ಸೆಟ್ಟಲ್ಲೇ ರಣವೀರ್​ ತೊಡೆಯೇರಿ ಲವ್​ ಶುರು ಹಚ್ಕೊಂಡಿದ್ದ ದೀಪಿಕಾ- ಗುಟ್ಟು ಈಗ ಬಯಲು!

By Suvarna News  |  First Published Jun 16, 2023, 12:31 PM IST

 ಶೂಟಿಂಗ್​ ಸೆಟ್​ನಲ್ಲಿಯೇ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಹೇಗೆ ಲವ್​ ಶುರು ಮಾಡಿದ್ದರು ಎನ್ನುವುದನ್ನು ನಟ ಗುಲ್ಶನ್ ದೇವಯ್ಯ ಹೇಳಿದ್ದಾರೆ. 
 


ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ (Ranbeer Singh) ಬಾಲಿವುಡ್‌ನ ಪವರ್ ಕಪಲ್‌ಗಳಲ್ಲಿ ಒಬ್ಬರು. ಇಬ್ಬರೂ 6 ವರ್ಷಗಳ ಕಾಲ ಡೇಟಿಂಗ್ ಮಾಡಿ  ನಂತರ 14 ನವೆಂಬರ್ 2018 ರಂದು ಮಕ್ಕಳ ದಿನಾಚರಣೆಯ ದಿನ ಇಟಲಿಯ ಲೇಕ್ ಕೊಮೊದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.  ಅಂದಹಾಗೆ ಇವರ ಲವ್​ ಸ್ಟೋರಿ ಶುರುವಾಗಿದ್ದೇ ಬಲು ರೋಚಕ. ಅದರ ಬಗ್ಗೆ ಈಗ ಒಂದೊಂದೇ ಮಾಹಿತಿಗಳು ಹೊರಬರುತ್ತಿವೆ. ನಟ ಗುಲ್ಶನ್ ದೇವಯ್ಯ ಅವರು ಅಂದು ನಡೆದ ಘಟನೆಯ ಕುರಿತು ಈಗ ಬಯಲು ಮಾಡಿದ್ದು, ಈ ಜೋಡಿ ಹೇಗೆ ಲವ್​ ಶುರುವಿಟ್ಟುಕೊಂಡಿತ್ತು ಎಂಬ ಬಗ್ಗೆ ವಿವರಣೆ ನೀಡಿದ್ದಾರೆ. ಅಂದಹಾಗೆ ದೀಪಿಕಾ ಮತ್ತು ರಣವೀರ್​ ಅವರ ಲವ್​ ಶುರುವಾದದ್ದು, ಸಂಜಯ್ ಲೀಲಾ ಬನ್ಸಾಲಿಯವರ 'ಗೋಲಿಯೋನ್ ಕಿ ರಾಸ್​ಲೀಲಾ  ರಾಮ್-ಲೀಲಾ' (Ramleela) ಚಿತ್ರದ ಸೆಟ್‌ನಲ್ಲಿ ಎಂದು ಗುಲ್ಶನ್ ದೇವಯ್ಯ ಬಹಿರಂಗಪಡಿಸಿದ್ದಾರೆ. 2013ರಲ್ಲಿ 'ಗೋಲಿಯೋನ್ ಕಿ ರಾಸ್​ಲೀಲಾ  ರಾಮ್-ಲೀಲಾ' ಚಿತ್ರ ಬಿಡುಗಡೆಗೊಂಡಿತ್ತು. ಈ ಚಿತ್ರಕ್ಕೆ ದೀಪಿಕಾ-ರಣವೀರ್​ ಜೋಡಿ ತೆರೆಯ ಮೇಲೆ ಕಾಣಿಸಿಕೊಂಡರು. ಆದರೆ ತೆರೆ ಮರೆಯಲ್ಲಿಯೇ ಇವರ ಲವ್​ ಸ್ಟೋರಿ ಶುರುವಾಗಿತ್ತು. ಈ ಚಿತ್ರದಲ್ಲಿಯೇ  'ಭವಾನಿ' ಪಾತ್ರದಲ್ಲಿ ನಟಿಸಿರುವ ನಟ ಗುಲ್ಶನ್ ದೇವಯ್ಯ ಅವರು ಸೆಟ್‌ನಲ್ಲಿ ಆಫ್‌ಸ್ಕ್ರೀನ್ ಪ್ರಣಯವನ್ನು (Off screen Romance) ವೀಕ್ಷಿಸಿದ್ದೇನೆ ಎಂದು ಇದೀಗ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ಅಷ್ಟಕ್ಕೂ ಅಂದು ಆಗಿದ್ದೇನೆಂದರೆ, ಶೂಟಿಂಗ್​ ಸೆಟ್​ನಲ್ಲಿಯೇ ರಣವೀರ್‌ ಮತ್ತು ದೀಪಿಕಾ (Deepika Padukone) ಲವ್​ ಶುರುವಿಟ್ಟುಕೊಂಡಿದ್ದರಂತೆ. ರಣವೀರ್​ ಸಿಂಗ್​ ಅವರ ತೊಡೆಯ ಮೇಲೆ ದೀಪಿಕಾ ಪಡುಕೋಣೆ ಕೂತಿದ್ದನ್ನು ನಾನು ನೋಡಿದೆ. ಅದನ್ನು ನೋಡಿ ಶೂಟಿಂಗ್​ ಸೆಟ್​ನಲ್ಲಿದ್ದ ಎಲ್ಲರ ಕಣ್ಣುಗಳು ಅರಳಿದವು ಎಂದು ಗುಲ್ಶನ್ ದೇವಯ್ಯ ಹೇಳಿದ್ದಾರೆ. ಮೊದಲಿಗೆ ನಾವು ಈ ದೃಶ್ಯವನ್ನು ಗಮನಿಸಿಲಿಲ್ಲ. ಅವರಿಬ್ಬರು ಕೂಡ ಚಿತ್ರದ ಶೂಟಿಂಗ್​ ವೇಳೆ ಯಾವುದೇ ಹಿಂಟ್​ಗಳನ್ನೂ ನೀಡಿರಲಿಲ್ಲ. ಗಾನ-ವನ ಹಾಡಿನ ಸೀಕ್ವೆನ್ಸ್ ಎರಡು-ಮೂರು ಬಾರಿ ಮಾಡಿದ್ದರೂ ಇದು ನಮಗೆ ತಿಳಿದರಲಿಲ್ಲ. ಇಬ್ಬರೂ ಸಹಜವಾಗಿಯೇ ವರ್ತಿಸುತ್ತಿದ್ದರು. ಆದರೆ ತೆರೆ ಮರೆಯಲ್ಲಿ ಇವರ ಲವ್​ ಶುರುವಾಗಿತ್ತು ಎಂದಿದ್ದಾರೆ  ಗುಲ್ಶನ್ ದೇವಯ್ಯ.

Tap to resize

Latest Videos

Viral Vedio: ಫ್ಲರ್ಟ್​ ಮಾಡಲು ಬಂದ ಶಾರುಖ್​ಗೆ ವಯಸ್ಸಿನ ಅಂತರ ನೆನಪಿಸಿದ ​ದೀಪಿಕಾ

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಈ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 'ರಾಮಲೀಲಾ' ಅವರ ಮೊದಲ ಚಿತ್ರವಾಗಿದ್ದು, ನಂತರ ಇಬ್ಬರೂ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಈ ಚಿತ್ರದಲ್ಲಿ ರಾಮ್ ಮತ್ತು ಲೀಲಾ ಪಾತ್ರದಲ್ಲಿ ರಣವೀರ್ ಮತ್ತು ದೀಪಿಕಾ ನಟಿಸಿದ್ದಾರೆ. ಇವರಲ್ಲದೆ, ಸುಪ್ರಿಯಾ ಪಾಠಕ್, ಶರದ್ ಕೇಳ್ಕರ್, ರಿಚಾ ಚಡ್ಡಾ (Richa Chadda) ಸೇರಿದಂತೆ ಇತರ ತಾರೆಯರಿದ್ದರು. ಈ ಚಿತ್ರವು 15 ನವೆಂಬರ್ 2013 ರಂದು ಬಿಡುಗಡೆಯಾಯಿತು. ನಾವು 2012ರಲ್ಲಿ ಡೇಟಿಂಗ್ ಮಾಡಲು ಆರಂಭಿಸಿದೆವು. ಲವ್​ ಶುರುವಾಗಿ 11 ವರ್ಷ ಕಳೆದಿದೆ ಎಂದು  ದೀಪಿಕಾ ಪಡುಕೋಣೆ ಈಚೆಗೆ ಹೇಳಿದ್ದರು.  
 
ಈ ಚಿತ್ರದ ಹೊರತಾಗಿ, ರಣವೀರ್ ಮತ್ತು ದೀಪಿಕಾ ಸಂಜಯ್ ಲೀಲಾ ಬನ್ಸಾಲಿಯವರ 2015 ರಲ್ಲಿ ಬಿಡುಗಡೆಯಾದ 'ಬಾಜಿರಾವ್ ಮಸ್ತಾನಿ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಅದರಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಕೂಡ ಇದ್ದರು. ಇಬ್ಬರೂ ಕೂಡ 'ಪದ್ಮಾವತ್' (2018) ನಲ್ಲಿ ಒಟ್ಟಿಗೆ ಇದ್ದರು. ಅದರಲ್ಲಿ ಶಾಹಿದ್ ಕಪೂರ್ ಕೂಡ ಇದ್ದರು. ಅಂದಹಾಗೆ ಕರ್ನಾಟಕದ ಕುವರಿ ದೀಪಿಕಾ, ಸಿಂಧಿ ಹಿಂದು ಕುಟುಂಬದಲ್ಲಿ ಜನಿಸಿದ ರಣ್‌ವೀರ್ ಸಿಂಗ್ ಅವರ ಜೊತೆ ಮದುವೆಯಾದ ಬಳಿಕ ಬೆಂಗಳೂರಿನಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದು ವಿಶೇಷ.  

ರಣವೀರ್​ ಸಿಂಗ್​ ಜೊತೆ ಯಶ್ ರಾಜ್ ಫಿಲ್ಮ್ಸ್ ಟೂ ಟೂ: ಬಯಲಾಯ್ತು ಕಾರಣ

click me!