ಪ್ರೇಮಿಗಳ ದಿನಕ್ಕೆ ಕಂಗನಾ ರಣಾವತ್​ ಗುಡ್​​ನ್ಯೂಸ್​: ಸದ್ಯ ದೀಪಿಕಾಗೆ ಆಹ್ವಾನ! ವಿಡಿಯೋ ಶೇರ್​ ಮಾಡಿದ ಸಂಸದೆ

Published : Feb 07, 2025, 09:39 AM ISTUpdated : Feb 07, 2025, 09:44 AM IST
ಪ್ರೇಮಿಗಳ ದಿನಕ್ಕೆ ಕಂಗನಾ ರಣಾವತ್​ ಗುಡ್​​ನ್ಯೂಸ್​: ಸದ್ಯ ದೀಪಿಕಾಗೆ ಆಹ್ವಾನ! ವಿಡಿಯೋ ಶೇರ್​ ಮಾಡಿದ ಸಂಸದೆ

ಸಾರಾಂಶ

ಎಮರ್ಜೆನ್ಸಿ ಚಿತ್ರ ನಿರೀಕ್ಷಿತ ಯಶಸ್ಸು ಕಾಣದ ಕಂಗನಾ ರಣಾವತ್, ಮನಾಲಿಯಲ್ಲಿ 'ದಿ ಮೌಂಟೇನ್ ಸ್ಟೋರಿ' ಕೆಫೆ ಆರಂಭಿಸಿದ್ದಾರೆ. ಬಾಲ್ಯದ ಕನಸು ನನಸಾಗಿದೆ ಎಂದಿರುವ ಅವರು, ಹತ್ತು ವರ್ಷಗಳ ಹಿಂದೆ ಕೆಫೆಗೆ ಮೊದಲ ಗ್ರಾಹಕಿ ಆಗುವುದಾಗಿ ಹೇಳಿದ್ದ ದೀಪಿಕಾ ಪಡುಕೋಣೆಗೆ ಆಹ್ವಾನ ನೀಡಿದ್ದಾರೆ.

ನಟಿ ಕಂಗನಾ ರಣಾವತ್​ ಅವರ ಬಹು ವಿವಾದಿತ ಎಮರ್ಜೆನ್ಸಿ ಚಿತ್ರ ಅಂದುಕೊಂದಷ್ಟು ಯಶಸ್ಸು ಕಾಣಿಸಲಿಲ್ಲ. ಸದ್ಯ 19 ಕೋಟಿ ರೂಪಾಯಿ ಗಳಿಸುವಲ್ಲಿಯಷ್ಟೇ ಯಶಸ್ವಿಯಾಗಿದೆ. ಹಿಮಾಚಲ ಪ್ರದೇಶದಿಂದ ಸಂಸದೆಯಾದ ಬಳಿಕ, ಮತ್ತೆ ಚಿತ್ರ ಮಾಡುವುದಿಲ್ಲ ಎಂಬ ಬಗ್ಗೆ ಪರೋಕ್ಷವಾಗಿ ಹೇಳಿದ್ದ ನಟಿ, ಇದೀಗ ಗುಡ್​ನ್ಯೂಸ್​ ನೀಡಿದ್ದಾರೆ. ಫೆಬ್ರುವರಿ 14ರಂದು ತಮ್ಮ ಬಾಲ್ಯದ ಕನಸನ್ನು ಸಾಕಾರಗೊಳಿಸುವತ್ತ ಅವರು ದಿಟ್ಟ ಹೆಜ್ಜೆಯಿಟ್ಟಿದ್ದಾರೆ. ಸದ್ಯ ದೀಪಿಕಾ ಪಡುಕೋಣೆಗೆ ಅವರು ಆಹ್ವಾನ ಇತ್ತಿದ್ದಾರೆ. ಈ ಗುಡ್​ನ್ಯೂಸ್​ ಏನೆಂದರೆ,  ಹಿಮಾಚಲ ಪ್ರದೇಶದ ಮನಾಲಿಯಲ್ಲಿ   'ದಿ ಮೌಂಟೇನ್ ಸ್ಟೋರಿ' ಎಂಬ ಕೆಫೆಯನ್ನು ಅವರು ಉದ್ಘಾಟನೆ ಮಾಡಲಿದ್ದಾರೆ. ದೀಪಿಕಾ ಪಡುಕೋಣೆ ಈ ಕೆಫೆಗೆ ಮೊದಲ ಅತಿಥಿ ಎಂದು ಅವರು ಹೇಳಿದ್ದಾರೆ.

ಕೆಫೆಯ ಸುಂದರ ದೃಶ್ಯಗಳನ್ನು ಹಾಗೂ  ಒಳಾಂಗಣದ ಸೌಂದರ್ಯವನ್ನು, ತಾವು ಆಹಾರ ನೀಡುತ್ತಿರುವ ವಿಡಿಯೋಗಳನ್ನು ಹಿಮಾಚಲ ಪ್ರದೇಶದ ಕೆಲವು ಜನರ ಜೊತೆಗೂಡಿ ಇರುವ ದೃಶ್ಯಗಳನ್ನು ಕಂಗನಾ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಕೆಫೆ ಆರಂಭಿಸುವುದು ನನ್ನ ಬಾಲ್ಯದ ಆಸೆಯಾಗಿತ್ತು. ಬಹು ವರ್ಷಗಳ ಕನಸು ಈಡೇರಿದೆ ಎಂದು ನಟಿ, ಸಂಸದೆ ಹೇಳಿಕೊಂಡಿದ್ದಾರೆ. ವಿಡಿಯೋ ನೋಡಿ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ.  

ಅವರು ಬೆಂಕಿ ಹಚ್ತಿದ್ದಾರೆ, ನಾವು ಸುಡ್ತಿದ್ದೇವೆ, ತುಂಬಾ ನೋವಾಗ್ತಿದೆ... ಕಂಗನಾ ರಣಾವತ್​ ವಿಡಿಯೋ ವೈರಲ್​

ಇದೇ ಸಂದರ್ಭದಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆ ಕಂಗನಾ ಮಾತನಾಡಿರುವ ವಿಡಿಯೋ ಒಂದು ವೈರಲ್​ ಆಗುತ್ತಿದೆ. ಈ ವಿಡಿಯೋಗೂ, ಕಂಗನಾ ತಮ್ಮ ಮೊದಲ ಅತಿಥಿ ದೀಪಿಕಾ ಪಡುಕೋಣೆ ಎನ್ನುವುದಕ್ಕೂ ಒಂದು ನಂಟಿದೆ. ಅದೇನೆಂದರೆ  2013ರಲ್ಲಿ ಕಂಗನಾ ಸಂದರ್ಶನವೊಂದನ್ನು ನೀಡಿದ್ದರು. ಆ ಸಮಯದಲ್ಲಿ  ದೀಪಿಕಾ ಪಡುಕೋಣೆ ಕೂಡ ಹಾಜರಿದ್ದರು. ಆಗ ಕಂಗನಾ ಅವರು, ನಾನು ಪ್ರಪಂಚದ ಹಲವು ದೇಶಗಳಲ್ಲಿ, ಹಲವು ಹೋಟೆಲ್​ಗಳಲ್ಲಿ  ಊಟ ಸವಿದಿರುತ್ತೇನೆ. ಹಲವಾರು ರೀತಿಯ ಪಾಕವಿಧಾನಗಳನ್ನು ಆಸ್ವಾದಿಸಿರುತ್ತೇನೆ. ನಾನು ಒಂದು ತುಂಬಾ ಸುಂದರವಾದ, ಚಿಕ್ಕ ಕೆಫೆಟೇರಿಯಾವನ್ನು ಹೊಂದಲು ಬಯಸುತ್ತೇನೆ. ಇದು ನನ್ನ ಬಾಲ್ಯದ ಕನಸು. ನನಗೆ ಆಹಾರದ ಬಗ್ಗೆ ತುಂಬಾ ಚೆನ್ನಾಗಿ ತಿಳಿದಿದೆ ಎಂದಿದ್ದರು.  ಆಗ ತಕ್ಷಣ ಅಲ್ಲಿಯೇ ಹಾಜರು ಇದ್ದ ದೀಪಿಕಾ,  "ನಾನು ನಿಮ್ಮ ಮೊದಲ ಗ್ರಾಹಕಿ ಆಗುತ್ತೇನೆ" ಎಂದಿದ್ದರು. ಇದೇ ಕಾರಣಕ್ಕೆ, ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಕೆಫೆ ವಿಡಿಯೋದ ಜೊತೆಗೆ ಆ ಹಳೆಯ ಸಂದರ್ಶನದ ವಿಡಿಯೋ ಕೂಡ ಶೇರ್​ ಮಾಡಿರುವ ಕಂಗನಾ, ದೀಪಿಕಾಗೆ ಅದನ್ನು  ಟ್ಯಾಗ್ ಮಾಡಿದ್ದಾರೆ. ನೀವೇ ಮೊದಲ ಗ್ರಾಹಕಿಯಾಗಬೇಕು" ಎಂದು  ಆಹ್ವಾನಿಸಿದ್ದಾರೆ.

ಇನ್ನು ಕಂಗನಾ ಅವರ ಎಮರ್ಜೆನ್ಸಿ ಚಿತ್ರದ ಕುರಿತು ಹೇಳುವುದಾದರೆ,   ಕಳೆದ ಜನವರಿ 17ರಂದು ಚಿತ್ರ ತೆರೆ ಕಂಡಿದೆ.  ನಾಲ್ಕೈದು ಬಾರಿ ಚಿತ್ರ ಬಿಡುಗಡೆಯ ಸಮೀಪಕ್ಕೆ ಬಂದು ನಂತರ ಬಿಡುಗಡೆ ಸ್ಟಾಪ್​ ಆಗಿತ್ತು. ಕಳೆದ ಬಾರಿ ಇನ್ನೇನು ಬಿಡುಗಡೆಗೆ ಸೆನ್ಸಾರ್​ ಮಂಡಳಿ ಅನುಮತಿ ಸಿಕ್ಕಿದ್ದರೂ ಕುತೂಹಲದ ಘಟ್ಟದಲ್ಲಿ, ಅಚ್ಚರಿಯ ಬೆಳವಣಿಗೆಯ ನಡುವೆ, ಸೆನ್ಸಾರ್​ ಮಂಡಳಿ ಯೂಟರ್ನ್​ ಹೊಡೆದಿತ್ತು.  ಝೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಬರುತ್ತಿರುವ 'ಎಮರ್ಜೆನ್ಸಿ' ಚಿತ್ರವು ಮೊದಲ ಮಹಿಳಾ ಪ್ರಧಾನಿ  ಇಂದಿರಾಗಾಂಧಿಯನ್ನು ಆಧರಿಸಿದ ಮೆಗಾ-ಬಜೆಟ್ ಚಲನಚಿತ್ರವಾಗಿದೆ. ಇದಾಗಲೇ ಹಲವು ಬಾರಿ ಮುಂದೂಡಲ್ಪಟ್ಟಿದ್ದ ಈ ಚಿತ್ರಕ್ಕೆ ಮುಕ್ತಿ ಸಿಕ್ಕಿದ್ದರೂ ಕೆಲವು ಕಡೆಗಳಲ್ಲಿ ನಿಷೇಧದ ಬಿಸಿಯೂ ಮುಟ್ಟಿದೆ. ಆದರೆ ಇದೀಗ ಹೇಳಿಕೊಳ್ಳುವಷ್ಟು ಕಮಾಯಿ ಮಾಡಲಿಲ್ಲ. 

ಕಂಗನಾ ಮದ್ವೆ ಯಾವಾಗ? ಸಂಸದ ಚಿರಾಗ್‌ ಪಾಸ್ವಾನ್‌ ಜೊತೆ ಏನು ನಡೀತಿದೆ? ಬಾಯ್ಬಿಟ್ಟ ನಟಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮದುವೆ ಆಗದೇ ಆ ಸ್ಟಾರ್ ನಟನಿಂದ ಮಗುವನ್ನು ಪಡೆಯಲು ಬಯಸಿದ್ದ ಆ ನಟಿಗೆ ಕೊನೆಗೆ ಆಗಿದ್ದೇನು?
ಈಗ್ಲೂ ಬ್ಯಾಚ್ಯುಲರ್ Salman Khan ಡಿಸೆಂಬರ್ 27ಕ್ಕೆ ಹುಟ್ಟಿದ್ದೇ ಒಂಟಿತನಕ್ಕೆ ಕಾರಣವಾಯ್ತಾ?