ಸಂಸದೆ ಕಂಗನಾ ವಾಸಿಸದ ಮನೆಗೆ 'ಕರೆಂಟ್​ ಶಾಕ್​' ಕೊಟ್ಟ ಕಾಂಗ್ರೆಸ್​ ಸರ್ಕಾರ! ಇನ್ನು ನಟಿ ಕೇಳಬೇಕೆ?

Published : Apr 09, 2025, 01:44 PM ISTUpdated : Apr 09, 2025, 02:10 PM IST
ಸಂಸದೆ ಕಂಗನಾ ವಾಸಿಸದ ಮನೆಗೆ 'ಕರೆಂಟ್​ ಶಾಕ್​' ಕೊಟ್ಟ ಕಾಂಗ್ರೆಸ್​ ಸರ್ಕಾರ! ಇನ್ನು ನಟಿ ಕೇಳಬೇಕೆ?

ಸಾರಾಂಶ

ನಟಿ ಕಂಗನಾ ರಣಾವತ್ ಮನಾಲಿಯಲ್ಲಿ ವಾಸಿಸದ ಮನೆಯ ವಿದ್ಯುತ್ ಬಿಲ್ ಒಂದು ಲಕ್ಷ ರೂಪಾಯಿ ಬಂದಿದ್ದಕ್ಕೆ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಖಾಲಿ ಮನೆಗೆ ಇಷ್ಟು ದೊಡ್ಡ ಬಿಲ್ ನೀಡುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ್ದಾರೆ. ಇತ್ತೀಚೆಗಷ್ಟೇ ಕಂಗನಾ ಮನಾಲಿಯಲ್ಲಿ 'ದಿ ಮೌಂಟೇನ್ ಸ್ಟೋರಿ' ಎಂಬ ಕೆಫೆಯನ್ನು ತೆರೆದಿದ್ದಾರೆ, ಇದು ಅವರ ಬಾಲ್ಯದ ಕನಸಾಗಿತ್ತು.

ಕಾಂಟ್ರವರ್ಸಿ ಕ್ವೀನ್​ ಎಂದೇ ಫೇಮಸ್​ ಆಗಿರೋ ಕಂಗನಾ ರಣಾವತ್​ (Kangana Ranaut) ಅವರ ಕೊನೆಯ ಚಿತ್ರ ಎಂದೇ ಹೇಳಲಾಗುತ್ತಿರುವ ಎಮರ್ಜೆನ್ಸಿ ಕೈಹಿಡಿಯಲಿಲ್ಲ. ಆದರೆ ಸಂಸದೆಯಾಗಿ ಸದ್ಯ ಮಾತುಗಳಿಂದಲೇ ಸದ್ದು ಮಾಡುತ್ತಿದ್ದಾರೆ ನಟಿ. ಕಳೆದ ತಿಂಗಳು ಮನಾಲಿಯಲ್ಲಿ ತಮ್ಮ ಬಾಲ್ಯದ ಕನಸಾಗಿರುವ ಕೆಫೆ ತೆರೆದು ಅದರಲ್ಲಿ ಬಿಜಿಯಾಗಿದ್ದಾರೆ. ಆದರೆ, ಇದೀಗ ಹಿಮಾಚಲ ಪ್ರದೇಶದ ಕಾಂಗ್ರೆಸ್​ ಸರ್ಕಾರ, ಸಂಸದೆಗೆ ಭರ್ಜರಿ ಕರೆಂಟ್  ಶಾಕ್​ ಕೊಟ್ಟಿದೆ. ಹಿಮಾಚಲ ಪ್ರದೇಶದ ಮನಾಲಿಯಲ್ಲಿರುವ ನಟಿಯ ಮನೆಯಲ್ಲಿ ಅವರು ವಾಸವಾಗಿಲ್ಲ. ಆದರೂ ಸರ್ಕಾರ ಒಂದು ಲಕ್ಷ ರೂಪಾಯಿ ಬಿಲ್​ ಮಾಡಿದ್ದು, ಕರೆಂಟ್​ ಶಾಕ್​ ಕೊಟ್ಟಿದೆ. ಇದರಿಂದ ತತ್ತರಿಸಿರುವ ಕಂಗನಾ ಇನ್ನು ಕೇಳಬೇಕೆ?

ಸದಾ ಕಾಂಗ್ರೆಸ್​ ಸರ್ಕಾರವನ್ನು ಬಾಯಿಗೆ ಬಂದಂತೆ ಬೈಯುತ್ತಲೇ, ಕೆಲವೊಮ್ಮೆ ವಿವಾದಗಳನ್ನೂ ಮೈಗೆಳೆದುಕೊಳ್ತಿರೋ ಕಂಗನಾ, ಈಗ ಈ ಪರಿಯ ಬಿಲ್​ ನೋಡಿ ಗರಂ ಆಗಿದ್ದಾರೆ. ಹಿಮಾಚಲ ಪ್ರದೇಶದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಮಂಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಂಗನಾ ರಣಾವತ್ ಭಾಗವಹಿಸಿದ್ದರು, ಅಲ್ಲಿ ಅವರು ರಾಜ್ಯದ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಮನಾಲಿಯ ತಮ್ಮ ಮನೆಯಲ್ಲಿ ಭಾರಿ ಪ್ರಮಾಣದ ವಿದ್ಯುತ್ ಬಿಲ್ ಬಂದಿದ್ದು, ಅಲ್ಲಿ ಅವರು ವಾಸಿಸುವುದೇ ಇಲ್ಲ ಎಂದು  ಹೇಳಿಕೊಂಡಿದ್ದಾರೆ.

ಮದ್ವೆಯಾಗೋದಾಗಿ ನಂಬಿಸಿ ಮೋಸ ಮಾಡಿದ ಹೃತಿಕ್​ ರೋಷನ್​ ಬಗ್ಗೆ ಕಂಗನಾ ರಣಾವತ್​ ಓಪನ್​ ಮಾತು!
 
ಯಾರೂ ವಾಸವಾಗದ ಮನೆಯೂ ಕರೆಂಟ್​ ಬಿಲ್​ ಕೊಡುವ ಕಾಂಗ್ರೆಸ್​ನ ನಡವಳಿಗೆ ನಾಚಿಕೆಗೇಡಿನದ್ದು. ರಾಜ್ಯದಲ್ಲಿ, ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಇನ್ನು ಸಾಮಾನ್ಯ ಜನರ ಸ್ಥಿತಿ ಹೇಗಾಗಿರಬೇಡ ಎಂದು ಕಂಗನಾ ಪ್ರಶ್ನಿಸಿದ್ದಾರೆ. ಸಾಮಾನ್ಯ ಜನರ ಗೋಳು ಯಾರಿಗೂ ಬೇಡವಾಗಿದೆ. ಈ ರೀತಿ ಎರ್ರಾಬಿರ್ರಿ ವಿದ್ಯುತ್​ ಬಿಲ್​ ಬಂದರ ಜನರ ಗತಿಯೇನು? ಅವರು ತಮ್ಮ ಹಕ್ಕಿಗಾಗಿ ಹೋರಾಟ ನಡೆಸಬೇಕಾ? ಎಂಥ ಸ್ಥಿತಿ ಬಂದಿದೆ ಎಂದೆಲ್ಲಾ ಕಿಡಿ ಕಾರಿದ್ದಾರೆ. ಖಾಲಿ ಮನೆಗಾಗಿ ಇಷ್ಟು ಹೆಚ್ಚಿನ ಬಿಲ್ ರಾಜ್ಯದ ಆಡಳಿತದ ಬಗ್ಗೆ ಕೆಟ್ಟದಾಗಿ ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
 
 ಅಂದಹಾಗೆ. ಹಿಮಾಚಲ ಪ್ರದೇಶದ ಸಂಸದೆಯೂ ಆಗಿರುವ ನಟಿ ಕಂಗನಾ ರಣಾವತ್​ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಕಳೆದ ಫೆಬ್ರುವರಿ 14ರಂದು ಪ್ರೇಮಿಗಳ ದಿನದಂದು  ಹಿಮಾಚಲ ಪ್ರದೇಶದ ಮನಾಲಿಯಲ್ಲಿ   'ದಿ ಮೌಂಟೇನ್ ಸ್ಟೋರಿ' ಎಂಬ ಕೆಫೆಯನ್ನು ಅವರು ಉದ್ಘಾಟಿಸಿದ್ದಾರೆ.  ಕೆಫೆ ಆರಂಭಿಸುವುದು ನನ್ನ ಬಾಲ್ಯದ ಆಸೆಯಾಗಿತ್ತು. ಬಹು ವರ್ಷಗಳ ಕನಸು ಈಡೇರಿದೆ ಎಂದು ನಟಿ, ಸಂಸದೆ ಹೇಳಿಕೊಂಡಿದ್ದಾರೆ. ಮೊದಲೇ ದಿನವೇ  ಪ್ರವಾಸಿಗರ ಗುಂಪು ಹರಿದು ಬಂತು.  ಯಾವುದೇ ರಿಬ್ಬನ್ ಕತ್ತರಿಸಲಾಗಿಲ್ಲ ಅಥವಾ ಯಾವುದೇ ಪೂಜೆಯನ್ನು ನಡೆಸಲಾಗಿಲ್ಲ. ಬದಲಿಗೆ ಪ್ರವಾಸಿಗರ ಆಗಮನದೊಂದಿಗೆ ಉದ್ಘಾಟನೆ ಮಾಡಿರುವುದು ವಿಶೇಷ.  ದಿ ಮೌಂಟೇನ್ ಸ್ಟೋರಿ ಕೆಫೆಯ ಮೊದಲ ದಿನ, ಕಂಗನಾ ಅವರು ತಮ್ಮ ಕುಟುಂಬದೊಂದಿಗೆ ಸಂಜೆ ಕೆಫೆಯನ್ನು ತಲುಪಿದರು.  ಕುಟುಂಬದ ಸದಸ್ಯರ ಜೊತೆಯಲ್ಲಿ  ಕೆಲವು ಗಂಟೆಗಳ ಕಾಲ ಕಳೆದರು ಮತ್ತು ಅಲ್ಲಿಗೆ ಬಂದ ಪ್ರವಾಸಿಗರನ್ನು ಸಹ ಭೇಟಿಯಾದರು.  ದಿ ಮೌಂಟೇನ್ ಸ್ಟೋರಿಯಲ್ಲಿ ಜನರು ಸಾಂಪ್ರದಾಯಿಕ ಭಕ್ಷ್ಯಗಳನ್ನು ಸವಿಯಲಿದ್ದಾರೆ. ಇಲ್ಲಿ ಸಸ್ಯಾಹಾರಿ ಥಾಲಿಯ ಬೆಲೆ 780 ರೂ.ಗಳಾಗಿದ್ದರೆ, ಮಾಂಸಾಹಾರಿ ಥಾಲಿ 850 ರೂ.ಗಳಿಗೆ ಲಭ್ಯವಿರುತ್ತದೆ. ಮತ್ತು ಇಲ್ಲಿ ಚಹಾಕ್ಕೆ 30 ರೂಪಾಯಿ ನಿಗದಿ ಮಾಡಲಾಗಿದೆ. ಈ ಕೆಫೆ ಮನಾಲಿಯಿಂದ 4 ಕಿ.ಮೀ ದೂರದಲ್ಲಿರುವ ಪರಿಣಿಯಲ್ಲಿದೆ.   

ನಟಿ ಕಂಗನಾ ಹೊಸ ರೆಸ್ಟೋರೆಂಟ್​ ಓಪನ್​: ವೆಜ್​-ನಾನ್​ ವೆಜ್​; ಎಷ್ಟೆಷ್ಟು ರೇಟ್? ಇಲ್ಲಿದೆ ಡಿಟೇಲ್ಸ್​...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!