ನಟಿ ಇರಾ ಖಾನ್ ಮದ್ವೆಯ ದಿನ ಆಮೀರ್ ಖಾನ್ ಮೊದಲ ಮತ್ತು ಎರಡನೆಯ ಪತ್ನಿಗೆ ಫೋಟೋ ಸೆಷನ್ನಲ್ಲಿ ಕ್ಲ್ಯಾಷ್ ಆಗಿದ್ದು, ಅದರ ವಿಡಿಯೋ ವೈರಲ್ ಆಗಿದೆ...
ಕೆಲವು ಬಾಲಿವುಡ್ ನಟರಂತೆ ಆಮೀರ್ ಖಾನ್ ಕೂಡ ಹಿಂದೂ ಯುವತಿಯರನ್ನೇ ಮದ್ವೆಯಾದವರು. ಇಬ್ಬರು ಹಿಂದೂ ಯುವತಿಯರನ್ನು ಮದ್ವೆಯಾಗಿ ಇದೀಗ ಇಬ್ಬರಿಗೂ ಡಿವೋರ್ಸ್ ಕೊಟ್ಟಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಅವರಿಂದ ಇರಾ ಖಾನ್ ಮತ್ತು ಜುನೈದ್ ಖಾನ್ ಎಂಬ ಇಬ್ಬರು ಮಕ್ಕಳನ್ನು ಪಡೆದಿದ್ದು, ಎರಡನೆಯ ಪತ್ನಿ ಕಿರಣ್ ರಾವ್ ಅವರಿಂದ ಆಜಾದ್ ರಾವ್ ಖಾನ್ರನ್ನು ಪಡೆದಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಜೊತೆ 1986–2002ರವರೆಗೆ ಸಂಸಾರ ನಡೆಸಿದ್ದ ಆಮೀರ್ 2005ರಲ್ಲಿ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದು, 2021ರಲ್ಲಿ ಅವರಿಗೂ ಡಿವೋರ್ಸ್ ಕೊಟ್ಟಿದ್ದಾರೆ. ವಿಚ್ಛೇದನ ಕೊಟ್ಟರೂ ಇಬ್ಬರೂ ಪತ್ನಿಯರ ಜೊತೆ ನಟನ ಸಂಬಂಧ ಚೆನ್ನಾಗಿಯೇ ಇದೆ. ನಿನ್ನೆ ಅಂದರೆ ಡಿಸೆಂಬರ್ 3ರಂದು ಮೊದಲ ಪತ್ನಿ ರೀನಾ ದತ್ತಾ ಅವರಿಂದ ಪಡೆದಿರುವ ಮಗಳು, ನಟಿ ಇರಾ ಖಾನ್ ಅವರ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆದಿದೆ.
ಮುಂಬೈನ ಬಾಂದ್ರಾದ ತಾಜ್ ಲ್ಯಾಂಡ್ಸ್ ಎಂಡ್‌ನಲ್ಲಿ ಇರಾ ಖಾನ್ ಮತ್ತು ಬಹುಕಾಲದ ಗೆಳೆಯ ಫಿಟ್ನೆಸ್ ಫ್ರೀಕ್ ನೂಪುರ್ ಶಿಖರೆ ಮದುವೆ ಮಾಡಿಕೊಂಡರು. ಕಳೆದ ಒಂದು ವಾರದಿಂದ ಮದುವೆ ಕಾರ್ಯಕ್ರಮದ ಪೂರ್ವ ಶಾಸ್ತ್ರಗಳು ಜೋರಾಗಿ ನಡೆದಿತ್ತು. ಇದೀಗ ಮದುವೆಯಾಗಿದೆ. ಇದರ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. 2020ರ ಇದೇ ದಿನದಂದು ಅಂದರೆ ಜನವರಿ 3ರಂದು ಇರಾ ಮತ್ತು ಶಿಖರೆ ಅವರು ಮೊದಲದು ಭೇಟಿಯಾಗಿದ್ದು, ಪ್ರೇಮಾಂಕುರವಾದದ್ದು. ಮೂರು ವರ್ಷ ಸುತ್ತಾಟ, ಡೇಟಿಂಗ್ ಮಾಡಿದ ಬಳಿಕ ಇದೀಗ ಮದುವೆಯಾಗುತ್ತಿದೆ ಈ ಜೋಡಿ. ಇರಾ ಖಾನ್ ಸ್ಟಾರ್ ಕಿಡ್ ಆಗಿದ್ದರೂ ಬಣ್ಣದ ಲೋಕದಿಂದ ದೂರ ಉಳಿದು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ನೂಪುರ್ ಶಿಖರೆ ಅವರು 17 ವರ್ಷದವರಾಗಿದ್ದಾಗಲೇ ಜಿಮ್ನಲ್ಲಿ ಟ್ರೈನರ್ ಆಗಿ ಕೆಲಸ ಮಾಡಲು ಶುರುಮಾಡಿದ್ದರು. ಶಿಕ್ರೆ ಫಿಟ್ನೆಸ್ಗೆ ಇರಾ ತುಂಬಾ ಪ್ರಭಾವಿತರಾಗಿದ್ದರು ಮತ್ತು ಅವರನ್ನು ಸೂಪರ್ ಫಿಟ್ ಮನುಷ್ಯ ಎಂದು ಕರೆದಿದ್ದಾರೆ. ಜಿಮ್ನಲ್ಲಿ ಭೇಟಿಯಾದ ಈ ಜೋಡಿ ಸ್ನೇಹಿತರಾದರು ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರ ಲವ್ ಬಗ್ಗೆ ತಿಳಿದ ಬಳಿಕ ಆಮೀರ್ ಖಾನ್ ಮದುವೆಗೆ ಹಸಿರು ನಿಶಾನೆ ತೋರಿದ್ದು ಮದುವೆ ನೆರವೇರಿದೆ.
ಆಮೀರ್ ಪುತ್ರಿ ಇರಾಗೆ ಮದ್ವೆ ದಿನನೇ ಆಂಟಿ ಶಾಕ್! ಈ ರೀತಿ ವೇಷ ಮಾಡ್ಕೊಂಡ್ರೆ ಇನ್ನೇನ್ ಆಗತ್ತೆ ಕೇಳಿದ ನೆಟ್ಟಿಗರು
ಮದುವೆಯ ವಿಡಿಯೋಗಳು ವೈರಲ್ ಆಗುತ್ತಲೇ ಒಂದೊಂದು ವಿಶೇಷತೆ ಕಂಡುಬರುತ್ತಿದೆ. ಅದೇನೆಂದರೆ ಮದುವೆಯ ದಿನ ನಡೆದ ಫೋಟೋ ಸೆಷನ್ನಲ್ಲಿ ಮೊದಲಿಗೆ ಆಮೀರ್ ಖಾನ್ ಮತ್ತು ಎರಡನೆಯ ಪತ್ನಿ ಕಿರಣ್ ರಾವ್ ನಿಂತಿದ್ದರು. ಫೋಟೋ ಸೆಷನ್ ನಡೆಯುತ್ತಿದ್ದಂತೆಯೇ ಮೊದಲ ಪತ್ನಿ ಅಂದರೆ ಮದುಮಗಳು ಇರಾ ಖಾನ್ ತಾಯಿ ರೀನಾ ದತ್ತಾ ಹಾಜರಾದರು. ಅವರು ಅರಿವಿಲ್ಲದೇ ಮೊದಲು ಕಿರಣ್ ಅವರ ಪಕ್ಕದಲ್ಲಿಯೇ ನಿಂತರು. ನಂತರ ಆಮೀರ್ ಖಾನ್ ಇನ್ನೊಂದು ಮೂಲೆಗೆ ಹೋಗುತ್ತಿದ್ದಂತೆಯೇ ನಿಧಾನವಾಗಿ ಕಿರಣ್ ರಾವ್ ಪಕ್ಕದಿಂದ ತಪ್ಪಿಸಿಕೊಂಡ ರೀನಾ ದತ್ತಾ ಆಮೀರ್ ಖಾನ್ ಪಕ್ಕದಲ್ಲಿ ಹೋಗಿ ನಿಂತರು. ಆಗ ಕಿರಣ್ ರಾವ್ ಅವರ ಮುಖ ಸಪ್ಪಗಾಯಿತು.
ಇದರ ವಿಡಿಯೋ ವೈರಲ್ ಆಗಿದ್ದು, ಥಹರೇವಾರಿ ಕಮೆಂಟ್ಗಳು ಬರುತ್ತಿವೆ. ಇದಕ್ಕೂ ಮುನ್ನ ಆಮೀರ್ ಖಾನ್ ಕಿರಣ್ ರಾವ್ ಅವರನ್ನು ವೇದಿಕೆಯ ಮೇಲೆಯೇ ಕಿಸ್ ಮಾಡಿದ್ದರು. ಹೀಗೆಲ್ಲಾ ಮಾಡಿದರೆ ಮತ್ತೆ ರೀನಾ ಅವರಿಗೆ ಕೋಪ ಬರದೇ ಇರುತ್ತದೆಯೇ ಎಂದು ಕೆಲವು ನೆಟ್ಟಿಗರು ಕಾಲೆಳೆದಿದ್ದರೆ, ಇಬ್ಬರೂ ಮಾಜಿ ಆದ್ರೂ ಕ್ಲ್ಯಾಷ್ ಆಗ್ತಿದೆ ಅಂತ ಮತ್ತೆ ಕೆಲವರು ತಮಾಷೆ ಮಾಡುತ್ತಿದ್ದಾರೆ. ಏನೇ ಹೇಳಿ ಇಬ್ಬರಿಗೂ ಡಿವೋರ್ಸ್ ಕೊಟ್ರೂ ಇಬ್ಬರನ್ನೂ ಚೆನ್ನಾಗಿ ಹ್ಯಾಂಡಲ್ ಮಾಡೋದು ಖಾನ್ ಸಾಹೇಬರಿಗೆ ಚೆನ್ನಾಗಿ ಗೊತ್ತಿದೆ ಎಂದು ಮತ್ತೆ ಕೆಲವರು ಆಮೀರ್ ಖಾನ್ರ ಕಾಲೆಳೆಯುತ್ತಿದ್ದಾರೆ. ಆದರೆ ಇನ್ನು ಕೆಲವರು ಮೊದಲ ಪತ್ನಿಯ ಮಗಳ ಮದುವೆಯಾದರೂ ಕಿರಣ್ ರಾವ್ ಮದುವೆಗೆ ಹಾಜರು ಇರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.