ಪ್ರೆಗ್ನೆಂಟ್​ ಆಗಿದ್ದಾಗ ಸೆಕ್ಸ್‌​ ಲೈಫ್​ ಹೇಗಿರ್ಬೇಕು ಎಂದು ತಿಳಿಸಿದ ಕರೀನಾ ಕಪೂರ್​

By Suvarna News  |  First Published Jun 16, 2023, 1:24 PM IST

ಗರ್ಭಿಣಿಯಾದ ಸಮಯದಲ್ಲಿ ಲೈಂಗಿಕ ಜೀವನ ಹೇಗಿರಬೇಕು, ಪತಿ ಹೇಗೆ ವರ್ತಿಸಬೇಕು ಎಂದು ತಿಳಿಸಿದ್ದಾರೆ ನಟಿ ಕರೀನಾ ಕಪೂರ್​. ಅವರು ಹೇಳಿದ್ದೇನು? 
 


ಬಾಲಿವುಡ್​ ಬೇಬೋ ಕರೀನಾ ಕಪೂರ್ (Kareena Kapoor), ನಟ ಸೈಫ್ ಅಲಿ ಖಾನ್ ಬಾಲಿವುಡ್‌ನ ಅತ್ಯಂತ ಯಶಸ್ವಿ ಜೋಡಿಗಳಲ್ಲಿ ಒಂದು.  ಈ ಜೋಡಿ ಮದುವೆಯಾಗಿ 10 ವರ್ಷಗಳು ಕಳೆದಿವೆ. ತಮಗಿಂತ 10 ವರ್ಷ ದೊಡ್ಡವರಾಗಿರುವ ಸೈಫ್​ ಅಲಿಯವರ ಎರಡನೆಯ ಪತ್ನಿಯಾಗಿ 2012ರಲ್ಲಿ ದಾಂಪತ್ಯ ಜೀವನಕ್ಕೆ ಕರೀನಾ ಕಾಲಿಟ್ಟಾಗ ಬಹುದೊಡ್ಡ ಸುದ್ದಿಯೇ ಆಗಿತ್ತು. ಇದಕ್ಕೆ ಕಾರಣ, ಮೊದಲನೆಯದ್ದು ಸೈಫ್​ ಅಲಿಯವರು ಬೇರೆ ಧರ್ಮಕ್ಕೆ ಸೇರಿದ್ದು ಎಂದದ್ದಾದರೆ, ಇನ್ನೊಂದು ಕುತೂಹಲದ ವಿಷಯವೆಂದರೆ, ಸೈಫ್​ ಅಲಿಯವರು ತಮ್ಮ ಮೊದಲ ಮದುವೆಯ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಕರೀನಾ ಕಪೂರ್​ ಅವರನ್ನು ಮಗಳೇ ಎಂದು ಸಂಬೋಧಿಸಿದ್ದರು. ದಾಂಪತ್ಯ ಜೀವನದ ನಂತರ ಬಹಳ ಟ್ರೋಲ್​ ಆಗಿದ್ದರೂ ಸುಖಿ ಸಂಸಾರವನ್ನು ನಡೆಸುತ್ತಿದೆ ಈ ಜೋಡಿ.  ಇವರಿಗೆ ಇಬ್ಬರು ಮುದ್ದಾದ ಟಿಮ್ ಮತ್ತು ಜೆಹ್ ಎಂಬ ಗಂಡು ಮಕ್ಕಳು ಇದ್ದಾರೆ.  ಸೈಫ್ ಇದಕ್ಕೂ ಮುನ್ನ ನಟಿ ಅಮೃತಾ ಸಿಂಗ್ (Amrutha Singh) ಅವರನ್ನು ವಿವಾಹವಾಗಿದ್ದರು. ಈ ಜೋಡಿಗೆ  ಮಗಳು ಸಾರಾ ಅಲಿ ಖಾನ್ ಮತ್ತು ಮಗ ಇಬ್ರಾಹಿಂ ಅಲಿ ಖಾನ್ ಇದ್ದಾರೆ. ಮದುವೆ, ಸಂಸಾರ, ಮಕ್ಕಳ ಸಲುವಾಗಿ ಕರೀನಾ ಕಪೂರ್​ ಅವರು ಹೆಚ್ಚು ಬ್ರೇಕ್​ ತೆಗೆದುಕೊಂಡಿಲ್ಲ. ಗರ್ಭಿಣಿ ಆಗಿದ್ದಾಗಲೂ ಅವರು ಕೆಲವು ಫೋಟೋಶೂಟ್​ನಲ್ಲಿ ಭಾಗಿ ಆಗಿದ್ದರು. ರ‍್ಯಾಂಪ್​ ವಾಕ್​ ಕೂಡ ಮಾಡಿದ್ದರು. ತೈಮೂರ್​ ಅಲಿ ಖಾನ್​ಗೆ (Taimur Ali Khan) ಜನ್ಮ ನೀಡಿದ ಬಳಿಕ ಕೇವಲ 2 ತಿಂಗಳು ವಿಶ್ರಾಂತಿ ಪಡೆದು ಮತ್ತೆ ನಟನೆಗೆ ಮರಳಿದ್ದರು.  

2021ರಲ್ಲಿ  ಕರೀನಾ ಕಪೂರ್ ಅವರು ಪ್ರೆಗ್ನೆನ್ಸಿ ಬೈಬಲ್​  (Kareena Kapoor Khan Pregnancy Bible) ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ತಮ್ಮ ವೈಯಕ್ತಿಕ ಜೀವನದ ಕೆಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಉಲ್ಲೇಖಿಸಿರುವ ಸೆಕ್ಸ್​ ಲೈಫ್​ ಕುರಿತು ವಿಷಯ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಏಕೆಂದರೆ ಕರೀನಾ  ಎರಡನೇ ಸಲ ಗರ್ಭಿಣಿಯಾದಾಗ  ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಆಗಲೇ ಈ ಪುಸ್ತಕ ಬಿಡುಗಡೆಯಾಗಿತ್ತು.  ಈ ಸಂದರ್ಭದಲ್ಲಿ ಅವರಿಗೆ ಎದುರಾಗಿದ್ದ ಸೆಕ್ಸ್​ ಲೈಫ್​ ಅದರಲ್ಲಿಯೂ ಗರ್ಭಿಣಿಯಾದಾಗ ಸೆಕ್ಸ್​ ಹೇಗೆ ಇರಬೇಕು ಎಂಬ ಬಗ್ಗೆ ಪುಸ್ತಕದಲ್ಲಿ ಕರೀನಾ ಮುಕ್ತವಾಗಿ ಮಾತನಾಡಿದ್ದಾರೆ. ಗರ್ಭಿಣಿಯಾಗಿದ್ದಾಗ ತಮ್ಮ ಲೈಂಗಿಕ ಜೀವನ ಹೇಗಿತ್ತು ಎಂದೂ ಹೇಳಿಕೊಂಡಿದ್ದಾರೆ.

Latest Videos

undefined

ಸೈಫ್​ ಅಲಿಯನ್ನೇ ಮದ್ವೆಯಾಗಿದ್ದೇಕೆ? ಗುಟ್ಟು ರಟ್ಟು ಮಾಡಿದ Kareena Kapoor

ಕರೀನಾ ಹೇಳಿದ್ದೇನೆಂದರೆ, ಗರ್ಭಧಾರಣೆಯ ಸಮಯದಲ್ಲಿ  ಗಂಡನ ಪಾತ್ರ ಬಹಳ ಮುಖ್ಯವಾಗುತ್ತದೆ. ಗಂಡನ ಸಹಕಾರ ಹಾಗೂ ಜೊತೆ ಇರಲೇಬೇಕು. ಇಲ್ಲದಿದ್ದರೆ ಜೀವನ  ತುಂಬಾ ಕಷ್ಟವಾಗುತ್ತದೆ. ಈ ಸಮಯದಲ್ಲಿ ಗಂಡನಾದವ ಒಂದು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಗರ್ಭಧಾರಣೆಯ ಸಮಯದಲ್ಲಿ ತಮ್ಮ ಪತ್ನಿ  ಸುಂದರವಾಗಿ ಕಾಣಬೇಕೆಂದು ಒತ್ತಡ ಹೇರಬಾರದು. ಅಲ್ಲದೆ ಚೆನ್ನಾಗಿ ಕಾಣುತ್ತಿಲ್ಲ ಎಂದು ಮನಸ್ಸು ನೋಯಿಸ ಬಾರದು ಎಂದು ಕರೀನಾ ಹೇಳಿದ್ದಾರೆ. ಇನ್ನು ಆಗ ಲೈಂಗಿಕ ಕ್ರಿಯೆಯ ಬಗ್ಗೆ ನಮ್ಮ ಭಾವನೆಗಳು ಯಾವ ರೀತಿಯ ಇರುತ್ತದೆ ಎಂದು ನಮಗೆ ತಿಳಿಯುವುದಿಲ್ಲ. ಆಗ ಗಂಡನ ಸಹಕಾರ ಹಾಗೂ ಅವರು ಯಾವ ರೀತಿ ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ ಅನ್ನೋದು ಬಹಳ ಮುಖ್ಯವಾಗುತ್ತದೆ. ಹೆಂಡತಿಯ ಮೂಡ್​ ನೋಡಿಕೊಂಡು ಲೈಂಗಿಕ ಕ್ರಿಯೆಯಲ್ಲಿ (Sexual Activity) ತೊಡಗಬೇಕು. ಈ ಸಂದರ್ಭದಲ್ಲಿ ಗಂಡನ ಪಾತ್ರ ಬಹು ಮುಖ್ಯ ಎಂದ ಕರೀನಾ, ಸೈಫ್ ನನಗೆ ತುಂಬಾ ಸಹಕಾರಿಯಾಗಿದ್ದರು. ನನ್ನ ಭಾವನೆ ಹಾಗೂ ಮೂಡ್​ ಅನ್ನು ಅರ್ಥ ಮಾಡಿಕೊಂಡು ನನ್ನ ಜೊತೆಹೇಗಿರಬೇಕೆಂದು ತಾಳ್ಮೆಯಿಂದ ವರ್ತಿಸುತ್ತಿದ್ದರು.  
 
ತಮ್ಮ ಎರಡನೆಯ ಪ್ರಸವದ ಕುರಿತು ಹೇಳಿಕೊಂಡ ನಟಿ, ಎರಡನೆಯ ಮಗುವಿನ  ಪ್ರಸವದ ಸಮಯದ ಕುರಿತು ಈ ಸಲ ತುಂಬಾ ಕಷ್ಟವಾಗಿತ್ತು. ಮೊದಲ ಮಗ ತೈಮೂರ್ (Taimur) ಹುಟ್ಟಿದಾಗ ಅಷ್ಟು ಕಷ್ಟವಾಗಿರಲಿಲ್ಲ. ಆಗ ಸಖತ್ ಎಂಜಾಯ್ ಮಾಡಿದ್ದೆ. ಆ ಧೈರ್ಯದಲ್ಲೇ ಎರಡನೇ ಮಗು ಮಾಡಿಕೊಳ್ಳಲು ಸಿದ್ಧಳಾದೆ. ಆದರೆ ಈ ಸಲ ತುಂಬಾ ಕಷ್ಟಗಳನ್ನು ಎದುರಿಸಿದೆ. ತನ್ನಿಂದ ಇದು ಈ ಸಲ ಸಾಧ್ಯವಾಗುವುದಿಲ್ಲ ಎಂದೆನಿಸಿತ್ತು. ಕೆಲವೊಮ್ಮೆ ಖುಷಿಯಾಗಿದ್ದರೆ, ಮತ್ತೆ ಕೆಲವು ಸಲ ತುಂಬಾ ಸೆಕ್ಸಿಯಾಗಿದ್ದೀನಿ ಎಂದು ಅನಿಸುತ್ತಿತ್ತು. ಮತ್ತೆ ಕೆಲವು ಸಲ ನನ್ನ ಮೇಲೆ 100 ಕೆಜಿ ತೂಗುವಂತೆ  ಫೀಲ್​ ಆಗುತ್ತಿದ್ದೆ ಎಂದಿದ್ದಾರೆ.

ಕರೀನಾ ಕಪೂರ್ ದುರಹಂಕಾರಿ, ಆಕೆ ಅಸಲಿ ಮುಖದ ಗುಟ್ಟು ಬಿಚ್ಚಿಟ್ಟ ನಿರ್ಮಾಪಕ
 

click me!