ನಾನು ಇನ್ನೂ ಹೆಚ್ಚು ಡ್ರಾಮಾಟಿಕ್ ಆಗಬೇಕು; ಆಕೆ ಇನ್ನೂ ಹೆಚ್ಚು ರೆಸ್ಪೆಕ್ಟ್‌ಫುಲ್ ಆಗಬೇಕು: ಜಯಾ ಬಚ್ಚನ್

By Shriram Bhat  |  First Published Oct 25, 2023, 7:38 PM IST

'ನಾನು ಇನ್ನೂ ಸ್ವಲ್ಪ ನಾಟಕೀಯವಾಗಿ ನಡೆದುಕೊಳ್ಳಬೇಕು; ಆಕೆ ಇನ್ನೂ ಸ್ವಲ್ಪ ಗೌರವ ಕೊಡುವಂತೆ ಇರಬೇಕು' ಎಂದಿದ್ದಾರೆ ಜಯಾ ಬಚ್ಚನ್. ಹಾಗಿದ್ದರೆ, ಯಾಕೆ ಜಯಾ ಬಚ್ಚನ್ ತಮ್ಮ ಸೊಸೆಯ ಬಗ್ಗೆ ಹೀಗೆ ಹೇಳಿದ್ದಾರೆ ಗೊತ್ತೇ? ಇತ್ತೀಚೆಗೆ ಐಶೂ ಪುತ್ರಿ ಆರಾಧ್ಯಾ ಹುಟ್ಟುಹಬ್ಬದ ವೇಳೆ ತೆಗೆಸಿಕೊಂಡ ಇಡೀ ಫ್ಯಾಮಿಲಿ ಫೋಟೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ರಾರಾಜಿಸುತ್ತಿತ್ತು. 


ಬಾಲಿವುಡ್ ಬಿಗ್ ಬಿ ಅಮಿತಾಬ್‌ ಬಚ್ಚನ್ ಮನೆಯೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಅಮಿತಾಬ್ ಮನೆಯಲ್ಲಿ ಯಾವುದಾದರೊಂದು ಫಂಕ್ಷನ್ ಆಯಿತೆಂದರೆ, ಅದ್ಲೊಂದು ಸುದ್ದಿ ಹುಟ್ಟಿಕೊಳ್ಳುತ್ತದೆ. ಸೃಷ್ಟಿಯಾಗುವ ಸುದ್ದಿ ಏನೆಂದರೆ, 'ಐಶ್ವರ್ಯಾ ರೈ ಹಾಗೂ ಅತ್ತೆ ಜಯಾ ಬಚ್ಚನ್ ಮಧ್ಯೆ ಸಂಬಂಧ ಸರಿಯಿಲ್ಲ' ಎಂಬುದು. ಆದರೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಅವರಿಬ್ಬರಲ್ಲಿ ಒಬ್ಬರ ಕಡೆಯಿಂದಲಾದರೂ ಸ್ಪಷ್ಟೀಕರಣ ದೊರಕುವುದು ಕಷ್ಟವೇ ಸರಿ. ಆದರೆ, ಇದೀಗ ಇತ್ತೀಚಿನ ಘಟನೆಯೊಂದಕ್ಕೆ ಸಂಬಂಧಪಟ್ಟಂತೆ ಜಯಾ ಬಚ್ಚನ್ ಹಳೆಯ ಸಂದರ್ಶನವೊಂದರಲ್ಲಿ ಮಾತನಾಡಿರುವುದು ಈಗ ವೈರಲ್ ಆಗುತ್ತಿದೆ.

'ನಾನು ಇನ್ನೂ ಸ್ವಲ್ಪ ನಾಟಕೀಯವಾಗಿ ನಡೆದುಕೊಳ್ಳಬೇಕು; ಆಕೆ ಇನ್ನೂ ಸ್ವಲ್ಪ ಗೌರವ ಕೊಡುವಂತೆ ಇರಬೇಕು' ಎಂದಿದ್ದಾರೆ ಜಯಾ ಬಚ್ಚನ್. ಹಾಗಿದ್ದರೆ, ಯಾಕೆ ಜಯಾ ಬಚ್ಚನ್ ತಮ್ಮ ಸೊಸೆಯ ಬಗ್ಗೆ ಹೀಗೆ ಹೇಳಿದ್ದಾರೆ ಗೊತ್ತೇ? ಇತ್ತೀಚೆಗೆ ಐಶೂ ಪುತ್ರಿ ಆರಾಧ್ಯಾ ಹುಟ್ಟುಹಬ್ಬದ ವೇಳೆ ತೆಗೆಸಿಕೊಂಡ ಇಡೀ ಫ್ಯಾಮಿಲಿ ಫೋಟೋವೊಂದು ಸೋಷಿಯಲ್ ಮೀಡಿಯಾಗಳಲ್ಲಿ ರಾರಾಜಿಸುತ್ತಿತ್ತು. ಆದರೆ, ಐಶ್ವರ್ಯಾ ರೈ ಆ ಫೋಟೋವನ್ನು ತನ್ನ ಸೋಷಿಯಲ್ ಮೀಡಿಯಾ ಅಕೌಂಟ್‌ಗೆ ಪೋಸ್ಟ್ ಮಾಡುವಾಗ, ಅದನ್ನು ಎಡಿಟ್ ಮಾಡಿ, ಅಮಿತಾಬ್ ಮತ್ತು ಆರಾಧ್ಯ ಇಬ್ಬರೇ (ತಾತ-ಮೊಮ್ಮಗಳು) ಫೋಟೋದಲ್ಲಿ ಇರುವಂತೆ ನೋಡಿಕೊಂಡಿದ್ದಾರೆ. 

Tap to resize

Latest Videos

ಐಶ್ವರ್ಯಾ ರೈ ಹಾಕಿದ ಫೋಟೊ ನೋಡಿದ ಜನರು ತಕ್ಷಣವೇ ಅದನ್ನು ಇನ್ನೊಂದು ಲೆವಲ್‌ಗೆ ತೆಗೆದುಕೊಂಡು ಹೋಗಿದ್ದಾರೆ. ತನ್ನ ಅತ್ತೆ ಜಯಾ ಬಚ್ಚನ್ ರನ್ನು ಅವೈಡ್ ಮಾಡಲೆಂದೇ ಐಶ್ ಹೀಗೆ ಮಾಡಿದ್ದಾರೆ ಎಂದು ಗುಲ್ಲು ಹಬ್ಬಿಸಿದ್ದಾರೆ. ಅದು ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ಸ್ವತಃ ಜಯಾ ಬಚ್ಚನ್ ಅವರಿಗೇ ಈ ಬಗ್ಗೆ ಒಂದು ಸಂದರ್ಶನದಲ್ಲಿ ಪ್ರಶ್ನೆಯನ್ನು ಕೇಳಿಯೇಬಿಟ್ಟಿದ್ದಾರೆ. ಅದಕ್ಕೆ ಜಯಾ ಬಚ್ಚನ್ ಅಷ್ಟೇ ನೇರವಾಗಿ, ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದಾರೆ. 

ಗೀತಾ ತಲೆಗೇ ಗನ್ ಗುರಿಯಿಟ್ಟ ಭಾನುಮತಿ; ದೇವಿಯಂತೆ ಕಾಪಾಡಿದ ಹೆಣ್ಣು ಹುಲಿ ಮಹತಿ

ಈ ಫೋಟೋ ಘಟನೆ ಉಲ್ಲೇಖಿಸಿ ಕೇಳಿದ ಪ್ರಶ್ನೆಗೆ ಸೊಸೆ ಐಶ್ವರ್ಯಾ ಬಗ್ಗೆ ಮಾತನಾಡಿರುವ ಅತ್ತೆ ಜಯಾ ಬಚ್ಚನ್ 'ಅವಳು ಮಾಡಿದ್ದು ಏನಾದರೂ ಇಷ್ಟವಾಗದಿದ್ದರೆ ನಾನು ಮುಖಕ್ಕೆ ಹೊಡೆದಂತೆ ಹೇಳುತ್ತೇನೆ. ಅದರಿಂದ ಸಮಸ್ಯೆ ಸೃಷ್ಟಿಯಾಗುತ್ತದೆ. ಆದರೆ, ಅವಳು ನನ್ನ ಮಾತುಗಳ ಬಗ್ಗೆ ಇನ್ನೂ ಹೆಚ್ಚಿನ ಗೌರವ ಹೊಂದಬೇಕು. ಒಂದೇ ಮಾತಲ್ಲಿ ಹೇಳಬೇಕು ಎಂದರೆ, 'ನಾನು ಇನ್ನೂ ಹೆಚ್ಚು ಡ್ರಾಮಾಟಿಕ್ ಆಗಬೇಕು; ಆಕೆ ಇನ್ನೂ ಹೆಚ್ಚು ರೆಸ್ಪೆಕ್ಟ್‌ಫುಲ್ ಆಗಬೇಕು' ಎಂದಿದ್ದಾರೆ. ಈಗ ಜಯಾ ಬಚ್ಚನ್ ಹೇಳಿರುವ ಈ ಮಾತು ಭಾರೀ ವೈರಲ್ ಆಗುತ್ತಿದೆ.

ಲಕ್ಷ್ಮೀ ಬಾರಮ್ಮ: ಹೆಂಡತಿಗೋಸ್ಕರ ಮಂಡಿಯೂರು ಆದರೆ ತಾಂಡವ್ ತರ ಹೆಣ್ಣಿಗೋಸ್ಕರ ಮಂಡಿಯೂರಬೇಡ

click me!