
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅತ್ತೆ ಮಾವನ ಮನೆ ಝಲ್ಸಾದಿಂದ ದೂರ ಬಂದು ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಐಶ್ವರ್ಯಾ ರೈ ಹಾಗೂ ನಟ ಪತಿ ಅಭಿಷೇಕ್ ಬಚ್ಚನ್ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಸುದ್ದಿಗಳ ಮಧ್ಯೆ ಅತ್ತೆ ಮಾವನಿಂದ ದೂರವಾಗಿ ವಾಸಿಸುತ್ತಿರುವ ವಿಚಾರ ಸಾಕಷ್ಟು ಚರ್ಚೆಗಳಾಗಿದ್ದವು. ಹೀಗಿರುವಾ ಐಶ್ವರ್ಯಾ ರೈ ಮಾವನೂ ಆಗಿರುವ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ನಡೆಸಿಕೊಡು ಕೆಬಿಸಿ(ಕೋಟ್ಯಾಧಿಪತಿ) ಶೋಗೆ ಆಗಮಿಸಿದ ಸ್ಪರ್ಧಿಯೊಬ್ಬರು ಐಶ್ವರ್ಯಾ ರೈ ಅವರು ಎಷ್ಟು ಚೆಂದ ಇದ್ದಾರೆ ಎಂದು ಹೇಳುತ್ತಾ ಅವರನ್ನು ಬಾಯ್ತುಂಬ ಹೊಗಳುತ್ತಾರೆ. ಆದರೆ ಇದಕ್ಕೆ ಅಮಿತಾಭ್ ಬಚ್ಚನ್ ಪ್ರತಿಕ್ರಿಯಿಸಿದ್ದು, ಆ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಿಂದಿಯ ಸೋನಿ ಟಿವಿಗಾಗಿ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ನಡೆಸಿಕೊಡುವ 'ಕೌನ್ ಬನೇಗಾ ಕ್ರೋರ್‌ಪತಿ' ಶೋ ಇತ್ತೀಚಿನ ಎಪಿಸೋಡೊಂದರಲ್ಲಿ ಸ್ಪರ್ಧಿಯಾಗಿ ಬಂದ ಪ್ರನುಷಾ ಥಾಮ್ಕೆ ಎಂಬ ಯುವತಿ, ಅಮಿತಾಬ್ ಜೊತೆ ಮಾತನಾಡುತ್ತಾ ಅವರ ಸೊಸೆಯಾದ ಐಶ್ವರ್ಯಾ ರೈಯವರನ್ನು ಹೊಗಳಿದ್ದಾರೆ. ಸಾಮಾನ್ಯವಾಗಿ ಕಾರ್ಯಕ್ರಮ ನಡೆಸಿಕೊಡುವ ಅಮಿತಾಭ್ ಬಚ್ಚನ್ ಅವರು ಸ್ಪರ್ಧಿಯಾಗಿ ಬರುವ ಪ್ರತಿಯೊಬ್ಬ ಸ್ಪರ್ಧಿಯ ಜೊತೆಗೆ ತುಂಬಾ ಆತ್ಮೀಯವಾಗಿ ಮಾತನಾಡುತ್ತಾ ಕ್ಷೇಮ ವಿಚಾರಿಸುತ್ತಾರೆ. ಅದೇ ರೀತಿ ಪ್ರನುಷಾ ಜೊತೆ ಮಾತನಾಡಿದಾಗ ಪ್ರನುಷಾ ಅವರು ಐಶ್ವರ್ಯಾ ಅವರನ್ನು ಹೊಗಳುತ್ತಾ ಅವರ ಸೌಂದರ್ಯವನ್ನು ಬಣ್ಣಿಸಿದ್ದಾರೆ. ಅಲ್ಲದೇ ಕೆಲವು ಬ್ಯೂಟಿ ಟಿಪ್ಸ್ ನೀಡುವಂತೆ ಮನವಿ ಮಾಡಿದ್ದಾರೆ.
ಸರ್, ಐಶ್ವರ್ಯ ರೈ ಬಹುತ್ ಖೂಬ್‌ಸೂರತ್ ಹೈಂ (ಸರ್, ಐಶ್ವರ್ಯ ರೈ ತುಂಬಾ ಸುಂದರವಾಗಿದ್ದಾರೆ) ಎಂದು ಪ್ರನುಷಾ ಹೇಳಿದ್ದಾರೆ, ಅದಕ್ಕೆ ಅಮಿತಾಬ್ ಬಚ್ಚನ್, 'ಹಾನ್, ಹಮ್ ಜಾಂತೇ ಹೈ (ಹೌದು, ನನಗೆ ಗೊತ್ತು)' ಎಂದು ಉತ್ತರಿಸಿದ್ದಾರೆ. ನಂತರ ಮುಂದುವರಿದು ಮಾತನಾಡಿದ ಅಮಿತಾಬ್ ಬಚ್ಚನ್, ದೇಖಿಯೇ, ಏಕ್ ಬಾತ್ ಬತಾಯೆ ಆಪ್ಕೋ. ಚೆಹ್ರೆ ಕಿ ಖೂಬ್ಸುರಾತಿ, ವೋ ಕುಚ್ ಸಲೂನ್ ಮೇ ಮಿಟ್ ಜಾಯೇಗಿ, ಲೇಕಿನ್ ಆಪ್ಕೆ ದಿಲ್ ಕಿ ಖೂಬ್ಸುರಾತಿ, ವೋ ಸಬ್ ಸೆ ಅಹೇಮ್ ರೆಹತಿ ಹೈ (ನೋಡಿ, ನಾನು ನಿಮಗೆ ಒಂದು ವಿಷಯ ಹೇಳುತ್ತೇನೆ. ಕೆಲವು ವರ್ಷಗಳಲ್ಲಿ ನಿಮ್ಮ ಮುಖದ ಸೌಂದರ್ಯವು ಮರೆಯಾಗುತ್ತದೆ, ಆದರೆ ನಿಮ್ಮ ಹೃದಯದ ಸೌಂದರ್ಯವು ಶಾಶ್ವತವಾಗಿ ಉಳಿಯಬೇಕು ಅದು ಅತ್ಯಂತ ಮುಖ್ಯವಾದ ವಿಷಯ).' ಎಂದು ಹೇಳಿದ್ದಾರೆ.
ಅಂದಹಾಗೆ ಐಶ್ವರ್ಯಾ ರೈ ಅವರು 2007ರಲ್ಲಿ ಅಮಿತಾಭ್ ಬಚ್ಚನ್ ಪುತ್ರ ನಟ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಿದ್ದು, ಈ ಜೋಡಿಗೆ ಮಗಳು ಆರಾಧ್ಯ ಬಚ್ಚನ್ ಇದ್ದಾಳೆ. ಅಮಿತಾಬ್ ಬಚ್ಚನ್ ಮತ್ತು ಐಶ್ವರ್ಯಾ ರೈ ಮೊಹಬ್ಬತೇನ್, ಖಾಕಿ ಮತ್ತು ಸರ್ಕಾರ್ ಸೇರಿದಂತೆ ಹಲವಾರು ಯೋಜನೆಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಅಮಿತಾಭ್ ಬಚ್ಚನ್ ಕೊನೆಯದಾಗಿ ಕಳೆದ ವರ್ಷ ಬಿಡುಗಡೆಯಾದ ಕಲ್ಕಿ 2898 ADಯಲ್ಲಿ ನಟಿಸಿದ್ದಾರೆ. ಈ ಕಲ್ಕಿ 2898 AD ಯಲ್ಲಿ ದೀಪಿಕಾ ಪಡುಕೋಣೆ, ಪ್ರಭಾಸ್ ಮತ್ತು ಕಮಲ್ ಹಾಸನ್ ಅವರೊಂದಿಗೆ ಅಮಿತಾಭ್ ಕಾಣಿಸಿಕೊಂಡಿದ್ದರು. ಮುಂದೆ ಅಮಿತಾಭ್ ರಿಭು ದಾಸ್‌ಗುಪ್ತ ಅವರ ಸೆಕ್ಷನ್ 84 ಸಿನಿಮಾದ ಭಾಗವಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.