ವಾವ್..ವಾವ್... ಪ್ರೇಕ್ಷಕರು ಈಗ 'ಮಾಬ್' ಆದ್ರಾ? ಅನುರಾಗ್ ಕಶ್ಯಪ್ ಹೇಳಿಕೆಗೆ ವಿವೇಕ್ ಅಗ್ನಿಹೋತ್ರಿ ಕಿಡಿ

By Shruthi KrishnaFirst Published Jan 21, 2023, 5:29 PM IST
Highlights

ನಿರ್ದೇಶಕ ಅನುರಾಗ್ ಕಶ್ಯಪ್ ಹೇಳಿಕೆಗೆ ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ಮಿಹೋತ್ರಿ ಕಿಡಿಕಾರಿದ್ದಾರೆ. 

ಸಿನಿಮಾಗಳ ಬಗ್ಗೆ ಅನಾವಶ್ಯಕ ಕಾಮೆಂಟ್ ಮಾಡುವುದನ್ನು ನಿಲ್ಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿರುವ ಬೆನ್ನಲ್ಲೇ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಪ್ರತಿಕ್ರಿಯೆ ನೀಡಿ, 'ಪರಿಸ್ಥಿತಿ ಈಗ ಕೈ ಮೀರಿದೆ, ಸಮೂಹ ಈಗ ನಿಯಂತ್ರಣದಲ್ಲಿ ಇಲ್ಲ' ಎಂದು ಹೇಳಿದ್ದರು. ಮೋದಿ ಈ ಮಾತನ್ನು 4 ವರ್ಷಗಳ ಹಿಂದೆಯೇ ಹೇಳಬೇಕಿತ್ತು ಎಂದು ಅನುರಾಗ್ ಕಶ್ಯಪ್ ಹೇಳಿದ್ದರು. ಅನುರಾಗ್ ಮಾತಿಗೆ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಕಿಡಿ ಕಾರಿದ್ದಾರೆ. 

ಅನುರಾಗ್ ಕಶ್ಯಪ್ ಮತ್ತು ವಿವೇಕ್ ಅಗ್ನಿಹೋತ್ರಿ ನಡುವೆ ಆಗಾಗ ಮಾತಿನ ವಾರ್ ನಡೆಯುತ್ತಿರುತ್ತದೆ. ಇಬ್ಬರೂ ಸಾಮಾಜಿಕ ಜಾಲತಾಣದ ಮೂಲಕ ಕಿತ್ತಾಡುತ್ತಿರುತ್ತಾರೆ. ಇದೀಗ ಮತ್ತೆ ಅನುರಾಗ್ ಕಶ್ಯಪ್ ವಿರುದ್ಧ ವಿವೇಕ್ ಅಗ್ನಿಹೋತ್ರಿ ಕಿಡಿ ಕಾರಿದ್ದಾರೆ. ಅನುರಾಗ್ ಕಶ್ಯಪ್ ಮಾತುಗಳ ಆರ್ಟಿಕಲ್ ಶೇರ್ ಮಾಡಿರುವ ಅಗ್ನಿಹೋತ್ರಿ, 'ವೀಕ್ಷಕರು ಈಗ ಮಾಬ್ (ಕಿಡಿಗೇಡಿಗಳ ಗುಂಪು) ಆಗಿದ್ದಾರಾ. ವಾವ್ ವಾವ್ ವಾವ್' ಎಂದು ಹೇಳಿದ್ದಾರೆ. 

ಅನುರಾಗ್ ಕಶ್ಯಪ್ ಹೇಳಿಕೆ 

ಆಲ್ಮೋಸ್ಟ್ ಪ್ಯಾರ್ ಮಿತ್ ಡಿಜೆ ಮೊಹಬ್ಬತ್ ಸಿನಿಮಾದ ಟ್ರೈಲರ್ ರಿಲೀಸ್ ಈವೆಂಟ್‌ನಲ್ಲಿ ಮಾತನಾಡಿದ  ಅನುರಾಗ್ ಕಶ್ಯಪ್, 'ನಾಲ್ಕು ವರ್ಷಗಳ ಹಿಂದೆಯೇ ಅವರು (ಪ್ರಧಾನಿ ಮೋದಿ) ಇದನ್ನು ಹೇಳಿದ್ದರೆ ಬದಲಾಗುತ್ತಿತ್ತು. ಈಗ ಏನು ವ್ಯತ್ಯಾಸ ಆಗಲ್ಲ ಎಂದು ನಾನು ಭಾವಿಸುತ್ತೇನೆ. ಪರಿಸ್ಥಿತಿ ಈಗ ಕೈ ಮೀರಿದೆ. ಯಾರೂ ಯಾರ ಮಾತನ್ನು ಕೇಳುವುದಿಲ್ಲ ಎಂದು ನಾನು ಭಾವಿಸುತ್ತೇನೆ' ಎಂದು ಹೇಳಿದರು. 'ನೀವು ಮೌನವಾಗಿರುವಾಗ, ಪೂರ್ವಾಗ್ರಹಕ್ಕೆ ಅಧಿಕಾರ ನೀಡುತ್ತೀರಿ ಮತ್ತು ನೀವು ದ್ವೇಷವನ್ನು ಬಲಪಡಿಸುತ್ತೀರಿ. ಅದು ಈಗ ತುಂಬಾ ಅಧಿಕಾರವನ್ನು ಪಡೆದುಕೊಂಡಿದೆ. ಅದು ಸ್ವತಃ ಒಂದು ಶಕ್ತಿಯಾಗಿದೆ. ಗುಂಪು ಈಗ ನಿಯಂತ್ರಣದಲ್ಲಿಲ್ಲ' ಎಂದು ಹೇಳಿದ್ದರು. 

4 ವರ್ಷದ ಹಿಂದೆಯೇ ಹೇಳಬೇಕಿತ್ತು, ಪರಿಸ್ಥಿತಿ ಈಗ ಕೈ ಮೀರಿದೆ; ಮೋದಿ ಸೂಚನೆಗೆ ಅನುರಾಗ್ ಕಶ್ಯಪ್ ಪ್ರತಿಕ್ರಿಯೆ

ಮೋದಿ ಸೂಚನೆ

ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ  ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರಿಗೆ ಮಹತ್ವದ ಸೂಚನೆಗಳನ್ನು ನೀಡಿದ್ದರು. ಪ್ರಮುಖವಾಗಿ ಚಲನಚಿತ್ರಗಳಂತಹ ಅಪ್ರಸ್ತುತ ವಿಷಯಗಳ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡದಂತೆ ಕೇಳಿಕೊಂಡಿದ್ದಾರೆ. ಚಲನಚಿತ್ರಗಳಂತಹ ಅಪ್ರಸ್ತುತ ವಿಷಯಗಳ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡಬೇಡಿ. ಹಾಗೇನಾದರೂ ಮಾಡಿದರೆ, ಪಕ್ಷದ ಅಭಿವೃದ್ಧಿ ಅಜೆಂಡಾಗಳು ಹಿಂದೆ ಸರಿಯುತ್ತವೆ. ಹಾಗಾಗಿ ಇಂಥ ಟೀಕೆಗಳಿಂದ ಹಿಂದೆ ಸರಿದರೆ ಒಳ್ಳೆಯದು ಎಂದು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Audience is ‘mob’ now?
Wow! Wow! Wow! pic.twitter.com/M1MF3FjegC

— Vivek Ranjan Agnihotri (@vivekagnihotri)

'ಪಠಾಣ್‌' ವಿವಾದ: ಅನಗತ್ಯ ಟೀಕೆ ಮಾಡ್ಬೇಡಿ.. ಬಿಜೆಪಿ ಮುಖಂಡರಿಗೆ ಮೋದಿ ಸಲಹೆ!

ಪಠಾಣ್ ವಿವಾದ 

ಸದ್ಯ ಪಠಾಣ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಶಾರುಖ್ ಖಾನ್ ನಟನೆಯ ಈ ಸಿನಿಮಾಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಪಠಾಣ್ ಹಾಡು ರಿಲೀಸ್ ಆದಾಗಿನಿಂದ ವಿವಾದ ಎದುರಿಸುತ್ತಲೇ ಇದೆ. ಕೇಸರಿ ಬಣ್ಣದ ಬಿಕಿನಿ ವಿವಾದ, ಅಶ್ಲೀಲವಾಗಿ ಚಿತ್ರಿಸಲಾಗಿದೆ ಎಂದು ಪಠಾಣ್ ವಿರುದ್ಧ ಕಿಡಿ ಕಾರಿದ್ದರು. ಇದೀಗ ಪ್ರಧಾನಿ ಮೋದಿ ಸೂಚನೆ ಬಳಿಕ ಈ ಎಲ್ಲಾ ವಿಚಾರಗಳಿಗೆ ಬ್ರೇಕ್ ಬೀಳುತ್ತಾ ಕಾದು ನೋಡಬೇಕಿದೆ.
 

click me!