ಸಂತೋಷಕ್ಕಾಗಿ ಕುಡಿಯುತ್ತಿದ್ದೆ; ಆಲ್ಕೋಹಾಲ್ ಚಟದಿಂದ ಹೊರಬಂದ ಬಗ್ಗೆ ಮೌನ ಮುರಿದ ಜಾವೇದ್ ಅಖ್ತರ್

Published : Feb 13, 2023, 03:06 PM IST
ಸಂತೋಷಕ್ಕಾಗಿ ಕುಡಿಯುತ್ತಿದ್ದೆ; ಆಲ್ಕೋಹಾಲ್ ಚಟದಿಂದ ಹೊರಬಂದ ಬಗ್ಗೆ ಮೌನ ಮುರಿದ ಜಾವೇದ್ ಅಖ್ತರ್

ಸಾರಾಂಶ

ಖ್ಯಾತ ಬಗಹಗಾರ, ಚಿತ್ರಸಾಹಿತಿ ಜಾವೇದ್ ಅಖ್ತರ್ ಕುಡಿತದ ಚಟದಿಂದ ಹೊರಬಂದ ಬಗ್ಗೆ ಬಹಿರಂಗ ಪಡಿಸಿದ್ದಾರೆ. 

ಖ್ಯಾತ ಬಗಹಗಾರ, ಚಿತ್ರಸಾಹಿತಿ ಜಾವೇದ್ ಅಖ್ತರ್  ಕುಡಿತದ ಚಟದಿಂದ ಹೊರಬಂದ ಬಗ್ಗೆ ಬಹಿರಂಗ ಪಡಿಸಿದ್ದಾರೆ. 78 ವರ್ಷದ ಜಾವೇದ್ ಅಖ್ತರ್ ಒಂದು ಕಾಲದಲ್ಲಿ ವಿಪರೀತ ಕುಡಿಯುತ್ತಿದ್ದರು. ಈ ಬಗ್ಗೆ ಜಾವೇದ್ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ಬಾಲಿವುಡ್ ಬಬಲ್ ವೆಬ್ ಮಾಧ್ಯಮದಲ್ಲಿ ಅರ್ಬಾಜ್ ಖಾನ್ ಅವರೊಂದಿಗಿನ ಚಾಟ್ ಶೋನಲ್ಲಿ ಕುಡುತದ ಚಟ ಮತ್ತು ಮತ್ತು ಆಲ್ಕೋಹಾಲ್ ಬಿಟ್ಟ ಬಗ್ಗೆ ಮಾತನಾಡಿದ್ದಾರೆ. ಕುಡಿದು ಕುಡಿದು ಅಕಾಲಿಕ ಮರಣ ಹೊಂದುತ್ತಾರೆ ಅಂತ ನಂಬಿದ್ದರಂತೆ. ಜಾವೇದ್ ಸಂತೋಷಕ್ಕಾಗಿ ಕುಡಿಯುತ್ತಿದ್ದರಂತೆ, ದುಃಖವನ್ನು ಮರೆಯಲು ಕುಡಿಯುತ್ತಿದ್ದೆ ಎಂದು ಹೇಳಿದ್ದಾರೆ.  
 
'ನಾನು ಸಂತೋಷದಿಂದ ಕುಡಿಯುತ್ತಿದ್ದೆ. ತುಂಬಾ ಸಂತೋಷ ನೀಡುತ್ತಿತ್ತು. ನಾನು ಅದರಲ್ಲಿ ಯಾವುದೇ ದುಃಖ ಕಾಣಲಿಲ್ಲ. ಆದರೆ ನಾನು ಒಂದು ವಿಷಯವನ್ನು ಅರ್ಥಮಾಡಿಕೊಂಡಿದ್ದೇನೆ, ಸಾಮಾನ್ಯ ಜ್ಞಾನವಿದು ಈ ರೀತಿಯ ಮದ್ಯಪಾನದಿಂದ ನಾನು 52-53 ರೊಳಗೆ ಸಾಯುತ್ತಾರೆ ಅಂತ ಅಂದುಕೊಂಡಿದ್ದೆ' ಎಂದು ಹೇಳಿದ್ದಾರೆ. 

ಜಾವೇದ್ ಅಖ್ತರ್ ಚಿಕ್ಕ ವಯಸ್ಸಿನಿಂದನೇ ಕುಡಿಯುತ್ತಿದ್ದರಂತೆ. 19ನೇ ವಯಸ್ಸಿನಲ್ಲೇ  ಕುಡಿಯಲು ಕಲಿತೆ ಎಂದು ಬಹಿರಂಗ ಪಡಿಸಿದರು. 1991 ಜುಲೈ 31ರಂದು ದೊಡ್ಡ ಬಾಟಲಿಯ ರಮ್ ಸೇವಿಸಿದ್ದೆ ಬಳಿಕ ಆಗಸ್ಟ್ ನಿಂದ ಸಂಪೂರ್ಣವಾಗಿ ಕುಡಿಯುವುದನ್ನು ಬಿಟ್ಟೆ ಎಂದು ಹೇಳಿದೆ. ಆಲ್ಕೋಹಾಲ್ ಬಿಟ್ಟ ಬಳಿಕ ಸ್ವಲ್ಪೂ ಮುಟ್ಟಿಲ್ಲ ಎಂದಿದ್ದಾರೆ.  ಶಾಂಪೇನ್ ಕೂಡ ಸೇವಿಸಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ. ಜಾವೇದ್ ಇಚ್ಛಾಶಕ್ತಿಯನ್ನು ಮೆಚ್ಚಿಕೊಂಡರು ಅರ್ಬಾಜ್. ಇದಕ್ಕೆ ಉತ್ತರಿಸಿದ ಜಾವೇದ್, ಇಚ್ಛಾಶಕ್ತಿ ಏನೂ ಇಲ್ಲ. ಬಯಕೆಯ ತೀವ್ರತೆ. ಬದುಕುವುದೇ ದೊಡ್ಡ ಚಟ. ಇದಕ್ಕಿಂತ ದೊಡ್ಡ ಚಟ ಮತ್ತೊಂದಿಲ್ಲ' ಎಂದು ಹೇಳಿದರು. 

ಮಹಿಳೆಗೂ ಒಂದಕ್ಕಿಂತ ಹೆಚ್ಚು ಮದುವೆಯಾಗೋ ಹಕ್ಕು ಕೊಡಿ: ಮುಸಲ್ಮಾನ ವೈಯಕ್ತಿಕ ಕಾನೂನು ವಿರುದ್ಧ ಜಾವೇದ್‌ ಅಖ್ತರ್ ಕಿಡಿ

ಕುಡಿತದ ಬಗ್ಗೆ ಜಾವೇದ್ ಅಖ್ತರ್ ಈ ಹಿಂದೆಯೂ ಮಾತನಾಡಿದ್ದಾರೆ. ಆಮೀರ್ ಖಾನ್ ನಟನೆಯ ಸತ್ಯಮೇವ ಜಯತೆ ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಿದ್ದರು. 'ನಾನು 19ನೇ ವಯಸ್ಸಿನಲ್ಲೇ ಕುಡಿಯಲು ಪ್ರಾರಂಭಿಸಿದೆ. ನಾನು ನನ್ನ ಪದವಿ ಮುಗಿಸಿದ ನಂತರ ಬಾಂಬೆಗೆ ಬಂದೆ. ಆಗ ನನ್ನ ಸ್ನೇಹಿತರ ಜೊತೆ ಕುಡಿಯಲು ಪ್ರಾರಂಭಿಸಿದೆ. ನಂತರ ಅದೇ ಅಭ್ಯಾಸವಾಯಿತು. ಮೊದಲು ನನ್ನ ಬಳಿ ಸಾಕಷ್ಟು ಹಣವಿರಲಿಲ್ಲ, ನಂತರ ನನ್ನ ಯಶಸ್ಸಿನ ಬಳಕ ಹಣದ ಬಗ್ಗೆ ಕಾಳಜಿ ವಹಿಸಲು ಪ್ರಾರಂಭಿಸಿ. ನಂತರ ನಾನು ದಿನಕ್ಕೆ ಒಂದು ಬಾಟಲಿಯನ್ನು ಮಾತ್ರ ಕುಡಿಯಲು ಪ್ರಾರಂಭಿಸಿದೆ' ಎಂದು ಹೇಳಿದರು.

Urfi Javed: ನಾನು ಜಾವೇದ್​ ಅಖ್ತರ್​ ಮೊಮ್ಮಗಳಲ್ಲ ಎಂದ ಕಿರುತೆರೆ ನಟಿ

ಜಾವೇದ್ ಅಖ್ತರ್ ಬಗ್ಗೆ 

ಜಾವೇದ್ ಅಖ್ತರ್ 5 ಬಾರಿ ರಾಷ್ಟ್ರಪ್ರಶಸ್ತಿ ಗೆದ್ದಿದ್ದಾರೆ. ಪದ್ಮ ಭೂಷಣ, ಪದ್ಮ ಶ್ರೀ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಐದು ಬಾರಿ ಅತ್ಯುತ್ತಮ ಸಾಹಿತ್ಯಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮತ್ತು ಎಂಟು ಬಾರಿ ಅತ್ಯುತ್ತಮ ಗೀತರಚನೆಕಾರರಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಸಿನಿಮಾರಂಗ, ಬರಹದ ಜೊತೆಗೆ ರಾಜಕೀಯದಲ್ಲೂ ಜಾವೇದ್ ಸಕ್ರೀಯರಾಗಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಂಡನ ಜಾಕೆಟ್ ಕದ್ದ ದೀಪಿಕಾ ಪಡುಕೋಣೆ.. ಅಂಥ ಪರಿಸ್ಥಿತಿಗೆ ಬಂದು ತಲುಪಿದ್ರಾ ಬಾಲಿವುಡ್ ಸ್ಟಾರ್ ನಟಿ?
ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!