
ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಮುಂದಿನ ಚಿತ್ರ 'ತೇಜಸ್' ಬಿಡುಗಡೆಗೆ ಸಿದ್ಧವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಟಿ ನಿರಂತರವಾಗಿ ಮುಖ್ಯಾಂಶಗಳಲ್ಲಿ ಇರುತ್ತಾರೆ. ಆದರೆ, ಈ ಚಿತ್ರ ಬಿಡುಗಡೆಗೂ ಮುನ್ನವೇ ನಟಿ ಇತಿಹಾಸ ಸೃಷ್ಟಿಸಲು ಕಾರತರರಾಗಿದ್ದರು. ಆದರೆ ಅದು ಸಾಧ್ಯವಾಗದೇ ಪರದಾಡಿದ ಘಟನೆ ನಡೆಯಿತು. ವಾಸ್ತವವಾಗಿ, ನಟಿ ದೆಹಲಿಯ ಕೆಂಪು ಕೋಟೆಯ ಲುವ ಕುಶ ರಾಮಲೀಲಾ ಮೈದಾನದಲ್ಲಿ ರಾವಣನನ್ನು ಸುಟ್ಟು ಹಾಕುವ ಕಾರ್ಯಕ್ರಮವಿತ್ತು. ಇದು ಸಕ್ಸಸ್ ಆಗಿದ್ದೇ ಆದರೆ, ಇತಿಹಾಸ ಸೃಷ್ಟಿಯಾಗುತ್ತಿತ್ತು. ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ರಾವಣ ದಹನ ಮಾಡಿದ ಕೀರ್ತಿಗೆ ನಟಿ ಭಾಜನವಾಗುತ್ತಿದ್ದರು. ಈ ಕುರಿತು ನಟಿ, ನಿನ್ನೆಯೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನೂ ಶೇರ್ ಮಾಡಿಕೊಂಡಿದ್ದರು. ತಾವು ಇತಿಹಾಸ ಸೃಷ್ಟಿಸಲಿರುವುದಾಗಿ ಹೇಳಿದ್ದರು.
ಆದರೆ ಎಲ್ಲವೂ ಉಲ್ಟಾ ಆಗೋಯ್ತು. ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಲವಕುಶ ರಾಮ್ಲೀಲಾ ಸಮಾರಂಭದಲ್ಲಿ ರಾವಣನ ದಹನ ಮಾಡಲು ಕಂಗನಾ ರಣಾವತ್ ವಿಫಲರಾದರು. 50 ವರ್ಷಗಳ ಇತಿಹಾಸದಲ್ಲಿ ರಾವಣ ದಹನ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯನ್ನು ಈಕೆ ಪಡೆಯದೇ ಹೋದರು. ಏಕೆಂದರೆ ಇವರಿಗೆ ಬಾಣ ಕಂಗನಾ ರಾಣವತ್ ರಾವಣನಿಗೆ ಬಾಣ ಬಿಡಲು ಸಾಧ್ಯವಾಗದೇ ಹೋಯಿತು. ಮೂರ್‍ನಾಲ್ಕು ಬಾರಿ ಬಾಣ ಬಿಡಲು ರೆಡಿಯಾದರೂ ಬಿಲ್ಲು ಅಲ್ಲಿಯೇ ಬಿದ್ದು ಹೋಯಿತು.
ಹತ್ತು ತಲೆ ಧರಿಸಿ ರಾವಣನಾದ ರಾಖಿ ಸಾವಂತ್: ಮತಾಂತರವಾದ ನಂತ್ರ ಇದೇನಾಯ್ತು ಅಂತಿದ್ದಾರೆ ಫ್ಯಾನ್ಸ್!
ಕೊನೆಗೆ ನಟಿ ಕಂಗನಾ ಪಕ್ಕದಲ್ಲಿ ಇದ್ದವರ ಕೈಗೆ ಬಿಲ್ಲು ಬಾಣ ನೀಡಿದರು. ಅವರು ಸುಲಭವಾಗಿ ಬಾಣ ಬಿಟ್ಟು, ರಾವಣನ ದಹನ ಮಾಡಿದರು. ಬಳಿಕ ಕಂಗನಾ ರಣಾವತ್ ಜೈಶ್ರೀರಾಮ್ ಎಂದು ಘೋಷಣೆ ಕೂಗಿದರು. ಇದರ ವಿಡಿಯೋ ಸಕತ್ ವೈರಲ್ ಆಗಿದ್ದು, ನಟಿಯನ್ನು ಹಲವರು ಟ್ರೋಲ್ ಮಾಡುತ್ತಿದ್ದಾರೆ. ಇದ್ದದ್ದನ್ನು ಇದ್ದಹಾಗೆ ಹೇಳಿ ಒಂದು ವರ್ಗದ ಕೆಂಗಣ್ಣಿಗೆ ಗುರಿಯಾಗಿರುವ ನಟಿಯನ್ನು ಅವರು ವಿವಿಧ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಬಾಯಿಗೆ ಬಂದದ್ದು ಹೇಳಿದಂತೆ ಬಾಣ ಬಿಡಲು ಆಗುವುದಿಲ್ಲ ಎಂದು ನಟಿಯ ಕಾಲೆಳೆಯುತ್ತಿದ್ದಾರೆ.
ಅದೇ ವೇಳೆ ಇನ್ನೊಂದಿಷ್ಟು ಮಂದಿ, ನೀವು ರಾವಣಂದಿರ ವಿರುದ್ಧ ಮಾತನಾಡಬಹುದು. ಆದರೆ ಅವರನ್ನು ಈ ಸಮಾಜದಿಂದ ಅಷ್ಟು ಸುಲಭದಲ್ಲಿ ದಹಿಸಲು ಸಾಧ್ಯವಿಲ್ಲ. ಏಕೆಂದರೆ ಅವರ ಸಂತತಿಯೇ ಹಾಗಿರುತ್ತದೆ. ಮಾತಿನ ಏಟಿನಿಂದ ರಾವಣಂದಿರ ವಿರುದ್ಧ ಮಾತನಾಡಿದಂತೆ ಅವರನ್ನು ಬೇರು ಸಹಿತ ಕಿತ್ತು ಹಾಕುವುದು ಅಷ್ಟು ಸುಲಭವಲ್ಲ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ನಟಿ ಕಂಗನಾ ಇತಿಹಾಸ ಸೃಷ್ಟಿಸುವುದರಿಂದ ವಂಚಿತರಾದರು. ಮೊದಲೇ ಪ್ರಾಕ್ಟೀಸ್ ಮಾಡಬಾರದಿತ್ತಾ ಎಂದು ಹಲವರು ನಟಿಗೆ ಪ್ರಶ್ನಿಸುತ್ತಿದ್ದಾರೆ.
ಇಸ್ರೇಲ್ ಮೇಲೆ ಹಮಾಸ್ ದಾಳಿ: ಭಯೋತ್ಪಾದನೆಗೆ ಕುಮ್ಮುಕ್ಕು ನೀಡಿದ ಖ್ಯಾತ ನಟಿ ಅರೆಸ್ಟ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.