'ಸಲಾರ್' ಚಿತ್ರದಲ್ಲಿ ಶ್ರುತಿ ಹಾಸನ್‌ ಪಾತ್ರ ರಿವೀಲ್; ಈಗಲೂ ಉಗ್ರಂ ಸಿನಿಮಾ ಅಂತೀರಾ?

Suvarna News   | Asianet News
Published : Apr 20, 2021, 12:29 PM IST
'ಸಲಾರ್' ಚಿತ್ರದಲ್ಲಿ ಶ್ರುತಿ ಹಾಸನ್‌ ಪಾತ್ರ ರಿವೀಲ್; ಈಗಲೂ ಉಗ್ರಂ ಸಿನಿಮಾ ಅಂತೀರಾ?

ಸಾರಾಂಶ

ಪ್ರಶಾಂತ್ ನೀಲ್ ಚಿತ್ರದಲ್ಲಿ ಶ್ರುತಿ ಹಾಸನ್‌ ಪಾತ್ರವೇನೆಂಬುದನ್ನು ರಿವೀಲ್ ಮಾಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಉಗ್ರಂ ಮತ್ತು ಸಲಾರ್ ಚಿತ್ರದ ಬಗ್ಗೆ ಚರ್ಚೆ ಹೆಚ್ಚಾಗಿದೆ.  

ಟಾಲಿವುಡ್ ಸ್ಟಾರ್ ಪ್ರಭಾಸ್ ಹಾಗೂ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬಿನೇಷನ್‌ಲ್ಲಿ ಮೂಡಿ ಬರುತ್ತಿರುವ 'ಸಲಾರ್' ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.  ಕನ್ನಡ ಚಿತ್ರರಂಗದ ಸೂಪರ್ ಹಿಟ್ ಸಿನಿಮಾ ಉಗ್ರಂನ ರಿಮೇಕ್‌ ಸಲಾರ್ ಎನ್ನಲಾಗುತ್ತಿದೆ. ಈ ವಿಚಾರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಈಗಲೂ ಚರ್ಚೆಯಾಗುತ್ತಿದೆ. ಬಹುಶಃ ಸಿನಿಮಾ ರಿಲೀಸ್ ಆದ ನಂತರವೂ ಈ ಎರಡು ಚಿತ್ರಗಳ ಬಗ್ಗೆ ನಡೆಯುತ್ತಿರುವ ಚರ್ಚೆ ನಿಲ್ಲುವುದಿಲ್ಲ. 

ತಂದೆ ಜೊತೆ ಪಾಲಿಟಿಕ್ಸ್‌ಗೆ ಎಂಟ್ರಿ ಕೊಡ್ತಾರಾ ನಟಿ ಶ್ರುತಿ ಹಾಸನ್? 

ಇದೀಗ ಪ್ರಭಾಸ್‌ಗೆ ಜೊಡಿಯಾಗಿರುವ ಶ್ರುತಿ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರುತಿ ಸಾಮಾನ್ಯವಾಗಿ ಇದುವರೆಗೆ ಬೋಲ್ಡ್‌ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ಸೂಕ್ತ ವ್ಯಕ್ತಿಯನ್ನು ಸಲಾರ್ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸಿನಿ ಪ್ರೇಮಿಗಳು ಮಾತನಾಡುತ್ತಿದ್ದಾರೆ. 

ಇನ್ನು ಉಗ್ರಂ ಚಿತ್ರದಲ್ಲಿ ನಟಿ ಹರಿಪ್ರಿಯಾ ದೊಡ್ಡ ಸಿರಿವಂತ ಪುತ್ರಿ ವಿದೇಶದಿಂದ ಭಾರತಕ್ಕೆ ವಾಪಸ್ ಆಗಿರುವ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಹಾಗೆ ನೋಡಿದರೆ ಪ್ರಶಾಂತ್ ಈ ಪಾತ್ರದಲ್ಲಿ ಬದಲಾವಣೆ ತರುತ್ತಿದ್ದಾರೆ ಎನ್ನಬಹುದು. ಆದರೆ ಈ ವಿಚಾರದ ಬಗ್ಗೆ ಶ್ರುತಿ ಆಗಲಿ ಅಥವಾ ಚಿತ್ರತಂಡದಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. 

35ನೇ ವಯಸ್ಸಿಗೆ ಬಾಯ್‌ಫ್ರೆಂಡ್‌ ಯಾರೆಂದು ರಿವೀಲ್ ಮಾಡಿದ ಶ್ರುತಿ ಹಾಸನ್!

ಸಲಾರ್ ಸಿನಿಮಾ ಬಹುತೇಕ ಚಿತ್ರೀಕರಣ ಮುಗಿಸಿದೆ. ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ  ರವಿ ಬಸ್ರೂರ್‌ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿರುವ ರವಿ ಬಸ್ರೂರು ಸ್ಟುಡಿಯೋದಲ್ಲಿ ಸಂಗೀತ ಕೆಲಸಗಳು ನಡೆಯುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?