ಯೂರೋಪ್ ಪ್ರವಾಸದಲ್ಲಿ ನಟಿ ಸುಚಿತ್ರ ಕೃಷ್ಣಮೂರ್ತಿ ಬರ್ಲಿನ್ ಬೆತ್ತಲೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಈ ಕುರಿತು ಮಾತನಾಡಿರುವ ಸುಚಿತ್ರ, ಇದು ದೇಸಿ ಹುಡುಗಿಗೆ ಅಲ್ಲ ಎಂದಿದ್ದಾರೆ.
ಮುಂಬೈ(ಜು.15) ಬರ್ಲಿನ್‌ನಲ್ಲಿ ಆಯೋಜನೆಗೊಳ್ಳುವ ಜನಪ್ರಿಯ ಬೆತ್ತಲೇ ಪಾರ್ಟಿಯಲ್ಲಿ ಹಲವು ಸೆಲೆಬ್ರೆಟಿಗಳು, ಗಣ್ಯರು ಪಾಲ್ಗೊಳ್ಳುತ್ತಾರೆ. ಇತ್ತೀಚೆಗೆ ಯೂರೋಪ್ ಪ್ರವಾಸದಲ್ಲಿದ್ದ ನಟಿ ಸುಚಿತ್ರ ಕೃಷ್ಣಮೂರ್ತಿ ಈ ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಪಾರ್ಟಿಯ ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಚ್ಚಿಟ್ಟಿದ್ದಾರೆ. ಈ ವೇಳೆ ಈ ಬೆತ್ತಲೆ ಪಾರ್ಟಿ ದೇಸಿ ಹುಡಿಗಿಗೆ ಅಲ್ಲ ಎಂದು ಕಿವಿಮಾತು ಹೇಳಿದ್ದಾರೆ. ಆದರೆ ಸುಚಿತ್ರ ಪಾರ್ಟಿ ಅನುಭವ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ಕೆಲ ದಿನಗಳ ಯೂರೋಪ್ ಪ್ರವಾಸದಲ್ಲಿದ್ದ ನಟಿ ಸುಚಿತ್ರ ಕೃಷ್ಣಮೂರ್ತಿ ಜರ್ಮನಿಯ ಬರ್ಲಿನ್‌ನಲ್ಲಿ ನಡೆಯುವ ಬೆತ್ತಲೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಜನಪ್ರಿಯ ಸೆಲೆಬ್ರೆಟಿಗಳು ಈ ನೇಕೆಡ್ ಪಾರ್ಟಿಯಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಹೀಗಾಗಿ ಈ ಪಾರ್ಟಿ ಹೇಗಿರಲಿದೆ ಅನ್ನೋದು ವೀಕ್ಷಿಸಲು ನಟಿ ಸುಚಿತ್ರ ಕೂಡ ತೆರಳಿದ್ದರು. ಆದರೆ ಇದೊಂದು ಭಯಾನಕ ಅನುಭವ ಎಂದು ಸುಚಿತ್ರ ಹೇಳಿದ್ದಾರೆ.
ಈ ರೆಸ್ಟೋರೆಂಟ್‌ನಲ್ಲಿ ಯುವತಿಯ ಬೆತ್ತಲೆ ದೇಹವೇ ಪ್ಲೇಟ್, ಭರ್ಜರಿ ಡಿನ್ನರ್‌ಗೆ 2.58 ಲಕ್ಷ ರೂ!
ಈ ಪಾರ್ಟಿ ತನಗೆ ಇಷ್ಟ ಆಗಿಲ್ಲ ಎಂದಿದ್ದಾರೆ. ನೇಕೆಡ್ ಪಾರ್ಟಿಗೆ ತೆರಳಿದ ಅಷ್ಟೇ ವೇಗದಲ್ಲಿ ಹೊರಬಂದೆ ಎಂದಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬರ್ಲಿನ್‌ನಲ್ಲಿ ಆಯೋಜನೆಗೊಳ್ಳುವ ನೇಕೆಡ್ ಅಥವಾ ಪಾಸಿಟಿವಿಟಿ ಪಾರ್ಟಿಯಲ್ಲಿ ಪಾಲ್ಗೊಂಡೆ. ಆದರೆ ಪಾರ್ಟಿಗೆ ಹೋದ ನನಗೆ ಜನಪ್ರಿಯ ಸಂದೇಶವೊಂದು ನೆನಪಾಗಿತ್ತು. ಅದೇನೆಂದರೆ ನಿಮ್ಮ ಮೆದುಳು ಕಾರ್ಯನಿರ್ವಹಿಸದಷ್ಟು ಒಪನ್ ಮೈಂಡೆಡ್ ಆಗಿರಬೇಡಿ. ನಾನು ದೇಸಿ ಹುಡುಗಿ ಎಂದೆಂದಿಗೂ. ನನಗೆ ಸ್ನಾನ ಹಾಗೂ ಗಾಯತ್ರಿ ಮಂತ್ರ ಪಠಣ ಅಗತ್ಯವಿದೆ ಎಂದು ಟ್ವೀಟ್ ಮಾಡಿದ್ದಾರೆ.
Just attended a body positivity/ naked party in Berlin.
Reminded me of the quote : dont be so open minded that ur brains fall out.
Desi girl forever. Need a sĥower & some gayatri mantra chanting . Baapre 🙃
ಈ ಕುರಿತು ಬಾಲಿವುಡ್ ಹಂಗಾಮ ಜೊತೆಗಿನ ಸಂದರ್ಶನದಲ್ಲಿ ಅನುಭವ ಹೇಳಿಕೊಂಡಿದ್ದಾರೆ. ಬರ್ಲಿನ್‌ನಲ್ಲಿ ಈ ನೇಕೆಡ್ ಪಾರ್ಟಿ ಸಾಮಾನ್ಯ. ಈ ಪಾರ್ಟಿಯ ಪ್ರಮುಖ ಉದ್ದೇಶ ಎಂದರೆ ಬಾಡಿ ಪಾಸಿಟಿವಿಟಿ. ಹೀಗಾಗಿ ಸರಿ ನೋಡಿ ಬೀಡೋಣ ಎಂದು ತೆರಳಿದ್ದೆ. ಈ ಪಾರ್ಟಿ ನನ್ನ ಆತ್ಮೀಯ ಗೆಳೆಯೊರೊಬ್ಬರ ಪರಿಚಸ್ಥರ ಬಾರಿನಲ್ಲಿ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಅತಿಥಿಗಳ ಪಟ್ಟಿಯಲ್ಲಿ ನನ್ನ ಹೆಸರು ಹಾಕಲಾಗಿತ್ತು. ಆದರೆ ಪಾರ್ಟಿ ಒಳ ಹೊಕ್ಕಾಗ ನನಗೆ ಅಷ್ಟೇ ವೇಗದಲ್ಲಿ ವಾಪಸ್ ಬರುವ ಮನಸ್ಸಾಗಿದೆ. ನನಗೆ ಇತರರ ಖಾಸಗಿ ಅಂಗ ನೋಡಬೇಕಾಗಿಲ್ಲ. ಹೀಗಾಗಿ ನಾನು ಹೊರಬಂದೆ. ಆದರೆ ಅಲ್ಲಿ ಅಶ್ಲೀಲವಾಗಿ ಯಾರು ತೆಗೆದುಕೊಳ್ಳುವುದಿಲ್ಲ. ಅಲ್ಲಿಯ ಪರಿಸರಕ್ಕೆ ಉತ್ತಮ. ಭಾರತೀಯರಾದ ನಮಗೆ ಖಾಸಗಿ ಅಂಗ, ದೇಹದ ಬಗ್ಗೆ ತೀವ್ರ ಗಮನಸಹರಿಸುತ್ತೇವೆ ಎಂದು ನಟಿ ಸುಚಿತ್ರ ಹೇಳಿಕೊಂಡಿದ್ದಾರೆ.
3 ವರ್ಷದ ಬಳಿಕ ಮತ್ತೆ ಸಂಪೂರ್ಣ ಬೆತ್ತಲಾದ ಸಿಂಗರ್, ಹೊಸ ಲುಕ್‌ನಲ್ಲಿ ಫ್ಯಾನ್ಸ್‌ಗೆ ಕಚಗುಳಿ!