ಬೇರೊಬ್ಬರ ಪತಿಯನ್ನು ಕದ್ದು ಬುಟ್ಟಿಗೆ ಹಾಕಿಕೊಂಡ ನಟಿಯರಿವರು!

By Suvarna NewsFirst Published Feb 13, 2023, 2:11 PM IST
Highlights

ಇದಾಗಲೇ ಮದುವೆಯಾಗಿರುವ ನಟರನ್ನು ಓಲೈಸಿಕೊಂಡು ಅವರನ್ನು ಕದ್ದ ಆರೋಪ ಎದುರಿಸುತ್ತಿದ್ದಾರೆ ಕೆಲ ನಟಿಯರು, ಯಾರವರು?
 

ಚಿತ್ರರಂಗದಲ್ಲಿ ಮದುವೆಯಾದವರನ್ನೇ ಮತ್ತೊಮ್ಮೆ ಮದುವೆಯಾಗುವುದು, ಡೇಟಿಂಗ್​ (Dating) ಮಾಡುವುದು ಹೊಸ ವಿಷಯವೇನಲ್ಲ. ಈ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಇತ್ತೀಚೆಗಷ್ಟೇ ವಿವಾಹವಾದ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಅವರು ಬೇರೊಬ್ಬರ ಗಂಡನನ್ನು ಕದ್ದಿದ್ದಾರೆ ಎಂಬ ಆರೋಪ ಈಗ ಕೇಳಿಬಂದಿದ್ದು,  ಎಲ್ಲರೂ  ಶಾಕ್ ಆಗಿದ್ದಾರೆ. ಹಂಸಿಕಾ ಮೋಟ್ವಾನಿಯ ನಿಶ್ಚಿತಾರ್ಥದ ನಂತರ ಈ ವಿಷಯ ಬೆಳಕಿಗೆ ಬಂದಿತ್ತು. ಆಕೆಯ ಪತಿಯಾಗಲಿರುವ  ಸೊಹೈಲ್ ಖತುರಿಯಾ ಹಂಸಿಕಾ ಅವರ  ಆತ್ಮೀಯ ಸ್ನೇಹಿತೆ ರಿಂಕಿಯ ಪತಿ.  ಈ ಮೂಲಕ ಹಂಸಿಕೆ  ತನ್ನ ಆತ್ಮೀಯ ಸ್ನೇಹಿತೆಯ ಪತಿಯನ್ನು ಕದ್ದಿದ್ದಾರೆ ಎಂಬ ಆರೋಪವಿದೆ. ಆದರೆ, ಇದನ್ನು ಅಲ್ಲಗಳೆದಿರುವ ಹಂಸಿಕಾ,  'ಲವ್ ಶಾದಿ ಡ್ರಾಮಾ' (Love Shadi Drama)ಸರಣಿಯಲ್ಲಿ  ಈ ಕುರಿತು ಮಾತನಾಡಿದ್ದು, 'ನನ್ ವಿರುದ್ಧದ ಆರೋಪವು  ಶುದ್ಧ ಸುಳ್ಳು. ನಾನು ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ  ಜನರು ನನ್ನತ್ತ ಬೆರಳು ತೋರಿಸುವುದು ಮತ್ತು ನನ್ನನ್ನು ಖಳನಾಯಕನನ್ನಾಗಿ ಮಾಡುವುದು ತುಂಬಾ ಸುಲಭವಾಗಿದೆ. ನಾನು ಸೆಲೆಬ್ರಿಟಿ ಎಂಬುದಕ್ಕೆ ಬೆಲೆ ತೆರಬೇಕಾಗುತ್ತದೆ' ಎಂದಿದ್ದರು. ಅದೇನೇ ಇದ್ದರೂ ಆಕೆಯ ಪತಿ, ಸ್ನೇಹಿತೆಯ ಪತಿ ಎನ್ನುವುದು ಮಾತ್ರ ನಿಜ.  ಹಾಗಿದ್ದರೆ ಇದು ಹನ್ಸಿಕಾ ಅವರ ವಿಷಯದಲ್ಲಿ ಮಾತ್ರ ನಡೆದಿದೆಯಾ ಎಂದುಕೊಂಡರೆ ತಪ್ಪು. ಇಂಥ ಅನೇಕ ಖ್ಯಾತ ನಟಿಯರು ಚಿತ್ರರಂಗ ಆಳುತ್ತಿದ್ದಾರೆ. ಅವರ ಪೈಕಿ ಐದು ನಟಿಯರ ಪರಿಚಯವನ್ನು ಇಲ್ಲಿ ಮಾಡಲಾಗಿದೆ. ಬೇರೊಬ್ಬರ ಪತಿಯನ್ನು ಬುಟ್ಟಿಗೆ ಹಾಕಿಕೊಂಡಿರುವ ಆರೋಪ ಈ ನಟಿಯರ ಮೇಲಿದೆ. 

ಬಾಲಿವುಡ್ ನಟಿ ಕಂಗನಾ ರಣಾವತ್​ (Kangana Ranawat) ಯಾರಿಗೆ ತಾನೇ ಗೊತ್ತಿಲ್ಲ? ಕಾಂಟ್ರವರ್ಸಿ ಕ್ವೀನ್​ ಎಂದೇ ಹೆಸರುವಾಸಿಯಾಗಿರುವ ಈ ಬಾಲಿವುಡ್ ಕ್ವೀನ್ ಕಂಗನಾ ಇನ್ನೂ ಅವಿವಾಹಿತೆಯೇ. ಆದರೆ ಈಕೆಯ ಹೆಸರು ಕೆಲವೊಬ್ಬರ ಜೊತೆ ಥಳಕು ಹಾಕಿಕೊಂಡಿದೆ. ಆ ಪೈಕಿ ಆದಿತ್ಯ ಪಾಂಚೋಲಿ (Adithya Pancholi) ಕೂಡ ಒಬ್ಬರು. ಆದರೆ ಆದಿತ್ಯ ಪಂಚೋಲಿ ಅವರಿಗೆ ಮದುವೆಯಾಗಿದೆ. ಕಂಗನಾ ತಮ್ಮ ಪತಿಯನ್ನು ಕದ್ದಿರುವುದಾಗಿ ಆದಿತ್ಯ ಪಂಚೋಲಿಯವರ ಪತ್ನಿ ಜರೀನಾ ವಹಾಬ್ ಹೇಳಿಕೊಂಡಿದ್ದರು. ಆದಿತ್ಯ ಅವರ ಜೊತೆ ಕಂಗನಾ ಸುಮಾರು ಒಂದೂವರೆ ವರ್ಷ ಡೇಟಿಂಗ್​ನಲ್ಲಿದ್ದು. ತಾವಿಬ್ಬರೂ ಒಟ್ಟಿಗೇ ದಂಪತಿಯಂತೆ ಬದುಕಿದ್ದನ್ನು ಖುದ್ದು ಆದಿತ್ಯ ಪಂಚೋಲಿಯವರೂ ಒಪ್ಪಿಕೊಂಡಿದ್ದಾರೆ. ಈ ಮೂಲಕ ಕಂಗನಾ ಬೇರೊಬ್ಬರ ಪತಿಯನ್ನು ಕದ್ದಿರುವ ಆರೋಪ ಎದುರಿಸುತ್ತಿದ್ದಾರೆ. 

ಸಂಬಂಧ ಇವ್ರ ಜೊತೆ, ಮದ್ವೆ ಅವ್ರ ಜೊತೆ, ಬಾಲಿವುಡ್​ನ 9​ ನಟಿಮಣಿಯರು ಇವ್ರೇ ನೋಡಿ!

ಇನ್ನು, ದಕ್ಷಿಣ ಭಾರತದ ನಟಿ ನಯನತಾರಾ (Nayanatara) 2022 ರಲ್ಲಿ ವಿಘ್ನೇಶ್ ಶಿವನ್ (Vighnesh Shivan) ಅವರನ್ನು ವಿವಾಹವಾದರು. ಆದರೆ ಅದಕ್ಕೂ ಕೆಲವು ವರ್ಷಗಳ ಹಿಂದೆ ಅವರು ನೃತ್ಯ ನಿರ್ದೇಶಕ ಮತ್ತು ನಿರ್ದೇಶಕ ಪ್ರಭುದೇವ ಅವರೊಂದಿಗೆ ಪ್ರಣಯ ಸಂಬಂಧವನ್ನು ಹೊಂದಿದ್ದರು. ಸುಮಾರು ನಾಲ್ಕು ವರ್ಷಗಳ ಕಾಲ ಇಬ್ಬರ ಸಂಬಂಧ ಇತ್ತು. ಈ ವೇಳೆ ಪ್ರಭುದೇವ ಅವರು ನಯನತಾರಾ ಅವರಿಗಾಗಿ ಪತ್ನಿ ರಮ್ಲತಾ ಅವರನ್ನು ಬಿಟ್ಟಿದ್ದರು ಎನ್ನಲಾಗಿದೆ. ಆ ವೇಳೆ ರಮ್ಲತಾ ಅವರು ರಂಪಾಟ ಮಾಡಿ, ನಯನತಾರಾ ತಮ್ಮ ಪತಿಯನ್ನು ಕದ್ದಿರುವುದಾಗಿ ಹೇಳಿಕೊಂಡಿದ್ದರು. 

ಇನ್ನು ಹಾಲಿವುಡ್​ ವಿಷಯಕ್ಕೆ ಬರುವುದಾದರೆ, ಹಾಲಿವುಡ್​ನ ಖ್ಯಾತ  ತಾರೆ ಏಂಜಲೀನಾ ಜೋಲೀ (Angelina Jolie) 2014 ರಲ್ಲಿ ಬ್ರಾಡ್ ಪಿಟ್ ಅವರನ್ನು ವಿವಾಹವಾದರು. ಅಸಲಿಗೆ ಬ್ರಾಡ್​ ಪಿಟ್​ ಅವರು ಹಾಲಿವುಡ್ ನಟಿ ಜೆನ್ನಿಫರ್ ಅನಿಸ್ಟನ್ ಅವರ ಪತಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಜೆನ್ನಿಫರ್​ ಅವರ ಪತಿಯನ್ನು ಕದ್ದ ಆರೋಪ ಏಂಜಲೀನಾ ಅವರ ಮೇಲಿದೆ. ಇಷ್ಟೆಲ್ಲಾ ಗಲಾಟೆಯಾದ ಮೇಲೆ ಬ್ರಾಡ್​ ಪಿಟ್​ ಅವರು ಮೊದಲ ಪತ್ನಿಗೆ ವಿಚ್ಛೇದನ ಕೊಟ್ಟರು. 

Raveena Tandon: ನನ್ನ ತೊಡೆಗಳ ಮೇಲೆ ಆ ಸ್ತ್ರೀವಾದಿಗಳ ಕಣ್ಣಿತ್ತು: ಭಯಾನಕ ರಹಸ್ಯ ಬಿಚ್ಚಿಟ್ಟ ನಟಿ

ಪಾಪ್ ತಾರೆ ಬ್ರಿಟ್ನಿ ಸ್ಪಿಯರ್ಸ್ (Britney Spears) ಮೂರು ಬಾರಿ ಮದುವೆಯಾಗಿದ್ದಾರೆ. 2004 ರಲ್ಲಿ ಕೆವಿನ್ ಫೆಡೆರ್ಲೈನ್ ​​ಅವರೊಂದಿಗೆ ಬ್ರಿಟ್ನಿ ಅವರ ಎರಡನೇ ಮದುವೆಯಾಯಿತು. ಆದರೆ ಕೆವಿನ್​ ಅವರಿಗೆ ಅದಾಗಲೇ ಮದುವೆಯಾಗಿತ್ತು. ನಟಿ ಶಾರ್ ಜಾಕ್ಸನ್ ಅವರು ಗರ್ಭಿಣಿಯಾಗಿದ್ದಾಗ ಅವರನ್ನು ಬಿಟ್ಟು ಕೆವಿನ್​ ಬ್ರಿಟ್ನಿ ಜೊತೆ ಮದುವೆಯಾಗಿದ್ದರು. ಬ್ರಿಟ್ನಿ ತಮ್ಮ ಪತಿಯನ್ನು ಕದ್ದಿರುವುದಾಗಿ ನಟಿ ಶಾರ್​ ಜಾಕ್ಸನ್​ ಆರೋಪಿಸಿದ್ದರು. ಹೀಗೆ ಬೇರೊಬ್ಬರ ಪತಿಯನ್ನು ಕದ್ದು ಮದುವೆಯಾದರೂ ಈ ದಂಪತಿ ಹೆಚ್ಚು ಕಾಲ ಒಟ್ಟಿಗೇ ಇರಲಿಲ್ಲ.  ಇವರಿಬ್ಬರು  2007 ರಲ್ಲಿ ವಿಚ್ಛೇದನ (Divorce) ಪಡೆದುಕೊಂಡರು. 

click me!