ಪೋಷಕರ ಲವ್ ರಹಸ್ಯ ಬಿಚ್ಚಿಟ್ಟ ಕಂಗನಾ; ಮಕ್ಕಳಿಗೆ ಸುಳ್ಳು ಹೇಳಿದ್ರಾ?

Suvarna News   | Asianet News
Published : Apr 20, 2021, 12:04 PM IST
ಪೋಷಕರ ಲವ್ ರಹಸ್ಯ ಬಿಚ್ಚಿಟ್ಟ ಕಂಗನಾ; ಮಕ್ಕಳಿಗೆ ಸುಳ್ಳು ಹೇಳಿದ್ರಾ?

ಸಾರಾಂಶ

ನಟಿ ಕಂಗನಾ ಪೋಷಕರಿಗೆ ಮದುವೆ ವಾರ್ಷಿಕೋತ್ಸವ ಶುಭಾಶಯಗಳನ್ನು ತಿಳಿಸಿ, ಸೋಷಿಯಲ್ ಮೀಡಿಯಾದಲ್ಲಿ ಅವರಿಬ್ಬರ ಲವ್‌ ಸ್ಟೋರಿ ಹಂಚಿಕೊಂಡಿದ್ದಾರೆ. 

ಬಾಲಿವುಡ್ ಬೋಲ್ಡ್ ಬೆಡಗಿ ಕಂಗನಾ ರಣಾವತ್ ಎಷ್ಟೇ ದೊಡ್ಡ ವಿಚಾರದ ಬಗ್ಗೆ ಮಾತನಾಡಬೇಕೆಂದರೂ,  ಟ್ಟೀಟ್ ಮಾಡುತ್ತಾರೆ. ತಮ್ಮ ಫಾಲೋವರ್ಸ್‌ ಜೊತೆ ಹಂಚಿಕೊಂಡು ಚರ್ಚೆ ಮಾಡುತ್ತಾರೆ. ರಾಜಕೀಯ ಟೀಕೆಗಳು, ಕೋಲ್ಡ್‌ ವಾರ್ ನೋಡಿ ನೋಡಿ ಸಾಕಾಗಿದ್ದ ನೆಟ್ಟಿಗರಿಗೆ ಕಂಗನಾ ಅಪ್ಪ ಅಮ್ಮನ ಲವ್‌ ಸ್ಟೋರಿ ಕೇಳಿ, ಥ್ರಿಲ್ ಆಗಿದೆ.  

ನಾನು ಬಾಲಿವುಡ್ ಉಳಿಸಲು ಬರುತ್ತಿದ್ದೇನೆ ಎಂದ ಕ್ವೀನ್ ಕಂಗನಾ ...

ಏಪ್ರಿಲ್ 20 ಕಂಗನಾ ಪೋಷಕರ ವಿವಾಹ ವಾರ್ಷಿಕೋತ್ಸವ. ರಂಗೋಲಿ ಮತ್ತು ಕಂಗನಾ ಅಪ್ಪ ಅಮ್ಮನ ಮದುವೆ ಬಗ್ಗೆ ಪ್ರಶ್ನೆ ಮಾಡಿದಾಗ, ಇದು ಅರೇಂಜ್ಡ್ ಮ್ಯಾರೇಜ್‌ ಎಂದು ಹೇಳುತ್ತಿದ್ದರಂತೆ. ತಾವು ಪ್ರೀತಿಸಿದ ವಿಚಾರ ಮಕ್ಕಳ ಜೊತೆ ಹಂಚಿಕೊಂಡಿರಲಿಲ್ಲ. ಇವರಿಬ್ಬರ ಪ್ರೀತಿ ಹಾಗೂ ಮದುವೆ ವಿಚಾರವನ್ನು ಕಂಗನಾ ಬಳಿ ಅಜ್ಜಿ  ಹಂಚಿಕೊಂಡಿದ್ದಾರೆ. 

ಕಾಲೇಜು ದಿನಗಳಲ್ಲಿ ಕಂಗನಾ ತಾಯಿ ಬಸ್‌ ಬಳಸುತ್ತಿದ್ದರಂತೆ. ಕಂಗನಾ ಅಮ್ಮನನ್ನು ಪ್ರೀತಿಸುತ್ತಿರುವ ವಿಚಾರ ತಿಳಿಸಬೇಕೆಂದು, ದಿನಾಲೂ ಅದೇ ಬಸ್‌‌ನಲ್ಲಿ ಹೋಗುತ್ತಿದ್ದರಂತೆ ಕಂಗನಾ ಅಪ್ಪ. ಬಸ್‌ ಸ್ಟ್ಯಾಂಡ್‌ನಲ್ಲಿ ನಿಂತಿದ್ದ ಕಂಗನಾ ತಾಯಿಯನ್ನು ತಪ್ಪದೇ ನೋಡಲು ಹೋಗುತ್ತಿದ್ದರಂತೆ. ಆದರೆ, ತಮ್ಮ ಪ್ರೀತಿ ವಿಚಾರವನ್ನು ಹೇಳಿಕೊಂಡಾಗ, ಕಂಗನಾ ತಂದೆ ರಿಜೆಕ್ಟ್ ಮಾಡಿದ್ದರಂತೆ. ಆಗ ಕಂಗನಾ ತಂದೆಗೆ ಒಳ್ಳೆಯ ಹೆಸರು ಇರಲಿಲ್ಲ. ಅಷ್ಟರಲ್ಲಿ ಕಂಗನಾ ಅಮ್ಮನಿಗೆ ಸರಕಾರಿ ಕೆಲಸವಿರುವ ವ್ಯಕ್ತಿಯ ಜೊತೆ ಮದುವೆ ನಿಶ್ಚಯವನ್ನೂ ಮಾಡಲಾಗಿತ್ತು.  ಎಲ್ಲಾ ಕಷ್ಟಗಳನ್ನೂ ಎದುರಿಸಿ ಅಮ್ಮ ಮನೆಯವರನ್ನು ಒಪ್ಪಿಸಿ ಮದುವೆಯಾದರು ಎಂದು ಕಂಗನಾ ಟ್ಟೀಟ್ ಮಾಡಿದ್ದಾರೆ.

ಕಂಗನಾ ರಣಾವತ್‌ ಬರ್ತ್‌ಡೇ ಪಾರ್ಟಿ ಫೋಟೋಗಳು ವೈರಲ್‌! 

'ಆಗಿನ ಕಾಲದಲ್ಲಿಯೇ ಪೋಷಕರನ್ನು ಎದುರು ಹಾಕಿಕೊಂಡು ಪ್ರೀತಿಯನ್ನು ಒಪ್ಪಿಸಿದ್ದಾರೆ. ಎಂದರೆ ಮೆಚ್ಚಲೇ ಬೇಕು. ನಿಮಗೆ ಇಷ್ಟೊಂದು ಧೈರ್ಯ ಹೇಗೆ ಬಂತು ಎಂದು ಈಗ ಗೊತ್ತಾಗಿದೆ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇನ್ನು ತಲೈವಾ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ನಟಿ ಕಂಗನಾ ಸದ್ಯ ಮುಂದಿನ ಪ್ರಾಜೆಕ್ಟ್‌ಗೆ ಚಿತ್ರಕಥೆ ಕೇಳುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!