
ಕನ್ನಡ ಕಿರುತೆರೆ ಲೋಕದಲ್ಲಿ ಪೈಪೋಟಿ ಹೆಚ್ಚಾಗಿದೆ. ಧಾರಾವಾಹಿ(Serials) ಮತ್ತು ರಿಯಾಲಿಟಿ ಶೋಗಳು(Reality Show) ಒಂದು ವಾಹಿನಿಗಿಂತ ಮತ್ತೊಂದು ವಾಹಿನಿಗಳಲ್ಲಿ ನಾವೇನು ಕಮ್ಮಿ ಇಲ್ಲ ಎನ್ನುವಹಾಗಿ ಪೈಪೋಟಿಗೆ ಬಿದ್ದು ಮೂಡಿಬರುತ್ತಿವೆ. ಜೊತೆಗೆ ಕಿರುತೆರೆ ಪ್ರೇಕ್ಷಕರಿಗೆ ಬರಪೂರ ಮನರಂಜನೆ ನೀಡುತ್ತಿದ್ದಾರೆ. ಪ್ರತಿಯೊಂದು ಧಾರಾವಾಹಿಯೂ ಪ್ರೇಕ್ಷಕರ ಮನ ಸೆಳೆಯುತ್ತಿವೆ. ಒಂದಕ್ಕಿಂತ ಒಂದು ಧಾರಾವಾಹಿಗಳು ಕುತೂಹಲ ಮೂಡಿಸುತ್ತಿದ್ದು ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ಅದರಲ್ಲೂ ಹೊಸ ಧಾರಾವಾಹಿಗಳು ಅಭಿಮಾನಿಗಳ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿಸುತ್ತಿವೆ.
ಭಾರಿ ಪೈಪೋಟಿಗಳ ನಡುವೆಯೂ ಒಂದು ಧಾರಾವಾಹಿ ಎಲ್ಲವನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೆ ಏರಿದೆ. ಹೌದು, ಈ ವಾರದ TRP ಬಹಿರಂಗವಾಗಿದ್ದು ಮೊದಲ ಸ್ಥಾನ ಮತ್ತು ಕೊನೆಯ ಸ್ಥಾನಕ್ಕೆ ಇಳಿದ ಧಾರಾವಾಹಿ ಯಾವುದು ಎನ್ನುವುದು ಗೊತ್ತಾಗಿದೆ. ಅಂದಹಾಗೆ ಈ ವಾರ ಯಾವ ಧಾರಾವಾಹಿ ಟಾಪ್‌ನಲ್ಲಿದೆ. ಮೊದಲ ಸ್ಥಾನದಲ್ಲಿದ್ದ ಧಾರಾವಾಹಿ ಈಗ ಯಾವ ಸ್ಥಾನದಲ್ಲಿದೆ ಎನ್ನುವ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿದೆ.
ಮೊದಲ ಸ್ಥಾನದಲ್ಲಿ 'ಪುಟ್ಟಕ್ಕನ ಮಕ್ಕಳು'
ಅಂದಹಾಗೆ ಏಪ್ರಿಲ್ 15ರಂದು ಬಹಿರಂಗವಾಗಿರುವ ಟಿ ಆರ್ ಪಿಯಲ್ಲಿ ಮೊದಲ ಸ್ಥಾನದಲ್ಲಿ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇದೆ. 9.4 ರೇಟಿಂಗ್ ಪಡೆಯುವ ಮೂಲಕ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನ ಕಾಯ್ದುಕೊಂಡಿದೆ. ವಿಶೇಷ ಎಂದರೆ ಮೊದಲ ನಾಲ್ಕು ಸ್ಥಾನವನ್ನು ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳೇ ಅಲಂಕರಿಸಿವೆ. 8.2 ರೇಟಿಂಗ್ ಮೂಲಕ ಗಟ್ಟಿಮೇಳ ಧಾರಾವಾಹಿ 2ನೇ ಸ್ಥಾನದಲ್ಲಿದೆ. 7.9 ರೇಟಿಂಗ್ ಮೂಲಕ ಹಿಟ್ಲರ್ ಕಲ್ಯಾಣ ಧಾರಾವಾಹಿ 3ನೇ ಸ್ಥಾನದಲ್ಲಿ ಜೊತೆೆ ಜೊತೆಯಲ್ಲಿ ಧಾರಾವಾಹಿ ಇದೆ. ಟಾಪ್ 5 ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ಏಕೈಕ ಧಾರಾವಾಹಿ ಜಾಗಪಡೆದುಕೊಂಡಿದೆ.
Ramachari serial: ಅಯ್ಯಯ್ಯೋ, ರಾಮಾಚಾರಿ ಪಕ್ಕದಲ್ಲೇ ಮಲ್ಕೊಂಬಿಟ್ಲು ಚಾರು, ಮುಂದೇನು?
ಟಾಪ್ 5ನಲ್ಲಿ ಕಲರ್ಸ್ ಕನ್ನಡದ ಏಕೈಕ ಧಾರಾವಾಹಿ
ಟಾಪ್ 5 ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಧಾರಾವಾಹಿವಿದೆ. 6.2 ರೇಟಿಂಗ್ ಪಡೆಯುವ ಮೂಲಕ ರಾಮಾಚಾರಿ ಟಾಪ್ 5 ಸ್ಥಾನದಲ್ಲಿ ಜಾಗ ಪಡೆದಿದೆ. ಉಳಿದಂತೆ ಸತ್ಯ, ಲಕ್ಷ್ಮಣ, ಪಾರು, ಗಿಣಿರಾಮ ಮಂಗಳಗೌರಿ ಮದುವೆ ಮತ್ತು ನಾಗಾನಿ-2 ಕ್ರಮವಾಗಿ ಟಾಪ್ 10 ಲಿಸ್ಟ್ ನಲ್ಲಿ ಜಾಗ ಪಡೆದ ಧಾರಾವಾಹಿಯಾಗಿವೆ.
ಏಪ್ರಿಲ್ 8ರ ಟಿ ಆರ್ ಪಿ
ಅಂದಹಾಗೆ ಕಳೆದ ವಾರ ಅಂದರೆ ಏಪ್ರಿಲ್ 8ರಂದು ಬಂದ ಟಿ ಆರ್ ಪಿ ಯಲ್ಲೂ ಸಹ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೊದಲ ಸ್ಥಾನ ಅಲಂಕರಿಸಿತ್ತು. ಮೊದಲ 4 ಸ್ಥಾನವನ್ನು ಝೀ ಕನ್ನಡ ವಾಹಿನಿಯ ಧಾರಾವಾಹಿಗಳು ಆಕ್ರಮಿಸಿಕೊಂಡಿವೆ. 5 ನೇ ಸ್ಥಾನದಲ್ಲಿ ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಜಾಗ ಪಡೆದಿದೆ.
ಬೆಟ್ಟದ ಹೂ ಸೀರಿಯಲ್: ಮತ್ತೆ ರಾಹುಲ್ ಕೈಲಿ ತಾಳಿ ಕಟ್ಟಿಸ್ಕೊಳ್ಳೋ ಹೂವಿ, ಯಾಕ್ಹೀಗೆ?
12ನೇ ಸ್ಥಾನಕ್ಕೆ ಕುಸಿದ ಕನ್ನಡತಿ
ಅಂದಹಾಗೆ ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲೇ ನಂಬರ್ 1. ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ಈ ಮೊದಲು ಅಂದರೆ ಮಾರ್ಚ್ 22ರಂದು ಬಹಿರಂಗವಾದ ಟಿ ಆರ್ ಪಿ ಲಿಸ್ಟ್ ನಲ್ಲಿ ಗಟ್ಟಿಮೇಳ ಮೊದಲ ಸ್ಥಾನದಲ್ಲಿತ್ತು. 2ನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಇತ್ತು. ಅಲ್ಲದೇ ಮೊದಲ 5 ಸ್ಥಾನದಲ್ಲೂ ಝೀ ಕನ್ನಡ ವಾಹಿನಿಯ ಧಾರಾವಾಹಿ ಇತ್ತು. 6ನೇ ಸ್ಥಾನದಲ್ಲಿ ರಾಮಾಚಾರಿ ಜಾಗ ಪಡೆದಿತ್ತು. ಅಚ್ಚರಿಕರ ವಿಚಾರ ಎಂದರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರಾವಾಹಿ 12ನೇ ಸ್ಥಾನಕ್ಕೆ ಕುಸಿದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.