
ಟಾಲಿವುಡ್ ಬ್ಯೂಟಿ ಸಮಂತಾ ಸಿನಿಮಾದಿಂದ ಕೊಂಚ ದೂರ ಉಳಿದರೂ, ಸಮಾಜ ಸೇವೆಯಲ್ಲಿ ಮೊದಲಿರುತ್ತಾರೆ. ಅದರಲ್ಲೂ ತಮ್ಮದೇ ಎನ್‌ಜಿಓ Prathyushaದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಸಮಂತಾ ಕಾರ್ಯಕ್ರಮ ನಡೆಸೋದಕ್ಕೆ ಪಡೆಯೋ ಸಂಭಾವನೆ ಎಷ್ಟು ಗೊತ್ತಾ..?
ಇದೀಗ ಮಹಿಳಾ ಕವಿತಾ ಹಲವು ವರ್ಷಗಳಿಂದ ಆಟೋ ಓಡಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಆದರೆ ಆಟೋದಿಂದನೇ ಜೀವನ ನಡೆಸುವುದು ಕಷ್ಟ ಆಗಿರುವುದರಿಂದ ಸಮಂತಾ ಎನ್‌ಜಿಓ ಸಹಾಯ ಮಾಡಲು ಮುಂದಾಗಿದ್ದಾರೆ. 12.5 ಲಕ್ಷ ರೂ. ಬೆಲೆ ಬಾಳುವ ಕಾರು ನೀಡಿದ್ದಾರೆ.
ಕವಿತಾ ತಮ್ಮ ಏಳು ಸಹೋದರಿಯರು ಹಾಗೂ ಕುಟುಂಬವನ್ನು ನೋಡಿಕೊಳ್ಳಬೇಕಾಗಿದೆ. ಮನೆಯಲ್ಲಿ ದಿನೇ ದಿನೆ ಕೌಟುಂಬಿಕ ದೌರ್ಜನ್ಯ ಹೆಚ್ಚಾಗುತ್ತಿರುವ ಕಾರಣ ರಾತ್ರಿ ಹಗಲೂ ಆಟೋ ಓಡಿಸುವುದು ಅನಿವಾರ್ಯವಾಗಿದೆ. ಸಮಂತಾ ಕಾರು ಗಿಫ್ಟ್ ಮಾಡಿರುವ ಕಾರಣ ಕ್ಯಾಬ್ ಸರ್ವಿಸ್ ನೀಡಿದರೆ ತಿಂಗಳು ತಿಂಗಳು ಇಂತಿಷ್ಟು ಎಂದು ಹಣ ಸಹಾಯವಾಗುತ್ತದೆ, ಎಂದು ಕವಿತಾ ಹೇಳಿದ್ದಾರೆ.
ಸಮಂತಾಗೆ 15 ಮಿಲಿಯನ್ ಫಾಲೋವರ್ಸ್: ನಟಿ ಥ್ಯಾಂಕ್ಸ್ ಹೇಳಿದ್ದು ಹೀಗೆ
ವಿಜಯ್ ಸೇತುಪತಿ ಹಾಗೂ ನಯನತಾರಾ ಜೊತೆ ಅಭಿನಯಿಸುತ್ತಿರುವ ಸಮಂತಾ 'ಶಕುಂತಲಾ' ಸಿನಿಮಾ ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭವಾಗಲಿದೆ. ಕೊರೋನಾ ಸೊಂಕಿನಿಂದ ಚಿತ್ರರಂಗದ ಸದ್ಯದ ಪರಿಸ್ಥಿತಿ ಬಗ್ಗೆ ನಿರ್ಧಾರ ಮಾಡಲಾಗದೆ ಚಿತ್ರರಂಗ ಕಂಗಾಲು ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.