ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರಿಗೆ ಜುಲೈ 16 ಹುಟ್ಟುಹಬ್ಬದ ಸಂಭ್ರಮ. ಹಿಂದೂ-ಕ್ರೈಸ್ತರಿಗೆ ಹುಟ್ಟಿರೋ ನಟಿ ಭಾರತದ ಪ್ರಜೆಯೇ ಅಲ್ಲ... ಏನಿದು ಇವರ ಸ್ಟೋರಿ...
ಬಾಲಿವುಡ್‌ನಲ್ಲಿ ಸಕತ್ ಹಿಟ್ ಚಿತ್ರಗಳನ್ನು ನೀಡುತ್ತಾ, ಇದೀಗ ಸಾಂಸಾರಿಕ ಜೀವನ ಸಾಗಿಸುತ್ತಿರುವ ನಟಿಯರಲ್ಲಿ ಒಬ್ಬರು ಕತ್ರಿನಾ ಕೈಫ್. ಸದ್ಯ ಬಿ-ಟೌನ್‌ನಲ್ಲಿ ಕತ್ರಿನಾ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ನಡುವೆಯೇ ಇಂದು ಅಂದ್ರೆ ಜುಲೈ 16 ಕತ್ರಿನಾ ತಮ್ಮ 41 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 'ಮೆರ್ರಿ ಕ್ರಿಸ್‌ಮಸ್' ನಂತರ ಕತ್ರಿನಾ ಕೈಫ್ ಯಾವುದೇ ಹೊಸ ಸಿನಿಮಾವನ್ನು ಘೋಷಿಸಿಲ್ಲ. ನಟಿ ಗರ್ಭಿಣಿಯಾಗಿದ್ದು, ಅದಕ್ಕಾಗಿಯೇ ಅವರು ಚಿತ್ರಗಳಿಗೆ ಗ್ಯಾಪ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಗರ್ಭಿಣಿ ಎನ್ನುವ ಸುದ್ದಿ ಸದ್ದು ಮಾಡುತ್ತಿದ್ದಂತೆಯೇ ಮಗುವನ್ನು ಕತ್ರಿನಾ ಎಲ್ಲಿ ಹೆರಲಿದ್ದಾರೆ ಎನ್ನುವ ಬಗ್ಗೆ ಚರ್ಚೆಗಳು ಶುರುವಾಗಿದೆ. ಲಂಡನ್ನಲ್ಲಿ ಜೋಡಿ ಇರುವ ಹಿನ್ನೆಲೆಯಲ್ಲಿ ಅಲ್ಲಿಯೇ ಮಗುವನ್ನು ಅವರು ಪಡೆಯುವ ಸಾಧ್ಯತೆ ಇದೆ ಎಂದೂ ಸಾಕಷ್ಟು ಸದ್ದು ಮಾಡಿತ್ತು. ಆದರೆ ಇದುವರೆಗೂ ಇವರು ಗರ್ಭಿಣಿ ಹೌದೋ ಅಲ್ಲವೋ ಎನ್ನುವ ಚರ್ಚೆಯೇ ನಡೆಯುತ್ತಿದೆ.
ಆದರೆ ಇಂದು ಜನ್ಮ ದಿನದ ಸಮಯದಲ್ಲಿ ನಟಿಯ ಕುರಿತು ಕೆಲವೊಂದು ಇಂಟರೆಸ್ಟಿಂಗ್ ವಿಷಯಗಳು ಹೊರಕ್ಕೆ ಬಂದಿವೆ. ಅದೇನೆಂದರೆ, ನಟಿ ಸದ್ಯ ಭಾರತದ ಪ್ರಜೆ ಅಲ್ಲ, ಇದಕ್ಕೆ ಕಾರಣ, ನಟಿಯ ಬಳಿ ಇರುವುದು ಬ್ರಿಟಿಷ್ ಪೌರತ್ವವೇ ವಿನಾ ಭಾರತದ ಪೌರತ್ವ ಅವರ ಬಳಿ ಇಲ್ಲ. ಸದ್ಯ ಭಾರತದ ಪ್ರಜೆಯಾಗಿರುವ ವಿಕ್ಕಿ ಕೌಶಲ್ ಜೊತೆ ಮದುವೆಯಾಗಿ ಭಾರತದಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ ಕತ್ರಿನಾ. ಇನ್ನು ಈ ಜೋಡಿಯ ಕುರಿತು ಹೇಳುವುದಾದರೆ, ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ಆಗಿ 2 ವರ್ಷ ಕಳೆದಿದೆ. 2021ರಲ್ಲಿ ಜೋಡಿಯ ಮದುವೆ ನಡೆದಿತ್ತು. ಹಲವು ದಿನಗಳು ನಡೆದ ಭರ್ಜರಿ ಮದುವೆಗೆ ಗಣ್ಯಾತಿಗಣ್ಯರು ಸಾಕ್ಷಿಯಾಗಿದ್ದರು.
ಡಿವೋರ್ಸ್ಗೆ ಕಾರಣ ಆ 3ನೇ ವ್ಯಕ್ತಿಯೇ... ಅವ್ರು... ತಿಂಗಳ ಬಳಿಕ ಮನದಾಳದ ಮಾತು ತೆರೆದಿಟ್ಟ ಚಂದನ್ ಶೆಟ್ಟಿ
ಅಂದಹಾಗೆ ನಟಿಯ ಬಳಿ ಭಾರತದ ಪೌರತ್ವ ಇಲ್ಲ ಎನ್ನುವುದು ಒಂದೆಡೆಯಾದರೆ, ನಟಿಯ ಅಪ್ಪ-ಅಮ್ಮನ ವಿಷಯವೂ ಇಂಟರೆಸ್ಟಿಂಗ್ ಆಗಿದೆ. ನಟಿಯ ತಂದೆ ಮುಸ್ಲಿಂ ಹಾಗೂ ತಾಯಿ ಕ್ರಿಸ್ಚಿಯನ್. 1983ರಲ್ಲಿ ಹುಟ್ಟಿರೋ ನಟಿ ಕತ್ರಿನಾ, ಅವರ ತಂದೆಯ ಹೆಸರು ಮೊಹಮ್ಮದ್ ಕೈಫ್. ಅವರು ಕಾಶ್ಮೀರಿ ಮೂಲಕದವರು. ಕ್ರೈಸ್ತ ಸಮುದಾಯಕ್ಕೆ ಸೇರಿದ ತಾಯಿ ಹೆಸರು ಸುಸಾನ್. ಇವರು ಲಂಡನ್ ಮೂಲದವರು. ಕತ್ರಿನಾ ಹುಟ್ಟಿದ್ದು, ಹಾಂಗ್ ಕಾಂಗ್ನಲ್ಲಿ, ನೆಲೆ ಕಂಡುಕೊಂಡಿರುವುದು ಭಾರತದಲ್ಲಿ!
ಇವರ ಹೆಸರು ಇದಾಗಲೇ ಹಲವರ ಜೊತೆ ಥಳಕು ಹಾಕಿಕೊಂಡಿದೆ. ಸಲ್ಮಾನ್ ಖಾನ್ ಮತ್ತು ಐಶ್ವರ್ಯ ರೈ ಬ್ರೇಕಪ್ ಆದ ಬಳಿಕ ಕತ್ರಿನಾ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಕಾಫಿ ವಿತ್ ಕರಣ್ ಷೋನಲ್ಲಿ ಸಲ್ಮಾನ್ ಖಾನ್ ಅವರಿಗೆ, ಇದರಲ್ಲಿ ಐಶ್ವರ್ಯಾ ರೈ ಬಚ್ಚನ್ ಅಥವಾ ಕತ್ರಿನಾ ಕೈಫ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಕರಣ್ ಸಲ್ಮಾನ್ ಅವರನ್ನು ಕೇಳಿದ್ದರು. ಐಶ್ವರ್ಯಾ ಮತ್ತು ಕತ್ರಿನಾ ಅವರಲ್ಲಿ ಯಾರು ಹೆಚ್ಚು ಸುಂದರಿ ಹಾಗೂ ಅದ್ಭುತ ಎಂದು ಕರಣ್ ಕೇಳಿದಾಗ, ಸಲ್ಮಾನ್ ಮೊದಲಿಗೆ ನಟಿ ಐಶ್ವರ್ಯಾ ರೈ ಬಚ್ಚನ್ ಹೆಸರು ಹೇಳುತ್ತಲೇ ಮಾತು ಬದಲಿಸಿ ಕತ್ರಿನಾ ಕೈಫ್ ಎಂದಿದ್ದರು. ಆಗ ಕತ್ರಿನಾ ಸಿಂಗಲ್ ಆಗಿದ್ದರಿಂದ ಅವರನ್ನೇ ಸಲ್ಮಾನ್ ಮದ್ವೆಯಾಗ್ತಾರಾ ಎನ್ನುವ ಸುದ್ದಿ ಸದ್ದು ಮಾಡಿತ್ತು. ಆದರೆ ಸಲ್ಮಾನ್ ಹಾರ್ಟ್ ಮತ್ತೆ ಚೂರಾಗಿ ಹೋಗಿತ್ತು.
ಶ್ರೀಮಂತರನ್ನು ಬುಟ್ಟಿಗೆ ಹಾಕಿಕೊಳ್ಳೋದನ್ನ ಕಲಿಸ್ತಾಳೆ ಈ ಲವ್ ಗುರು! ಪ್ರೇಮ ಪಾಠವೇ ಆದಾಯದ ಮೂಲ...