ಪಠಾಣ್ ಗಳಿಕೆಗೆ ಕಾಜೋಲ್​ ವ್ಯಂಗ್ಯ: ಶಾರುಖ್​ ಫ್ಯಾನ್ಸ್​ ಗರಂ- ನಟಿ ಹೇಳಿದ್ದಾದ್ರೂ ಏನು?

By Suvarna News  |  First Published Jul 16, 2023, 5:47 PM IST

ಪಠಾಣ್​ ಚಿತ್ರದ ಗಳಿಕೆ ಕುರಿತು ಬಾಲಿವುಡ್​ ನಟಿ ಕಾಜೋಲ್​ ವ್ಯಂಗ್ಯದ ರೀತಿಯಲ್ಲಿ ಮಾತನಾಡಿದ್ದಾರೆ. ಇದರಿಂದ ಶಾರುಖ್​ ಫ್ಯಾನ್ಸ್​ ಗರಂ ಆಗಿದ್ದಾರೆ. ನಟಿ ಹೇಳಿದ್ದೇನು?
 


ಪಠಾಣ್​ ಚಿತ್ರದ (Pathaan Movie) ಭರ್ಜರಿ ಯಶಸ್ಸಿನ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಒಂದರ ಮೇಲೊಂದರಂತೆ ಫ್ಲಾಪ್​ ಸಿನಿಮಾ ನೀಡಿ ಮೂರ್ನಾಲ್ಕು ವರ್ಷ ಬ್ರೇಕ್​ ತೆಗೆದುಕೊಂಡಿದ್ದ ನಟ ಶಾರುಖ್​ ಖಾನ್​ ಹಿಂದೆಂದೂ ಕಾಣದಂತೆ ಭರ್ಜರಿ ಯಶಸ್ಸು ಕಂಡ ಚಿತ್ರವಿದು. ಮಾತ್ರವಲ್ಲದೇ ಹಲವಾರು ದಾಖಲೆಗಳನ್ನು ಮಾಡಿದ ಪಠಾಣ್​ ಮಕಾಡೆ ಮಲಗಿದ್ದ ಬಾಲಿವುಡ್​ಗೆ ಜೀವ ತುಂಬಿದೆ. ಇದಾಗಲೇ ಹಲವಾರು ಬಾರಿ ಶಾರುಖ್​ ಫ್ಯಾನ್ಸ್​ ಈ ಚಿತ್ರವನ್ನು ನೋಡಿಯೂ ಆಗಿದೆ. ಕೇಸರಿ ಬಿಕಿನಿ ತೊಟ್ಟು ಬೇಷರಂ ರಂಗ್​ ಎಂದು ಹಾಡಿದ್ದ ದೀಪಿಕಾ ಪಡುಕೋಣೆಯ ಬಟ್ಟೆ ವಿವಾದ ಸೃಷ್ಟಿಸಿದ್ದ ನಡುವೆಯೂ ಕೆಲವೊಂದು ಬದಲಾವಣೆ ಮಾಡುವುದರ ಮೂಲಕ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಭಾರತ ಮಾತ್ರವಲ್ಲದೇ, ಹಲವಾರು ದೇಶಗಳಲ್ಲಿಯೂ ಈ ಚಿತ್ರ ಇದಾಗಲೇ ಅಬ್ಬರಿಸಿದೆ. ಕಳೆದ ಏಪ್ರಿಲ್​ 6ರ ಅಂಕಿಅಂಶದ ಪ್ರಕಾರ, ಪಠಾಣ್​ ಚಲನಚಿತ್ರವು ಭಾರತದಲ್ಲಿ  82 ಮಿಲಿಯನ್ ಡಾಲರ್​ ಅರ್ಥಾತ್​ ಸುಮಾರು 654 ಕೋಟಿ ರೂಪಾಯಿಗಳನ್ನು ಗಳಿಸಿದ್ದರೆ, ಸಾಗರೋತ್ತರ ದೇಶಗಳಲ್ಲಿ 50 ಮಿಲಿಯನ್​ ಡಾಲರ್​ ಅರ್ಥಾತ್​ ಸುಮಾರು 396 ಕೋಟಿ ರೂಪಾಯಿ ಹಾಗೂ  ವಿಶ್ವಾದ್ಯಂತ ಒಟ್ಟು 130 ಮಿಲಿಯನ್​ ಡಾಲರ್​ ಅರ್ಥಾತ್​ 1,050  ಕೋಟಿ ರೂಪಾಯಿ ಸಂಗ್ರಹಿಸಿದೆ. 

ಆದರೆ ಪಠಾಣ್​ (Pathaan) ಇಷ್ಟೊಂದು ಗಳಿಕೆ ಮಾಡಲಿಲ್ಲ ಎನ್ನುವ ವಾದವೂ ಅದೇ ಇನ್ನೊಂದೆಡೆ ಇದೆ. ಕೆಲವರು ಪಠಾಣ್​ ಗಳಿಕೆಯ ಕುರಿತು ನೀಡುತ್ತಿರುವ ವರದಿ ಸುಳ್ಳು ಎಂದು ಹೇಳುತ್ತಿದ್ದಾರೆ. ಇದು ಇಷ್ಟು ಕಮಾಯಿ ಮಾಡಲು ಸಾಧ್ಯವೇ ಇಲ್ಲ. ಎಷ್ಟೋ ಮಂದಿ ಈ ಚಿತ್ರವನ್ನೇ ನೋಡಿಲ್ಲ. ಇವೆಲ್ಲಾ ಸುಳ್ಳು ವಾದ. ಸುಖಾ ಸುಮ್ಮನೇ ಹೈಪ್​ ಮಾಡಲಾಗುತ್ತಿದೆ ಎನ್ನುವುದು ಕೆಲವರ ವಾದ.  ಈ ವಾದ-ಪ್ರತಿವಾದದ ನಡುವೆಯೇ ನಟಿ ಕಾಜೋಲ್​ ಹೇಳಿಕೆಯೊಂದು ಸಕತ್​ ವೈರಲ್​ ಆಗಿದೆ. ಇದರಲ್ಲಿ ನಟಿ ಕಾಜೋಲ್​ ಪಠಾಣ್​ ಚಿತ್ರದ ಗಳಿಕೆಯ ಕುರಿತು ಮಾತನಾಡಿದ್ದಾರೆ. ಇದು ವೈರಲ್​ ಆದ ಬೆನ್ನಲ್ಲೇ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಕೆಲವರು ನಟಿಯ ಹೇಳಿಕೆಯಂತೆ ತಮಗೂ ಪಠಾಣ್​ ಮೇಲೆ ಅನುಮಾನ ಎಂದಿದ್ದರೆ, ಶಾರುಖ್​ ಫ್ಯಾನ್ಸ್​ ಕಾಜೋಲ್​ (Kajol) ಮೇಲೆ ಹರಿಹಾಯ್ದಿದ್ದಾರೆ. 

Tap to resize

Latest Videos

ಅವಳಿ ಮಕ್ಕಳಿಗೆ ಪಠಾಣ್​, ಜವಾನ್​ ಎಂದು ಹೆಸರಿಡ್ಲಾ ಎಂದ ಮಹಿಳೆಗೆ ಶಾರುಖ್​ ಉತ್ತರ!

ಅಷ್ಟಕ್ಕೂ ನಟಿ ಹೇಳಿದ್ದೇನು ಅಂದರೆ, ಕಾರ್ಯಕ್ರಮವೊಂದರಲ್ಲಿ ಶಾರುಖ್​ ಖಾನ್​ ಅವರ ಪ್ರಶ್ನೆ ಕಾಜೋಲ್​ ಅವರಿಗೆ ಎದುರಾಗಿದೆ. ಆಗ ನಟಿ, ಶಾರುಖ್​ ಖಾನ್​... (Shah Rukh Khan) ಎನ್ನುತ್ತಾ ನಿಜಕ್ಕೂ ಪಠಾಣ್​ ಕಲೆಕ್ಷನ್​ ಮಾಡಿದ್ದು ಎಷ್ಟು ಎಂದು ಲೇವಡಿ ಮಾಡಿ ಹಾಸ್ಯದ ರೂಪದಲ್ಲಿ ಜೋರಾಗಿ ನಕ್ಕಿದ್ದಾರೆ. ಇದು ವ್ಯಂಗ್ಯದ ನಗು ಎನ್ನುವುದು ತಿಳಿಯುತ್ತದೆ. ಈ ಮೂಲಕ ಪಠಾಣ್​ ಇಷ್ಟೊಂದು ಕಲೆಕ್ಷನ್​ ಮಾಡಿರುವುದು ಸುಳ್ಳು ಎಂಬ ವಾದವನ್ನು ಅವರು ಈ ನಗುವಿನ ಜೊತೆ ಎತ್ತಿ ತೋರಿಸಿದ್ದಾರೆ.  ಶಾರುಖ್​ ಫ್ಯಾನ್ಸ್​ಗೆ ಕಾಜೋಲ್​ ಅವರ ಈ ವ್ಯಂಗ್ಯದ ನಗುವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ‘ಪಠಾಣ್​ ಸಿನಿಮಾದ ನಿಜವಾದ ಕಲೆಕ್ಷನ್​ ಎಷ್ಟು’ ಎಂದು ಅವರು ಬಹಿರಂಗವಾಗಿಯೇ ಪ್ರಶ್ನೆ ಮಾಡಿರುವುದು ಆಕೆಯ ಸೊಕ್ಕನ್ನು ತೋರಿಸುತ್ತಿದೆ ಎಂದು ಶಾರುಖ್​   ಅಭಿಮಾನಿಗಳು (Fans) ಕಿಡಿ ಕಾರುತ್ತಿದ್ದಾರೆ. ಅಸಲಿಗೆ ಈ ಸಂದರ್ಶನದಲ್ಲಿ ಸಂದರ್ಶಕರು ‘ನೀವು ಶಾರುಖ್​ ಖಾನ್​ಗೆ ಏನಾದರೂ ಪ್ರಶ್ನೆ ಕೇಳಬೇಕಾ’ ಎಂದು  ಕೇಳಿದ್ದಾರೆ. ಆಗ ಕಾಜೋಲ್​ ‘ಶಾರುಖ್​ ಖಾನ್​ ಬಗ್ಗೆ ನಾನೇನು ಕೇಳಲಿ. ಅವರ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಎಲ್ಲವೂ ಇದೆ’ ಎಂದು ಅರೆಕ್ಷಣ ಸುಮ್ಮನಾಗಿ ನಂತರ  ‘ನಿಜಕ್ಕೂ ಪಠಾಣ್​ ಸಿನಿಮಾ ಎಷ್ಟು ಕಲೆಕ್ಷನ್​ ಮಾಡಿತು’ ಎಂದು ಪ್ರಶ್ನೆ ಕೇಳಿದ್ದಾರೆ. ನಂತರ ಜೋರಾಗಿ ನಕ್ಕಿದ್ದಾರೆ. 

ಆ ನಗುವಿನಲ್ಲಿ ವ್ಯಂಗ್ಯ ಕಾಣಿಸಿದೆ ಎಂದು ನೆಟ್ಟಿಗರು (Commentators) ದೂರುತ್ತಿದ್ದಾರೆ. ಈಕೆಗೆ ತನಗಿಂತ ಹೆಚ್ಚು ಯಾರೂ ಕಮಾಯಿ ಮಾಡಬಾರದು, ಬೇರೆಯವರು ಮೇಲಕ್ಕೆ ಹೋಗುವುದನ್ನು ನೋಡುವುದು ಎಂದರೆ ಕಾಜೋಲ್​ಗೆ ಸಹಿಸಲು ಸಾಧ್ಯವಿಲ್ಲ, ಅಸೂಹೆಯಿಂದ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ಶಾರುಖ್​ ಫ್ಯಾನ್ಸ್​ ಕಮೆಂಟ್​ ಮೂಲಕ ಕಿಡಿ ಕಾರುತ್ತಿದ್ದಾರೆ. ಮೇಲ್ನೋಟಕ್ಕೆ ಶಾರುಖ್​ ಖಾನ್ ಸ್ನೇಹಿತೆಯಂತೆ ನಟಿಸುವ ಕಾಜೋಲ್​ಗೆ ನಿಜವಾಗಿಯೂ ಅವರ ಮೇಲೆ ಅಸೂಯೆ ಇದೆ ಎಂದು ಕಮೆಂಟಿಗರು ಕೋಪ ವ್ಯಕ್ತಪಡಿಸುತ್ತಿದ್ದಾರೆ. 

ದೇಶವನ್ನು 'ಅಶಿಕ್ಷಿತ' ನಾಯಕರು ಆಳುತ್ತಿದ್ದಾರೆ ಎಂದ ಕಾಜೋಲ್‌: ನೀವು, ನಿಮ್ಮ ಪತಿ ಓದಿರೋದೇನು ಎಂದು ನೆಟ್ಟಿಗರ ಟ್ರೋಲ್‌

 

Kajol is making fun of business. Means Ajay must be discussing with her at home that has given fake collections. This is the real face of Bollywood. pic.twitter.com/12bvOIF4X7

— KRK (@kamaalrkhan)
click me!