Jawan: ಶಾರುಖ್ ತಲೆಯಲ್ಲಿರುವ ಟ್ಯಾಟು ಏನು? ರಿವೀಲ್ ಆಯ್ತು ಸೀಕ್ರೆಟ್

Published : Jul 15, 2023, 06:04 PM IST
Jawan: ಶಾರುಖ್ ತಲೆಯಲ್ಲಿರುವ ಟ್ಯಾಟು ಏನು? ರಿವೀಲ್ ಆಯ್ತು ಸೀಕ್ರೆಟ್

ಸಾರಾಂಶ

ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾದ ಪ್ರಿವ್ಯೂ ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಶಾರುಖ್ ತಲೆಯ ಮೇಲಿರುವ ಸಾಲು ಏನೆಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದರು. ಇದೀಗ ರಿವೀಲ್ ಆಗಿದೆ. 

ಬಾಲಿವುಡ್  ಕಿಂಗ್ ಖಾನ್ ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾದ ಪ್ರಿವ್ಯೂ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಾರುಖ್ ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಅಭಿಮಾನಿಗಳ ಹೃಯಗೆದ್ದಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಶಾರುಖ್ ಬೋಳು ತಲೆ ಹೆಚ್ಚು ಗಮನ ಸೆಳೆದಿದೆ. ಬಾಲ್ಡ್​ ಲುಕ್ ಅನ್ನು ಅಭಿಮಾನಿಗಳು ಇಷ್ಟಪಡುತ್ತಿದ್ದಾರೆ. ಇಷ್ಟೇ ಅಲ್ಲ, ಅವರ ತಲೆಯ ಮೇಲೆ ಬರೆದ ಸಾಲು ಎಲ್ಲರ ಗಮನ ಸೆಳೆದಿದೆ.

‘ಜವಾನ್​’ ಪ್ರಿವ್ಯೂನಲ್ಲಿ ಶಾರುಖ್ ಖಾನ್ ಅವರು ಮೆಟ್ರೋ ಒಳಗೆ ಎಂಟ್ರಿ ಕೊಡುತ್ತಾರೆ. ಈ ವೇಳೆ ಅವರು ಬಾಲ್ಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕಿವಿಯ ಮೇಲ್ಭಾಗದಲ್ಲಿ ಬರೆದಿರುವ ಸಾಲು ಸಿಕ್ಕಾಪಟ್ಟೆ ವೈರಲ್ ಆಗಿದೆ.  ಏನು ಬರೆಯಲಾಗಿದೆ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ. ಆದರೆ ಈಗ ಆ ಸೀಕ್ರೆಟ್ ರಿವೀಲ್ ಆಗಿದೆ. ಮನೋಬಾಲಾ ವಿಜಯಬಾಲನ್ ಟ್ವಿಟರ್‌ನಲ್ಲಿ ಶಾರುಖ್ ಖಾನ್ ಅವರ ಫೋಟೋವನ್ನು ಹಂಚಿಕೊಂಡಿದ್ದು, ಹಚ್ಚೆಯಲ್ಲೇನಿದೆ ಎಂಬುದನ್ನು ವಿವರಿಸಿದ್ದಾರೆ.

ಶಾರುಖ್ ತಲೆಯಲ್ಲಿರುವ ಟ್ಯಾಟೂದಲ್ಲಿ ‘ಮಾ ಜಗತ್ ಜನನಿ’ ಎಂದು ಬರೆಯಲಾಗಿದೆ. ಅಂದರೆ ‘ಜಗದ ತಾಯಿ’ ಎಂದರ್ಥ. ಪ್ರಿವ್ಯೂ ವೀಡಿಯೋ ನೋಡಿದ ಅನೇಕರು ಶಾರುಖ್ ಅವರ ಹಚ್ಚೆಗೂ ಸಿನಿಮಾದ ಕಥೆಗೂ ವಿಶೇಷ ಸಂಬಂಧ ಇರಬಹುದು ಎಂದು ಹೇಳುತ್ತಿದ್ದಾರೆ. ಆ ನಂಟು ಏನೆಂಬುದು ಚಿತ್ರ ಬಿಡುಗಡೆಯ ನಂತರವೇ ಗೊತ್ತಾಗಲಿದೆ.

'ಜವಾನ್' ಹೊಸ ಪೋಸ್ಟರ್ ಔಟ್: ಶಾರುಖ್ ಸಿನಿಮಾ ವಿರುದ್ಧ ಕನ್ನಡಿಗರ ಆಕ್ರೋಶ

ಸದ್ಯ ರಿಲೀಸ್ ಆಗಿರುವ ಪ್ರಿವ್ಯೂ ನೋಡಿದ್ರೆ ಶಾರುಖ್ ಖಾನ್ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಇಲ್ಲಿ ವಿಲನ್ನಾ ಅಥವಾ ಹೀರೋನಾ ಎನ್ನುವುದು ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಆಕ್ಷನ್ ದೃಶ್ಯಗಳು ಹೆಚ್ಚಾಗಿದ್ದು ಪಠಾಣ್ ಬಳಿಕ ಮತ್ತೆ ಶಾರುಖ್ ಮಾಸ್ ಲುಕ್ ನಲ್ಲೇ ದರ್ಶನ ನೀಡಿದ್ದಾರೆ. ಇನ್ನು ‘ಜವಾನ್’ ಸಿನಿಮಾದ ಟೈಟಲ್ ಹೇಳುವಂತೆ ಇದೊಂದು ಯೋಧನ ಕಥೆ. ನಯನತಾರಾ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಮಾಸ್ ಹಿಟ್ ಕೊಡೋಕೆ ಶಾರುಖ್ ಖಾನ್ ಅವರು ಸಿದ್ಧವಾಗಿದ್ದು ಅಟ್ಲೀ ಅವರ ನಿರ್ದೇಶನದ ಮೇಲೂ ಭರವಸೆ ಮೂಡಿದೆ.

'ಜವಾನ್' ಪಾತ್ರದ ತಯಾರಿಗೆ ಯಶ್ ಸಿನಿಮಾ ನೋಡಿರುವುದಾಗಿ ಬಹಿರಂಗ ಪಡಿಸಿದ ಶಾರುಖ್ ಖಾನ್

ಸದ್ಯ ಟೀಸರ್ ಮತ್ತು ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ಜವಾನ್ ಸಿನಿಮಾ ಸೆಪ್ಟಂಬರ್ ನಲ್ಲಿ ತೆರೆಗೆ ಬರುತ್ತಿದೆ. ಸೆಪ್ಟಂಬರ್ 7ಕ್ಕೆ ರಿಲೀಸ್ ಆಗುತ್ತಿದೆ. ಜವಾನ್ ಸಿನಿಮಾ ಪಠಾಣ್ ಚಿತ್ರವನ್ನು ಮೀರಿಸಿ ಅತೀ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ದಾಖಲೆ ನಿರ್ಮಿಸುತ್ತಾ ಕಾದುನೋಡಬೇಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?