80-90ರ ದಶಕದಲ್ಲಿ ಹಿಂದಿ ಚಿತ್ರರಂಗದ ಟಾಪ್ ನಟಿಯರ ಪಟ್ಟಿಯಲ್ಲಿದ್ದ ನೀನಾ ಗುಪ್ತಾ ಏಕೈಕಾ ಪುತ್ರಿ ಮಸಾಬಾ ಗುಪ್ತಾ ಜನವರಿ 27ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮಸಾಬಾ ಮತ್ತು ಸತ್ಯದೀಪ್ ಮದುವೆ ಸರಳವಾಗಿ ಆಪ್ತರ ಸಮ್ಮುಖದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಮಸಾಬಾ ಫೋಟೋ ಅಪ್ಲೋಡ್ ಮಾಡಿದ ನಂತರ ಮದುವೆ ವಿಚಾರ ಬಹಿರಂಗವಾಗಿತ್ತು. ಈ ಫೋಟೋದಲ್ಲಿ ಮಸಾಬಾ ಪತಿಗಿಂತ ಹೆಚ್ಚು ಗಮನ ಸೆಳೆದದ್ದು ಇಬ್ಬರು ತಂದೆಯರು ಒಟ್ಟಿಗೆ ಕಾಣಿಸಿಕೊಂಡಿರುವುದು.
ಹೌದು! ನೀನಾ ಗುಪ್ತಾ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟರ್ ವಿವಿಯನ್ ರಿಚರ್ಡ್ಸ್ 1980ರಲ್ಲಿ ಹಲವು ವರ್ಷಗಳ ಕಾಲ ಒಟ್ಟಿಗಿದ್ದರು. 9 ವರ್ಷಗಳ ಕಾಲ ರಿಲೇಷನ್‌ಶಿಪ್‌ನಲ್ಲಿದ್ದ ನಂತರ ಇವರಿಬ್ಬರಿಗೆ ಪುತ್ರಿ ಮಸಾಬಾ ಗುಪ್ತಾ ಹುಟ್ಟಿದ್ದರು. ವಿವಿಯನ್ ರಿಚರ್ಡ್ಸ್ ಮತ್ತೊಬ್ಬರನ್ನು ಮದುವೆಯಾಗಿದ್ದ ಕಾರಣ ಸಿಂಗಲ್ ಮದರ್ ಅಗಿ ಮಸಾಬಾ ಬೆಳೆಸಲು ನೀನಾ ನಿರ್ಧರಿಸುತ್ತಾರೆ. ಹಲವು ವರ್ಷಗಳು ಕಳೆದ ನಂತರ ಹೊಸ ದೆಹಲಿ ಮೂಲಕ chartered accountant ವಿವೇಕ್ ಮಿಶ್ರಾ ಅವರನ್ನು ಯುಎಸ್‌ನಲ್ಲಿ ಸರಳವಾಗಿ ವಿವಾಹವಾದರು.
ಮಸಾಬಾ ಗುಪ್ತಾ ಮದುವೆಯಲ್ಲಿ ವಿವಿಯನ್ ರಿಚರ್ಡ್ಸ್ ಮತ್ತು ವಿವೇಕ್ ಮಿಶ್ರಾ ಇರುವ ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಮಗಳ ಜೀವನ ಮುಖ್ಯ ಘಟನೆಯಲ್ಲಿ ವಿವಿಯನ್ ರಿಚರ್ಡ್ಸ್ ಭಾಗಿಯಾಗಿದ್ದು ಒಳ್ಳೆಯ ವಿಚಾರ ಎಂದಿದ್ದಾರೆ. ಇದೇ ಖುಷಿಯಲ್ಲಿ ತಂದೆ ಫೋಟೋ ಹಂಚಿಕೊಂಡ ಮಸಾಬಾ 'My fierce father,ಸೌಮ್ಯ ದೈತ್ಯ. ನಾನು ನಿಮ್ಮ ಮೂಗು ಮಾತ್ರವಲ್ಲದೆ ನಿಮ್ಮ ಭುಜಗಳನ್ನು ಸಹ ಸಪೋರ್ಟ್ ಆಗಿ ಪಡೆದುಕೊಂಡಿರುವೆ. ನೀವು ನೋಡಿದಂತೆ ನಾನು ಜಗತ್ತನ್ನು ನೋಡಲು ಸವಾಲುಗಳನ್ನು ತೆಗೆದುಕೊಳ್ಳಲು ಮತ್ತು ಹೋರಾಟಗಾರತಿಯಾಗಿ ಹೊರ ಹೊಮ್ಮಲು ನನಗೆ ತುಂಬಾ ಸಂತೋಷವಾಗಿದೆ' ಎಂದು ಮಸಾಬಾ ಬರೆದುಕೊಂಡಿದ್ದಾರೆ.
ತಾಯಿ ನೀನಾ ಗುಪ್ತಾ ರಾಣಿ ರೀತಿ ಕುರ್ಚಿ ಮೇಲೆ ಕುಳಿತುಕೊಂಡಿರುವ ಫೋಟೋ ಅಪ್ಲೋಡ್ ಮಾಡಿ 'ಪ್ರಪಂಚದ ಅತಿ ಹೆಚ್ಚು ಸ್ವೀಟ್ ವ್ಯಕ್ತಿ. ಸಿಂಹಿಣಿ ರೀತಿ ರೀತಿ ನನ್ನನ್ನು ಬೆಳೆಸಿರುವುದಕ್ಕೆ' ಎಂದು ಹೇಳಿದ್ದಾರೆ. ಎರಡನೇ ತಂದೆ ವಿವೇಕ್ ಮಿಶ್ರಾ ಫೋಟೋಗೆ 'ನನ್ನಲ್ಲಿ ಉದ್ಯಮದ ಕಿಚ್ಚು ಹುಟ್ಟಿಸಿದ ವ್ಯಕ್ತಿ ನೀವು. ಕೈಂಡ್ ಬ್ರೈನ್ ಮತ್ತು ಒಳ್ಳೆಯ ಮನಸ್ಸು ನಿಮ್ಮದು' ಎಂದಿದ್ದಾರೆ.
ಅಂದಹಾಗೆ ಸತ್ಯದೀಪ್ ಅವರಿಗೆ ಇದು 2ನೇ ಮದುವೆ. ಈ ಮೊದಲು ಸತ್ಯದೀಪ್ ಖ್ಯಾತ ನಟಿ ಅದಿತಿ ರಾವ್ ಹೈದರಿಯನ್ನು ಮದುವೆಯಾಗಿದ್ದು. ಮದುವೆಯಾಗಿ ಕಲವೇ ತಿಂಗಳಲ್ಲಿ ಇಬ್ಬರೂ ಬೇರೆ ಬೇರೆ ಆದರು. 2013ರಲ್ಲಿ ಅದಿತಿ ಮತ್ತು ಸತ್ಯದೀಪ್ ವಿಚ್ಛೇದನ ಪಡೆದು ದೂರ ಆದರು. ಇದೀಗ ಮಸಾಬಾ ಜೊತೆ 2ನೇ ಮದುವೆಯಾಗಿದ್ದಾರೆ.ಮಸಾಬಾ ಗುಪ್ತಾ ಅವರಿಗೂ ಇದು 2ನೇ ಮದುವೆ. ಈ ಮೊದಲು 2015ರಲ್ಲಿ ನಿರ್ಮಾಪಕ ಮಧು ಮಂಟೇನಾ ಅವರನ್ನು ಮದುವೆಯಾಗಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಅಂದರೆ 2019ರಲ್ಲಿ ವಿಚ್ಛೇದನ ನೀಡುವ ಮೂಲಕ ದೂರ ದೂರ ಆದರು.
ಮಸಾಬಾ ಗುಪ್ತಾ, ಸತ್ಯದೀಪ್ ಮಿಶ್ರಾ ವಿವಾಹ ಪಾರ್ಟಿ ಫೋಟೋ ವೈರಲ್
ಮಸಾಬಾ ಮತ್ತು ಸತ್ಯದೀಪ್ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಸರಳವಾಗಿ ನಡೆದ ಮದುವೆ ಸಮಾರಂಭದ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಈ ಬಗ್ಗೆ ಮಸಾಬಾ ಆಂಗ್ಲ ಮಾಧ್ಯಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರ ಯಾರಿಗೂ ಹೇಳಿರಲಿಲ್ಲ. ಕುಟುಂಬದವರಿಗೆ ಮಾತ್ರ ಗೊತ್ತಿತ್ತು. ಇದನ್ನೂ ನಾವು ತುಂಬಾ ಖಾಸಗಿಯಾಗಿ ಇಟ್ಟಿದ್ದೆವು. ದೊಡ್ಡದಾಗಿ ಆಚರಣೆ ಮಾಡಲು ಇಷ್ಟವಿರಲಿಲ್ಲ. ಕೇವಲ 80-85 ಜನರಿಗೆ ಮಾತ್ರ ಆಹ್ವಾನ ಮಾಡಿದ್ದು. ಪಾರ್ಟಿಯಲ್ಲಿ ಭಾಗಿಯಾಗುತ್ತಾರೆ' ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.