
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಲಯಾಳ, ತಮಿಳು, ತೆಲಗು ಚಿತ್ರಗಳಲ್ಲಿ ಸಕತ್ ಮಿಂಚಿರುವ ನಟಿ, ಬಾಲಿವುಡ್ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಕೀರ್ತಿ ನಟಿಸಿದ ಸಾಲು ಸಾಲು ಸಿನಿಮಾಗಳು ಸೋಲು ಕಂಡಿದ್ದವು. ದೊಡ್ಡ ಸಕ್ಸಸ್‌ಗೆ ಕಾಯುತ್ತಿದ್ದ ಕೀರ್ತಿಗೆ ಮಾಮನ್ನನ್ ಸಿನಿಮಾ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಿದ್ದರು. ತಮಿಳಿನ ಮಾಮನ್ನನ್ ಸಿನಿಮಾ ಸಕ್ಸಸ್ ಆಗಿದ್ದು ಕೀರ್ತಿ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಹಿಂದಿ ಸಿನಿಮಾ ಮಾಡಬೇಕು ಎನ್ನುವುದು ಕೀರ್ತಿ ಸುರೇಶ್ ಅವರ ಆಸೆಯಾಗಿತ್ತು.
ಉತ್ತಮ ಪಾತ್ರಕ್ಕಾಗಿ ಕೀರ್ತಿ ಎದುರು ನೋಡುತ್ತಿದ್ದರು. ಅದರಂತೆ ಬಾಲಿವುಡ್ನಲ್ಲಿಯೂ ಅವಕಾಶ ಸಿಕ್ಕಿದೆ. ಇನ್ನು ಇವರ ಸಿನಿ ಪಯಣದ ಕುರಿತು ಹೇಳುವುದಾದರೆ, ಕೀರ್ತಿ ಸುರೇಶ್ ಅವರು ಚಿರಂಜೀವಿಯ ಭೋಲಾ ಶಂಕರ್, ನಾನಿಯ ದಸರಾ ಮತ್ತು ತಮಿಳು ಚಿತ್ರ ಮಾಮನ್ನನ್‌ನಲ್ಲಿನ ಪಾತ್ರಗಳೊಂದಿಗೆ ಬಹುಮುಖತೆಯನ್ನು ಪ್ರದರ್ಶಿಸಿದ್ದಾರೆ. ಪ್ರಸ್ತುತ, ಅವರು ಸೈರನ್, ರಘು ಥಾಥಾ, ರಿವಾಲ್ವರ್ ರೀಟಾ ಮತ್ತು ಕನ್ನಿವೇದಿಯಂತಹ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ನೇನು ಸೈಲಜಾ ಚಿತ್ರದ ಮೂಲಕ ತೆಲುಗಿನಲ್ಲಿ ಖ್ಯಾತಿಯನ್ನು ಗಳಿಸಿದ ಕೀರ್ತಿ ಸುರೇಶ್ ನಿರಂತರವಾಗಿ ಉದ್ಯಮದಲ್ಲಿ ಪ್ರಮುಖ ತಾರೆಯಾಗಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಡಿವೋರ್ಸ್ಗೆ ಕಾರಣ ಆ 3ನೇ ವ್ಯಕ್ತಿಯೇ... ಅವ್ರು... ತಿಂಗಳ ಬಳಿಕ ಮನದಾಳದ ಮಾತು ತೆರೆದಿಟ್ಟ ಚಂದನ್ ಶೆಟ್ಟಿ
ಇಂತಿಪ್ಪ ಕೀರ್ತಿ ಸುರೇಶ್, ಎಲ್ಲರಿಗೂ ಇಷ್ಟವಾಗಲು ಇನ್ನೊಂದು ಕಾರಣವೂ ಇದೆ. ಅದೇನೆಂದರೆ, ಕಿಸ್ ದೃಶ್ಯಗಳಲ್ಲಿ ನಟಿಸಲ್ಲ, ಇಂಟಿಮೇಟ್ ಸೀನ್ ಮಾಡಲ್ಲ ಎಂದಿದ್ದರು ನಟಿ. ಹಿಂದೊಮ್ಮೆ ನಟ ನಿತಿನ್ ಜೊತೆಗೆ ನಟಿಸಲು ಕೀರ್ತಿ ಸುರೇಶ್ಗೆ ಒಳ್ಳೆಯ ಆಫರ್ ಬಂದಿತ್ತು. ಆದರೆ ನಟಿ ಇದೇ ಕಾರಣಕ್ಕೆ ರಿಜೆಕ್ಟ್ ಮಾಡಿದ್ದರು. ನಾನು ಎಂದೂ ಇಂಥ ಗ್ಲಾಮರ್ ಮೊರೆ ಹೋಗಿಲ್ಲ. ಎಕ್ಸ್ಪೋಸ್ ನನಗೆ ಇಷ್ಟವಿಲ್ಲ ಎಂದೆಲ್ಲಾ ಹೇಳಿದ್ದರು. ಅದರ ಬಳಿಕವೂ ಇದೇ ಕಾರಣಕ್ಕೆ ಕೆಲ ಚಿತ್ರಗಳನ್ನು ನಟಿ ಒಪ್ಪಿಕೊಂಡಿರಲಿಲ್ಲ. ಯಾವುದೇ ಕಾರಣಕ್ಕೂ ನಾನು ಲಿಪ್ಲಾಕ್ ಮಾಡೋಕೆ ರೆಡಿ ಇಲ್ಲ. ಅಂಥ ದೃಶ್ಯ ಇದ್ದರೆ ಸಿನಿಮಾಕ್ಕೆ ನಾನು ಒಪ್ಪಲ್ಲ ಎಂದೇ ಹೇಳುತ್ತಲೇ ಬಂದಿದ್ದಾರೆ. ಇದೇ ಕಾರಣಕ್ಕೆ ಅಂಧಧುನ್‌ನ ತೆಲುಗು ರಿಮೇಕ್‌ನಲ್ಲಿ ನಿತಿನ್ ಜೊತೆ ಹೀರೋಯಿನ್ ಆಗಿ ನಟಿಸುವ ಪ್ರಸ್ತಾಪವನ್ನು ತಿರಸ್ಕರಿಸಿದ್ದರು.
ಆದರೆ ಈಗ ನಟಿಗೆ ಅದೇನಾಯ್ತೋ ಗೊತ್ತಿಲ್ಲ. ಸಂಪೂರ್ಣ ಬೆತ್ತಲಾಗಲು ನಟಿಯರು ಸಾಲಿನಲ್ಲಿ ನಿಂತಿರುವಾಗ ಲಿಪ್ಲಾಕ್ಮಾಡಲು ತಾವು ಹಿಂಜರಿಯುವ ಕಾರಣಕ್ಕೆ ಸಿನಿಮಾದಲ್ಲಿ ಅವಕಾಶ ಸಿಗುತ್ತಿಲ್ಲ ಎಂದುಕೊಂಡರೋ ಗೊತ್ತಿಲ್ಲ. ಈಗ ನಟಿ ಬದಲಾಗಿದ್ದಾರೆ! ಈಗ ಬಾಲಿವುಡ್‌ನಲ್ಲಿ ಅಟ್ಲಿ ನಿರ್ಮಿಸುತ್ತಿರುವ ತೇರಿ ರಿಮೇಕ್ ಬೇಬಿ ಜಾನ್ನಲ್ಲಿ ನಟ ವರುಣ್ ಧವನ್ ಜೊತೆ ನಟಿಗೆ ಆಫರ್ ಸಿಕ್ಕಿದೆ. ಆದರೆ ಇದರಲ್ಲಿ ಧಾರಾಳವಾಗಿ ಲಿಪ್ಲಾಕ್ ದೃಶ್ಯಗಳು ಇವೆ ರನ್ನಲಾಗುತ್ತಿದೆ. ಇದಕ್ಕೆ ನಟಿ ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ನಟಿಯನ್ನು ಹಾಡಿ ಹೊಗಳಿರುವ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಅಂಬಾನಿ ಮದ್ವೆಯಲ್ಲಿ ಸೈಫ್ ಪುತ್ರನಿಂದ ನಾಚಿಕೆಗೇಡಿನ ವರ್ತನೆ! ದುಂಬಾಲು ಬಿದ್ದರೂ ಸಿಗ್ಲಿಲ್ಲ ಗಾಯಕನ ಜಾಕೆಟ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.