ತಂದೆಯಾದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ; ಗಂಡು ಮಗುವಿಗೆ ಜನ್ಮ ನೀಡಿದ ಪ್ರಿಯಾ

Published : Feb 01, 2023, 10:09 AM IST
ತಂದೆಯಾದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ; ಗಂಡು ಮಗುವಿಗೆ ಜನ್ಮ ನೀಡಿದ ಪ್ರಿಯಾ

ಸಾರಾಂಶ

ಕಾಲಿವುಡ್​ನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್​  ತಂದೆಯಾದ ಸಂಭ್ರಮದಲ್ಲಿದ್ದಾರೆ. ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಕಂಡಿರುವ ನಿರ್ದೇಶಕ ಅಟ್ಲೀ ಅವರ ವೈಯಕ್ತಿಕ ಬದುಕಿನಲ್ಲೂ ಸಂತಸ ಮನೆ ಮಾಡಿದೆ. 

ಕಾಲಿವುಡ್​ನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್​  ತಂದೆಯಾದ ಸಂಭ್ರಮದಲ್ಲಿದ್ದಾರೆ. ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಕಂಡಿರುವ ನಿರ್ದೇಶಕ ಅಟ್ಲೀ ಅವರ ವೈಯಕ್ತಿಕ ಬದುಕಿನಲ್ಲೂ ಸಂತಸ ಮನೆ ಮಾಡಿದೆ. ಅಟ್ಲೀ ಕುಮಾರ್​ ಪತ್ನಿ ಪ್ರಿಯಾ  ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.  ಜನವರಿ 31ರಂದು ಪ್ರಿಯಾ ಮೊದಲ ಮಗುವಿನ ತಾಯಿಯಾಗಿದ್ದಾರೆ. ಈ ಖುಷಿಯ ವಿಚಾರವನ್ನು ಅಟ್ಲೀ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರು ಅಟ್ಲೀ ಕುಮಾರ್ ದಂಪತಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ತಮಿಳು ಚಿತ್ರರಂಗದಲ್ಲಿ ಖ್ಯಾತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಅಟ್ಲೀ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ಅಟ್ಲೀ ಕುಮಾರ್​ ಇದೀಗ ‘ಜವಾನ್​’ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ.

ಮೊದಲ ಬಾಲಿವುಡ್ ಸಿನಿಮಾದ ಎಕ್ಸಾಯಿಟ್  ಮೆಂಟ್ ಜೊತೆಗೆ ಮನೆಗೆ ಹೊಸ ಸದಸ್ಯನ ಆಗಮನ ಆಗಿರುವ ಸಂಭ್ರಮದಲ್ಲಿದ್ದಾರೆ ಆಟ್ಲೀ. ಈ ಸಂತಸದ ಸುದ್ದಿಯನ್ನು ಆಟ್ಲೀ ಸಾಮಾಜಿಕ ಜಾಲತಾಣದಲ್ಲಿ, ‘ಅವರು ಹೇಳಿದ್ದು ನಿಜ. ಜಗತ್ತಿನಲ್ಲಿ ಈ ರೀತಿಯ ಫೀಲಿಂಗ್​ ಬೇರೆ ಯಾವುದೂ ಇಲ್ಲ. ಗಂಡು ಮಗುವಿನ ಆಗಮನ ಆಗಿದೆ. ಇಂದಿನಿಂದ ಪಾಲಕರಾಗಿ ನಮ್ಮ ಹೊಸ ಸಾಹಸದ ಪಯಣ ಶುರುವಾಗಿದೆ’ ಎಂದು  ಪೋಸ್ಟ್​ ಮಾಡಿದ್ದಾರೆ.

ತಂದೆಯಾಗುತ್ತಿರುವ ಸಂತಸದಲ್ಲಿ ನಿರ್ದೇಶಕ ಅಟ್ಲೀ; ಫೋಟೋ ಮೂಲಕ ಸಿಹಿ ಸುದ್ದಿ ಹಂಚಿಕೊಂಡ 'ಜವಾನ್' ನಿರ್ದೇಶಕ

2014ರಲ್ಲಿ ಅಟ್ಲೀ ಕುಮಾರ್​ ಪ್ರೇಯಸಿ ಪ್ರಿಯಾ ಜೊತೆ ದಾಂಪತ್ಯ ಜೀವನ ಕಾಲಿಟ್ಟರು. ಇದೀಗ 8 ವರ್ಷಗಳ ಬಳಿಕ ತಂದೆ-ತಾಯಿಯಾಗಿ ಬಡ್ತಿ ಪಡೆದಿದ್ದಾರೆ. ಇತ್ತೀಚಿಗಷ್ಟೆ ಅಟ್ಲೀ ಕುಮಾರ್​ ಮತ್ತು ಪ್ರಿಯಾ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಬಹಿರಂಗ ಪಡಿಸಿದ್ದರು. 2022ರ ಡಿಸೆಂಬರ್​ನಲ್ಲಿ ಸಂತಸದ ಸುದ್ದಿ ಹಂಚಿಕೊಂಡಿದ್ದರು. ಪ್ರೆಗ್ನೆನ್ಸಿ ಫೋಟೋಶೂಟ್​ ಮೂಲಕ ಖುಷಿಯ ಸಮಾಚಾರ ಶೇರ್ ಮಾಡಿದ್ದರು. ಬಳಿಕ ಅದ್ದೂರಿಯಾಗಿ ಸೀಮಂತ ಸಮಾರಂಭ ಕೂಡ ಮಾಡಿದ್ದರು. ಸೀಮಂತದಲ್ಲಿ ಕುಟುಂಬದ ಜೊತೆಗೆ ಕಾಲಿವುಡ್‌ನ ಅನೇಕ ಗಣ್ಯರು ಭಾಗಿಯಾಗಿ ಶುಭಹಾರೈಸಿದ್ದರು. ಇದೀಗ ತಂದೆ-ತಾಯಿಯಾದ ಸಂಭ್ರಮದಲ್ಲಿದ್ದಾರೆ. 

ಶಾರುಖ್‌ಗಾಗಿ ತಮಿಳಿನ ಈ ಸಿನಿಮಾ ಕಾಪಿ ಮಾಡಿದ್ರಾ ಆಟ್ಲೀ; 'ಜವಾನ್' ವಿರುದ್ಧ ಹೊಸ ಆರೋಪ

ಆಟ್ಲೀ ಸಿನಿಮಾ ಪಯಣ

ನಿರ್ದೇಶಕ ಅಟ್ಲೀ ರಾಜಾ ರಾಣಿ ಸಿನಿಮಾ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಯಿತು. ಬಳಿಕ ಥೇರಿ, ಮೆರ್ಸಲ್​, ಬಿಗಿಲ್ ಚಿತ್ರಗಳನ್ನು ನಿರ್ದೇಶಿಸಿದರು. ಎಲ್ಲಾ ಸಿನಿಮಾಗಳು ಸೂಪರ್ ಸಕ್ಸಸ್ ಆಗಿದ್ದು ಅಟ್ಲೀಗೆ ದೊಡ್ಡ ಮಟ್ಟದ  ಖ್ಯಾತಿ ತಂದುಕೊಟ್ಟಿದೆ. ಸ್ಟಾರ್​ ನಟ ದಳಪತಿ ವಿಜಯ್​ ಜೊತೆ  ಅಟ್ಲೀ  ತುಂಬಾ ಆಪ್ತರಾಗಿದ್ದಾರೆ. ಇದೀಗ ಬಾಲಿವುಡ್​ನಿಂದಲೂ ಅಟ್ಲೀ ಅವರಿಗೆ ಬೇಡಿಕೆ ಹೆಚ್ಚಾಗಿದ್ದು ಕಿಂಗ್ ಖಾನ್ ಶಾರುಖ್​ ಖಾನ್​ ನಟನೆ ನಿರ್ದೇಶ ಮಾಡುತ್ತಿದ್ದಾರೆ. ಶಾರುಖ್ ಜೊತೆ‘ಜವಾನ್​’ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಟೀಸರ್ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2026ರಲ್ಲಿ ಹಾಟ್ ಆಗಿರಬೇಕಾ, ಪ್ರೆಗ್ನೆಂಟ್ ಆಗಿಬಿಡಲೇ? ಸಲಹೆ ಕೇಳಿದ ನಟಿಗೆ ಭರ್ಜರಿ ಕಮೆಂಟ್
ಯೂಟ್ಯೂಬ್‌ನಲ್ಲಿರುವ ಟಾಕ್ಸಿಕ್ ಟೀಸರ್ ವಿರುದ್ಧ ಅಸಮಾಧಾನಕ್ಕೆ ಸೆನ್ಸರ್ ಬೋರ್ಡ್ ಮಹತ್ವದ ಹೇಳಿಕೆ