ಬಾಲ್ಯದಿಂದಲೂ ನಾನು ಬೇರೆಯದೇ ರೀತಿಯ ವ್ಯಕ್ತಿ; ಸಾಯಿ ಪಲ್ಲವಿ ಮಾತಿನ ಮರ್ಮ ಏನಿರಬಹುದು!

By Shriram BhatFirst Published Feb 12, 2024, 5:03 PM IST
Highlights

ಸಿನಿಮಾ ಅಂತ ಬಂದಾಗಲೂ ಅಷ್ಟೇ, ನನಗೆ ತಿಳಿಯದಿದ್ದ ಸಂಗತಿಗಳನ್ನು ನಾನು ಶೂಟಿಂಗ್ ಇರಲಿ, ಇಲ್ಲದಿರಲಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತೇನೆ. ಅಲ್ಲಿ ಕೂಡ ನಿಜ ಜೀವನದಂತೆ ಸನ್ನಿವೇಶಗಳನ್ನು ಸೃಷ್ಟಿಸಲಾಗಿರುತ್ತದೆ.

ಮಲಯಾಳಂ ಮೂಲದ ನಟಿ ಸಾಯಿ ಪಲ್ಲವಿ ಅವರು ಸಂದರ್ಶನಗಳಲ್ಲಿ ಬಹಳಷ್ಟು ಮಾತನಾಡಿದ್ದಾರೆ. ತಮ್ಮ ವೈಯಕ್ತಿಕ ಹಾಗು ವೃತ್ತಿ ಜೀವನದ ಬಗ್ಗೆ ಹೇಳಿಕೊಂಡಿರುವ ನಟಿ ಸಾಯಿ ಪಲ್ಲವಿ ಅವರು ಸಿನಿಮಾ-ಜೀವನ ನನಗೆ ಬೇರೆಬೇರೆ ಅಲ್ಲ ಎಂದಿದ್ದಾರೆ. ಈ ಬಗ್ಗೆ ಸಾಕಷ್ಟು ಕ್ಲಾರಿಟಿ ಕೊಟ್ಟಿರುವ ನಟಿ ಸಾಯಿ ಪಲ್ಲವಿ ಅವರು ತಮ್ಮ ಜೀವನ ಮತ್ತು ಕೇರಿಯರ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮಲಯಾಳಂನ ಪ್ರೇಮಂ ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನಟಿ ಸಾಯಿ ಪಲ್ಲವಿ, ಬಳಿಕ ದಕ್ಷಿಣ ಭಾರತದ ಉಳಿದ ಮೂರೂ ಭಾಷೆಗಳಾದ ಕನ್ನಡ, ತಮಿಳು ಹಾಗು ತೆಲುಗಿನಲ್ಲೂ ನಟಿಸಿದ್ದಾರೆ.

ನಟಿ ಸಾಯಿ ಪಲ್ಲವಿ 'ನನಗೆ ಜೀವನ ಹಾಗೂ ಸಿನಿಮಾ ಎರಡೂ ಪತ್ಯೇಕ ಎಂದು ಯಾವತ್ತೂ ಅನ್ನಿಸಿಲ್ಲ. ನಾನು ಚಿಕ್ಕ ಮುಗುವಾಗಿದ್ದಾಗಿನಿಂದಲೂ ಎಲ್ಲವನ್ನೂ ಗಮನಿಸುತ್ತಿದ್ದೆ. ನನಗೆ ತಿಳಿಯದಿರುವುದನ್ನು ಕೇಳಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ದಿನನಿತ್ಯದ ಜೀವನದಲ್ಲಿ ನನ್ನ ಕಣ್ಣಮುಂದೆ ನಡೆಯುವ ಹಲವು ಘಟನೆಗಳು ನನಗೆ ಅಚ್ಚರಿ ಉಂಟುಮಾಡುತ್ತಿದ್ದವು. ಅವುಗಳನ್ನು ನನ್ನದೇ ಆದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುತ್ತಿದ್ದೆ. ಆ ಬಗ್ಗೆ ಬೇರೆಯವರ ಬಳಿ ಕೂಡ ಚರ್ಚಿಸಿ ನನಗೆ ಹೊಳೆಯದಿದ್ದ ಕೆಲವು ಸಂಗತಿಗಳನ್ನು ತಿಳಿದುಕೊಳ್ಳುತ್ತಿದ್ದೆ. ಚಿಕ್ಕಂದಿನಿಂದಲೂ ನಾನು ಬೇರೆ ರೀತಿಯ ವ್ಯಕ್ತಿಯೇ ಆಗಿದ್ಧೇನೆ.

ಅಯ್ಯೋ, ನಟ ನಾನಿಗೆ ಹುಚ್ಚ ಅಂದಿದ್ಯಾಕೆ; ಪವರ್ ಕಟ್ ಆದ್ರೆ ಹಾಗೆಲ್ಲಾ ಮಾಡ್ತಿದ್ರಾ 'ಈಗ' ನಟ!

ಸಿನಿಮಾ ಅಂತ ಬಂದಾಗಲೂ ಅಷ್ಟೇ, ನನಗೆ ತಿಳಿಯದಿದ್ದ ಸಂಗತಿಗಳನ್ನು ನಾನು ಶೂಟಿಂಗ್ ಇರಲಿ, ಇಲ್ಲದಿರಲಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತೇನೆ. ಅಲ್ಲಿ ಕೂಡ ನಿಜ ಜೀವನದಂತೆ ಸನ್ನಿವೇಶಗಳನ್ನು ಸೃಷ್ಟಿಸಲಾಗಿರುತ್ತದೆ. ಹೀಗಾಗಿ ನನ್ನ ದೃಷ್ಟಿಯಲ್ಲಿ, ಸಿನಿಮಾ ಬೇರೆ ರಿಯಲ್ ಲೈಫ್ ಬೇರೆ ಎಂಬುದೇನೂ ಇಲ್ಲ. ಎಲ್ಲವನ್ನೂ ಗಮನಿಸುತ್ತಿದ್ದರೆ, ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಿದ್ದರೆ ಅದು ಎಲ್ಲಾ ಕಡೆ ಬೇಕಾದಾಗಲೆಲ್ಲ ಉಪಯೋಗಕ್ಕೆ ಬರುತ್ತದೆ. ಈ ಕಾರಣಕ್ಕೆ ನಾನು ಸಿನಿಮಾವನ್ನು ನಿಜ ಜೀವನದಿಂದ ಬೇರೆ ಎಂದು ಅರ್ಥ ಮಾಡಿಕೊಂಡು ಅದಕ್ಕಾಗಿ ಪ್ರತ್ಯೇಕ ಸಿದ್ಧತೆ ಮಾಡಿಕೊಳ್ಳುವುದಿಲ್ಲ. 

ನಾನು ದೇಹವಲ್ಲ, ಮನಸ್ಸೂ ಅಲ್ಲ ಅಂದ್ರು ನಟ ರಜನಿಕಾಂತ್; ಹಾಗಿದ್ರೆ ಅವ್ರು ಯಾರು, ಹೇಳಿದ್ದಾರೆ ನೋಡಿ..!

ನನಗೆ ಸಿನಿಮಾ ಎಂಬುದು ಹಾಬಿ ಅಥವಾ ಫ್ಯಾಷನ್ ಅಲ್ಲ, ಅದು ನನ್ನ ಜೀವನವೇ ಆಗಿದೆ. ಹೀಗಾಗಿ ನನಗೆ ಎಲ್ಲವನ್ನೂ ಗಮನಿಸುವ ಅಭ್ಯಾಸ ಚಿಕ್ಕಂದಿನಿಂದಲೂ ಬೆಳೆದುಬಂದಿದೆ. ಎಲ್ಲವೂ ಜೀವನ ಎಂದಮೇಲೆ ನನಗೆ ಸಿನಿಮಾ ಪ್ರತ್ಯೇಕ ಎಂಬ ಭಾವನೆ ಹೇಗೆ ಬರಲು ಸಾಧ್ಯ? ನಟಿ ಸಾಯಿ ಪಲ್ಲವಿ ಹೇಳಿರುವ ಈ ಮಾತುಗಳನ್ನು ಕೇಳುತ್ತಿದ್ದರೆ ಯಾರಿಗಾದರೂ 'ಹೌದು' ಅನ್ನಿಸದೇ ಇರದು. ಯಾರೇ ಆಗಲಿ, ಜೀವನದಿಂದ ನಾವು ಮಾಡುತ್ತಿರುವ ಕೆಲಸವನ್ನು ಬೇರೆ ಎಂದು ನೋಡಿದರೆ ನಮಗೆ ಅದರಿಂದ ಲಾಭಕ್ಕಿಂತ ಹಾನಿಯೇ ಹೆಚ್ಚು.

RRR ಯಶಸ್ಸಿನ ಬಳಿಕ ರಾಮ್ ಚರಣ್ ಮಾತಿನ ಧಾಟಿಯೇ ಬದಲಾಯ್ತು; ಇದೇನಿದು ಜಾದೂ ಗುರೂ..!

click me!