ನಟಿ ಸಮಂತಾ ಅನಾರೋಗ್ಯದ ಬಳಿಕ ಮೊದಲ ಬಾರಿಗೆ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಹಿಂದಿ ವೆಬ್ ಸೀರಿಸ್ ಶೂಟಿಂಗ್‌ಗೆ ಸಮಂತಾ ಹಾಜರಾಗಿದ್ದಾರೆ.
ಸೌತ್ ಸ್ಟಾರ್ ಸಮಂತಾ ಅನಾರೋಗ್ಯದ ಬಳಿಕ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಸಮಂತಾ ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾದ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಜೊತೆಗೆ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲೂ ಸಮಂತಾ ಹಾಜರಿದ್ದರು. ಅನಾರೋಗ್ಯದ ಬಳಿಕ ಸಮಂತಾ ಕಾಣಿಸಿಕೊಂಡ ಮೊದಲ ಕಾರ್ಯಕ್ರಮ ಅದಾಗಿತ್ತು. ಅನೇಕ ತಿಂಗಳುಗಳ ಬಳಿಕ ಸಮಂತಾ ಅವರನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಕಾರ್ಯಕ್ರಮದ ಬಳಿಕ ಸಮಂತಾ ಸಿಕ್ಕಾಪಟ್ಟೆ ಟ್ರೋಲ್ ಕೂಡ ಆಗಿದ್ದರು. ಸಮಂತಾ ತುಂಬಾ ಡಲ್ ಆಗಿದ್ದಾರೆ ಮೊದಲಿನ ಹಾಗೆ ಚಾರ್ಮ್ ಇಲ್ಲ ಎಂದಿದ್ದರು. ಸಮಂತಾ ಪ್ರತಿಕ್ರಿಯೆ ನೀಡುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದರು.
ಇದೀಗ ಸಮಂತಾ ಅನೇಕ ತಿಂಗಳ ಬಳಿಕ ಶೂಟಿಂಗ್ ಪ್ರಾರಂಭಿಸಿದ್ದಾರೆ. ಚಿತ್ರೀಕರಣ ಸೆಟ್ ನಲ್ಲಿ ಸಮಂತಾ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಸಮಂತಾ ಹಿಂದಿಯ ಬೆವ್ ಸೀರಿಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಸೈನ್ಸ್ ಫಿಕ್ಷನ್ ಸಿಟಾಡೆಲ್ ಸೀರಿಸ್ ನಲ್ಲಿ ಸಮಂತಾ ನಟಿಸುತ್ತಿದ್ದಾರೆ. ಬಾಲಿವುಡ್ ನಟ ವರುಣ್ ಧವನ್ ಜೊತೆ ನಾಯಕಿಯಾಗಿ ಸೌತ್ ಸುಂದರಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಚೇತರಿಸಿಕೊಂಡಿರುವ ಸಮಂತಾ ಮತ್ತೆ ಆಕ್ಟೀವ್ ಆಗಿದ್ದಾರೆ. ಆಗಾಗಲೇ ಶೂಟಿಂಗ್ ಗಾಗಿ ಸಮಂತಾ ಮುಂಬೈಗೆ ತಲುಪಿದ್ದು ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ. 2 ವಾರಗಳ ಕಾಲ ಮುಂಬೈನಲ್ಲಿ ಶೂಟಿಂಗ್ ನಡೆಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಆದರೆ ಈ ಬಗ್ಗೆ ಸಿನಿಮಾತಂಡ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ.
ಆಂಗ್ಲ ವೆಬ್ ಪೋರ್ಟಲ್ ಪಿಂಕ್‌ವಿಲ್ಲಾಗೆ ವರದಿ ಪ್ರಕಾರ, ಈ ಬಗ್ಗೆ ಸಿನಿಮಾತಂಡ ಸದ್ಯದಲ್ಲೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿದೆ. ಈಗಾಗಲೇ ವರುಣ್ ಧವನ್ ಶೂಟಿಂಗ್ ಪ್ರಾರಂಭಿಸಿದ್ದು ಸಮಂತಾ ಈಗ ಸೇರಿಕೊಳ್ಳುತ್ತಿದ್ದಾರೆ. ವರುಣ್ ಧವನ್ ಈಗಾಗಲೇ ಕೆಲವು ಹೈ ವೋಲ್ಟೇಜ್ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಸಿಟಾಡೆಲ್ ಅಮೆರಿಕಾದ ಸೀರಿಸ್ ಆಗಿದ್ದು ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಕಾಣಿಸಿಕೊಂಡಿದ್ದರು. ಅದೇ ಸರಣಿಯ ಹಿಂದಿ ವರ್ಷನ್ ನಲ್ಲಿ ಸಮಂತಾ ಮತ್ತು ವರುಣ್ ಧವನ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಹುನಿರೀಕ್ಷೆಯ ಸೀರಿಸ್‌ಗೆ ಫ್ಯಾಮಿಲಿ ಮ್ಯಾನ್ ಖ್ಯಾತಿಯ ರಾಜ್ ಮತ್ತು ಡಿಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
'ಸಮಂತಾ ಚಾರ್ಮ್ ಕಳೆದುಕೊಂಡಿದ್ದಾರೆ' ಎಂದ ಟ್ರೋಲಿಗರಿಗೆ ಬಾಲಿವುಡ್ ಸ್ಟಾರ್ ಖಡಕ್ ತಿರುಗೇಟು
ಸಮಂತಾ ಪರ ವರುಣ್ ಧವನ್ ಟ್ವೀಟ್
ಸಮಂತಾ ಚಾರ್ಮ್ ಕಳೆದುಕೊಂಡಿದ್ದಾರೆ ಎನ್ನುವ ಟ್ರೋಲ್‌ಗೆ ವರುಣ್ ಧವನ್ ಪ್ರತಿಕ್ರಿಯೆ ನೀಡಿದ್ದರು. 'ನನ್ನನ್ನು ನಂಬಿ, ಸಮಂತಾ ಅವರನ್ನು ಭೇಟಿಯಾಗಿ, ಚಾರ್ಮ್ ಹೊಂದಿದ್ದಾರೆ' ಎಂದು ಹೇಳಿದ್ದರು. ವರುಣ್ ಧವನ್ ರಿಯಾಕ್ಷನ್‌ಗೆ ಸಮಂತಾ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ನನ್ನ ಸ್ಥಿತಿ ನಿಮಗೆ ಬರದಿರಲಿ ಎಂದು ಪ್ರಾರ್ಥಿಸುತ್ತೇನೆ; ಟ್ರೋಲಿಗರಿಗೆ ನಟಿ ಸಮಂತಾ ಪ್ರತಿಕ್ರಿಯೆ ವೈರಲ್
ಟ್ರೋಲಿಗರಿಗೆ ಸಮಂತಾ ಪ್ರತಿಕ್ರಿಯೆ
ನಾನು ತಿಂಗಳಗಟ್ಟಲೆ ಚಿಕಿತ್ಸೆ ಪಡೆದುಕೊಂಡಷ್ಟು ಮತ್ತು ಔಷಧಿಗಳನ್ನು ತೆಗೆದುಕೊಂಡಷ್ಟು ನೀವು ತೆಗೆದುಕೊಳ್ಳದಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನೀವು ಮತ್ತಷ್ಟು ಚಾರ್ಮ್ ಪಡೆಯಲು ನನ್ನ ಕಡೆಯಿಂದ ಒಂದಷ್ಟು ಪ್ರೀತಿ’ ಎಂದು ಸಮಂತಾ ಪ್ರತಿಕ್ರಿಯೆ ನೀಡಿದ್ದರು. ಟ್ರೋಲ್ ಮಾಡಿದವರಿಗೂ ಒಳ್ಳೆದನ್ನೇ ಬಯಸಿದ ಸಮಂತಾ ಪ್ರತಿಕ್ರಿಯೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು.