ಹೊಟೇಲ್ ಗೆ ಹೋದಾಗ ನೀವೇನು ಕದ್ದಿದ್ದೀರಿ? ಶಾಂಪೂ, ಸೋಪ್.. ಹೀಗಂತ ಬಹುತೇಕರು ಹೇಳ್ತಾರೆ. ಆದ್ರೆ ಈ ನಟಿ ದಿಂಬು ಎನ್ನುತ್ತಿದ್ದಾಳೆ. ಬಾಲ್ಯದಲ್ಲಿ ಅಂಗಡಿಯಲ್ಲಿ ಸಾಮಾನು ಕದ್ದಿದ್ದ ನಟಿ ಈತ ದಿಂಬಿನ ಮೇಲೆ ಕಣ್ಣಿಟ್ಟಿದ್ದಾಳೆ.
ಹೊಟೇಲ್ ನಲ್ಲಿರುವ ವಸ್ತುಗಳು ತುಂಬಾ ಸುಂದರವಾಗಿರುತ್ತವೆ. ಅದ್ರಲ್ಲೂ ಫೈವ್ ಸ್ಟಾರ್ ಸೇರಿದಂತೆ ದುಬಾರಿ ಬೆಲೆಯ ಹೊಟೇಲ್‌ಗಳನ್ನು ಐಷಾರಾಮಿ ವಸ್ತುಗಳಿಂದ ಸಿಂಗರಿಸಿರಲಾಗಿರುತ್ತದೆ. ಹೊಟೇಲ್ ರೂಮಿನಲ್ಲಿರುವ ವಸ್ತುಗಳು ಕೂಡ ದುಬಾರಿ ಹಾಗೂ ಆಕರ್ಷಕವಾಗಿರುತ್ತವೆ. ಹೊಟೇಲ್ ರೂಮಿನಲ್ಲಿ ತಂಗಿದಾಗ ಅನೇಕರು ಬಾತ್ ರೂಮಿನ ಶಾಂಪೂ, ಸೋಪ್ ಸೇರಿ ಕೆಲ ವಸ್ತುಗಳನ್ನು ತಮ್ಮ ಬ್ಯಾಗಿಗೆ ಹಾಕಿಕೊಂಡು ಬರ್ತಾರೆ. ಟೀ, ಶುಗರ್ ಸ್ಯಾಶೆ ಸೇರಿ ಕೆಲ ವಸ್ತುಗಳನ್ನು ಕೊಂಡೊಯ್ಯಲು ಹೊಟೇಲ್ ಅನುಮತಿ ಕೂಡ ನೀಡುತ್ತದೆ. ಆದ್ರೆ ಬೆಡ್ ಶೀಟ್, ಟವೆಲ್, ದಿಂಬು ಸೇರಿದಂತೆ ಕ್ಯಾಟಲ್, ಇಲೆಕ್ಟ್ರಿಕ್ ವಸ್ತುಗಳನ್ನು ತೆಗೆದುಕೊಂಡು ಬರುವಂತಿಲ್ಲ. ಅದನ್ನು ನೀವು ಬ್ಯಾಗ್ ಗೆ ತುಂಬಿದ್ದೀರಿ ಎಂಬುದು ಗೊತ್ತಾದ್ರೆ ಹೊಟೇಲ್ ದಂಡ ವಿಧಿಸುತ್ತದೆ.
ಹೊಟೇಲ್ (Hotel) ನಲ್ಲಿರುವ ವಸ್ತುಗಳನ್ನು ನಮ್ಮಂತ ಜನಸಾಮಾನ್ಯರು ತೆಗೆದುಕೊಂಡು ಬರೋದು ಕಾಮನ್. ಆದ್ರೆ ಎಲ್ಲ ಇರುವ ಸೆಲೆಬ್ರಿಟಿ (Celebrity) ಗಳು ಕೂಡ ಇಂಥ ವಸ್ತುಗಳನ್ನು ಬ್ಯಾಗ್ ಗೆ ತುಂಬುತ್ತಾರೆ. ಈಗಾಗಲೇ ಬಾಲಿವುಡ್ ನ ಕೆಲ ಸ್ಟಾರ್ಸ್ ಇದನ್ನು ಒಪ್ಪಿಕೊಂಡಿದ್ದಾರೆ. ಸಾಕಷ್ಟು ಬಾರಿ ಹೀಗೆ ಮಾಡಿದ್ದಿದೆ ಎಂದು ಸಂದರ್ಶನದಲ್ಲಿ ಕೆಲ ಸ್ಟಾರ್ಸ್ ಹೇಳಿದ್ದಾರೆ. ಈಗ ಮತ್ತೊಬ್ಬ ನಟಿ ತನ್ನ ಅಭ್ಯಾಸವನ್ನು ಸಂದರ್ಶನದಲ್ಲಿ ಎಲ್ಲರ ಮುಂದಿಟ್ಟಿದ್ದಾರೆ.
YOUNGEST MP OF INDIA: 25ನೇ ವಯಸ್ಸಿನಲ್ಲೇ ಸಂಸದೆಯಾದ ಸಂಜನಾ ಜಾತವ್, ಹಳೇ ಡಾನ್ಸ್ ವಿಡಿಯೋ ವೈರಲ್
ದಿಂಬು ಕದಿಯುವ ಜಾನ್ವಿ ಕಪೂರ್ (Janhvi Kapoor) : ಅವರು ಮತ್ತ್ಯಾರೂ ಅಲ್ಲ, ಬಾಲಿವುಡ್ ಯಂಗ್ ಸ್ಟಾರ್, ಬೋನಿ ಕಪೂರ್ ಹಾಗೂ ಶ್ರೀದೇವಿ ಮುದ್ದಿನ ಮಗಳು ಜಾನ್ವಿ ಕಪೂರ್. ಹೊಟೇಲ್ ಗೆ ಹೋದಾಗ ಜಾನ್ವಿ ಬಾತ್ ರೂಮ್ ವಸ್ತುಗಳ ಬದಲು ತಲೆ ದಿಂಬನ್ನು ತೆಗೆದುಕೊಂಡು ಬರ್ತಾರೆ.
ಸಂದರ್ಶನವೊಂದರಲ್ಲಿ ಜಾನ್ವಿ ಈ ವಿಷ್ಯವನ್ನು ಹೇಳಿದ್ದಾರೆ. ಟ್ರಾವೆಲ್ ಮಾಡುವ ಸಮಯದಲ್ಲಿ ಜಾನ್ವಿಗೆ ತಲೆದಿಂಬುಬೇಕು. ವಿಮಾನದಲ್ಲಿ ಆರಾಮವಾಗಿ ನಿದ್ರೆ ಮಾಡಬಹುದು ಎನ್ನುವ ಕಾರಣಕ್ಕೆ ಜಾನ್ವಿ ತಲೆದಿಂಬನ್ನು ಮನೆಯಿಂದ್ಲೇ ತೆಗೆದುಕೊಂಡು ಹೋಗ್ತಾರೆ. ಬಹುತೇಕ ಎಲ್ಲ ಬಾರಿಯೂ ಜಾನ್ವಿ ಬ್ಯಾಗಿನಲ್ಲೊಂದು ದಿಂಬು ಇರುತ್ತದೆ. ಒಂದ್ವೇಳೆ ಮನೆಯಿಂದ ದಿಂಬು ತೆಗೆದುಕೊಂಡು ಹೋಗೋಕೆ ಮರೆತ್ರೆ ಹೊಟೇಲ್ ನಿಂದ ತರ್ತಾರೆ.
ಹೊಟೇಲ್ ನಿಂದ ಅನೇಕ ಬಾರಿ ದಿಂಬನ್ನು ತಂದಿದ್ದೇನೆ. ಆದ್ರೆ ಬಹುತೇಕ ಬಾರಿ ಹೊಟೇಲ್ ಸಿಬ್ಬಂದಿ ಒಪ್ಪಿಗೆ ಪಡೆದಿಲ್ಲ ಎನ್ನುತ್ತಾರೆ ಜಾಹ್ನವಿ. ಅಂದ್ರೆ ಜಾಹ್ನವಿ, ಹೊಟೇಲ್ ದಿಂಬನ್ನು ಕದ್ದು ತಂದಿದ್ದಾರೆ ಎಂದಾಯ್ತ.
ಬಾಲ್ಯದಲ್ಲೂ ಇತ್ತು ಈ ಅಭ್ಯಾಸ : ಹುಟ್ಟು ಗುಣ ಸುಟ್ಟರೂ ಹೋಗಲ್ಲ ಎನ್ನುವ ಮಾತಿದೆ. ಅದರಂತೆ ಜಾಹ್ನವಿ ದಿಂಬು ಕದಿಯುವ ಹಿಂದೆ ಬಾಲ್ಯದ ಕಥೆಯಿದೆ. ಮಾತು ಮುಂದುವರೆಸಿದ ಜಾಹ್ನವಿ, ಬಾಲ್ಯದಲ್ಲಿ ಅಂಗಡಿಯಲ್ಲಿನ ವಸ್ತು ತೆಗೆದುಕೊಂಡು ಬಂದ ಬಗ್ಗೆ ಹೇಳಿದ್ದಾರೆ. ನನಗೆ ಈಗ್ಲೂ ನೆನಪಿದೆ, ನಾನು ಒಂದು ಅಂಗಡಿಯಿಂದ ವಸ್ತುವನ್ನು ತೆಗೆದುಕೊಂಡು ಬಂದಿದ್ದೆ. ಅಂಗಡಿಯವರ ಒಪ್ಪಿಗೆ ಪಡೆದಿರಲಿಲ್ಲ. ಮನೆಯವರು ಹೀಗೆ ವಸ್ತು ತೆಗೆದುಕೊಂಡು ಬರಬಾರದು. ಹಣವಿಲ್ಲದೆ ವಸ್ತು ತಂದ್ರೆ ಅದು ಕಳ್ಳತನವಾಗುತ್ತದೆ ಎಂದಿದ್ದರು. ನನ್ನನ್ನು ಅಪ್ಪ ಅಮ್ಮ ಕಳ್ಳಿ ಎಂದಿದ್ದರು ಎಂದು ಜಾಹ್ನವಿ ಹೇಳಿದ್ದಾರೆ.
ಚುನಾವಣೆಯಲ್ಲಿ ಸೋತ ತಂದೆ.. ಅಪ್ಪನ ಬೆಂಬಲಕ್ಕೆ ನಿಂತ ನಟಿ
ಜಾಹ್ನವಿ ಕಪೂರ್ ಸದ್ಯ ರಾಜ್ ಕುಮಾರ್ ರಾವ್ ಜೊತೆ ಮಿಸ್ಟರ್ ಆಂಡ್ ಮಿಸ್ಸಸ್ ಮಾಹಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಐದು ದಿನದಲ್ಲಿ 20 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಇದಲ್ಲದೆ ಜಾನ್ವಿ ಕಪೂರ್ ವೈಯಕ್ತಿಕ ವಿಚಾರದಲ್ಲೂ ಚರ್ಚೆಯಲ್ಲಿದ್ದಾರೆ. ಜಾನ್ವಿ ಕಪೂರ್, ಶಿಖರ್ ಪಹಾಡಿಯಾರನ್ನು ಪ್ರೀತಿಸುತ್ತಿದ್ದಾರೆಂಬ ಸುದ್ದಿ ಇದೆ. ಶೀಘ್ರವೇ ಜಾನ್ವಿ ಕಪೂರ್ ಹಾಗೂ ಶಿಖರ್ ಪಹಾಡಿಯಾ ಮದುವೆ ಆಗ್ತಾರೆ ಎನ್ನುವ ಊಹಾಪೋಹ ಕೂಡ ಕೇಳಿ ಬಂದಿದೆ.