
ತಮಿಳು ಚಿತ್ರರಂಗದ ಅದ್ಭುತ ನಟಿ, ಫಿಟ್ನೆಸ್ ಫ್ರೀಕ್ ನೀತು ಚಂದ್ರ ಇದೀಗ ಜಪಾನೀಸ್ ಕತ್ತಿ ಫೈಟ್ ಕಲಿಯುತ್ತಿದ್ದಾರೆ. ಹಾಲಿವುಡ್ ರೇಂಜ್‌ಗೆ ಫೋಟೋ ಕ್ಲಿಕಿಸಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಇಂಥದ್ದೊಂದು ವಿದ್ಯೆ ಕಲಿಯುವುದಕ್ಕೆ ಕಾರಣವನ್ನು ಬೇಸರದ ಸಂಗತಿಯೊಂದಿಗೆ ಹಂಚಿಕೊಂಡಿದ್ದಾರೆ.
ನೀತು ಚಂದ್ರ ಕತ್ತಿ ಫೈಟ್ ಕಲಿಯುತ್ತಿರುವ ವಿಚಾರದ ಬಗ್ಗೆ ಹೆಚ್ಚಾಗಿ ಎಲ್ಲಿಯೂ ಮಾತನಾಡಿಲ್ಲ ಆದರೆ ಅವರ ಮಾಸ್ಟರ್ ಟೋನಿ ಅವರು ನಿಧನದ ಬಳಿ ಫೋಟೋ ಹಂಚಿಕೊಂಡಿದ್ದಾರೆ. 'ನನ್ನ ಜಪಾನೀಸ್ ಕತ್ತಿ ಫೈಟ್ ಕ್ಲಾಸ್ ಆರಂಭವಾಗಿದೆ. ನನ್ನ ಮಾಸ್ಟರ್ ಟೋನಿ, ನನಗೆ ಸಿಕ್ಕಿರುವ ಬೆಸ್ಟ್ ಬ್ರದರ್. ಜೀವನ ಮುಂದೆ ಸಾಗಿಸುತ್ತಿರಬೇಕು. ಆದರೆ ಒಂದು ಹಂತದಲ್ಲಿ ನಿಲ್ಲಿಸಬೇಕು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ,' ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಟೋನಿ ಅವರ ಜೊತೆ ಶುರು ಮಾಡಿದ ಮೊದಲ ಕ್ಲಾಸ್ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. 'ನನ್ನ ಆ್ಯಕ್ಟಿಂಗ್ ಆ್ಯಕ್ಷನ್ ಕ್ಲಾಸ್‌ನ ಫಸ್ಟ್ ಡೇ. ದಿನವೂ ಹೊಸ ವಿಚಾರಗಳನ್ನು ಕಲಿಯುತ್ತಿದ್ದೇನೆ,' ಎಂದಿದ್ದಾರೆ.
2017ರಲ್ಲಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ನಟಿ ನೀತು ಚಂದ್ರ ಬ್ರಹ್ಮ ಡಾಟ್ ಕಾಮ್ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಅವರ ಹಾಲಿವುಡ್ ಸಿನಿಮಾ Never back down revolt ಬಿಡುಗಡೆಗೆ ಸಜ್ಜಾಗುತ್ತಿದೆ. ಜಯಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನೀತು ಅವರು Halloween ದಿನದಂದು ನಮ್ಮ ಚಿತ್ರದ ಸಣ್ಣ ಪುಟ್ಟ ತುಣುಕುಗಳನ್ನು ಹಂಚಿಕೊಂಡಿದ್ದಾರೆ. ನವೆಂಬರ್ 16ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ.
'Will Smith ಅವರ ಬ್ಯಾಡ್ ಬಾಯ್ಸ್ ಸ್ಪೆಷಲ್ ಸ್ಕ್ರೀನಿಂಗ್ ಇತ್ತು. ಆಗ ನಾನು ಹಾಲಿವುಡ್ ಸಿನಿಮಾ ನಿರ್ಮಾಪಕರನ್ನು ಭೇಟಿ ಮಾಡಿದೆ. ಅವರು ನನ್ನ ಆಸಕ್ತಿಗಳ ಬಗ್ಗೆ ಮಾತನಾಡಿದರು. ಆನಂತರ ನಾಣು ಹೇಳಿದೆ, ಅವರು ಡ್ಯಾನ್ ಬ್ಲಾಕ್ ಬೆಲ್ಟ್ ಪಡೆದಿರುವ ನಾಲ್ಕವೇ ವ್ಯಕ್ತಿ ಎಂದು. ತಕ್ಷಣವೇ ಅವರು ಹೇಳಿದರೆ, ಅವರ ತಲೆಯಲ್ಲಿ ಒಂದು ಸ್ಕ್ರಿಪ್ಟ್ ಇತ್ತು. ಅದಕ್ಕೆ ನಾನು ಸೂಕ್ತ ಎಂದರು. ಕೆಲವು ದಿನಗಳ ನಂತರ ನಿರ್ಮಾಪಕರು ಕರೆ ಮಾಡಿ, ನನಗೆ ಈ ಆಫರ್ ನೀಡಿದ್ದರು. ನಾನು ಕಲಿತಿರುವ ಕರಾಟೆ ಮತ್ತು ಕತ್ತಿ ಫೈಟ್‌ಗೆ ತಕ್ಕಂತೆ ಪಾತ್ರ ಬರೆದಿರುವುದಾಗಿ ಹೇಳಿದ್ದರು. ಬಾಲ್ಯದಿಂದಲ್ಲೂ ಹಾಲಿವುಡ್ ನನ್ನ ಕನಸಾಗಿತ್ತು. ಈ ಮೂಲಕ ಇದೀಗ ವೃತ್ತಿಯಾಗುತ್ತಿದೆ,' ಎಂದು ನೀತಾ ಚಂದ್ರ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.