
ಬಾಲಿವುಡ್ ಹಿರಿಯ ನಟಿ ರೇಖಾ (Bollywood senior Actress Rekha) ಸಿನಿಮಾ ಜೊತೆ ವೈಯಕ್ತಿಕ ವಿಷ್ಯಕ್ಕೂ ಸಾಕಷ್ಟು ಸುದ್ದಿಯಲ್ಲಿರ್ತಾರೆ. 70ನೇ ವಯಸ್ಸಿನಲ್ಲೂ ಮಿಂಚುತ್ತಿರುವ ರೇಖಾ ಜೀವನ ಸಾಕಷ್ಟು ರಹಸ್ಯದಿಂದ ಕೂಡಿದೆ. ಪ್ರೀತಿ, ಪ್ರಣಯದ ಜೊತೆ ಸಾಕಷ್ಟು ನೋವು ತಿಂದಿರುವ ರೇಖಾ ಈಗ್ಲೂ ಒಬ್ಬಂಟಿ ಜೀವನ ನಡೆಸುತ್ತಿದ್ದಾರೆ. ರೇಖಾ 15ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಬಂದವರು. ಆದ್ರೆ ಮೊದಲ ಸಿನಿಮಾದಲ್ಲೇ ರೇಖಾಗೆ ಮೋಸವಾಗಿತ್ತು. ಅವರ ಒಪ್ಪಿಗೆ ಇಲ್ಲದೆ ಅವರಿಗಿಂತ ಹಿರಿಯ ನಟ ಅವರಿಗೆ ಮುತ್ತಿಟ್ಟಿದ್ದ. ಚಿಕ್ಕ ವಯಸ್ಸಿನಲ್ಲೇ ಆಘಾತವಾದ್ರೂ ರೇಖಾ ಕುಗ್ಗಲಿಲ್ಲ. ತಮ್ಮ ಸಿನಿಮಾ ವೃತ್ತಿಯನ್ನು ಮುಂದುವರೆಸಿ ಯಶಸ್ವಿಯಾದ್ರು. ಈಗ ರೇಖಾ ತಮ್ಮ ಜೀವನ ಚರಿತ್ರೆಯ ಪುಸ್ತಕ ದಿ ಅನ್ಟೋಲ್ಡ್ ಸ್ಟೋರಿ (The Untold Story) ಯಲ್ಲಿ ಬಹಿರಂಗಪಡಿಸಿದ್ದಾರೆ.
ಒಂದು ಮುತ್ತಿನ ಕಥೆ : ರೇಖಾ ಮೊದಲ ಸಿನಿಮಾ ಅಂಜಾನಾ ಸಫರ್. 1969 ರಲ್ಲಿ ಈ ಸಿನಿಮಾ ಮೂಲಕ ರೇಖಾ ತಮ್ಮ ವೃತ್ತಿ ಜೀವನ ಶುರು ಮಾಡಿದ್ದರು. ಈ ಸಿನಿಮಾದಲ್ಲಿ ರೇಖಾ ಜೊತೆ ಕಾಣಿಸಿಕೊಂಡಿದ್ದು ಸೂಪರ್ಸ್ಟಾರ್ ಬಿಸ್ವಜಿತ್ ಚಟರ್ಜಿ. ಬಿಸ್ವಜಿತ್, ರೇಖಾಗಿಂತ 17 ವರ್ಷ ದೊಡ್ಡವರು. ಆಗ ಬಿಸ್ವಜಿತ್ ಚಟರ್ಜಿ ವಯಸ್ಸು 32 ಆಗಿತ್ತು. ಸಿನಿಮಾ ಶೂಟಿಂಗ್ ವೇಳೆ ಬಿಸ್ವಜಿತ್ ಚಟರ್ಜಿ ರೇಖಾರನ್ನು ಐದು ನಿಮಿಷಗಳ ಕಾಲ ಬಲವಂತವಾಗಿ ಮುತ್ತಿಟ್ಟಿದ್ದರು. ರೇಖಾ ತಮ್ಮ ಆತ್ಮಚರಿತ್ರೆಯಲ್ಲಿ, ಚಲನಚಿತ್ರ ನಿರ್ದೇಶಕ ಕುಲ್ಜೀತ್ ಪಾಲ್ ಅವರು ತಮ್ಮ ಒಪ್ಪಿಗೆಯಿಲ್ಲದೆ ತಮ್ಮಿಂದ ಕಿಸ್ಸಿಂಗ್ ದೃಶ್ಯ ಪಡೆಯಲು ಪಿತೂರಿ ನಡೆಸಿದ್ದರು ಎಂದು ಬರೆದಿದ್ದಾರೆ.
ಆ ಎನರ್ಜಿನ ತಡ್ಕೊಳ್ಳೋಕೆ ಆಗಲ್ಲ.. ಎನ್‌ಟಿಆರ್ ಹೊಡೆತಕ್ಕೆ ಮೂರು ದಿನ ಜ್ವರ ಬಂದು ಮಂಚ ಸೇರಿದ್ರು ಆ ನಟಿ!
ಅಂಜಾನಾ ಸಫರ್ ಚಿತ್ರಕ್ಕೆ ನಂತ್ರ ದೋ ಶಿಕಾರಿ ಅಂತ ನಾಮಕರಣ ಮಾಡಲಾಯ್ತು. ಈ ಸಿನಿಮಾದಲ್ಲಿ ಬಿಸ್ವಜಿತ್ ಒಂದು ದೃಶ್ಯದಲ್ಲಿ ರೇಖಾ ಜೊತೆ ರೋಮ್ಯಾನ್ಸ್ ಮಾಡ್ಬೇಕಿತ್ತು. ಕ್ಯಾಮೆರಾ ತಿರುಗಲು ಪ್ರಾರಂಭಿಸಿದ ತಕ್ಷಣ, ಬಿಸ್ವಜಿತ್ 15 ವರ್ಷದ ರೇಖಾಳನ್ನು ತಮ್ಮ ಕಡೆಗೆ ಎಳೆದುಕೊಂಡು ಬಲವಂತವಾಗಿ ಅವರ ತುಟಿಗಳಿಗೆ ಮುತ್ತಿಡಲು ಪ್ರಾರಂಭಿಸಿದರು. ರೇಖಾ ಅಚ್ಚರಿಗೊಳಗಾಗಿದ್ದರು. ಐದು ನಿಮಿಷಗಳ ಕಾಲ ಈ ಕಿಸ್ಸಿಂಗ್ ದೃಶ್ಯ ಶೂಟ್ ಆಗಿತ್ತು. ನಿರ್ದೇಶಕರು ಕಟ್ ಕೂಡ ಹೇಳಿರಲಿಲ್ಲ ಎಂದು ರೇಖಾ ಬರೆದಿದ್ದಾರೆ. ನಿರ್ದೇಶಕರೇ ಈ ಕಿಸ್ ಪ್ಲಾನ್ ಮಾಡಿದ್ದರು ಎಂದು ರೇಖಾ ಹೇಳಿದ್ದಾರೆ. ಶೂಟಿಂಗ್ ಮುಗಿಯುತ್ತಿದ್ದಂತೆ ರೇಖಾ ಅಳಲು ಶುರು ಮಾಡಿದ್ರು. ಸೆಟ್ನಿಂದ ಓಡಿಹೋಗಿದ್ರು. ಚಿಕ್ಕ ವಯಸ್ಸಿನಲ್ಲಿ ನಿರ್ದೇಶಕರು ತನ್ನನ್ನು ನಡೆಸಿಕೊಂಡ ರೀತಿಗೆ ರೇಖಾ ಆಘಾತಗೊಂಡಿದ್ದರು. ನಂತ್ರ ಅವರನ್ನು ಮನವೊಲಿಸಿ, ಸೆಟ್ ಗೆ ಕರೆತರಲಾಗಿತ್ತು.
Kannada Entertainment Live: ಅಬ್ಬಬ್ಬಾ..ಸೊಸೆಗೆ ತಕ್ಕಂತೆ ಮಾಡರ್ನ್
ಆ ಕಾಲದಲ್ಲಿ ಈ ವಿಷ್ಯ ಸಾಕಷ್ಟು ಚರ್ಚೆಯಾಗಿತ್ತು. ಪತ್ರಿಕೆಗಳಲ್ಲಿ ಈ ಸುದ್ದಿ ಪ್ರಕಟಗೊಂಡಿತ್ತು. ಅನೇಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇಷ್ಟಾದ್ರೂ ಸಿನಿಮಾದಿಂದ ದೃಶ್ಯವನ್ನು ತೆಗೆಯಲಿಲ್ಲ. ಸಂದರ್ಶನವೊಂದರಲ್ಲಿ ಬಿಸ್ವಜಿತ್ ಈ ಬಗ್ಗೆ ಹೇಳಿದ್ದಾರೆ. ಈ ಚುಂಬನ ಘಟನೆ ಪತ್ರಿಕೆಗಳಲ್ಲಿ ಚರ್ಚೆಯ ವಿಷಯವಾಯಿತು ಮತ್ತು ವಿವಾದಕ್ಕೂ ಕಾರಣವಾಯಿತು. ಟೀಕೆಗಳ ಹೊರತಾಗಿಯೂ, ಆ ದೃಶ್ಯವನ್ನು ಚಿತ್ರದಲ್ಲಿ ಉಳಿಸಿಕೊಳ್ಳಲಾಯಿತು. ನಿರ್ದೇಶಕರ ಸೂಚನೆಯನ್ನು ನಾನು ಪಾಲಿಸಿದ್ದೆ ಎಂದು ಬಿಸ್ವಜಿತ್ ಸಂದರ್ಶನವೊಂದರಲ್ಲಿ ತಮ್ಮನ್ನು ಸಮರ್ಥಿಸಿಕೊಂಡಿದ್ದರು. ಪ್ರೇಕ್ಷಕರಿಗೆ ಈ ದೃಶ್ಯ ತುಂಬಾ ಇಷ್ಟವಾಗಿತ್ತು ಎಂದೂ ಬಿಸ್ವಜಿತ್ ಹೇಳಿದ್ದರು. ಚುಂಬನದ ದೃಶ್ಯವಿದ್ರೂ ದೋ ಶಿಕಾರಿ ಬಾಕ್ಸ್ ಆಫೀಸ್ನಲ್ಲಿ ಐಶಸ್ವಿಯಾಗಿರಲಿಲ್ಲ. ಸಿನಿಮಾ ಶೂಟಿಂಗ್ ಪೂರ್ಣಗೊಂದು ವರ್ಷಗಳೇ ಆದ್ರೂ ಸಿನಿಮಾ ತೆರೆಗೆ ಬಂದಿರಲಿಲ್ಲ. 1979 ರಲ್ಲಿ ದೋ ಶಿಕಾರಿ ಹೆಸರಿನಲ್ಲಿ ಸಿನಿಮಾ ರಿಲೀಸ್ ಮಾಡಿದ್ರೂ ಸಿನಿಮಾಗೆ ಯಶಸ್ಸು ಸಿಗಲಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.