ಮಗಳ ಫೋಟೋ ರಿವೀಲ್​ ಮಾಡಿದ ನಟಿ Bipasha Basu

Published : Feb 13, 2023, 03:02 PM IST
ಮಗಳ ಫೋಟೋ ರಿವೀಲ್​ ಮಾಡಿದ ನಟಿ  Bipasha Basu

ಸಾರಾಂಶ

ಸದ್ಯ ತಾಯ್ತನದ ಸುಖ ಕಾಣುತ್ತಿರುವ ನಟಿ ಬಿಪಾಶಾ ಬಸು, ಮೂರು ತಿಂಗಳ ತಮ್ಮ ಮಗಳು ದೇವಿಯ ಫೋಟೋ ರಿವೀಲ್​ ಮಾಡಿದ್ದಾರೆ. ಹೇಗಿದೆ ಮಗು?   

ಬಾಲಿವುಡ್​ನ ಖ್ಯಾತ ತಾರೆ  ಬಿಪಾಶಾ ಬಸು (Bipasha Basu) ಅವರು ಹೆಣ್ಣುಮಗುವಿನ ತಾಯಿಯಾಗಿ ಮೂರು ತಿಂಗಳಾಗಿದೆ. 44 ವರ್ಷದ ಈ ಚೆಲುವೆ, ನಟ ಕರಣ್ ಸಿಂಗ್ ಗ್ರೋವರ್ ಅವರನ್ನು ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ವೈದ್ಯಕೀಯ ಶಿಕ್ಷಣ ಪಡೆಯಲು ಯೋಜಿಸಿ ನಂತರ  ಆಕಸ್ಮಿಕವಾಗಿ ಮಾಡಲಿಂಗ್ ಮತ್ತು ನಟನೆಗೆ ಪ್ರವೇಶಿಸಿದ್ದ ನಟಿ ಬಿಪಾಶು, 17ನೇ ವಯಸ್ಸಿಯಲ್ಲಿಯೇ ರೂಪದರ್ಶಿಯಾಗಿ (Model) ವೃತ್ತಿ ಆರಂಭಿಸಿದ್ದವರು. ಫೋರ್ಡ್ ಗೋದ್ರೇಜ್ ಸಿಂಥಾಲ್ ಸ್ಪರ್ಧೆಯಲ್ಲಿ ಜಯಗಳಿಸಿದ ನಂತರ, ಬಸು ಅವರನ್ನು ಪೋರ್ಡ್ ಕಂಪೆನಿ ನ್ಯೂಯಾರ್ಕ್‌ಗೆ ಕಳಿಸಿತ್ತು.  ಅಲ್ಲಿ ಅವರು 17ರ ವಯಸ್ಸಿನಲ್ಲೇ ರೂಪದರ್ಶಿ ವೃತ್ತಿಜೀವನ ಆರಂಭಿಸಿ ಅಲ್ಲಿ  ಯಶಸ್ವಿಯಾದವರು.  ಅಬ್ಬಾಸ್ ಮಸ್ತಾನ್ (Abbas Masthan) ಅವರ ಅಜನಬೀ ಚಲನಚಿತ್ರದಲ್ಲಿ ಅಕ್ಷಯಕುಮಾರ್ (Akshay Kumar) ಜೊತೆ  ಚಿತ್ರರಂಗಕ್ಕೆ  ಪ್ರವೇಶಿಸಿದರು.  ಈ ಸಿನಿಮಾದಲ್ಲಿ ಬಿಪಾಶಾ,  ವಿವಾಹಿತ ಮಹಿಳೆಯೊಬ್ಬಳು ತನ್ನ ಪತಿಯ ವಿವಾಹಿತ ಸ್ನೇಹಿತನನ್ನು ಮೋಹಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಈ  ಚಿತ್ರದಲ್ಲಿನ  ಅಭಿನಯಕ್ಕಾಗಿ ಫಿಲ್ಮ್ ಫೇರ್ ಅತ್ಯುತ್ತಮ ಆರಂಭಿಕ ನಟಿ ಪ್ರಶಸ್ತಿ ಕೂಡ ಸಿಕ್ಕಿತು.  ಹೀಗೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಬಿಪಾಶಾ, 2016ರ ಏಪ್ರಿಲ್​ 30ರಂದು ನಟ ಕರಣ್ ಸಿಂಗ್ ಗ್ರೋವರ್ (Karan Singh Grover) ಕೈಹಿಡಿದರು.

ಇತ್ತೀಚೆಗೆ ಅವರು ಗರ್ಭಿಣಿಯಾಗಿದ್ದಾಗ (Pregnant) ಹಲವಾರು ಫೋಟೋ ಶೂಟ್​ ಮಾಡಿಸಿಕೊಂಡಿದ್ದರು. ಈ ಸಮಯದಲ್ಲಿ ಅವರ ಫೋಟೋಗಳು ಸಾಕಷ್ಟು ಟ್ರೋಲ್​ಗೂ (Troll) ಒಳಗಾಗಿದ್ದವು. ಇದಕ್ಕೆ ಕಾರಣ, ತುಂಬು ಗರ್ಭಿಣಿಯಾಗಿದ್ದ ಬಿಪಾಶಾ ಅತ್ಯಂತ ಕಡಿಮೆ ಬಟ್ಟೆ ತೊಟ್ಟು ಹೊಟ್ಟೆಯನ್ನು ತೋರಿಸಿದ್ದರು. ಅವರ ಪತಿ ಹೊಟ್ಟೆಯನ್ನು ಚುಂಬಿಸುತ್ತಿದ್ದರು. ಆದರೆ ಎಲ್ಲಾ ಅಂಗಾಂಗಗಳ ಪ್ರದರ್ಶನವಾಗುವಂತೆ ಗರ್ಭಿಣಿಯೊಬ್ಬಳು ಫೋಟೋಶೂಟ್​ (Photoshoot)ಮಾಡಿಸಿಕೊಂಡಿರುವುದು ತಾಯ್ತನಕ್ಕೇ ಅವಮಾನ ಎಂದು ಹಲವರು ಕಮೆಂಟ್​ ಮೂಲಕ  ಆಕ್ರೋಶ ವ್ಯಕ್ತಪಡಿಸಿದ್ದರು. ತಾಯಿಯಾಗುವುದು ಮಹಿಳೆಯೊಬ್ಬಳಿಗೆ ಇರುವ ವರದಾನ. ಇಂಥ ಸಂದರ್ಭದಲ್ಲಿ ಬಿಕಿನಿ ಧರಿಸಿ ಗರ್ಭಿಣಿ ಫೋಟೋಶೂಟ್​ ಮಾಡಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಅಪ್​ಲೋಡ್​ ಮಾಡಿರುವುದು ತೀರಾ ಅಹಸ್ಯ ಎಂದು ಕಿಡಿ ಕಾರಲಾಗಿತ್ತು.

Raveena Tandon: ನನ್ನ ತೊಡೆಗಳ ಮೇಲೆ ಆ ಸ್ತ್ರೀವಾದಿಗಳ ಕಣ್ಣಿತ್ತು: ಭಯಾನಕ ರಹಸ್ಯ ಬಿಚ್ಚಿಟ್ಟ ನಟಿ

 ಕಳೆದ ನವೆಂಬರ್​ 12ರಂದು ಮುದ್ದಾದ ಹೆಣ್ಣುಮಗುವಿಗೆ ಬಿಪಾಶಾ ಜನ್ಮ ನೀಡಿದ್ದಾರೆ. ಇಲ್ಲಿಯವರೆಗೂ ಅವರು ಮಗುವಿನ ಫೋಟೋ ರಿವೀಲ್​ ಮಾಡಿರಲಿಲ್ಲ. ಆದರೆ ಈಗ ಮಗಳ ಜೊತೆ ತಾವಿರುವ ಫೋಟೋ ಶೇರ್​ ಮಾಡಿದ್ದಾರೆ. ಮಗುವನ್ನು ಹೆಗಲ ಮೇಲೆ ಹಾಕಿಕೊಂಡಿದ್ದಾರೆ. ಆದರೆ ಮುಖವನ್ನು ರಿವೀಲ್​ (reveal) ಮಾಡಲಿಲ್ಲ. ಮಗುವಿಗೆ ದೇವಿ ಎಂದು ಹೆಸರು ಇಡಲಾಗಿದೆ. ದೇವಿಗೆ ಮೂರು ತಿಂಗಳಾಯಿತು. ಅವಳೊಂದಿಗೆ ಪ್ರತಿ ಸೆಕೆಂಡ್  ನಮಗೆ ಅತ್ಯುತ್ತಮ ಸ್ಮರಣೆ ಎಂದಿದ್ದಾರೆ. ಸದ್ಯ  ಮಗಳ ಜೊತೆ  ಸಮಯ ಕಳೆಯಲು ಬಯಸಿರುವ ಬಿಪಾಶಾ, ಚಿತ್ರರಂಗದಿಂದ ದೂರ ಉಳಿದಿದ್ದಾರೆ.  ತಾಯ್ತನದ ಪ್ರಯಾಣವನ್ನು ಪ್ರೀತಿಸುತ್ತಿಸುತ್ತಿದ್ದಾರೆ. ಮಗುವಿನ ಜೊತೆ  ಸಮಯವನ್ನು ಹೆಚ್ಚು ಕಳೆಯುತ್ತಿದ್ದಾರೆ.

ಈಗ ಶೇರ್​ ಮಾಡಿರುವ ಫೋಟೋದಲ್ಲಿ  ಬಿಪಾಶಾ  ಪುಟ್ಟ ರಾಜಕುಮಾರಿಯನ್ನು  ತೋಳುಗಳಲ್ಲಿ ಹಿಡಿದುಕೊಂಡಿದ್ದಾರೆ. ಕಪ್ಪು ಬಿಳುಪಿನ ಫೋಟೋ ಇದಾಗಿದೆ.  ಮಗು ದೇವಿ ಮಮ್ಮಿಯನ್ನು ಬಿಗಿಯಾಗಿ ಹಿಡಿದುಕೊಂಡಿರುವುದನ್ನು ಕಾಣಬಹುದು.  ಸದ್ಯ ಬಿಪಾಶಾ  ದೊಡ್ಡ ಪರದೆಯಿಂದ ದೂರವಿದ್ದರೆ, ಪತಿ ಕರಣ್​ ಅವರು,  ಹೃತಿಕ್ ರೋಷನ್, ಅನಿಲ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗೆ ಸಿದ್ಧಾರ್ಥ್ ಆನಂದ್ ಅವರ ಫೈಟರ್ (Fighter) ಚಿತ್ರದಲ್ಲಿ  ಕಾಣಿಸಿಕೊಳ್ಳಲಿದ್ದಾರೆ.

ಸಂಬಂಧ ಇವ್ರ ಜೊತೆ, ಮದ್ವೆ ಅವ್ರ ಜೊತೆ, ಬಾಲಿವುಡ್​ನ 9​ ನಟಿಮಣಿಯರು ಇವ್ರೇ ನೋಡಿ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?