ಆಮೀರ್​ ಖಾನ್​ ಮನೆಯಲ್ಲಿ ಕಪಿಲ್​ ಶರ್ಮಾ ಖಾಸಗಿ ಷೋ- ಏನಿದರ ವಿಶೇಷತೆ?

Published : Jun 06, 2023, 09:13 PM ISTUpdated : Nov 21, 2023, 06:47 PM IST
ಆಮೀರ್​ ಖಾನ್​ ಮನೆಯಲ್ಲಿ ಕಪಿಲ್​ ಶರ್ಮಾ ಖಾಸಗಿ ಷೋ-  ಏನಿದರ ವಿಶೇಷತೆ?

ಸಾರಾಂಶ

ದಿ ಕಪಿಲ್​ ಶರ್ಮಾ ಷೋ ಈ ಬಾರಿ ಡಿಫರೆಂಟ್​ ಆಗಿತ್ತು. ಇದುವರೆಗೆ ಷೋಗೆ ಬರದಿದ್ದ ಆಮೀರ್​ ಖಾನ್​ ಅವರ  ಮನೆಯಲ್ಲಿಯೇ ಕಪಿಲ್​ ಅವರು ಖಾಸಗಿಯಾಗಿ ಷೋ ಮಾಡಿದ್ದಾರೆ.   

ಟಿವಿಯಲ್ಲಿ ಪ್ರಸಾರವಾಗುತ್ತಿರುವ ದಿ ಕಪಿಲ್​ ಶರ್ಮಾ ಷೋ (The Kapil Sharma Show) ಭಾರಿ ಜನಪ್ರಿಯತೆ ಗಳಿಸಿದೆ. ಕಳೆದ 10 ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು ಬಹುತೇಕ ಎಲ್ಲಾ ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ಹಿರಿ ಕಿರಿಯ ನಟ ನಟಿಯರು ಭಾಗವಹಿಸಿದ್ದಾರೆ. ಆದರೆ ತಮ್ಮ 10 ವರ್ಷಗಳಿಂದ  ಷೋನಲ್ಲಿ  ಮೂವರು ಸೆಲೆಬ್ರಿಟಿಗಳನ್ನು ಕರೆಸಲು ಸಾಧ್ಯವಾಗಲಿಲ್ಲ ಎಂಬ ಕೊರಗು ಸದಾ ಕಪಿಲ್ ಶರ್ಮಾ ಅವರನ್ನು ಕಾಡುತ್ತಿತ್ತು. ಅದರಲ್ಲಿ ಒಂದು ಈಗ ಈಡೇರಿದೆ.  ಈ ಸೆಲೆಬ್ರಿಟಿಗಳೆಂದರೆ ಲತಾ ಮಂಗೇಶ್ಕರ್, ಸಚಿನ್ ತೆಂಡೂಲ್ಕರ್ ಮತ್ತು ಆಮೀರ್ ಖಾನ್. ಇವರ ಪೈಕಿ ಲತಾ ದೀದೀ ಇದಾಗಲೇ ಇಹಲೋಕ ತ್ಯಜಿಸಿದ್ದಾರೆ. ಸಚಿನ್​ ತೆಂಡೂಲ್ಕರ್​ ಅವರನ್ನು ಹಿಡಿಯುವ ಪ್ರಯತ್ನದಲ್ಲಿದ್ದಾರೆ ಕಪಿಲ್​ ಶರ್ಮಾ. ಆಮೀರ್​ ಖಾನ್​ ಅವರನ್ನು ತಮ್ಮ ಷೋಗೆ ಕರೆತರುವ ಆಸೆಯನ್ನು ಕಪಿಲ್​ ಶರ್ಮಾ ಈಡೇರಿಸಿಕೊಂಡಿದ್ದಾರೆ.

ಈ ಮೂಲಕ ಕಪಿಲ್ ಅವರ ಒಂದು ಆಸೆ ಈಡೇರಿದೆ. ಆದರೆ ಇದರಲ್ಲಿ ಸ್ವಲ್ಪ ಟ್ವಿಸ್ಟ್​ ಇದೆ. ಅದೇನೆಂದರೆ, ಆಮೀರ್ ಖಾನ್ (Amir Khan) ಕಪಿಲ್ ಅವರ ಶೋನಲ್ಲಿ ಕಾಣಿಸಿಕೊಂಡಿಲ್ಲವಾದರೂ, ಇತ್ತೀಚೆಗೆ ಆಮೀರ್​  ಖಾನ್ ಅವರ ಮನೆಯಲ್ಲಿ ಸ್ನೇಹಿತರ ಸಭೆ ನಡೆದಿತ್ತು.  ಇದರಲ್ಲಿ ಖುದ್ದು ಕಪಿಲ್ ಶರ್ಮಾ ಅವರೇ ತಮ್ಮ  ಇಡೀ ತಂಡದೊಂದಿಗೆ ಆಮೀರ್​ ಮನೆಯಲ್ಲಿ ಕಾಣಿಸಿಕೊಂಡರು. ಆಮೀರ್ ಖಾನ್ ಅವರ ಮನೆಯಲ್ಲಿ ನಡೆದ ಈ ಪಾರ್ಟಿಯಲ್ಲಿ ಅವರ 'ರಾಜಾ ಹಿಂದೂಸ್ತಾನ್' ಸಹ ನಟ ಅರ್ಚನಾ ಪೂರನ್​ ಸಿಂಗ್ ಕೂಡ ಉಪಸ್ಥಿತರಿದ್ದರು. ಈ ಪಾರ್ಟಿಯ ಒಳಗಿನ ವಿಡಿಯೋವನ್ನು ಅರ್ಚನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆಮೀರ್​ ಖಾನ್​ ಚಿತ್ರ ರಿಜೆಕ್ಟ್​ ಮಾಡಿದ ಸಲ್ಲು​! ಮಿಡ್​​ನೈಟ್​ ಪಾರ್ಟಿಯಲ್ಲೇನಾಯ್ತು ಅಂತಿದ್ದಾರೆ ಫ್ಯಾನ್ಸ್​!

ಇತ್ತೀಚೆಗೆ, ಪಂಜಾಬಿ (Punjabi) ಚಿತ್ರ 'ಕ್ಯಾರಿ ಆನ್ ಜಟ್ಟಾ 3' ನ ಟ್ರೇಲರ್ ಅನ್ನು ಮುಂಬೈನಲ್ಲಿ ಬಿಡುಗಡೆ ಮಾಡಲಾಯಿತು, ಇದರಲ್ಲಿ ಈ ಚಿತ್ರದ ತಾರಾಗಣದೊಂದಿಗೆ ಆಮೀರ್ ಖಾನ್ ಮತ್ತು ಕಪಿಲ್ ಶರ್ಮಾ ಅವರಂತಹ ತಾರೆಯರು ಸಹ ಉಪಸ್ಥಿತರಿದ್ದರು. ಈ ಟ್ರೇಲರ್ ನಂತರ, ಇಡೀ ತಂಡವು ಆಮೀರ್ ಖಾನ್ ಅವರ ಮನೆಯಲ್ಲಿ ಪಾರ್ಟಿ ಮಾಡುವುದನ್ನು ಮತ್ತು ಸಂತೋಷದಿಂದ ಇರುವುದನ್ನು ನೋಡಬಹುದು.  ಅರ್ಚನಾ ಪುರಣ್ ಸಿಂಗ್ ಈ ಪಾರ್ಟಿಯ ಒಳಗಿನ ವಿಡಿಯೋ ವನ್ನು ಹಾಕಿದ್ದಾರೆ, ಇದರಲ್ಲಿ ಕಪಿಲ್ ಶರ್ಮಾ ಅವರು 'ಹಂಗಾಮಾ ಹೈ ಕ್ಯೂನ್ ಬರ್ಪಾ, ಥೋಡಿ ಸಿ ಜೋ ಪೀ ಲಿ ಹೈ...' ಎಂದು ಹಾಡಿದ್ದಾರೆ.  ಕಪಿಲ್ ಅವರ ಸ್ನೇಹಿತ ಮತ್ತು ಅವರ ಕಾರ್ಯಕ್ರಮದ ಸಂಗೀತಗಾರ ದಿನೇಶ್,  ಕಪಿಲ್ ಅವರ ಪತ್ನಿ ಗಿನಿ ಚತ್ರತ್, ಹಾಸ್ಯನಟ ಕಿಕು ಶಾರದಾ, ನಟಿ ಕವಿತಾ ಕೌಶಿಕ್, ಸೋನಮ್ ಬಾಜ್ವಾ,  ಜಿಪ್ಪಿ ಗ್ರೆವಾಲ್ ಮುಂತಾದ ಅನೇಕ ತಾರೆಯರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ವಿಡಿಯೋ  ಹಂಚಿಕೊಂಡ ಅರ್ಚನಾ ಪೂರನ್​  ಸಿಂಗ್, 'ರಾಜ ಹಿಂದೂಸ್ತಾನಿ (Raja Hindustani) ವರ್ಷಗಳ ನಂತರ ಆಮೀರ್​  ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು.  ಬೆಚ್ಚಗಿನ ಅಪ್ಪುಗೆಗಳು ಮತ್ತು ವರ್ಷಗಳ ಹಿಂದಿನ ಅನೇಕ ಕಥೆಗಳು ನೆನಪಿಗೆ ಬಂದವು. ಆಮೀರ್​  ಅವರ ಮನೆಯಲ್ಲಿ ಈ ಅದ್ಭುತ ಸಂಜೆಗಾಗಿ ನನ್ನ ಹೃದಯಾಳದಿಂದ  ಧನ್ಯವಾದಗಳು. ನೀವು ಈಗ ಹೆಚ್ಚು ಮೋಜು ಮಾಡಿದ್ದೀರಿ. ಸಾಕಷ್ಟು ಜ್ಞಾನ ಮತ್ತು ಕುಚೇಷ್ಟೆಗಳನ್ನು ಮಾಡಿದ್ದೀರಿ. ಆ ರಾತ್ರಿ ಮಾತುಕತೆ ಮತ್ತು ತಮಾಷೆಯ ಕಥೆಗಳನ್ನು ಕೇಳುವುದು ತುಂಬಾ ಖುಷಿಯಾಯಿತು. ಎಲ್ಲರ ಮೆಚ್ಚಿನ ಹಾಡು 'ಹಂಗಾಮಾ ಹೈ ಕ್ಯೂಂ ಬರ್ಪಾ..' ಹಾಡಿದ್ದಕ್ಕಾಗಿ ಧನ್ಯವಾದಗಳು ಕಪಿಲ್ ಶರ್ಮಾ ಎಂದು ಬರೆದುಕೊಂಡಿದ್ದಾರೆ.

ಹಸುಗೂಸು ನೋಡಿ ಮದ್ಯಪಾನ ತ್ಯಜಿಸಿದ್ದೆ: ಕುತೂಹಲದ ಘಟನೆ ನೆನಪಿಸಿಕೊಂಡ ನಿರ್ಮಾಪಕ ಮಹೇಶ್​ ಭಟ್​
 
ಅಂದಹಾಗೆ ಕಪಿಲ್ ಶರ್ಮಾ ಷೋನಲ್ಲಿ ಇದಾಗಲೇ  ಶಾರುಖ್, ಸಲ್ಮಾನ್, ಪ್ರಿಯಾಂಕಾ ಚೋಪ್ರಾ, ದೀಪಿಕಾ, ಕತ್ರಿನಾ, ರಣಬೀರ್, ಆಲಿಯಾ ಸೇರಿದಂತೆ ಬಹುತೇಕ ಪ್ರತಿ ದೊಡ್ಡ ಸೆಲೆಬ್ರಿಟಿಗಳು  ಕಾಣಿಸಿಕೊಂಡಿದ್ದಾರೆ. ಈ ಶೋಗೆ ಹಲವು ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳೂ ಬಂದಿದ್ದಾರೆ. ಆದರೆ ಆಮೀರ್​  ಈ ಕಾರ್ಯಕ್ರಮಕ್ಕೆ ಬರಲೇ ಇಲ್ಲ. ಇತ್ತೀಚೆಗೆ ‘ಕ್ಯಾರಿ ಆನ್ ಜಟ್ಟಾ 3’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಕಪಿಲ್ ಅವರಿಗೆ ಆಮೀರ್​ , ‘ನೀವು ಸಿನಿಮಾ ಪ್ರಚಾರಕ್ಕೆ ನನ್ನನ್ನು ಕರೆದರೆ ನಾನು  ಬರುವುದಿಲ್ಲ. ನೀವು ನನ್ನನ್ನು ಮನರಂಜನೆಗಾಗಿ ಕರೆದರೆ ಖಂಡಿತ ಬರುತ್ತೇನೆ ಎಂದಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!