ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಜೊತೆ ಜಪಾನ್ನಲ್ಲಿ ಆಮೀರ್ ಪುತ್ರ ಜುನೈದ್ ಖಾನ್ ಕಾಣಿಸಿಕೊಂಡಿದ್ದಾರೆ. ಇದರ ಅಸಲಿಯತ್ತು ಇಲ್ಲಿದೆ...
ಬಹುಭಾಷಾ ನಟಿ ಸಾಯಿ ಪಲ್ಲವಿ ತಮ್ಮ ಸಿಂಪಲ್ ಬ್ಯೂಟಿಯಿಂದಲೇ (Simple Beauty) ಮನೆ ಮಾತಾಗಿರುವ ತಾರೆ. ಮುಗ್ಧ ಮೊಗದ, ಅಷ್ಟೇ ಮುಗ್ಧ ನಗುವಿನ ಚೆಲುವೆ ಸಾಯಿ ಪಲ್ಲವಿಯನ್ನು ಇಷ್ಟಪಡದವರು ಇಲ್ಲವೆಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲಿ ಸಾಯಿ ಪಲ್ಲವಿ ಕಡಿಮೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ತುಂಬ ಕಾಳಜಿ ವಹಿಸುತ್ತಿದ್ದಾರೆ. ಇದಕ್ಕೆ ಇವರು ಸ್ಪಷ್ಟ ಕಾರಣ ನೀಡಿಲ್ಲ. ಅದೊಮ್ಮೆ ಈಕೆ ಸಿನಿಮಾ ರಂಗವನ್ನೇ ತೊರೆಯಲಿದ್ದಾರೆ ಎಂದೂ ಸುದ್ದಿಯಾಗಿಬಿಟ್ಟಿತು. ವೈದ್ಯೆಯಾಗುವ ಕನಸು ಹೊತ್ತಿದ್ದ ನಟಿ ಸಾಯಿ ಪಲ್ಲವಿ, ಸಿನಿಮಾ ರಂಗದಿಂದ ದೂರವಾಗಿ ವೈದ್ಯ ವೃತ್ತಿಯನ್ನು ಕೈಗೊಳ್ಳಲಿದ್ದಾರೆ ಎಂದೂ ಕೇಳಿಬಂದಿತ್ತು. ಆದರೂ ಅವರು ನಟನೆಯನ್ನು ಮುಂದುವರೆಸಿದ್ದಾರೆ. ದೊಡ್ಡ ಮೊತ್ತದ ಸಂಭಾವನೆ ನೀಡುವ ನಟರನ್ನು ಸೆಳೆಯುವ ಯಾವುದೇ ಕಮರ್ಷಿಯಲ್ ಚಿತ್ರಗಳಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿಲ್ಲ. ಮಲಯಾಳಂ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಸಾಯಿ ಪಲ್ಲವಿ ತಮ್ಮ ವೈಯಕ್ತಿಕ ಜೀವನದಲ್ಲೂ ವಿಭಿನ್ನರಾಗಿದ್ದಾರೆ.
ತಮಿಳು, ಮಲಯಾಳಂ ಚಿತ್ರಗಳ ಮೂಲಕ ಸದ್ದು ಮಾಡಿರುವ ನ್ಯಾಚುರಲ್ ಬ್ಯೂಟಿ ಅಭಿಮಾನಿಗಳ ಆಲ್‌ಟೈಮ್ ಫೇವರೆಟ್ ಆಗಿದ್ದಾರೆ. ಇಂಥವರ ಮದ್ವೆ ಯಾಕಿನ್ನೂ ಆಗಿಲ್ಲ ಎನ್ನುವುದೇ ಚರ್ಚೆ. ಅಷ್ಟಕ್ಕೂ ಸಾಯಿ ಪಲ್ಲವಿ ಅವರು 23ನೇ ವಯಸ್ಸಿಗೆ ಮದುವೆಯಾಗಬಯಸಿದ್ದವರು. 30ನೇ ವಯಸ್ಸಿನಲ್ಲಿ ಇಬ್ಬರು ಮಕ್ಕಳ ತಾಯಿಯೂ ಆಗಬಯಸಿದ್ದರು. ಆದರೆ ವಿಧಿಲೀಲೆಯ ಬೇರೆಯಾಗಿತ್ತು. ತಂಗಿಯ ಮದುವೆಯನ್ನು ಮುಂದೆ ನಿಂತು ಮಾಡಿಸಿದ್ದಾರೆ. ಅಷ್ಟಕ್ಕೂ ಇದಕ್ಕೆ ಅವರೇ ಹಿಂದೊಮ್ಮೆ ಉತ್ತರ ನೀಡಿದ್ದರು, ಆ ಸಂದರ್ಶನದಲ್ಲಿ ಸಾಯಿ ಪಲ್ಲವಿ, "ನಾನು 18 ವರ್ಷದವಳಿದ್ದಾಗ 23 ವರ್ಷಕ್ಕೆ ಮದುವೆಯಾಗಬೇಕು.. 30 ವರ್ಷಕ್ಕಿಂತ ಮುಂಚೆಯೇ ಎರಡು ಮಕ್ಕಳಿಗೆ ಜನ್ಮ ನೀಡಬೇಕು ಎಂದುಕೊಂಡಿದ್ದೆ. ಆದರೆ ನಮ್ಮ ಮನೆಯ ಕೆಲವು ಪ್ರಮುಖ ಜವಾಬ್ದಾರಿಗಳನ್ನು ನಾನು ತೆಗೆದುಕೊಳ್ಳಬೇಕಾಗಿತ್ತು. ಎಂಬಿಬಿಎಸ್ ಮಾಡುವ ಆರಂಭದಲ್ಲಿಯೇ ಮದ್ವೆ ಬಗ್ಗೆ ಯೋಚಿಸಿದ್ದು ನಿಜ. ಆದರೆ ಜವಾಬ್ದಾರಿಗಳು ಹೆಗಲ ಮೇಲೆ ಬಂದಿದ್ದರಿಂದ ಮದುವೆಯನ್ನು ಮುಂದೂಡಿದೆ. ನಟಿಯಾಗಿ ಒಳ್ಳೆ ಹೆಸರು ಇದೆ. ಆದ್ದರಿಂದ ಮದುವೆಗೆ ಇನ್ನೂ ಕಾಲಾವಕಾಶ ಇದೆ ಎಂದಿದ್ದಾರೆ.
30ನೇ ವಯಸ್ಸಲ್ಲೇ ಇಬ್ಬರು ಮಕ್ಕಳ ಅಮ್ಮ ಆಗಬಯಸಿದ್ದ ಸಾಯಿ ಪಲ್ಲವಿ ಇನ್ನೂ ಮದ್ವೆ ಯಾಕಾಗಿಲ್ಲ? ಇಲ್ಲಿದೆ ಕಾರಣ...
ತಾವು ಮದುವೆಯಾಗಲಿರುವ ಪುರುಷ ಮುಗ್ದನಾಗಿರಬೇಕು, ಹೆಣ್ಣನ್ನು ಗೌರವಿಸುವಂತವನಾಗಿರಬೇಕು ಎನ್ನುವುದು ಸಾಯಿ ಪಲ್ಲವಿ ಆಸೆ. ಹೀಗೆ ಹೇಳಿದ್ದ ಸಾಯಿ ಪಲ್ಲವಿ, ಸದ್ದು ಮಾಡುತ್ತಿರುವುದು ಆಮೀರ್ ಖಾನ್ ಅವರ ಪುತ್ರ ಜುನೈದ್ ಖಾನ್ ಜೊತೆ ಜಪಾನ್ ನಲ್ಲಿ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದ್ದಾರೆ. ಹೀಗೆ ನಟ-ನಟಿಯರು ಫಾರಿನ್ನಲ್ಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿಬಿಟ್ಟರೆ ನೂರೆಂಟು ಮಾತನಾಡುವುದು ಸಹಜ. ಆದರೆ ಇಲ್ಲಿ ವಿಷಯ ಹಾಗಲ್ಲ. ಅಸಲಿಗೆ ಇರುವುದೇ ಬೇರೆ. ಅಷ್ಟಕ್ಕೂ ತಮ್ಮ ಮಗ ಜುನೈದ್ ಚಿತ್ರರಂಗಕ್ಕೆ ಬರುವುದು ಯಾವಾಗ ಎಂಬ ಪ್ರಶ್ನೆಗೆ ಆಮೀರ್ ಖಾನ್ ತುಟಿ ಪಿಟಿಕ್ ಅಂದಿರಲಿಲ್ಲ. ಆದರೆ ಇದೀಗ ಸಾಯಿ ಪಲ್ಲವಿ ಜೊತೆ ಜಪಾನ್ನಲ್ಲಿ ಕಾಣಿಸಿಕೊಂಡಿದ್ದಾರೆ!
ಅಷ್ಟಕ್ಕೂ ಇವರಿಬ್ಬರೂ ಜಪಾನ್ನಲ್ಲಿ ಕಾಣಿಸಿಕೊಂಡಿರುವುದು ಇನ್ನೂ ಹೆಸರು ಇಡದ ಚಿತ್ರದ ಶೂಟಿಂಗ್ಗಾಗಿ ಎನ್ನಲಾಗುತ್ತಿದೆ. ಈ ಚಿತ್ರದ ಚಿತ್ರೀಕರಣ ಜಪಾನ್ ನಲ್ಲಿ ಭರದಿಂದ ನಡೆಯುತ್ತಿದೆ. ವಿಶೇಷ ಅಂದರೆ ಈ ಚಿತ್ರದಲ್ಲಿ ಜುನೈದ್ ಜೊತೆ ಸಾಯಿ ಪಲ್ಲವಿ ಕಾಣಿಸಿಕೊಳ್ತಿದ್ದಾರೆ. ಈ ಮೂಲಕ ಸಾಯಿ ಪಲ್ಲವಿ ಬಾಲಿವುಡ್ಗೆ ಕಾಲಿಡುತ್ತಿದ್ದಾರೆ ಎನ್ನಲಾಗುತ್ತಿದೆ. ಆಮೀರ್ ಪುತ್ರನೂ ಇದೀಗ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದ್ದು, ಇದರ ಬಗ್ಗೆ ಇನ್ನಷ್ಟೇ ಮಾಹಿತಿ ಹೊರ ಬರಬೇಕಿದೆ. ಜುನೈದ್ ಅವರು ಇದಾಗಲೇ ಮಹಾರಾಜ್ ಎಂಬ ಚಿತ್ರದಲ್ಲಿ ನಟಿಸಿದ್ದು, ಅದು ನೆಟ್ ಫ್ಲಿಕ್ಸ್ ನಲ್ಲಿ ಸದ್ಯದಲ್ಲಿಯೇ ಪ್ರಸಾರವಾಗಲಿದೆ. ಚಿತ್ರಮಂದಿರದಲ್ಲಿ ಪ್ರಸಾರ ಆಗ್ತಿರೋ ಮೊದಲ ಚಿತ್ರದ ಚಿತ್ರೀಕರಣ ಜಪಾನ್ನಲ್ಲಿ ನಡೆಯುತ್ತಿದೆ ಎನ್ನಲಾಗಿದೆ.
ಕೊನೆಗೂ ಸಿಕ್ಕ ಒರಿಜಿನಲ್ ರಾವುಲ್ಲಾ! ಬೆಳ್ಳುಳ್ಳಿ ಕಬಾಬ್ ಓನರ್ ಜೊತೆ ಕರಿಮಣಿ ಮಾಲೀಕನ ಎಂಟ್ರಿ!