ಹಾಲಿವುಡ್ ನಟಿ, ಅಮೆರಿಕಾದ ರಿಯಾಲಿಟಿ ಶೋ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್ ಸೋದರಿ ಖೋಲೆ ಕರ್ದಾಶಿಯನ್ ಮಾತ್ರ ಈ ಮನೀಷ್ ಮಲ್ಹೋತ್ರಾನನ್ನು ಲೋಕಲ್ ಡಿಸೈನರ್ ಎಂದು ಹೇಳಿದ್ದು, ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೀಷ್ ಮಲ್ಹೋತ್ರಾ ಬಾಲಿವುಡ್‌ನ ಖ್ಯಾತ ಡಿಸೈನರ್, ಇವರು ಡಿಸೈನ್ ಮಾಡಿದ ಬಟ್ಟೆ ಧರಿಸುವುದಕ್ಕೆ ಬಾಲಿವುಡ್ ಮಂದಿ ತುದಿಗಾಲಲ್ಲಿ ನಿಂತಿರುತ್ತಾರೆ. ಮೆಟಾಗಾಲಾಇರಲಿ, ಯಾವುದೇ ಚಲನಚಿತ್ರೋತ್ಸವಗಳಿರಲ್ಲಿ ಬಾಲಿವುಡ್ ಮಂದಿ ಈ ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿದ ಧಿರಿಸನ್ನೇ ಧರಿಸುತ್ತಾರೆ. ಹೀಗಿರುವಾಗ ಹಾಲಿವುಡ್ ನಟಿ, ಅಮೆರಿಕಾದ ರಿಯಾಲಿಟಿ ಶೋ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್ ಸೋದರಿ ಖೋಲೆ ಕರ್ದಾಶಿಯನ್ ಮಾತ್ರ ಈ ಮನೀಷ್ ಮಲ್ಹೋತ್ರಾನನ್ನು ಲೋಕಲ್ ಡಿಸೈನರ್ ಎಂದು ಹೇಳಿದ್ದಾರೆ.
ಇತ್ತೀಚೆಗೆ ಖೋಲೆ ಕರ್ದಾಶಿಯನ್ ಅವರು ತಮ್ಮ ಸೋದರಿ ಮತ್ತೊಬ್ಬ ಹಾಲಿವುಡ್ ನಟಿ ಕಿಮ್ ಕರ್ದಾಶಿಯನ್ ಅವರ ಜೊತೆಗೆ ಮುಖೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆಗಾಗಿ ಮುಂಬೈಗೆ ಆಗಮಿಸಿದ್ದರು. ಹೀಗೆ ಮದುವೆಗೆ ಬಂದವರು ಬಾಲಿವುಡ್ ಡಿಸೈನರ್ ಮನೀಷ್ ಮಲ್ಹೋತ್ರಾ ಧಿರಿಸಿದ ಪಿಂಕ್ ಬಣ್ಣದ ಲೆಹೆಂಗಾ ಧರಿಸಿ ಮದುವೆ ಮನೆಯಲ್ಲಿ ಮಿಂಚಿದ್ದರು. ಆದರೆ ತಮ್ಮ ಸೋಶಿಯಲ್ ಮೀಡಿಯಾ ಸ್ನ್ಯಾಪ್ ಚಾಟ್‌ನಲ್ಲಿ ತಮ್ಮ ಧಿರಿಸಿನ ಬಗ್ಗೆ ತಿಳಿಸುವ ವೇಳೆ ಅವರು ಮನೀಷ್ ಮಲ್ಹೋತ್ರಾ ಅವರನ್ನು ಯಾರೋ ಲೋಕಲ್ ಡಿಸೈನರ್ ವಿನ್ಯಾಸಗೊಳಿಸಿದ ಬಟ್ಟೆ ಇದು ಎಂದು ಉಲ್ಲೇಖಿಸಿದ್ದಾರೆ.
ಅಂಬಾನಿ ಮದ್ವೆಯಲ್ಲಿ ಹಾಡಲು ಹಾಲಿವುಡ್ ಸಿಂಗರ್ ರೇಮಾ ಪಡೆದ ಸಂಭಾವನೆ ಇಷ್ಟೊಂದಾ?
ಆದರೆ ಭಾರತೀಯರಿಗೆ ಈಕೆಯ ಈ ಮಾತು ಸರಿ ಕಾಣಿಸಿಲ್ಲ, ಮನೀಷ್ ಮಲ್ಹೋತ್ರಾ ಭಾರತದ ಖ್ಯಾತ ಡಿಸೈನರ್ ಆಗಿದ್ದು, ಅವರನ್ನು ಲೋಕಲ್ ಡಿಸೈನರ್ ಎಂದು ಕರೆಯುವುದು ಎಷ್ಟು ಸರಿ ಎಂದು ಖೋಲೆ ಕರ್ದಾಶಿಯನ್ ಅವರನ್ನು ನೆಟ್ಟಿಗರು ಟೀಕಿಸಿದ್ದಾರೆ. ಅಲ್ಲದೇ ಜನರು ಟೀಕಿಸದ್ದರಿಂದ ತಮ್ಮ ತಪ್ಪನ್ನು ಅರ್ಥ ಮಾಡಿಕೊಂಡ ಖೂಲೆ ವಿಶ್ವದ ಪ್ರಸಿದ್ಧ ಡಿಸೈನರ್ ಎಂದು ಬದಲಾವಣೆ ಮಾಡಿಕೊಂಡಿದ್ದಾರೆ.
ಆಕೆ ಹೇಳಿದ್ದೇನು?
ಯೂ ಗಾಯ್ಸ್, ಎಷ್ಟು ಚೆನ್ನಾಗಿದೆ ಈ ಬಟ್ಟೆ ನೋಡಿ ನಾನು ಧರಿಸಿರುವ ಈ ಸುಂದರವಾದ ಧಿರಿಸನ್ನು ಲೋಕಲ್ ಡಿಸೈನರ್ ಒಬ್ಬರು ವಿನ್ಯಾಸಗೊಳಿಸಿದ್ದು, ನಾನು ಆತನ ಹೆಸರೂ ಹಾಗೂ ಎಲ್ಲದರ ಬಗ್ಗೆ ನಿಮಗೆ ಹೇಳುತ್ತೇನೆ. ಎಲ್ಲವೂ ಅದ್ಭುತವಾಗಿದೆ ಈ ಪಾಪ್ ಪಿಂಕ್ ನಂಬರ್ ಇಷ್ಟವಾಯ್ತು, ಫುಲ್ ವೈಬ್ರೆಂಟ್ ಆಗಿದೆ ಎಂದು ಖೂಲೆ ಕರ್ದಾಶಿಯನ್ ಅವರು ಬರೆದುಕೊಂಡಿದ್ದರು. ಹಾಗೆಯೇ ನಾನು ಧರಿಸಿದ್ದ ಆಭರಣಗಳು ಲೋರಿಯನ್‌ದು, ನಾನು ಲೋರಿಯನ್ ಶ್ವಾರ್ಟ್ಜ್(Lorraine Schwartz)ಅವರಿಂದ ಇದನ್ನು ತೆಗೆದುಕೊಂಡಿದ್ದೇನೆ. ಇದು ನನ್ನದಲ್ಲ ಎಂದು ಪ್ರಮಾಣಿಕವಾಗಿ ಹೇಳಿಕೊಂಡಿದ್ದಾರೆ ಖೂಲೆ ಕರ್ದಾಶಿಯನ್.
ರೆಸ್ಲರ್ ಜಾನ್ ಸೀನಾ, ಮೈಕ್ ಟೈಸನ್, ಕಿಮ್ ಕರ್ದಾಶಿಯನ್: ಅಂಬಾನಿ ಮನೆ ಮದ್ವೆಯಲ್ಲಿ ಯಾರುಂಟು ಯಾರಿಲ್ಲ
ಶುಕ್ರವಾರ ಜೂನ್ 12 ರಂದು ನಡೆದ ಅಂಬಾನಿ ಮನೆಯ ವಿವಾಹ ಸಮಾರಂಭದಲ್ಲಿ ಈ ಹಾಲಿವುಡ್ ಸೋದರಿಯರು ಭಾರತೀಯ ಧಿರಿಸು ಧರಿಸಿ ಮಿಂಚಿದ್ದರು. ಜೊತೆಗೆ ಮುಂಬೈನಲ್ಲಿ ಆಟೋದಲ್ಲಿ ಪ್ರಯಾಣಿಸಿದ್ದರು. ಜಿಯೋ ವರ್ಲ್ಡ್ ಕನ್‌ವೆನ್ಷನ್ ಹಾಲ್‌ನಲ್ಲಿ ನಡೆದ ಈ ವಿಶ್ವದ ಅತ್ಯಂತ ಅದ್ದೂರಿ ವಿವಾಹ ಸಮಾರಂಭದಲ್ಲಿ ದೇಶ ವಿದೇಶಗಳ ರಾಜಕಾರಣಿಗಳು, ಕ್ರೀಡಾಪಟುಗಳು, ಸಿನಿಮಾ ತಾರೆಯರು, ಉದ್ಯಮ ಲೋಕದ ದಿಗ್ಗಜರು ಭಾಗವಹಿಸಿದ್ದರು.