ಶಿಲ್ಪಾ ಶೆಟ್ಟಿ ಮನೆಯಲ್ಲಿ ಕಳ್ಳತನ: ಅಶ್ಲೀಲ ವಿಡಿಯೋ ಸಿಡಿ, ಪೆನ್‌ಡ್ರೈವ್‌ ಕದ್ದಿರ್ತಾರೆ ಎಂದ ನೆಟ್ಟಿಗರು

Published : Jun 16, 2023, 12:30 PM ISTUpdated : Jun 17, 2023, 01:20 PM IST
ಶಿಲ್ಪಾ ಶೆಟ್ಟಿ ಮನೆಯಲ್ಲಿ ಕಳ್ಳತನ: ಅಶ್ಲೀಲ ವಿಡಿಯೋ ಸಿಡಿ, ಪೆನ್‌ಡ್ರೈವ್‌ ಕದ್ದಿರ್ತಾರೆ ಎಂದ ನೆಟ್ಟಿಗರು

ಸಾರಾಂಶ

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರ ಅವರ ಮುಂಬೈ ಮನೆಯಲ್ಲಿ ಕಳ್ಳತನವಾಗಿದೆ. ನೆಟ್ಟಿಗರು ಕಳ್ಳರು ಖಂಡಿತವಾಗಿ ಅಶ್ಲೀಲ ವಿಡಿಯೋದ ಸಿಡಿ, ಪೆನ್‌ಡ್ರೈವ್‌ ಕದ್ದಿರ್ತಾರೆ ಎಂದ ಕಾಳೆಯುತ್ತಿದ್ದಾರೆ. 

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರ ಅವರ ಮುಂಬೈನ ಜುಹು ಮನೆಯಲ್ಲಿ ಕಳ್ಳತನವಾಗಿದೆ. ಈ ಘಟನೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅಂದಹಾಗೆ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರ ಕುಟುಂಬ ಸದ್ಯ ಮುಂಬೈನಲ್ಲಿದ್ದ. ಎಲ್ಲರೂ ಪ್ರವಾಸಕ್ಕೆಂದು ವಿದೇಶಕ್ಕೆ ಹಾರಿದ್ದು ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಕಳ್ಳತನದ ಸುದ್ದಿ ಶಿಲ್ಪಾ ಶೆಟ್ಟಿಗೆ ದಂಪತಿಗೆ ಶಾಕ್ ನೀಡಿದೆ. 

ಕಳ್ಳತನ ನಡೆದು ಒಂದು ವಾರವಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಧಿಕಾರಿಗಳು ಮಾಹಿತಿ ನೀಡಿದ್ದಾರೆ.  ದರೋಡೆಕೊರಿಬ್ಬರು 25 ಅಡಿ ಎತ್ತರದ ಗೋಡೆ ಹತ್ತಿ ಮನೆಯೊಳಗೆ ಪ್ರವೇಶಿಸಿದ್ದಾರೆ ಎನ್ನಲಾಗಿದೆ. ಮೇ 24ರಿಂದ ಶಿಲ್ಪಾ ಮುಂಬೈನಲ್ಲಿಲ್ಲ. ಶಿಲ್ಪಾ ದಂಪತಿ ಮನೆಯಿಂದ ಹೊರಟ ಬಳಿಕ ಈ ಘಟನೆ ನಡೆದಿದೆ. 

ಸದ್ಯ ಬಂಧಿತರಾಗಿರುವ ಇಬ್ಬರೂ ಆರೋಪಿಗಳನ್ನು ಅರ್ಜುನ್ ದೇವೇಂದ್ರ (26) ಮತ್ತು ಚಿತ್ತಾ ಅಲಿಯಾಸ್ ರಮೇಶ್ (22) ಎಂದು ಗುರುತಿಸಲಾಗಿದೆ. ಇವರು ವಿಲೇಪಾರ್ಲೆ ನೆಹರು ನಗರದ ಕೊಳೆಗೇರಿ ನಿವಾಸಿಯಾಗಿದ್ದು, ಒಬ್ಬನ ಹೆಸರಿನಲ್ಲಿ 15 ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ. ಸದ್ಯ ಇಬ್ಬರೂ ಪೊಲೀಸರ ಅತಿಥಿಗಳಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಜುಹುವಿನ ಹಿರಿಯ ಇನ್ಸ್‌ಪೆಕ್ಟರ್ ಅಜಿತ್‌ಕುಮಾರ್ ವರ್ತಕ್ ಮತ್ತು ಎಪಿಐ ವಿಜಯ್ ಧೋತ್ರೆ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.

 ಶಿಲ್ಪಾ ಶೆಟ್ಟಿಗೆ ನಮ್ಮ ನಡುವೆ ದೀಪಿಕಾ ಪಡುಕೋಣೆ ಬರಲು ಸಾಧ್ಯವಿಲ್ಲ ಎಂದ ರಾಜ್ ಕುಂದ್ರಾ; ಕಾರಣವೇನು?

ಕಳ್ಳತನದ ಬಗ್ಗೆ ಶಿಲ್ಪಾ ಶೆಟ್ಟಿ ಅವರ ಮನೆಗೆಲಸದ ಮ್ಯಾನೇಜರ್ ಮತ್ತು ಶೇಖರ್ ಚೌಧರಿ ದೂರು ನೀಡಿದ್ದರು. ಮಾಸ್ಟರ್ ಬೆಡ್‌ರೂಮ್, ಹಾಲ್, ಡೈನಿಂಗ್ ಏರಿಯಾ ಮತ್ತು ಅವರ ಮಗಳ ಕೋಣೆಯಲ್ಲಿ ಬೆಲೆಬಾಳುವ ವಸ್ತುಗಳು ಕಾಣೆಯಾಗಿರುವುದನ್ನು ಗಮನಿಸಿದ ನಂತರ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಎಲ್ಲವನ್ನೂ ದರೋಡೆ ಮಾಡಲಾಗಿದ್ದು ಇಡೀ ಮನೆ ಅಸ್ಥವ್ಯಸ್ಥವಾಗಿತ್ತು, ಬೀರುಗಳು ತೆರೆದಿದ್ದವು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಎಲ್ಲ್ ನೋಡಿದ್ರೂ ಶಿಲ್ಪಾ ಶೆಟ್ಟಿ ಫೋಟೋದ್ದೇ ಸದ್ದು: ಸ್ವಿಮ್‌ಸೂಟ್‌ನಲ್ಲಿ ಮಸ್ತ್ ಪೋಸ್

ನೆಟ್ಟಿಗರ ಟ್ರೋಲ್ 

ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರ ಮನೆಯಲ್ಲಿ ಕಳ್ಳತನದ ವಿಚಾರ ಬಹಿರಂಗವಾಗುತ್ತಿದ್ದಂತೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಅಶ್ಲೀಯ ವಿಡಿಯೋ ಪ್ರಕರಣಕ್ಕೆ ಲಿಂಕ್ ಮಾಡಿ ಕಾಲೆಳೆಯುತ್ತಿದ್ದಾರೆ. ಕಳ್ಳರು ಅಶ್ಲೀಲ ವಿಡಿಯೋ ಸಿಡಿ ಮತ್ತು ಪೆನ್‌ಡ್ರೈವ್‌ಗಳನ್ನು ಕದ್ದಿರುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.  


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಉಸಿರು ಬಿಗಿದಿಟ್ಟುಕೊಂಡು ನೋಡುವಂತಹ Serial Killer ಚಿತ್ರಗಳು Don't Miss It
ಬಾಲಿವುಡ್‌ಗೆ ಕಾಲಿಡಲಿರೋ 'ಬೀರ್‌ಬಲ್' ಚತುರೆ.. 'ಕಾಂತಾರ 'ಕನಕವತಿ' ಹಿಂದಿ ಸಿನಿಮಾ ಯಾವುದು?