ಕೊನೆಗೂ ಕನ್ನಡಕ್ಕೆ ಜೈ ಅಂದ ನಾನಿ! ಈಗ ಕನ್ನಡಿಗರನ್ನ ಎದುರು ಹಾಕ್ಕೊಳ್ಳೋದು ಸುಲಭ ಅಲ್ಲ!

Published : Jan 31, 2023, 03:07 PM IST
ಕೊನೆಗೂ ಕನ್ನಡಕ್ಕೆ ಜೈ ಅಂದ ನಾನಿ! ಈಗ ಕನ್ನಡಿಗರನ್ನ ಎದುರು ಹಾಕ್ಕೊಳ್ಳೋದು ಸುಲಭ ಅಲ್ಲ!

ಸಾರಾಂಶ

ತೆಲುಗು ನಟ ನಾನಿ ಕಳೆದ ಬಾರಿ ತನ್ನ ಸಿನಿಮಾ ಬಿಡುಗಡೆಯಾದಾಗ ಕನ್ನಡಿಗರ ಬಗ್ಗೆ ಉಡಾಫೆ ಸ್ಟೇಟ್‌ಮೆಂಟ್ ಕೊಟ್ಟು ಕನ್ನಡಿಗರ ಸಿಟ್ಟಿಗೆ ತುತ್ತಾಗಿದ್ದರು. ಇದೀಗ ಎಚ್ಚೆತ್ತುಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಷೆಯಲ್ಲಿ ನಾನಿ ಹೊಸ ಸಿನಿಮಾ ದಸರ ಟೀಸರ್ ರಿಲೀಸ್ ಆಗಿದ್ದು, ಶಭಾಷ್ ಮಗ್ನೇ ಅಂತಿದ್ದಾರೆ ಕನ್ನಡಿಗರು. ಅವರು ಹೀಗನ್ನೋದಕ್ಕೂ ಕಾರಣ ಇದೆ.  

ನಾನಿ ನಟನೆಯ 'ದಸರಾ' ಟೀಸರ್ ರಿಲೀಸ್ ಆಗಿ ಸಖತ್ ಸೌಂಡ್ ಮಾಡ್ತಿದೆ. ಒಂದೊಳ್ಳೆ ವಿಷ್ಯ ಅಂದ್ರೆ ಹಿಂದೆ ಮಾಡಿರೋ ತಪ್ಪನ್ನು ಈ ಬಾರಿ ನಾನಿ ಮಾಡಿಲ್ಲ. ಹಿಂದೆ ಕನ್ನಡಿಗರು ಕಲಿಸಿದ ಪಾಠದಿಂದ ಎಚ್ಚೆತ್ತುಕೊಂಡಿದ್ದಾರೆ. ಈ ಬಾರಿ ಹಿಂದಿನ ತಪ್ಪು ಮಾಡಿಲ್ಲ. ನಾನಿ ಹಿಂದಿನ ಸಿನಿಮಾ ‘ಅಂತೆ ಸುಂದರಾನಿಕಿ’ ಟೀಸರ್ ಬಿಡುಗಡೆ ವೇಳೆ ನಟ ನಾನಿಗೆ ನಿಮ್ಮ ಸಿನಿಮಾವನ್ನು ಏಕೆ ಕನ್ನಡದಲ್ಲಿ ಡಬ್ ಮಾಡಿಲ್ಲ ಎಂದು ಪ್ರಶ್ನೆ ಎದುರಾಯಿತು. ಆಗ ನಾನಿ, ‘ಕನ್ನಡ ಪ್ರೇಕ್ಷಕರು ತೆಲುಗು ಸಿನಿಮಾವನ್ನು ಅದರ ಭಾಷೆಯಲ್ಲೇ ನೋಡುತ್ತಾರೆ. ಕನ್ನಡಿಗರಿಗೆ ತೆಲುಗು ಅರ್ಥವಾಗುತ್ತದೆ. ಅವರು ತೆಲುಗು ಸಿನಿಮಾವನ್ನು ತೆಲುಗಿನಲ್ಲಿ ನೋಡುವುದಕ್ಕೆ ಇಷ್ಟಪಡುತ್ತಾರೆ. ಹೀಗಾಗಿ ಡಬ್ ಮಾಡುವ ಅವಶ್ಯಕತೆ ಬರಲಿಲ್ಲ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಕನ್ನಡಿಗರು ಗರಂ ಆಗಿದ್ದರು. ಟಾಲಿವುಡ್​ ನ್ಯಾಚುರಲ್​ ಸ್ಟಾರ್​ ನಾನಿ ವಿರುದ್ಧ ಕನ್ನಡಿಗರು ಕಿಡಿ ಕಾರಿದ್ದರು.

ಇದಾದ ಬಳಿಕ ಕನ್ನಡಿಗರು ನಾನಿ ವಿರುದ್ಧ ಸಿಡಿದೆದ್ದ ಕಾರಣ ಅವರು ಆಮೇಲೆ ತಮ್ಮ ಮಾತಿನ ಬಗ್ಗೆ ಕ್ಷಮೆ ಕೇಳಿದ್ದರು. ಕನ್ನಡದ ಬಗ್ಗೆ ಹೊಗಳುವ ಸಂದರ್ಭ ಸಿಕ್ಕಾಗೆಲ್ಲ ತಮ್ಮಿಂದಾದಷ್ಟು ಕನ್ನಡ ಪ್ರೀತಿಯ ಮಾತುಗಳನ್ನಾಡಿದ್ದರು. ಕಾಂತಾರ ಸಿನಿಮಾವನ್ನು ಹಾಡಿ ಹೊಗಳಿದ್ದರು. ಒಂದು ಕಾಲದಲ್ಲಿ ಭಾರತೀಯ ಸಿನಿಮಾರಂಗದ ಮುಂದೆ ಕನ್ನಡ ಇಂಡಸ್ಟ್ರಿ ಮೂಲೆಗುಂಪಾದ ಸ್ಥಿತಿಯಲ್ಲಿತ್ತು. ಕನ್ನಡದ ಬಗ್ಗೆ ಏನು ಮಾಡಿದರೂ ನಡೆಯುತ್ತೆ ಅನ್ನೋ ಸ್ಥಿತಿ ಇತ್ತು. ಆದರೆ ಯಾವಾಗ ಕನ್ನಡ ಸಿನಿಮಾಗಳು ಇಂಡಿಯನ್ ಸಿನಿಮಾ ಪರಿಧಿಯನ್ನೂ ದಾಟಿ ವಿಶ್ವ ಮಟ್ಟದಲ್ಲಿ ಗಮನ ಸೆಳೆಯಲು ಆರಂಭವಾಯ್ತೋ ಆಗಿಂದ ಕನ್ನಡಿಗರ ಕನ್ನಡ ಪ್ರೇಮವೂ ಜಾಗೃತವಾಯಿತು.

Pathaan: ಮುಖ ಮುಚ್ಕೊಂಡು ಹೋಗಿ ಸಿನಿಮಾ ವೀಕ್ಷಿಸಿದ ನಟಿ ದೀಪಿಕಾ ಪಡುಕೋಣೆ

ಕಳೆದ ಬಾರಿಯ ಘಟನೆಯಿಂದ ಪಾಠ ಕಲಿತ ನಾನಿ ಇದೀಗ ಕನ್ನಡದಲ್ಲೂ ತಮ್ಮ ಹೊಸ ಸಿನಿಮಾ ದಸರಾದ ಟೀಸರ್ ಬಿಡುಗಡೆ ಮಾಡಿದ್ದಾರೆ. ಹಿಂದೆ ಅವರು ಕನ್ನಡಿಗರು ಎಲ್ಲದಕ್ಕೂ ಅನ್ನೋ ಧಾಟಿಯಲ್ಲಿ ಮಾತನಾಡಿದ್ದರು. 'ಎಲ್ಲ ಪ್ರೇಕ್ಷಕರಿಗೆ ಸಿನಿಮಾ ರೀಚ್ ಆಗಬೇಕು ಎಂದು ಬೇರೆ ಬೇರೆ ಭಾಷೆಯಲ್ಲಿ ಯಾಕೆ ಸಿನಿಮಾ ಮಾಡುತ್ತೇವೆ. ತೆಲುಗು ಸಿನಿಮಾ ಎಲ್ಲರಿಗೂ ಅರ್ಥವಾಗುವುದಿಲ್ಲ ಎಂದು ಅವರವರ ಭಾಷೆಯಲ್ಲಿ ಸಿನಿಮಾ ಡಬ್ ಮಾಡಲಾಗುತ್ತಿದೆ. ಬೇರೆಯವರ ಧ್ವನಿಯಲ್ಲಿ ಸಿನಿಮಾ ನೋಡದೆ, ಕಲಾವಿದರ ಒರಿಜಿನಲ್ ಧ್ವನಿಯಲ್ಲಿ ಸಿನಿಮಾವನ್ನು ಪ್ರೇಕ್ಷಕರು ನೋಡಲಿ, ಅದೇ ಚೆನ್ನಾಗಿರುತ್ತದೆ ಎಂದು ನಾವು ಆಶಯಪಟ್ಟೆವು, ಆದರೆ ಅದು ಎಲ್ಲ ಸಮಯದಲ್ಲಿ ಸಾಧ್ಯವಾಗದು. ಕನ್ನಡಿಗರು ತೆಲುಗು ಸಿನಿಮಾವನ್ನು ಜಾಸ್ತಿ ನೋಡುತ್ತಾರೆ, ಅರ್ಥ ಮಾಡಿಕೊಳ್ಳುತ್ತಾರೆ, ತೆಲುಗು ಸಿನಿಮಾವನ್ನು ಅವರು ಎಂಜಾಯ್ ಮಾಡುತ್ತಾರೆ.ನಮ್ಮ ಒರಿಜಿನಲ್ ಸಿನಿಮಾವನ್ನು ಕನ್ನಡಿಗರಿಗೆ ತೋರಿಸಬಹುದು. ಆದರೆ ಹಿಂದಿ, ಮಲಯಾಳಂನವರಿಗೆ ನಮ್ಮ ಸಿನಿಮಾವನ್ನು ಡಬ್ ಮಾಡಲೇಬೇಕು" ಎಂದು ನಟ ನಾನಿ ಹೇಳಿದ್ದರು.

ಟಾಲಿವುಡ್​​ನಲ್ಲಿ ಬಿಗ್ ಬಜೆಟ್​ನ ದಸರಾ ಚಿತ್ರ ಭರ್ಜರಿ ಸದ್ದು ಮಾಡುತ್ತಿದೆ. ಎಲ್ಲ ಭಾಷೆಯ ಸ್ಟಾರ್​ಗಳು ಈ ಚಿತ್ರದ ಟೀಸರ್(Teaser) ರಿಲೀಸ್ ಮಾಡಿದ್ದಾರೆ. ತಮ್ಮದೆ ರೀತಿಯಲ್ಲಿ ಚಿತ್ರಕ್ಕೆ ಗುಡ್ ಲಕ್(Good luck) ಹೇಳಿದ್ದಾರೆ. ಪಂಚ ಭಾಷೆಯಲ್ಲಿ ರಿಲೀಸ್ ಆಗುತ್ತಿರೋ ಈ ಚಿತ್ರದ ಟೀಸರ್ಗೆ ಮೆಚ್ಚುಗೆ ವ್ಯಕ್ತವಾಗುತ್ತದೆ. ವಿಶೇಷವಾಗಿ ಕನ್ನಡದ ಟೀಸರ್​ನಲ್ಲಿ ಉತ್ತರ ಕರ್ನಾಟಕದ ಭಾಷೆಯನ್ನ ಬಳಸಲಾಗಿದೆ. ಖಡಕ್ ಭಾಷೆಯನ್ನು ನಾಯಕ ನಟ ನಾನಿ ಪಾತ್ರಕ್ಕೆ ಅಳವಡಿಸಿಕೊಳ್ಳಲಾಗಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ದಸರ ಟೀಸರ್ ರಿಲೀಸ್ ಮಾಡಿದ್ದಾರೆ. ಉತ್ತರ ಕರ್ನಾಟಕದ ರಗಢ್ ಭಾಷೆಯನ್ನೆ ನಾನಿಯ ಪಾತ್ರ ಇಲ್ಲಿ ಮಾತನಾಡುತ್ತದೆ. ಮಹಾನಟಿ ಚಿತ್ರ ಖ್ಯಾತಿಯ ನಟಿ ಕೀರ್ತಿ ಸುರೇಶ್ ಇಲ್ಲಿ ನಾನಿಗೆ ಜೋಡಿ ಆಗಿದ್ದಾರೆ. ಖಡಕ್ ಕಂಠಸಿರಿಯ ನಟ ಸಾಯಿ ಕುಮಾರ್ ಅವರೂ ಈ ಚಿತ್ರದಲ್ಲಿ ಖಡಕ್ ರೋಲ್​ ಮಾಡಿದ್ದಾರೆ.

ಈ ಸಿನಿಮಾ ಮಾರ್ಚ್-30ಕ್ಕೆ Pan India ರಿಲೀಸ್ ಕಾಣಲಿದೆ. ಈ ಬಾರಿ ನಾನಿ ಸಿನಿಮಾವನ್ನು ಕನ್ನಡ ವರ್ಶನ್‌(Kannada version)ನಲ್ಲೇ ಕನ್ನಡಿಗರು ನೋಡಲಿದ್ದಾರೆ.

ಮೊದಲ ಬಾರಿ ಮಗಳು ಮಾಲ್ತಿ ಮುಖ ರಿವೀಲ್ ಮಾಡಿದ ಪ್ರಿಯಾಂಕಾ ಚೋಪ್ರಾ; ಫೋಟೋ ವೈರಲ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?