ಕಾಫಿ ವಿತ್ ಕರಣ್ನಲ್ಲಿ ಜಾಹ್ನವಿ ತೊಟ್ಟ ಬಟ್ಟೆಯ ರೇಟ್ ಕೇಳಿ ಉಫ್ ಎಂದ ಫ್ಯಾನ್ಸ್. ಬಟ್ಟೆ ಎಲ್ಲಿದೆ ಕೇಳಿ ನಟಿಯ ಕಾಲೆಳೆಯುತ್ತಿದ್ದಾರೆ ನೆಟ್ಟಿಗರು!
ಕರಣ್ ಜೋಹರ್ ಹೋಸ್ಟ್ ಮಾಡುವ ಫೇಮಸ್ ಟಾಕ್‌ಶೋ 'ಕಾಫಿ ವಿತ್ ಕರಣ್ ಸೀಸನ್ 8' ರ (Koffee With Karan)ಮುಂಬರುವ ಸಂಚಿಕೆಯಲ್ಲಿ ನಟಿ ಶ್ರೀದೇವಿಯವರ ಪುತ್ರಿಯರಾದ ಖುದ್ದು ನಟಿಯರಾದ ಜಾಹ್ನವಿ ಕಪೂರ್ ( Janhvi Kapoor) ಮತ್ತು ಖುಷಿ ಕಪೂರ್ (Khushi Kapoor) ಕಾಣಿಸಿಕೊಳ್ಳಲಿದ್ದಾರೆ. ಪ್ರೋಮೋ ಬಿಡುಗಡೆಯಾದ ತಕ್ಷಣ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿತ್ತು. ಇದಕ್ಕೆ ಕಾರಣ ಈ ಸೀಸನ್ನಲ್ಲಿ ಜಾಹ್ನವಿ ಅವರು, ಅಚಾನಕ್ ಆಗಿ ತಮ್ಮ ಬಾಯ್ಫ್ರೆಂಡ್ ಹೆಸರನ್ನು ರಿವೀಲ್ ಮಾಡಿರುವ ಕಾರಣದಿಂದ. ಅಷ್ಟಕ್ಕೂ ಕಾಫಿ ವಿತ್ ಕರಣ್ ಷೋನಲ್ಲಿ ಕಾಂಟ್ರವರ್ಸಿಗಳೇ ಹೆಚ್ಚು. ಕರಣ್ ಹೆಚ್ಚಾಗಿ ಸೆಕ್ಸ್ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆ ಕೇಳುತ್ತಾರೆ ಎನ್ನುವ ಆರೋಪವೂ ಇದೆ. ಅದೇ ರೀತಿ ಜಾಹ್ನವಿ ಕಪೂರ್ ಕರಣ್ ಕೇಳಿದ ಪ್ರಶ್ನೆಯೊಂದಕ್ಕೆ ಬಾಯ್ತಪ್ಪಿ ಉದ್ಯಮಿ ಶಿಖರ್ ಪಹರಿಯಾ ಹೆಸರು ಹೇಳಿದರು.
ಅಷ್ಟಕ್ಕೂ ಇವರಿಬ್ಬರ ಸಂಬಂಧ ಬಿ-ಟೌನ್ನಲ್ಲಿ ಗುಟ್ಟಾಗಿ ಏನೂ ಉಳಿದಿಲ್ಲ. ಇದಾಗಲೇ ಇವರಿಬ್ಬರೂ ಹಲವೆಡೆ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಶೀಲ್ ಕುಮಾರ್ ಶಿಂಧೆ (Sushil Kumar Shindhe) ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಶಿಖರ್ ಸ್ಮೃತಿ ಶಿಂಧೆ ಅವರ ಪುತ್ರ. ಶಿಖರ್ ಪಹರಿಯಾ ಜೊತೆ ಜಾಹ್ನವಿ ಡೇಟಿಂಗ್ ಮಾಡ್ತಿರೋ ವಿಷಯ ತುಂಬಾ ಹಳೆಯದು. ಇದಾಗಲೇ ಹಲವು ಕಡೆಗಳಲ್ಲಿ ಇವರು ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಸರಿಯಾಗಿ ನೆಲೆ ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿರುವ ನಡುವೆಯೇ ಹೀಗೆಲ್ಲಾ ಸುದ್ದಿಯಾಗುತ್ತಲೇ ಇರುವ ಜಾಹ್ನವಿ ಈಗ ಬಾಯ್ ಫ್ರೆಂಡ್ (Boy Friend) ಜೊತೆ ಟ್ರಿಪ್ಗೆ ಹೋಗಿರುವ ಫೋಟೋಗಳು ವೈರಲ್ ಆಗಿದ್ದವು. ಒಟ್ಟಿಗೇ ಪೂಜೆ ಮಾಡಿದ್ದ ಫೋಟೋ ಕೂಡ ವೈರಲ್ ಆಗಿ ಇಬ್ಬರ ಮದ್ವೆ ನಡೆದೇ ಹೋಗಿದೆ ಎಂದೂ ಸುದ್ದಿಯಾಗಿತ್ತು.
ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುವುದೆ? ನಟಿ ಶೋಭನಾರನ್ನು ರುಬ್ಬುತ್ತಿರೋ ನೆಟ್ಟಿಗರು!
ಆದರೆ ಇದೀಗ ವಿಷಯ ಬಂದಿರುವುದು ನಟಿ ಜಾಹ್ನವಿ ಕಪೂರ್ ಕರಣ್ ಷೋದಲ್ಲಿ ತೊಟ್ಟಿರುವ ಬಟ್ಟೆಯ ಬಗ್ಗೆ. ಕೆಂಪು ಡ್ರೆಸ್ನಲ್ಲಿ ಜಾಹ್ನವಿ ಮಿಂಚಿದ್ದಾರೆ. ಈ ಮೂಲಕ ಕಾಫಿ ವಿತ್ ಕರಣ್ ಷೋನ್ನು ಹಾಟ್ ಆಗಿಸಿದ್ದಾರೆ. ಸೆಲೆಬ್ರಿಟಿಗಳು ಎಂದರೆ ಅವರು ಧರಿಸುವ ಬಟ್ಟೆಯ ರೇಟ್ ಅಂತೂ ಕೇಳುವುದೇ ಬೇಡ ಬಿಡಿ. ಆದರೆ ಪಾಪರಾಜಿಗಳು ಬಟ್ಟೆಯನ್ನೂ ಬಿಡದೇ ಅದರ ರೇಟ್ ಕೂಡ ತನಿಖೆ ಮಾಡಿಯೇ ಬಿಡುತ್ತಾರೆ. ಅದೇ ರೀತಿ ಇದೀಗ ಜಾಹ್ನವಿ ಕಪೂರ್ ತೊಟ್ಟ ಬಟ್ಟೆಯ ವಿಷಯವೂ ಮುನ್ನೆಲೆಗೆ ಬಂದಿದೆ. ಅಂದಹಾಗೆ ನಟಿ ತೊಟ್ಟಿರೋ ಈ ಬಟ್ಟೆಯ ಬೆಲೆ 1 ಲಕ್ಷದ 63 ಸಾವಿರ ರೂಪಾಯಿಗಳು ಎನ್ನಲಾಗಿದೆ.
ಈ ರೆಡ್ ಬಾಡಿಕಾನ್ ಡ್ರೆಸ್ ಐಷಾರಾಮಿ ಸ್ಯಾಟಿನ್ ಫ್ಯಾಬ್ರಿಕ್, ಹಾಲ್ಟರ್‌ನೆಕ್, ಮಿಡ್ರಿಫ್ ಕಟೌಟ್, ಬಾಡಿಕಾನ್ ಫಿಟ್ ಆಕಾರ ಹೊಂದಿದೆ. ಮಾಮೂಲಿನಂತೆ ಈ ಡ್ರೆಸ್ನಲ್ಲಿಯೂ ಯಥೇಚ್ಛವಾಗಿ ಶ್ರೀದೇವಿ ಪುತ್ರಿ ದೇಹ ಪ್ರದರ್ಶನ ಮಾಡಿದ್ದಾರೆ. ಕೇಶ ವಿನ್ಯಾಸಕಿ ಮಾರ್ಸ್ ಪೆಡ್ರೊಜೊ ಅವರ ಕೇಶ ವಿನ್ಯಾಸ ಹಾಗೂ ಈ ದುಬಾರಿ ಬಟ್ಟೆಯಿಂದಾಗಿ ಜಾಹ್ನವಿ ಸುಂದರವಾಗಿ ಕಾಣಿಸುತ್ತಿದ್ದಾರೆ. ಬಟ್ಟೆ ಸೀಳು ಕಟೌಟ್ ಇರುವ ಕಾರಣ ತೊಡೆಯ ಭಾಗಗಳೂ ಕಾಣಿಸುತ್ತವೆ. ಈಕೆಯ ಡ್ರೆಸ್ ಬೆಲೆ ರಿವೀಲ್ ಆಗುತ್ತಿದ್ದಂತೆಯೇ ನಟಿಯ ಕಾಲೆಳೆದಿರುವ ಕೆಲವು ತರ್ಲೆಕಮೆಂಟಿಗರು ಬಟ್ಟೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ. ಬಟ್ಟೆಯೇ ಇಲ್ಲದಿರೋ ಬಟ್ಟೆಗೆ ಇಷ್ಟು ರೇಟಾ ಎಂದು ಪ್ರಶ್ನಿಸುತ್ತಿದ್ದಾರೆ.
ಆಮೀರ್ ಖಾನ್ ಮೊದಲ-ಎರಡನೇ ವಿಚ್ಛೇದಿತ ಪತ್ನಿಯಂದಿರಿಗೆ ಮದ್ವೆ ಮನೆಯಲ್ಲೇ ಕ್ಲ್ಯಾಷ್: ವಿಡಿಯೋ ವೈರಲ್