರ ಒತ್ತಾಯಕ್ಕೆ ಮಣಿದ ಬೆಂಗಳೂರು ಪೊಲೀಸರು ಆರೋಪಿಯನ್ನು  ಬಂಧಿಸಿದ್ದಾರೆ. ಸ್ವತಃ ಕಮಿಷನರ್ ಕಮಲ್ ಪಂತ್ ಬಂಧನದ ವಿಚಾರ ತಿಳಸಿದ್ದರು.  ಬೆಂಗಳೂರು ಪೊಲೀಸರಿಗೂ ಧನ್ಯವಾದ ಹೇಳಲಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!