ಎಲ್ಲರನ್ನೂ ಹಿಂದಿಕ್ಕಿ ನಂ.1 ಶ್ರೀಮಂತ ನಾಯಕಿ ಪಟ್ಟ ಗಿಟ್ಟಿಸಿಕೊಂಡ 'ಪ್ರೇಮಲೋಕ' ಬೆಡಗಿ! ಆಸ್ತಿ ಎಷ್ಟು ಗೊತ್ತಾ?

By Suchethana D  |  First Published Oct 18, 2024, 3:48 PM IST

ಹಲ ವರ್ಷಗಳಿಂದ ಸಿನಿಮಾದಲ್ಲಿ ಇಲ್ಲದಿದ್ದರೂ ನಂಬರ್​ 1 ಶ್ರೀಮಂತ ನಾಯಕಿ ಪಟ್ಟ ಪಡೆದಿದ್ದಾರೆ ನಟಿ ಜೂಹಿ ಚಾವ್ಲಾ. ಇವರ ಒಟ್ಟು ಆದಾಯ ಎಷ್ಟು ಗೊತ್ತಾ? 
 


 ಈ ನಿಂಬೆ ಹಣ್ಣಿನಂಥ ಹುಡುಗಿ ಬಂತು ನೋಡು... ಎಂದಾಕ್ಷಣ 1987ರಲ್ಲಿ ಬಿಡುಗಡೆಯಾದ ಕ್ರೇಜಿಸ್ಟಾರ್​ ರವಿಚಂದ್ರನ್​ ಅವರ ಪ್ರೇಮಲೋಕದತ್ತ ಎಲ್ಲರ ದೃಷ್ಟಿ ಹರಿಯುತ್ತದೆ. ಆಗ ಹುಟ್ಟಿಲ್ಲದ ಮಕ್ಕಳಿಗೂ ಈ ಹಾಡು ಗೊತ್ತು. ಇಂದಿಗೂ ಆ ಹಾಡು ಸಿನಿ ಪ್ರಿಯರ ಬಾಯಲ್ಲಿ ನಲಿದಾಡುತ್ತಲೇ ಇರುತ್ತದೆ. ಈ ವಿಷ್ಯ ಇಲ್ಯಾಕೆ ಎಂದರೆ, ಈ ನಿಂಬೆ ಹಣ್ಣಿನಂಥ ಹುಡುಗಿಯಾಗಿ ಆ್ಯಕ್ಟ್​ ಮಾಡಿದ್ದ ಜೂಹಿ ಚಾವ್ಲಾ ಈಗ ಸಕತ್​ ಸದ್ದು ಮಾಡುತ್ತಿದ್ದಾರೆ. ಅದಕ್ಕೆ ಕಾರಣ, ಎಲ್ಲರನ್ನೂ ಹಿಂದಿಕ್ಕಿರೋ ಜೂಹಿ ನಂ.1 ಶ್ರೀಮಂತ ನಾಯಕಿಯ ಪಟ್ಟ ಗಿಟ್ಟಿಸಿಕೊಂಡಿದ್ದಾರೆ! ಇವರ ಆಸ್ತಿ 4,600 ಕೋಟಿ ರೂಪಾಯಿಗಳು. ಇನ್ನು ನಟನ ವಿಷಯಕ್ಕೆ ಬರುವುದಾದರೆ ಶಾರುಖ್​ 7,300 ಕೋಟಿ ರೂಪಾಯಿಗಳ ಆಸ್ತಿ ಹೊಂದಿ ನಂಬರ್​ 1 ಸಿನಿ ತಾರೆ ಎನಿಸಿಕೊಂಡಿದ್ದಾರೆ. ಶಾರುಖ್​ಗಿಂತ ಸರಿಸುಮಾರು ಅರ್ಧದಷ್ಟು ಆಸ್ತಿ ಹೊಂದಿರುವ ಜೂಹಿ ನಂ.1 ಶ್ರೀಮಂತ ನಟಿ ಆಗಿದ್ದಾರೆ. ​
 
 ಕಳೆದ 15 ವರ್ಷಗಳಿಂದ ಯಾವುದೇ ದೊಡ್ಡ ಸಿನಿಮಾ ಮಾಡದ ಈ ನಟಿಯ ಒಟ್ಟು ಸಂಪತ್ತು ಬರೋಬ್ಬರಿ 4600 ಕೋಟಿ ರೂಪಾಯಿ ಎಂದರೆ ನಂಬಲಸಾಧ್ಯ ಎಂದೇ ಹೇಳಲಾಗುತ್ತಿದೆ.  ಇತ್ತೀಚೆಗಷ್ಟೇ ಹುರುನ್ ಇಂಡಿಯಾ (Hurun India) ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಜೂಹಿ ಚಾವ್ಲಾ ಹೆಸರು ಇದೆ. ಈ ಲಿಸ್ಟ್‌ ಪ್ರಕಾರ  ಐಶ್ವರ್ಯಾ ರೈ ಆಸ್ತಿ 900 ಕೋಟಿ, ಪ್ರಿಯಾಂಕಾ ಚೋಪ್ರಾ 850 ಕೋಟಿ, ಆಲಿಯಾ ಭಟ್ 550 ಕೋಟಿ, ದೀಪಿಕಾ ಪಡುಕೋಣೆ 400 ಕೋಟಿ ಮತ್ತು ಕತ್ರಿನಾ ಕೈಫ್ 240 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅಷ್ಟಕ್ಕೂ ಜೂಹಿ ಬಾಲಿವುಡ್​ ನಟಿಯಾದರೂ,  ಕನ್ನಡದ ಪ್ರೇಮಲೋಕದ ಮೂಲಕ ಸೌತ್‌ ಸಿನಿಮಾದಲ್ಲಿಯೂ ಮೋಡಿ ಮಾಡಿದವರು.  ಕುತೂಹಲದ ವಿಷಯ ಏನೆಂದರೆ, ಮುಕೇಶ್ ಅಂಬಾನಿ, ಗೌತಮ್ ಅದಾನಿ ಅವರಂತಹ ಭಾರತೀಯ ಸೆಲೆಬ್ರಿಟಿಗಳಿರುವ ಈ ಪಟ್ಟಿಯಲ್ಲಿ ಸಿನಿ ತಾರೆ ಸ್ಥಾನ ಪಡೆದಿರುವುದು ವಿಶೇಷವಾಗಿದೆ.  ಅಂದಹಾಗೆ, ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಕನಿಷ್ಠ 1000 ಕೋಟಿ ರೂಪಾಯಿ ಸಂಪತ್ತು ಹೊಂದಿರುವ ಭಾರತೀಯರು  ಸ್ಥಾನ ಗಿಟ್ಟಿಸಿಕೊಳ್ಳುತ್ತಾರೆ.  ಈ ಬಾರಿ ಹೊಸದಾಗಿ 220 ಮಂದಿ  ಪಟ್ಟಿಯನ್ನು ಸೇರಿದ್ದು,  ಒಟ್ಟು 1539 ಮಂದಿ ಇದರಲ್ಲಿದ್ದಾರೆ. ಇವರಲ್ಲಿ  ಶಾರುಖ್ ಖಾನ್  ಭಾರತದ ಅತ್ಯಂತ ಶ್ರೀಮಂತ ಸಿನಿಮಾ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ.  

ಮಾಜಿ ಸಚಿವೆ ಸ್ಮೃತಿ ಇರಾನಿ ಸೀರಿಯಲ್​ಗೆ ಕಮ್​ಬ್ಯಾಕ್​? 'ಅನುಪಮಾ'ದಲ್ಲಿ ನಟಿಸ್ತಾರಾ? ಅವರೇ ಹೇಳಿದ್ದೇನು ಕೇಳಿ....
 
ಅಂದಹಾಗೆ ಜೂಹಿಚಾವ್ಲಾ ಹಲವಾರು ಸೂಪರ್​ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಆಮೀರ್​ ಖಾನ್​ ಜೊತೆಗಿನ ಖಯಾಮತ್ ಸೆ ಖಯಾಮತ್ ತಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಇವರು 15 ವರ್ಷಗಳವರೆಗೆ ಬಹುತೇಕ ಎಲ್ಲಾ ಟಾಪ್​ ನಟರ ಜೊತೆ ಕೆಲಸ ಮಾಡಿದ್ದಾರೆ.  2000ರ ನಂತರ, ಸಿನಿಮಾ ನಿರ್ಮಾಣಕ್ಕೆ ಇಳಿದರು. ಡ್ರೀಮ್ಸ್ ಅನ್‌ಲಿಮಿಟೆಡ್ ಸಂಸ್ಥೆಯ ಅಡಿಯಲ್ಲಿ ಸಿನಿಮಾ ನಿರ್ಮಿಸುತ್ತಿದ್ದರು. ಬಳಿಕ ಶಾರುಖ್ ಖಾನ್‌ ಜೊತೆ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ಪಾಲುದಾರರಾದರು.  ಕೊನೆಗೆ ಪೂರ್ಣ ಪ್ರಮಾಣದ ನಟನೆಯಿಂದ ಹಿಂದೆ ಸರಿದ ನಟಿ, ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಫ್ರಾಂಚೈಸಿಯಲ್ಲಿ ಪಾಲನ್ನು ಹೊಂದಿದ್ದಾರೆ. ಇವುಗಳ ಮೂಲಕವೂ ಜೂಹಿ ಸಾಕಷ್ಟು ಸಂಪಾದಿಸಿದ್ದಾರೆ.

Tap to resize

Latest Videos

ಇನ್ನು ಜೂಹಿ ಅವರ ಪತಿ ಜಯ್ ಮೆಹ್ತಾ ಅವರು ಖ್ಯಾತ ಉದ್ಯಮಿ. ಕೆಕೆಆರ್ ತಂಡದ ಸಹ-ಮಾಲೀಕರು. ಉದ್ಯಮಿಯಾಗಿಯೂ ಹೆಸರುವಾಸಿ.  ಇವರು ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆಯಾದ ‘ದಿ ಮೆಹ್ತಾ ಗ್ರೂಪ್‌’ನ ಸ್ಥಾಪಕರು ಕೂಡ. ಇದು ಆಫ್ರಿಕಾ, ಭಾರತ, ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ಕಾರ್ಯ ನಿರ್ವಹಿಸುತ್ತದೆ. ‘ದಿ ಮೆಹ್ತಾ ಗ್ರೂಪ್‌’ನ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ಕಂಪನಿಯು ಅಂದಾಜು 500 ಮಿಲಿಯನ್ ಯುಎಸ್ ಡಾಲರ್! ಇದು ಭಾರತೀಯ ಮೌಲ್ಯದಲ್ಲಿ ಹೇಳುವುದಾದರೆ 4162 ಕೋಟಿ ರೂಪಾಯಿಯಾಗಿದೆ ಮತ್ತು ವಿಶ್ವಾದ್ಯಂತ 15 ಸಾವರಿಕ್ಕೂ ಹೆಚ್ಚು ಉದ್ಯೋಗಿಗಳನ್ನು ಈ ಸಂಸ್ಥೆ ಹೊಂದಿದೆ.

ಕೂದಲ ಅಂದಕ್ಕಾಗಿ ಬಿಗ್​ಬಾಸ್​ 'ಸತ್ಯ' ಇಷ್ಟೊಂದು ಸರ್ಕಸ್ಸಾ? ವಿಡಿಯೋ ನೋಡಿ ಫ್ಯಾನ್ಸ್​ ಸುಸ್ತು!
 

click me!