Latest Videos

ಚಿಕಿತ್ಸೆ ಫಲಕಾರಿಯಾಗದೆ ಖ್ಯಾತ ಯುವ ನಟಿ ರಿಷ್ತಾ ನಿಧನ, ಆಘಾತದಲ್ಲಿ ಫ್ಯಾನ್ಸ್!

By Chethan KumarFirst Published Jun 5, 2024, 10:31 PM IST
Highlights

ಕಳೆದ 14 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ 39ರ ಹರೆಯದ ನಟಿ ರಿಷ್ತಾ ನಿಧನರಾಗಿದ್ದಾರೆ. ಸರ್ಜರಿ ಬಳಿಕ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು. ಇದೀಗ ನಟಿ ಸಾವಿನ ಸುದ್ದಿ ಅಭಿಮಾನಿಗಳಿಗೆ ಆಘಾತ ತಂದಿದೆ.
 

ಢಾಕಾ(ಜೂ.05) ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಖ್ಯಾತ ಮಾಡೆಲ್ ಕಮ್ ನಟಿ ರಿಷ್ತಾ ಲಬೊನಿ ಶಿಮಾನ ನಿಧನರಾಗಿದ್ದಾರೆ. 39ರ ಹರೆಯದ ನಟಿ ಸಾವಿನ ಸುದ್ದಿ ಅಭಿಮಾನಿಗಳಿಗೆ ಆಘಾತ ತಂದಿದೆ. ಬಾಂಗ್ಲಾದೇಶದ ಖ್ಯಾತ ನಟಿಯಾಗಿ ಗುರುತಿಸಿಕೊಂಡಿರುವ ರಿಷ್ತಾ ಬ್ರೈನ್ ಹ್ಯಾಮ್ರೇಜ್‌ನಿಂದ ಆಸ್ಪತ್ರೆ ದಾಖಲಾಗಿದ್ದರು. ಕಳೆದ 14 ದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ರಿಷ್ತಾ ಇಂದು ಮೃತಪಟ್ಟಿದ್ದಾರೆ.

ಮೇ.21ರಂದು ಬ್ರೈನ್ ಹ್ಯಾಮ್ರೇಜ್ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡಿದ್ದ ನಟಿಯನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಶೇಕ್ ಮುಜೀಬ್ ಮೆಡಿಕಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಟಿ ಮೃತಪಟ್ಟಿದ್ದಾರೆ. ನಟಿ ಸಾವಿನ ಸುದ್ದಿಯನ್ನು ಸಹೋದರ ಇಜಾಜ್ ಬಿನ್ ಹಾಗೂ ಮಾಜಿ ಪತಿ ಪರ್ವೇಜ್ ಸಜ್ಜದ್ ಖಚಿತಪಡಿಸಿದ್ದಾರೆ. 

ಪವಿತ್ರಾಗೆ ಏನೂ ಆಗಿರಲಿಲ್ಲ ಆ್ಯಂಬುಲೆನ್ಸ್ ತಡವಾಗಿ ಬಂದಿದ್ದಕ್ಕೆ ಸತ್ತಳು: ಕಾರಲ್ಲಿದ್ದ ನಟ ಚಂದ್ರಕಾಂತ್ ಸ್ಪಷ್ಟನೆ

ಮೇ.21ರಂದು ನಟಿ ರಿಷ್ತಾರ ತೀವ್ರ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. ಪ್ರಜ್ಞೆ ತಪ್ಪಿದ ನಟಿಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೇ 20ರ ವರೆಗೆ ಹಲವು ಕಾರ್ಯಕ್ರಮಗಲ್ಲಿ ಪಾಲ್ಗೊಂಡಿದ್ದ ರಿಷ್ತಾ, ಮೇ 21ರ ರಾತ್ರಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಮೇ ಮೊದಲ ವಾರದಲ್ಲಿ ಶೂಟಿಂಗ್‌ನಲ್ಲೂ ಪಾಲ್ಗೊಂಡಿದ್ದರು. ಏಕಾಏಕಿ ಅಸ್ಪಸ್ಥಗೊಂಡ ನಟಿಯನ್ನು ಢಾಕಾದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ತಕ್ಷಣೆ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ.ನಟಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎಂದಿದ್ದಾರೆ.  

ವೈದ್ಯರ ಸಲಹೆಯಂತೆ ಢಾಕಾದ ಮತ್ತೊಂದು ಖಾಸಗಿ ಆಸ್ಪತ್ಪೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬ್ರೈನ್ ಹ್ಯಾಮ್ರೇಜ್ ಕಾರಣ 3 ದಿನಗಳ ಚಿಕಿತ್ಸೆ ಬಳಿಕ ಮೇ 25ರಂದು ನ್ಯೂರೋಸೈನ್ಸ್ ಆಸ್ಪತ್ರೆಗೆ ದಾಖಲಿಸಿ ಮೆದುಳಿನ ಸರ್ಜರಿ ಮಾಡಲಾಗಿತ್ತು. ಮೆದುಳು ಸರ್ಜರಿ ಬಳಿಕ ನಟಿಯ ಆರೋಗ್ಯ ಮತ್ತಷ್ಟು ಕ್ಷೀಣಿಸಿತ್ತು. ಹೀಗಾಗಿ ಶೇಕ್ ಮುಜೀಬ್ ಮೆಡಿಕಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಮೇ.29ರಿಂದ ವೆಂಟಿಲೇಟರ್ ನೆರವಿನಲ್ಲಿದ್ದ ನಟಿ ರಿಷ್ತಾ ಇದೀಗ ನಿಧನರಾಗಿದ್ದಾರೆ.

ಕನ್ನಡದ 'ಕಥಾನಾಯಕ' ಸಿನಿಮಾದಲ್ಲೂ ಹಾಡಿದ್ದ ತಮಿಳು ಗಾಯಕಿ ಉಮಾ ರಮಣನ್ ನಿಧನ

ಬಾಂಗ್ಲಾದ ಹಲವು ಸಿನಿಮಾದಲ್ಲಿ ನಾಯಕಿಯಾಗಿ ರಿಷ್ತಾ ಕಾಣಿಸಿಕೊಂಡಿದ್ದಾರೆ. ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ರಿಷ್ತಾ 2014ರಲ್ಲಿ ಗಾಯಕ ಪರ್ವೆಜ್ ಸಜ್ಜದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2016ರಲ್ಲಿ ತಾಯಿಯಾಗಿ ಬಡ್ತಿ ಪಡೆದ ನಟಿ ಸಿನಿಮಾದಿಂದ ದೂರ ಉಳಿದಿದ್ದರು. ಆದರೆ ಪರ್ವೆಜ್ ಜೊತೆಗಿನ ವಿಚ್ಚೇದನ ಬಳಿಕ ಮತ್ತೆ ಸಿನಿಮಾಗೆ ಮರಳಿದ್ದರು.  ನಟಿ ನಿಧನಕ್ಕೆ ಬಾಂಗ್ಲಾದೇಶ ಸಿನಿಮಾ ಜಗತ್ತು ಕಂಬನಿ ಮಿಡಿದಿದೆ. ಇತ್ತ ಅಭಿಮಾನಿಗಳು ಆಘಾತಗೊಂಡಿದ್ದಾರೆ.

click me!