ಆರ್ ಆರ್ ಆರ್ ನಿರ್ದೇಶಕ ರಾಜಮೌಳಿ ಅವರಿಗೆ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಹಾಲಿವುಡ್ ಸಿನಿಮಾ ಮಾಡಲು ಆಹ್ವಾನ ನೀಡಿದ್ದಾರೆ.
ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ ಬಳಿಕ ಅನೇಕ ಹಾಲಿವುಡ್ ಗಣ್ಯರನ್ನು ಭೇಟಿಯಾಗಿ ಮಾತನಾಡಿದ್ದಾರೆ. ರಾಜಮೌಳಿ ಅವರ ನೆಚ್ಚಿನ ನಿರ್ದೇಶಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಗೋಲ್ಡನ್ ಗ್ಲೋಬ್ಸ್ ನಲ್ಲಿ ರಾಜನಮೌಳಿ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಪ್ರಶಸ್ತಿ ಗೆದ್ದು ಬೀಗಿದ್ದಾರೆ. ಪ್ರಶಸ್ತಿ ಸಮಾರಂಭದ ಬಳಿಕ ರಾಜಮೌಳಿ ಹಾಲಿವುಡ್ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಗ್ಗೆ ಬಹಿರಂಗ ಪಡಿಸಿದ್ದರು. ಫೋಟೋಗಳನ್ನು ಶೇರ್ ಮಾಡಿ ಸಂಭ್ರಮಸಿದ್ದರು.
ಇದೀಗ ಜೇಮ್ಸ್ ಕ್ಯಾಮರಾನ್ ಏನು ಹೇಳಿದರು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. 'ನೀವು ಎಂದಾದರೂ ಇಲ್ಲಿ ಸಿನಿಮಾ ಮಾಡಲು ಬಯಸಿದರೆ ಹೇಳಿ ಮಾತಾಡೋಣ' ಎಂದು ಹೇಳಿದರು ಎಂದು ರಾಜಮೌಳಿ ಬಹಿರಂಗ ಪಡಿಸಿದರು. ಇದಕ್ಕಿಂತ ಉತ್ತಮವಾಗಿದ್ದು ಏನಿದೆ ಎಂದು ಹೇಳಿದರು. ಬಾಹುಬಲಿ ನಿರ್ದೇಶಕ ರಾಜಮೌಳಿ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಜೇಮ್ಸ್ ಕ್ಯಾಮರಾನ್‌ಗೆ, 'ನಾನು ನಿಮ್ಮ ಎಲ್ಲಾ ಸಿನಿಮಾಗಳನ್ನು ನೋಡಿದ್ದೀನಿ. ದೊಡ್ಡ ಸ್ಫೂರ್ತಿ ನೀವು. ಟರ್ಮಿನೇಟರ್, ಅವತಾರ್, ಟೈಟಾನಿಕ್ ಎಲ್ಲಾ ಸಿನಿಮಾಗಳಲ್ಲಿ ನಿಮ್ಮ ಕೆಲಸ ತುಂಬಾ ಇಷ್ಟವಾಯಿತು' ಎಂದು ರಾಜಮೌಳಿ ಹೇಳಿದರು.
ರಾಜಮೌಳಿ ಮಾತಿಗೆ ಪ್ರತಿಕ್ರಿಯೆ ನೀಡಿದ ಹಾಲಿವುಡ್ ಖ್ಯಾತ ನಿರ್ದೇಶಕ, 'ಧನ್ಯವಾದಳು. ನಿಮ್ಮ ಸಿನಿಮಾಗಳ ಪಾತ್ರಗಳನ್ನು ನೋಡಿದಾಗ ಒಂದು ರೀತಿಯ ಫೀಲಿಂಗ್ ಆಗುತ್ತೆ' ಎಂದರು. ರಾಜಮೌಳಿ ಮತ್ತು ಜೇಮ್ಸ್ ಕ್ಯಾಮರಾನ್ ಅವರ ವಿಡಿಯೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ರಾಜಮೌಳಿ ಅವರು ಆದಷ್ಟು ಬೇಗ ಹಾಲಿವುಡ್ನಲ್ಲಿ ಸಿನಿಮಾ ಮಾಡಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಇಬ್ಬರು ಖ್ಯಾತ ನಿರ್ದೇಶಕರನ್ನು ಒಟ್ಟಿಗೆ ನೋಡಲು ಖುಷಿಯಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ.
ರಾಜಮೌಳಿ RRRಗೆ ಜೇಮ್ಸ್ ಕ್ಯಾಮರೂನ್ ಫಿದಾ; ಸಿನಿಮಾ ನೋಡಿ 'ಅವತಾರ್' ನಿರ್ದೇಶಕ ಹೇಳಿದ್ದೇನು?
ಈ ಮೊದಲು ರಾಜಮೌಳಿ, ಜೇಮ್ಸ್ ಕ್ಯಾಮರಾನ್ ಜೊತೆಗಿನ ಫೋಟೋ ಶೇರ್ ಮಾಡಿ, 'ಸರ್, ನೀವು ನಮ್ಮ ಸಿನಿಮಾವನ್ನು ವಿಶ್ಲೇಷಿಸಲು ನಮ್ಮೊಂದಿಗೆ 10 ನಿಮಿಷ ಕಳೆದಿದ್ದೀರಿ ಎಂದು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ನೀವು ಹೇಳಿದಂತೆ ನಾನೀಗ ಪ್ರಪಂಚದ ಉತ್ತುಂಗದಲ್ಲಿ ಇದ್ದೀನಿ. ಧನ್ಯವಾದಗಳು' ಎಂದು ಹೇಳಿದ್ದರು.
ನಾನು ಸಿನಿಮಾ ಮಾಡೋದು ಹಣಕ್ಕಾಗಿ, ವಿಮರ್ಶಕರ ಮೆಚ್ಚುಗೆಗೆ ಅಲ್ಲ; RRR ನಿರ್ದೇಶಕ ರಾಜಮೌಳಿ
ಆರ್ ಆರ್ ಆರ್ ಸಿನಿಮಾ ಮೂಲಕ ರಾಜಮೌಳಿ ಅಂತಾರಾಷ್ಟ್ರೀಯ ಬ್ರಾಂಡ್ ಆಗಿದ್ದಾರೆ. ರಾಜಮೌಳಿ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ನಿರೀಕ್ಷೆ ಜಾಸ್ತಿ ಆಗಿದೆ. ಸದ್ಯ ರಾಜಮೌಳಿ ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡದ ರಾಜಮೌಳಿ ಸದ್ಯದಲ್ಲೇ ಬಹುದೊಡ್ಡ ಅಪ್‌ಡೇಟ್ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಸದ್ಯ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಗೆದ್ದ ಸಂಭ್ರಮವನ್ನು ಎಂಜಾಯ್ ಮಾಡುತ್ತಿರುವ ಜೊತೆಗೆ ರಾಜಮೌಳಿ ಆಸ್ಕರ್ ಪ್ರಶಸ್ತಿ ಎತ್ತಿ ಹಿಡಿಯಲು ಕಾಯುತ್ತಿದ್ದಾರೆ.