ಪಾರ್ನ್ ಸಿನೆಮಾ ಜಗತ್ತಿನ ತನ್ನ ಹಳೆಯ ದಿನಗಳನ್ನು ನೆನಪಿಸಿಕೊಂಡ ಸನ್ನಿ ಲಿಯೋನ್

Published : Jul 15, 2023, 06:20 PM ISTUpdated : Jul 15, 2023, 06:55 PM IST
ಪಾರ್ನ್ ಸಿನೆಮಾ ಜಗತ್ತಿನ  ತನ್ನ ಹಳೆಯ ದಿನಗಳನ್ನು ನೆನಪಿಸಿಕೊಂಡ ಸನ್ನಿ ಲಿಯೋನ್

ಸಾರಾಂಶ

ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ತಮ್ಮ ಪಾರ್ನ್ ಸಿನೆಮಾ ಇಂಡಸ್ಟ್ರೀಯ ಬಗ್ಗೆ ಈಗ ಮತ್ತೆ ಮಾತನಾಡಿದ್ದಾರೆ. ಜೊತೆಗೆ ಅಂದಿನ ಕಷ್ಟದ ದಿನಗಳನ್ನು ನೆನೆದಿದ್ದಾರೆ.

ಹಾಟ್ ನಟಿ, ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ತಮ್ಮ ಪಾರ್ನ್ ಸಿನೆಮಾ ಇಂಡಸ್ಟ್ರೀಯ ಬಗ್ಗೆ ಈಗ ಮತ್ತೆ ಮಾತನಾಡಿದ್ದಾರೆ. ನಾನು ಅತ್ಯುತ್ತಮ ಕಂಪನಿಗಳೊಂದಿಗೆ ಅಲ್ಲಿ ಕೆಲಸ ಮಾಡಿದ್ದೇನೆ. ಅದೆಷ್ಟು ಪ್ರಸಿದ್ಧ ಕಂಪೆನಿಯೆಂದರೆ ಭಾರತದಲ್ಲಿ ಧರ್ಮ ಪ್ರೊಡಕ್ಷನ್ಸ್ ಅಥವಾ ಯಶ್ ರಾಜ್ ಫಿಲ್ಮ್ಸ್‌ನೊಂದಿಗೆ ಮಾತ್ರ ಹೋಲಿಸಬಹುದು ಎಂದಿದ್ದಾರೆ.  ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಮತ್ತು ಆದಿತ್ಯ ಚೋಪ್ರಾ ಅವರ ಯಶ್ ರಾಜ್ ಫಿಲ್ಮ್ಸ್  ಭಾರತದಲ್ಲಿ ಸನ್ನಿ ಲಿಯೋನ್ ಇನ್ನೂ ಕೆಲಸ ಮಾಡದ ಎರಡು ನಿರ್ಮಾಣ ಸಂಸ್ಥೆಗಳಾಗಿವೆ.

ಗಂಡ ನನಗೆ ಮೋಸ ಮಾಡಿದ್ದಾನೆ, ಹಾಟ್ ನಟಿ ಸನ್ನಿ ಲಿಯೋನ್ ಆರೋಪ

ನನ್ನ ವಯಸ್ಕ ಚಲನಚಿತ್ರ ವೃತ್ತಿಜೀವನದ ಉತ್ತಮ ಭಾಗವೆಂದರೆ ನಾನು ಅತ್ಯುತ್ತಮ ಕಂಪನಿಗಳೊಂದಿಗೆ ಕೆಲಸ ಮಾಡಿರುವುದು. ನಾನು ಅತ್ಯುತ್ತಮ ಎಂದಾಗ, ಅದನ್ನು ಇಲ್ಲಿ ಧರ್ಮ ಮತ್ತು ಯಶ್ ರಾಜ್‌ ಕಂಪೆನಿಗಳಿಗೆ ಹೋಲಿಸಬಹುದು. ಆಗ ಅದು ನನ್ನ ಪ್ರಪಂಚವಾಗಿತ್ತು. ನನ್ನನ್ನು ನೇಮಕ ಮಾಡಿಕೊಳ್ಳುತ್ತಿದ್ದ ಕಂಪನಿಗಳು ಅವರು ಬಯಸಿದ್ದನ್ನು ಪಡೆದರು ಮತ್ತು ನಾನು ಬಯಸಿದ್ದನ್ನು ನಾನು ಪಡೆದುಕೊಂಡೆ. ನಾನು ಪ್ರಾಮಾಣಿಕವಾಗಿದ್ದೆ ಎಡ್ವಂಟೇಜ್ ತೆಗೆದುಕೊಂಡಿಲ್ಲ. ನಾನು ಆ ಉದ್ಯಮದಲ್ಲಿ ತುಂಬಾ ಜಾಗರೂಕತೆಯಿಂದ ಹೆಜ್ಜೆ ಇಟ್ಟೆ. ನನ್ನ ಸುತ್ತಲೂ ನಡೆಯುತ್ತಿರುವ ಕೆಲವು ವಿಷಯಗಳಲ್ಲಿ ನಾನು ಭಾಗಿಯಾಗುತ್ತಿರಲಿಲ್ಲ. ಹೀಗಾಗಿ ತುಂಬಾ ನಿಧಾನಗತಿಯಲ್ಲಿ ಬೆಳೆದೆ. ಜೊತೆಗೆ ಇತರ ಹುಡುಗಿಯರು ಕೂಡ ಆ ಉದ್ಯಮದಲ್ಲಿ ಬೆಳೆಯಲು ತುಂಬಾ ಕಷ್ಟಪಡುತ್ತಿದ್ದರು ಎಂದು ಹೇಳಿದ್ದಾರೆ.

ಸನ್ನಿ ಅವರ ಚಿತ್ರ ಕೆನಡಿ (Kennedy) ಇತ್ತೀಚೆಗೆ 76ನೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ (Cannes Film Festival) ಪ್ರಥಮ ಪ್ರದರ್ಶನಗೊಂಡಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಯೆ ಕೂಡ ವ್ಯಕ್ತವಾಗಿತ್ತು. ಮಾತ್ರವಲ್ಲ ಗ್ರ್ಯಾಂಡ್ ಲುಮಿಯರ್ ಥಿಯೇಟರ್‌ನಲ್ಲಿ ಪ್ರೇಕ್ಷಕರು ಏಳು ನಿಮಿಷಗಳ ಕಾಲ ಎದ್ದು ನಿಂತು ಚಪ್ಪಾಳೆ ಹೊಡೆದರು. ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರ ಕ್ರೈಮ್ ಥ್ರಿಲ್ಲರ್ ಆಗಿದೆ. ರಾಹುಲ್ ಭಟ್ ಜೊತೆ ಸನ್ನಿ ತೆರೆ ಹಂಚಿಕೊಂಡಿದ್ದಾರೆ.  ಭಾರತದಲ್ಲಿ ಈ ಚಿತ್ರ ಬಿಡುಗಡೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. 

Jawan: ಶಾರುಖ್ ತಲೆಯಲ್ಲಿರುವ ಟ್ಯಾಟು ಏನು? ರಿವೀಲ್ ಆಯ್ತು ಸೀಕ್ರೆಟ್

ಸನ್ನಿ 1981 ರಲ್ಲಿ ಕೆನಡಾದ ಸಿಖ್ ಕುಟುಂಬದಲ್ಲಿ ಜನಿಸಿದರು ಮತ್ತು 2000 ರ ದಶಕದ ಆರಂಭದಲ್ಲಿ ಪಾರ್ನ್ ಸಿನೆಮಾ ಉದ್ಯಮದಲ್ಲಿ ಪ್ರಸಿದ್ಧಿ ಪಡೆದರು. ನಂತರ ಅವರು  ಪಾರ್ನ್ ಸಿನೆಮಾ ಇಂಡಸ್ಟ್ರೀಯನ್ನು ತೊರೆದರು ಮತ್ತು 2011 ರಲ್ಲಿ ಭಾರತಕ್ಕೆ ಸ್ಥಳಾಂತರಗೊಂಡರು. ಭಾರತದಲ್ಲಿ ನಟಿಯಾಗಿ ಮೊದಲ ಬಾರಿಗೆ ಬಿಗ್ ಬಾಸ್ 5 ರಲ್ಲಿ ಅತಿಥಿ ಸ್ಪರ್ಧಿಯಾಗಿ ಕಾಣಿಸಿಕೊಂಡರು. ಅಲ್ಲಿಂದ ಭಾರತದಲ್ಲಿ ಅವರ ಸಿನಿ ಪಯಣ ಆರಂಭವಾಯ್ತು. ಸದ್ಯ ಸನ್ನಿ ಮುಂಬೈನಲ್ಲಿ ಗಂಡ ಡೇನಿಯಲ್ ವೆಬರ್ ಮತ್ತು ತನ್ನ ಮೂವರು ಮಕ್ಕಳ ಜೊತೆಗೆ ನೆಲೆಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?
ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?