ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ ರಹಸ್ಯವಾಗಿ ಮದ್ವೆಯಾದ್ರಾ? ಏನಿದು ಸಮಾಚಾರ? ಏನಿದರ ಅಸಲಿಯತ್ತು?
KGF ಸರಣಿ ಚಿತ್ರಗಳಲ್ಲಿ ರೀನಾ ಪಾತ್ರದಲ್ಲಿ ಕಾಣಿಸಿಕೊಂಡು ಮೋಡಿಮಾಡಿದ ಶ್ರೀನಿಧಿ ಶೆಟ್ಟಿ ಅವರು ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನುವ ಗುಸುಗುಸು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಾಕಿಗೆ ಜೋಡಿಯಾಗಿ ನಟಿಸಿರುವ ರೀನಾ ದೇಸಾಯಿ ಉರ್ಫ್ ಶ್ರೀನಿಧಿ ಶೆಟ್ಟಿಯವರ (Shreenidhi Shetty) ಮದುವೆಯ ಸುದ್ದಿ ಸಕತ್ ಸದ್ದು ಮಾಡುತ್ತಿದೆ. ಯಾರಿಗೂ ಹೇಳದೇ ಮದುವೆಯಾಗಿದ್ದಾರೆ, ಮದುವೆ ರಹಸ್ಯವಾಗಿ ನಡೆಯಲು ಕಾರಣವೇನು ಎಂಬಿತ್ಯಾದಿ ಚರ್ಚೆಗಳು ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈಕೆಯ ಫ್ಯಾನ್ಸ್ ಶಾಕ್ಗೆ ಒಳಗಾಗಿದ್ದಾರೆ. ತಮ್ಮ ನೆಚ್ಚಿನ ತಾರೆಗೆ ಅದೇನಾಯಿತು ಎಂದು ಕೇಳುತ್ತಿದ್ದಾರೆ. ಅದಕ್ಕೆ ಕಾರಣ ಆಕೆಯ ಹೊಸ ಇನ್‌ಸ್ಟಾಗ್ರಾಮ್ ಪೋಸ್ಟ್. ಆಕೆ ಹಂಚಿಕೊಂಡಿರುವ ಎರಡು ಫೋಟೊಗಳು ಇಂತಾದೊಂದು ಚರ್ಚೆಗೆ ಕಾರಣವಾಗಿದೆ. ಕೆಜಿಎಫ್ ಸಿನಿಮಾದಲ್ಲಿ ನಟಿಸಿದ ನಾಯಕ, ನಾಯಕಿಯರಿಗೆ ಸಿನಿಮಾಗೆ ಸಿಕ್ಕಿದ ರೇಂಜ್ನಲ್ಲಿಯೇ ಶ್ರೀನಿಧಿ ಅವರಿಗೂ ಜನಪ್ರಿಯತೆ ಸಿಕ್ಕಿದ್ದು, ಇವರು ಕೂಡ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಿರುವಾಗ ಅವರು ಗುಟ್ಟಾಗಿ ಮದುವೆಯಾಗಲು ಕಾರಣವೇನು ಎಂದು ಪ್ರಶ್ನಿಸುತ್ತಿದ್ದರೆ, ಅವರ ಈ ಫೋಟೋ ನೋಡಿದ ಇನ್ನು ಹಲವರು ಬಹುಶಃ ಇವರಿಗೆ ಈ ಮೊದಲೇ ಮದುವೆಯಾಗಿತ್ತೆಂದು ಕಾಣಿಸುತ್ತಿದೆ ಎಂದಿದ್ದಾರೆ.
ಅವರು ಸಾಮಾಜಿಕ ಮಾಧ್ಯಮದಲ್ಲಿ (Social Media) ಆ್ಯಕ್ಟಿವ್ ಆಗಿದ್ದಾರೆ. ಇತ್ತೀಚೆಗೆ ತಮ್ಮ ಫಾಲೋವರ್ಸ್ ಜೊತೆಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅವು ಈಗ ವೈರಲ್ ಆಗಿದ್ದು, ಇಷ್ಟೆಲ್ಲಾ ಚರ್ಚೆಗೆ ಅನುವು ಮಾಡಿಕೊಟ್ಟಿದೆ. ಅಷ್ಟಕ್ಕೂ ನಟಿ ಅದೆಂಥ ಪೋಸ್ಟ್ ಶೇರ್ ಮಾಡಿದ್ದಾರೆ ಎಂದರೆ ತಲೆಗೆ ಸಿಂಧೂರ ಇಟ್ಟುಕೊಂಡಿರುವ ಫೋಟೋ ಶೇರ್ ಮಾಡಿದ್ದಾರೆ. ಹಳದಿ ಬಣ್ಣದ ಸಲ್ವಾರ್‌ನಲ್ಲಿ ಫೋನ್‌ನಲ್ಲಿ ಸೆಲ್ಫಿ ಹಿಡಿದುಕೊಂಡಿದ್ದಾರೆ. ಆ ಫೋಟೊಗಳಲ್ಲಿ ಆಕೆಯ ಬೈತಲೆಯಲ್ಲಿ ಸಿಂಧೂರ ಇರುವುದನ್ನು ನೋಡಬಹುದು. ಮದುವೆಯಾದ ಮಹಿಳೆಯರು ಮಾತ್ರ ಬೈತಲೆಯಲ್ಲಿ ಸಿಂಧೂರು ಇಟ್ಟುಕೊಳ್ಳುವ ಕಾರಣ, ಯಾರಿಗೂ ಹೇಳದೇ ಕೇಳದೇ ಶ್ರೀನಿಧಿ ಮದುವೆಯಾಗಿಬಿಟ್ಟರಾ ಎನ್ನುವ ಸುದ್ದಿ ಹರಿದಾಡುತ್ತಿದೆ.
ನಟಿ ಶ್ರೀನಿಧಿ ಫೋಟೋ ನೋಡಿ ರಕ್ಷಿತ್ ಹೇಳಿದ್ದೇನು? 'ಏನ್ ನಡೀತಿದೆ ಶೆಟ್ರೇ..' ಎಂದು ಕಾಲೆಳೆದ ಫ್ಯಾನ್ಸ್
ತಮ್ಮ ನೆಚ್ಚಿನ ತಾರೆಯರು ಏನು ಮಾಡುತ್ತಾರೆ ಅವರ ಅಪ್‌ಡೇಟ್ಸ್ (Updates) ಏನು ಎಂದು ಸಾಮಾನ್ಯವಾಗಿ ಇನ್ಸ್ಟಾಗ್ರಾಮ್ನಲ್ಲಿ ನೋಡಿ ಅಭಿಮಾನಿಗಳು ತಿಳಿದುಕೊಳ್ಳುತ್ತಾರೆ. ಅಂತೆಯೇ ಶ್ರೀನಿಧಿಯವರನ್ನು ಫಾಲೋ ಮಾಡುತ್ತಿರುವವರು ಸಿಂಧೂರವಿಟ್ಟಿರುವ ಎರಡು ಫೋಟೋಗಳನ್ನು ನೋಡಿ ಶಾಕ್ ಆಗಿದ್ದಾರೆ. ನಟಿ ಯಾರಿಗೂ ಹೇಳದೆ ಗುಟ್ಟಾಗಿ ಮದುವೆಯಾಗಿ ಶಾಕ್ ಕೊಟ್ಟಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಅಸಲಿಗೆ ಅಂಥದ್ದೇನೂ ಆಗಿಲ್ಲ. ಮದುವೆಯಾದ ಮಹಿಳೆಯರಿಗೆಂದೇ ಸೀಮಿತವಾಗಿರುವ ಕೆಲವು ಆಚರಣೆಗಳನ್ನು ಈಗ ಸಾಮಾನ್ಯವಾಗಿ ಮದುವೆಯಾಗದ ಯುವತಿಯರೂ ಸ್ಟೈಲ್ಗಾಗಿ ಶುರು ಮಾಡಿಕೊಂಡಿದ್ದಾರೆ. ಅದರಲ್ಲಿ ಒಂದು ಸಿಂಧೂರ. ಕರ್ನಾಟಕದ ಕೆಲವು ಭಾಗದ ಯುವತಿಯರು ಮದುವೆಯಾಗದೆ ಹಣೆಗೆ ಸಿಂಧೂರ (Sindhur) ಧರಿಸುವುದು ಇದೆ. ಇದಕ್ಕೆ ಕಾರಣ ಹಲವು ಇರಬಹುದು. ಅದೇ ರೀತಿ ಶ್ರೀನಿಧಿ ಶೆಟ್ಟಿ ಕೂಡ ಹಣೆಗೆ ಕುಂಕುಮ ಇಟ್ಟಿದ್ದಾರೆಯೇ ವಿನಾ ಅವರ ಮದುವೆಯೇನೂ ಆಗಿಲ್ಲ ಎಂಬ ಸ್ಪಷ್ಟನೆ ಬಂದಿದೆ.
ಇನ್ನು ಶ್ರೀನಿಧಿಯವರ ಕುರಿತು ಹೇಳುವುದಾದರೆ, ಇವರು ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ (Engineering) ಪದವಿ ಪಡೆದಿದ್ದಾರೆ. 2016ರಲ್ಲಿ ಮಿಸ್ ದಿವಾ ಸ್ಪರ್ಧೆಯ ವಿಜೇತರಾಗಿದ್ದರು. ಕೆಲಕಾಲ ಬೆಂಗಳೂರಿನ ಖ್ಯಾತ ಸಾಫ್ಟವೇರ್ ಕಂಪನಿ 'ಆಕ್ಸೆಂಚರ್'ನಲ್ಲಿ ಕೆಲಸ ಮಾಡಿದ್ದರು. ದುಬೈ, ಫ್ರಾನ್ಸ್ , ಜಪಾನ್, ಸಿಂಗಪುರ, ಥೈಲಾಂಡ್, ಪೋಲ್ಯಾಂಡ್ ಸೇರಿದಂತೆ ವಿವಿಧ ದೇಶಗಳ ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ. ಮಿಸ್ ಕರ್ನಾಟಕ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ ಸ್ಪರ್ಧೆ, ಮಿಸ್ ಸುಪ್ರನ್ಯಾಷನಲ್ ಸೇರಿದಂತೆ ಹಲವು ಕಿರೀಟಗಳು ಈ ಚೆಲುವೆ ಮುಡಿಗೇರಿದೆ.
ಮದ್ವೆಯಾಗದೇ ಪ್ರೆಗ್ನೆಂಟ್ ಆದ್ರಾ ಸಾಯಿ ಪಲ್ಲವಿ? ವಿಡಿಯೋ ನೋಡಿ ಫ್ಯಾನ್ಸ್ ಶಾಕ್!