ಜೀವ ಉಳಿಸಲು 5 ಕೋಟಿ ರೂ ಪಾವತಿಸಿ, ಸಲ್ಮಾನ್ ಖಾನ್‌ಗೆ ಬಿಷ್ಣೋಯ್ ಗ್ಯಾಂಗ್ ವಾರ್ನಿಂಗ್!

By Chethan Kumar  |  First Published Oct 18, 2024, 3:08 PM IST

ಬಾಬಾ ಸಿದ್ದಿಕ್ಕಿ ಹತ್ಯೆ ಬಳಿಕ ಸಲ್ಮಾನ್ ಖಾನ್ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಟನ ಭದ್ರತೆ ಹೆಚ್ಚಿಸಿದರೂ ಆತಂಕ ಮಾತ್ರ ದೂರಾಗುತ್ತಿಲ್ಲ. ಇದರ ಬೆನ್ನಲ್ಲೇ 5 ಕೋಟಿ ರೂಪಾಯಿ ಪಾವತಿಸಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಿರುದ್ಧದ ಶತ್ರುತ್ವ ಅಂತ್ಯಗೊಳಿಸುವ ಎಚ್ಚರಿಕೆ ಸಂದೇಶ ಬಂದಿದೆ.


ಮುಂಬೈ(ಅ.18) ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದ್ಯ ಮುಂಬೈ, ಕೆನಡಾ ಸೇರಿದಂತೆ ಕೆಲೆವೆಡೆ ಭಾರಿ ಸದ್ದು ಮಾಡುತ್ತಿರುವ ಗ್ಯಾಂಗ್‌ಸ್ಟರ್. ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಹೊಣೆ ಹೊತ್ತುಕೊಂಡಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಇದರ ಬೆನ್ನಲ್ಲೇ ನಟ ಸಲ್ಮಾನ್ ಖಾನ್‌ಗೆ ಎಚ್ಚರಿಕೆ ಸಂದೇಶ ರವಾನಿಸಿತ್ತು. ಇದೀಗ ಸಲ್ಮಾನ್ ಖಾನ್‌ಗೆ ಸಂದೇಶ ಒಂದು ಬಂದಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಎಂದು ಹೇಳಲಾಗುತ್ತಿರುವ ಈ ಸಂದೇಶದಲ್ಲಿ ಬಿಷ್ಣೋಯ್ ಗ್ಯಾಂಗ್ ವಿರುದ್ಧದ ಶತ್ರುತ್ವ ಅಂತ್ಯಗೊಳಿಸಲು 5 ಕೋಟಿ ರೂಪಾಯಿ ಪಾವತಿಸುವಂತೆ ಎಚ್ಚರಿಕೆ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಮುಂಬೈ ಪೊಲೀಸರು ಸಂದೇಶದ ಅಸಲಿಯತ್ತು ಶೋಧಿಸಲು ಮುಂದಾಗಿದ್ದಾರೆ.

ಸಲ್ಮಾನ್ ಖಾನ್ ವ್ಯಾಟ್ಸ್ಆ್ಯಪ್‌ಗೆ ಈ ಸಂದೇಶ ಬಂದಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವ ಉಳಿಸಿಬೇಕೆಂಬ ಆಸೆ ಇದ್ದರೆ, 5 ಕೋಟಿ ರೂಪಾಯಿ ಪಾವತಿಸಿ. ಈ ಸಂದೇಶವನ್ನು ಲುಘುವಾಗಿ ಪರಿಗಣಿಸಬೇಡಿ. ಎಚ್ಚರಿಕೆ ಸಂದೇಶದ ಗಂಭೀರತೆ ಅರಿತಿಕೊಳ್ಳಿ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಿರುದ್ದದ ಶತ್ರುತ್ವ ಅಂತ್ಯಗೊಳಿಸಲು ವಿಫಲರಾದರೆ, ಬಾಬಾ ಸಿದ್ದಿಕಿಗಿಂತ ಹೀನಾಯ ಸ್ಥಿತಿ ಸಲ್ಮಾನ್ ಖಾನ್‌ಗೆ ಎದುರಾಗಲಿದೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

Latest Videos

undefined

ಸಲ್ಮಾನ್ ಖಾನ್ ಸೆಕ್ಯುರಿಟಿಗೆ ಕೋಟಿ ಕೋಟಿ ವೆಚ್ಚ: 25 ಭದ್ರತಾ ಸಿಬ್ಬಂದಿ, 4 NSG ಕಮಾಂಡೋ, ಬುಲೆಟ್ ಪ್ರೂಫ್ ಕಾರ್!

ಸಲ್ಮಾನ್ ಖಾನ್‌ಗೆ ಬಂದಿರುವ ವ್ಯಾಟ್ಸ್ಆ್ಯಪ್ ಮೆಸೇಜ್ ಕುರಿತು ಮುಂಬೈ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದಲೇ ಕಳುಹಿಸಿರುವ ಸಂದೇಶವೇ ಅನ್ನೋದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ. ಕಾರಣ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹಲವರಿಂದ ಸುಲಿಗೆ ಮಾಡಿದೆ. ಆದರೆ ಸಲ್ಮಾನ್ ಖಾನ್ ವಿರುದ್ಧದ ಶತ್ರುತ್ವಕ್ಕೆ ಮುಖ್ಯ ಕಾರಣ ಕೃಷ್ಣ ಮೃಗ ಬೇಟೆ ಪ್ರಕರಣ. ಬಿಷ್ಣೋಯ್ ಸಮುದಾಯದ ದೇವರ ಸಮಾನ ಕೃಷ್ಣ ಮೃಗ ಬೇಟೆಗೆ ಸೇಡು ತೀರಿಸಲು ಈಗಾಗಲೇ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ನಡೆದಿತ್ತು. 
ಮಾಜಿ ಸಚಿವ, ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಬಳಿಕ ಸಲ್ಮಾನ್ ಖಾನ್ ಭದ್ರತೆಯನ್ನು ಹೆಚ್ಚಿಸಲಾಗಿದೆ. 

ಸಲ್ಮಾನ್ ಖಾನ್‌ಗೆ ಯಾರೆಲ್ಲಾ ನೆರವು ನೀಡುತ್ತಾರೋ, ಅವರಿಗೆಲ್ಲಾ ಬಾಬಾ ಸಿದ್ದಿಕಿ ಗತಿಯಾಗಲಿದೆ ಅನ್ನೋ ಸಂದೇಶವನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಇತ್ತೀಚೆಗೆ ನೀಡಿದೆ. ಬಾಬಾ ಸಿದ್ದಿಕಿ ಹತ್ಯೆ ಬಳಿಕ ಈ ಸಂದೇಶ ನೀಡಲಾಗಿತ್ತು. ಬಾಬಾ ಸಿದ್ದಿಕ್ಕಿ ಮೇಲೆ 6 ಸುತ್ತಿನ ಗುಂಡು ಹಾರಿಸಲಾಗಿತ್ತು. ಪುತ್ರನ ಬಾಂದ್ರಾದಲ್ಲಿರುವ ಶಾಸಕರ ಕಚೇರಿಯಲ್ಲಿರುವಾಗ ಬಾಬಾ ಸಿದ್ದಿಕಿ ಮೇಲೆ ಗುಂಡು ಹಾರಿಸಲಾಗಿತ್ತು. 3 ಗುಂಡುಗುಳ ಸಿದ್ದಿಕಿ ದೇಹ ಹೊಕ್ಕಿತ್ತು. ತಕ್ಷಣವೆ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದರೂ ಬಾಬಾ ಸಿದ್ದಿಕಿ ಬದುಕುಳಿಯಲಿಲ್ಲ. 

ಸಲ್ಲು ಸೆಕ್ಯುರಿಟಿಗೆ ಅದೆಷ್ಟು ಸಿಬ್ಬಂದಿ, ಏನೆಲ್ಲಾ ಸೇಫ್ಟಿ ಇರುತ್ತೆ? ಎಷ್ಟು ಕೋಟಿ ಹಣ ವೆಚ್ಚವಾಗ್ತಿದೆ..!?

click me!