ನಾನು ಪುರುಷ ಎನ್ನೋದನ್ನೂ ನೋಡದೆ ಆತ ಮಂಚಕ್ಕೆ ಕರೆದ... ಆಮೇಲೆ... ಕಹಿ ಅನುಭವ ಬಿಚ್ಚಿಟ್ಟ ಅನಿಮಲ್​ ನಟ!

Published : Jul 16, 2024, 09:02 PM IST
ನಾನು ಪುರುಷ ಎನ್ನೋದನ್ನೂ ನೋಡದೆ ಆತ ಮಂಚಕ್ಕೆ ಕರೆದ... ಆಮೇಲೆ... ಕಹಿ ಅನುಭವ ಬಿಚ್ಚಿಟ್ಟ ಅನಿಮಲ್​ ನಟ!

ಸಾರಾಂಶ

ನಾನು ಪುರುಷ ಎನ್ನೋದನ್ನೂ ನೋಡದೆ ಆತ ಮಂಚಕ್ಕೆ ಕರೆದ ಎನ್ನುತ್ತಲೇ ಕಾಸ್ಟಿಂಗ್​ ಕೌಚ್​ ಅನುಭವ ಬಿಚ್ಚಿಟ್ಟ ಅನಿಮಲ್​ ನಟ ಸಿದ್ಧಾಂತ್ ಕಾರ್ನಿಕ್​!  

ಲೈಂಗಿಕ ಕಿರುಕುಳ ಎಂದಾಕ್ಷಣ ಒಂದು ಕ್ಷಣ ಎಲ್ಲರ ಮನದಲ್ಲಿಯೂ ಇದು ಹೆಣ್ಣುಮಕ್ಕಳ ಮೇಲೆ ನಡೆಯುವುದು ಎಂದೇ ಎನಿಸುತ್ತದೆ. ಆದರೆ ಅಸಲಿಗೆ ಅದೆಷ್ಟೋ ಪುರುಷರೂ ಈ ಕಿರುಕುಳಕ್ಕೆ ಒಳಗಾಗಿದ್ದು ಇದೆ. ಆದರೆ ವಿಚಿತ್ರ ಎಂದರೆ, ಈ ಪೈಕಿ ಬಹುತೇಕ ಪುರುಷರು ಅಥವಾ ಗಂಡು ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದು ಪುರುಷರಿಂದಲೇ ಎನ್ನುವುದು! ಈ ಪೈಕಿ ಕೆಲವರು ತಮಗಾಗಿರುವ ಈ ಭಯಾನಕ ಘಟನೆಗಳನ್ನು ಹೇಳಿಕೊಂಡರೆ ಎಷ್ಟೋ ಮಂದಿ ಸುಮ್ಮನಿದ್ದುಬಿಡುತ್ತಾರೆ. ಇನ್ನು ಹೆಣ್ಣುಮಕ್ಕಳಂತೂ ನಾಚಿಕೆ, ಮರ್ಯಾದೆಗಳಿಗೆ ಅಂಜಿ ಈ ವಿಷಯವನ್ನು ಬಾಯಿ ಬಿಡುವುದೇ ಇಲ್ಲ. ಅದರಲ್ಲಿಯೂ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರಿ ಸದ್ದು ಮಾಡುತ್ತಿರುವ ಕಾಸ್ಟಿಂಗ್​ ಕೌಚ್​ ಕೇವಲ ಯುವತಿಯರಿಗೆ ಮಾತ್ರವಲ್ಲ, ಯುವಕರನ್ನೂ ಬಿಟ್ಟಿಲ್ಲ. ಸಿನಿಮಾದಲ್ಲಿ ಛಾನ್ಸ್​ ಕೊಡಲು ನಿರ್ದೇಶಕರು, ನಿರ್ಮಾಪಕರು ಇಲ್ಲವೇ ಸಿನಿಮಾಗೆ ಸೇರಿದ ಇನ್ನಾರೋ ಪುರುಷರು, ಪುರುಷರನ್ನೇ ಮಂಚಕ್ಕೆ ಕರೆದಿರುವ  ಘಟನೆಗಳೂ ನಡೆದಿವೆ. 

ಈ ಹಿಂದೆ  ಖ್ಯಾತ ಕಿರುತೆರೆ ಕಲಾವಿದ ಸನಂದ್ ವರ್ಮಾ ತಮಗಾಗಿದ್ದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದರು.  ಇದೀಗ ಅನಿಮಲ್​ ಚಿತ್ರದ ನಟಿ ಸಿದ್ಧಾಂತ್ ಕಾರ್ನಿಕ್, ಸಿನಿಮಾ ರಂಗದಲ್ಲಿ ಪುರುಷರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತು ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಸಿದ್ಧಾಂತ್​ ಅವರು, ಅನಿಮಲ್​ ಚಿತ್ರದ ಮೂಲಕ ಸಕತ್​ ಫೇಮಸ್​  ಆಗಿದ್ದಾರೆ. ಈ ಹಿಂದೆ ಅವರು, ಇದೇ ಚಿತ್ರದಲ್ಲಿ ಬೆತ್ತಲಾದ ನಟಿ ತೃಪ್ತಿ ಡಿಮ್ರಿ ಜೊತೆ ಡೇಟಿಂಗ್​ ಮಾಡುವ ಆಸೆ ಇರುವುದಾಗಿ ಮನದಾಳದ ಮಾತು ಹೇಳಿಕೊಂಡಿದ್ದರು. ಆಕೆಯಿಂದ ಬೇರೆನೂ ಬೇಡ,  ಜೊತೆ ಕಾಫಿಗೆ ಹೋಗುವ ಆಸೆ ಇದೆ.  ತಾವು  ಸಂತೋಷದಿಂದ ಬಿಲ್ ಅನ್ನು ಪಾವತಿಸುವುದಾಗಿ ತಿಳಿಸಿದ್ದರು. ಇದೀಗ ಅವರು 2015ರಲ್ಲಿ ತಮಗೆ ಆಗಿರೋ ಕಾಸ್ಟಿಂಗ್​ ಕೌಚ್​ ಅನುಭವ ತೆರೆದಿಟ್ಟಿದ್ದಾರೆ. 

ಡಿವೋರ್ಸ್​ಗೆ ಕಾರಣ ಆ 3ನೇ ವ್ಯಕ್ತಿಯೇ... ಅವ್ರು... ತಿಂಗಳ ಬಳಿಕ ಮನದಾಳದ ಮಾತು ತೆರೆದಿಟ್ಟ ಚಂದನ್​ ಶೆಟ್ಟಿ

  
ಅನಿಮಲ್​, ಆದಿಪುರುಷ್​ನಂಥ ಹಿಟ್​ ಚಿತ್ರಗಳನ್ನು ನೀಡಿರುವ ಸಿದ್ಧಾರ್ಥ್​ ಅವರು ಸಿನಿಮಾ ರಂಗಕ್ಕೆ ಕಾಲಿಟ್ಟಾಗ, ಸಿನಿಮಾದಲ್ಲಿ ಬೇರೂರಬೇಕು ಎನ್ನುವ ಆಸೆಯಲ್ಲಿದ್ದ ಸಂದರ್ಭದಲ್ಲಿ, ಕೋ ಆರ್ಡಿನೇಟರ್​ ಒಬ್ಬರು ಮಂಚಕ್ಕೆ ಕರೆದ ಘಟನೆಯನ್ನು ಅವರು ವಿವರಿಸಿದ್ದಾರೆ.  ಚಿತ್ರರಂಗದಲ್ಲಿ  ಅವಕಾಶ ಕೇಳಿಕೊಂಡು ಹೋಗಿದ್ದೆ. ನಟನಾಗುವ ಹಂಬಲ ಹೆಚ್ಚಿತ್ತು. ಆಗ ಚಿತ್ರರಂಗದಲ್ಲಿ ಕೆಲಸ ಕೊಡಿಸುವುದಾಗಿ  ಕೊಆರ್ಡಿನೇಟರ್ ಹೇಳಿದ್ದರು. ಅದನ್ನು ನಂಬಿ ಹೋಗಿದ್ದೆ. ಆದರೆ  ನನ್ನನ್ನು ನೋಡಿ ಅವರ ವರ್ತನೆ ಸರಿಯಾಗಿ ಕಾಣಿಸಲಿಲ್ಲ. ನನ್ನೊಟ್ಟಿಗೆ  ಕೆಟ್ಟದಾಗಿ ನಡೆದುಕೊಂಡರು. ಆಗ ನನಗೆ ಸುಮಾರು 22 ವರ್ಷ ವಯಸ್ಸು. ನನ್ನ ಪೋರ್ಟ್‌ಪೋಲಿಯೊವನ್ನು ಕೇಳಿದ ಕೊಆರ್ಡಿನೇಟರ್ ಈ ರೀತಿ ನಡೆದುಕೊಂಡರು ಎಂದು ಅಂದು ನಡೆದ  ಘಟನೆ ವಿವರಿಸಿದ್ದಾರೆ.

ಆತ ನನ್ನ ಬಯೋಡೇಟಾ ನೋಡಿ ಮನೆಗೆ ಕರೆದರು. ಚಿತ್ರರಂಗದಲ್ಲಿ ನೆಲೆಯೂರಬೇಕು ಎನ್ನುವ ಆಸೆಯಿಂದ ಹೋದೆ. ಅಷ್ಟಕ್ಕೂ ಪುರುಷರ ಮೇಲೂ ಹೀಗೆಲ್ಲಾ ಆಗಬಹುದು ಎನ್ನುವ ಕಲ್ಪನೆಯೂಇರಲಿಲ್ಲ.  ರಾತ್ರಿ 10:30ರ ಸುಮಾರಿಗೆ ಬರುವಂತೆ ಹೇಳಿದ್ದರು. ನನಗೆ ಆಗಲೂ ಈ ಬಗ್ಗೆ ಸುಳಿವು ಸಿಗಲಿಲ್ಲ. ಮನೆಗೆ ಹೋದಾಗ ಅಲ್ಲಿ  ಅವರ ಫ್ಯಾಮಿಲಿ ಫೋಟೊಗಳು ಇದ್ದವು. ಅದನ್ನು ನೋಡಿದ ಮೇಲಂತೂ ಅವರ ಉದ್ದೇಶ ನನಗೆ  ಕಿಂಚಿತ್ತೂ ಗೊತ್ತಾಗಲೇ ಇಲ್ಲ. ಅದೂ ಇದೂ ಮಾತನಾಡುತ್ತಾ, ಮೈ ಕೈ ಮುಟ್ಟಲು ಶುರು ಮಾಡಿದಾಗ ನನಗೆ ಮುಜುಗರ ಆಗಿ  ಏನೋ ಎಡವಟ್ಟು ಆಗುತ್ತಿದೆ ಎನ್ನಿಸಿತು. ನಂತರ ಸಿನಿಮಾದಲ್ಲಿ ಚಾನ್ಸ್​  ಬೇಕು ಎಂದರೆ  ರಾಜಿ ಮಾಡಿಕೊಳ್ಳಬೇಕು ಎನ್ನುತ್ತಲೇ ನೇರವಾಗಿ ಮಂಚನ ವಿಷಯ ಮಾತನಾಡಿದರು.ನನಗೆ ಭಯವಾಗಿ ನಾನು ಅಂಥ ವ್ಯಕ್ತಿ ಅಲ್ಲ ಎಂದು ಭಯದಿಂದ ಹೇಳುತ್ತಲೇ ಹೊರಕ್ಕೆ ಬಂದೆ. ಕೆಲ ವರ್ಷಗಳ ಬಳಿಕ ನಾನು ಸಕ್ಸಸ್​ ಕಂಡಾಗ ಅವರೇ ಬಂದು ಅಭಿನಂದನೆ ಸಲ್ಲಿಸಿದರು ಎಂದಿದ್ದಾರೆ. 

ಕತ್ರಿನಾಗೆ ಹುಟ್ಟುಹಬ್ಬ ಸಂಭ್ರಮ: ಅಪ್ಪ ಮುಸ್ಲಿಂ, ಅಮ್ಮ ಕ್ರೈಸ್ತ... ನಟಿ ಭಾರತದ ಪ್ರಜೆಯೇ ಅಲ್ಲ! ರೋಚಕ ಸ್ಟೋರಿಯಿದು..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?