ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತದ ಯುವ ನಟಿಯರಲ್ಲಿ ಜಾನ್ವಿ ನಂ.1: ಎಷ್ಟು ಚಾರ್ಜ್ ಮಾಡ್ತಾರೆ?

Published : Jul 15, 2023, 06:52 PM ISTUpdated : Jul 15, 2023, 06:55 PM IST
ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತದ ಯುವ ನಟಿಯರಲ್ಲಿ ಜಾನ್ವಿ ನಂ.1: ಎಷ್ಟು ಚಾರ್ಜ್ ಮಾಡ್ತಾರೆ?

ಸಾರಾಂಶ

ಭಾರತೀಯ ಸಿನಿಮಾರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಯುವ ನಟಿಯರಲ್ಲಿ ಜಾನ್ವಿ ಕಪೂರ್ ಮೊದಲ ಸ್ಥಾನದಲ್ಲಿದ್ದಾರೆ. ಒಂದು ಸಿನಿಮಾಗೆ ಎಷ್ಟು ಪಡೆಯುತ್ತಾರೆ ನೋಡಿ.

ಭಾರತೀಯ ಸಿನಿಮಾರಂಗದಲ್ಲಿ ಸಂಭಾವನೆ ತಾರತಮ್ಯದ ಬಗ್ಗೆ ಆಗಾಗ ಚರ್ಚೆಯಾಗಲುತ್ತಲೆ ಇರುತ್ತೆ. ಅನೇಕ ನಟಿ ಮಣಿಯರು ಇದರ ವಿರುದ್ಧ ಅಸಮಾಧಾನ ಹೊರಹಾಕು ಇದೆ. ಪುರುಷರಿಗಿಂತ ನಟಿಯರಿಗೆ ಕಡಿಮೆ ಸಂಭಾವನೆ ಎಂದು ಈಗಾಲೂ ಬೇಸರ ಹೊರಹಾಕುತ್ತಾರೆ. ಸಂಭಾವನೆ ತಾರತಮ್ಯದ ನಡುವೆಯೂ ಅನೇಕ ನಟಿಯರು ಉತ್ತಮ ಸಂಭಾವನೆ ಪಡೆಯುತ್ತಿದ್ದಾರೆ. ಈಗಾಗಲೇ ಕೆಲವು ನಟಿಯರು 10 ಕೋಟಿ ರೂಪಾಯಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ. ದೀಪಿಕಾ ಪಡುಕೋಣೆ, ಕಂಗನಾ, ಅಲಿಯಾ ಸೇರಿದಂತೆ ಕೆಲವು ನಟಿಯರು ಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿಯರು ಎನಿಸಿಕೊಂಡಿದ್ದಾರೆ. 

ಅತೀ ಹೆಚ್ಚು ಸಂಭಾವನೆ ಪಡೆಯುವ ಯುವ ನಟಿಯರ ಸಾಲಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಮೊದಲ ಸ್ಥಾನನದಲ್ಲಿದ್ದಾರೆ ಎನ್ನಲಾಗಿದೆ. ಸಾರಾ ಅಲಿ ಖಾನ್, ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಅವರನ್ನೆಲ್ಲ ಮೀರಿಸಿ ಜಾನ್ವಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ಜಾನ್ವಿ ಸದ್ಯ ಸೌತ್ ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಸ್ಟಾರ್ ಜೂ.ಎನ್ ಟಿ ಆರ್ ಜೊತೆ ನಟಿಸುತ್ತಿದ್ದಾರೆ. ಜೂ.ಎನ್ ಟಿ ಆರ್ ನಟನೆಯ ಬಹುನಿರೀಕ್ಷೆಯ ದೇವರ ಸಿನಿಮಾದಲ್ಲಿ ಜಾನ್ವಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಜಾನ್ವಿ ಸೌತ್ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ರಿಲೀಸ್ ಆಗಿದ್ದು ವೈರಲ್ ಆಗಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಜಾನ್ವಿ ಈ ಸಿನಿಮಾಗೆ ಬರೋಬ್ಬರಿ 4 ರಿಂದ 5 ಕೋಟಿ ರೂಪಾಯಿ ಸಂಭಾವನೆ ಪಡೆಸಿದ್ದಾರೆ ಎನ್ನಲಾಗಿದೆ.

ತೆಲುಗು ಬಳಿಕ ತಮಿಳು ಚಿತ್ರರಂಗಕ್ಕೆ ಜಾನ್ವಿ ಕಪೂರ್: ಕಮಲ್ ಹಾಸನ್ ಸಿನಿಮಾದಲ್ಲಿ ನಟನೆ

ಪೂಜಾ ಹೆಗ್ಡೆ, ರಶ್ಮಿಕಾ ಅವರೆಲ್ಲ 3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಇವರಿಗೆಲ್ಲ ಹೋಲಿಸಿದರೆ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಅತೀ ಹೆಚ್ಚು ಸಂಭಾವನೆ ಜೀಬಿಗಿಳಿಸಿದ್ದಾರೆ. ಜಾನ್ವಿ ಬಹುಬೇಡಿಕೆಯ ಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಆದರೆ ಜಾನ್ವಿಗೆ ಹೇಳಿಕೊಳ್ಳುವಷ್ಟರ ಮಟ್ಟಿಗೆ ದೊಡ್ಡ ಸಕ್ಸಸ್ ಸಿಕ್ಕಿಲ್ಲ. ಹಾಗಾಗಿ ಜಾನ್ವಿ ದೊಡ್ಡ ಸಕ್ಸಸ್‌ಗಾಗಿ ಎದುರು ನೋಡುತ್ತಿದ್ದಾರೆ. 

ಬೆವರಿಳಿಸುತ್ತಿದೆ ಜಾನ್ವಿ ಕಪೂರ್ ಹೊಸ ಲುಕ್; ಪುಟ್ಟ ಮಕ್ಕಳು ಪ್ಲೀಸ್ ನೋಡ್ಬೇಡಿ

ಜಾನ್ವಿ ಕಕೊನೆಯದಾಗಿ ಮಿಲಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಮಿಲಿ ಹೇಳಿಕೊಳ್ಳುವಷ್ಟು ಮಟ್ಟಕ್ಕೆ ಸಕ್ಸಸ್ ಸಿಕ್ಕಿಲ್ಲ. ಇದೀಗ ತೆಲುಗು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿರುವ ಜಾನ್ವಿ ಸೌತ್ ಸಿನಿಮಾ ದೊಡ್ಡ ಯಶಸ್ಸು ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ. ತಾಯಿ ಶ್ರೀದೇವಿಯಂತೆ ಮಗಳು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತಾರಾ ಕಾದು ನೋಡಬೇಕಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ-ವಿಜಯ್ ಮದುವೆಯ ಖಾಸಗಿ ರಹಸ್ಯಗಳು ಲೀಕ್.. ಈ ಜೋಡಿ ಬಗ್ಗೆ ಏನಂತ ಹೇಳಿದಾರೆ 'ವೆಡ್ಡಿಂಗ್ ಪ್ಲಾನರ್'..?
ನನ್ನ ಮೇಲೆ ನಿರ್ದೇಶಕನಿಂದ ರೇ*ಪ್​ ಪ್ರಯತ್ನ- ಮನೆಯವ್ರೂ ಸುಮ್ಮನಿದ್ರು: ಮಕ್ಕಳನ್ನೂ ಬಿಡಲ್ಲ ಆತ, ಮೊನಾಲಿಸಾ ಕಣ್ಣೀರು